ಕುಳಾಯಿ ಬಗ್ಗುಂಡಿ ಕೆರೆಯಲ್ಲಿ ಎಂಟು ವರ್ಷದ ಬಳಿಕ ನಡೆದ ಮೀನು ಹಿಡಿಯುವ ಉತ್ಸವ

Monday, March 14th, 2022
Baggundi Fishing

ಮಂಗಳೂರು: ಕುಳಾಯಿ ಪುರಾತನ ಕೋಟೆದ ಬಬ್ಬು ದೈವಸ್ಥಾನದ ಜಾತ್ರೆ ಅಂಗವಾಗಿ ನಡೆಯುವ ಮೀನು ಹಿಡಿಯುವ ಉತ್ಸವ 8 ವರ್ಷದ ಬಳಿಕ ಮತ್ತೆ ಶುರುವಾಗಿದೆ. ಪ್ರತಿವರ್ಷ ಇಲ್ಲಿನ ಜಾತ್ರೆ ಸಂದರ್ಭ ಮೀನ ಸಂಕ್ರಮಣದಂದು ಮೀನು ಹಿಡಿಯುವ ಉತ್ಸವ ನಡೆಯುತ್ತದೆ. 2014ರಿಂದ ಈ ಆಚರಣೆ ನಿಂತು ಹೋಗಿತ್ತು. ಬಗ್ಗುಂಡಿ ಕೆರೆ ಉಳಿಸಿ ಅಭಿಯಾನದ ಬಳಿಕ ಸೋಮವಾರ ಮೀನು ಹಿಡಿಯುವ ಉತ್ಸವ ಮತ್ತೆ ಆರಂಭಗೊಂಡಿತು. ಸೋಮವಾರ ಬೆಳಗ್ಗೆ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪ್ರಸಾದವನ್ನು ಕೆರೆಗೆ ಹಾರಿಸಲಾಯಿತು. ಬಳಿಕ ಮೂರು ಬಾರಿ […]

ಕುಳಾಯಿ ಕಾರು ಅಪಘಾತ ಮಹಿಳೆ ಸಾವು, ಮೂವರಿಗೆ ಗಂಭೀರ ಗಾಯ

Thursday, February 4th, 2021
Car Accident Kulai

ಮಂಗಳೂರು : ಕುಳಾಯಿ ಸಮೀಪ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಬುಧವಾರ ರಾತ್ರಿ  ನಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತ ಮಹಿಳೆಯನ್ನು ಬೋಂದೆಲ್‌ ನಿವಾಸಿ ಸುಹಾನಾ (26) ಎಂದು ಗುರುತಿಸಲಾಗಿದೆ‌. ಕಾರಿನಲ್ಲಿ‌ ಸುಹಾನಾರ ಸಹೋದರಿ ಫಾತಿಮಾ ಶೌರೀನ್, ಸಹೋದರರಾದ ರಾಹಿಲ್ ಶಮೀಮ್ ಮತ್ತು ರಾಝಿಕ್ ಶಹಾನ್ ಗಂಭೀರ ಗಾಯಗಳಾಗಿವೆ, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಮದುವೆ ಕಾರ್ಯಕ್ರಮಕ್ಕೆ ತೆರಳಲು ಸಿದ್ಧತೆಯಲ್ಲಿತ್ತು,  ಕಾರು […]

ಮೊಬೈಲ್ ಬಳಸಬೇಡ ಎಂದು ಅಮ್ಮ ಬುದ್ದಿವಾದ ಹೇಳಿದ್ದಕ್ಕೆ ಆತ್ಮಹತ್ಯೆ

Wednesday, October 14th, 2020
mobile addict

ಮಂಗಳೂರು : ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಅಮ್ಮ ಬುದ್ದಿವಾದ ಹೇಳಿದ್ದಕ್ಕೆ 10 ನೇ ತರಗತಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಳಾಯಿಯಲ್ಲಿ ನಡೆದಿದೆ. ಕುಳಾಯಿಯ ಗೋಕುಲನಗರದ ಸುಜೇತಾ (16 ) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಈಕೆ ಸುರತ್ಕಲ್ನ ಖಾಸಗಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಮೊಬೈಲ್ನಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದ ಸಜೇತಾಗೆ, ತಾಯಿ ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ. ತಾಯಿಯ ಬುದ್ದಿಮಾತಿಗೆ ಬೇಸರಗೊಂಡ ಬಾಲಕಿ, ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿ ಮನೆಯ ಟೆರೆಸ್ […]

ಕುಳಾಯಿಯಲ್ಲಿ ಹಿಂದೂ ರಾಷ್ಟ್ರದ ರಣಕಹಳೆ ಮೊಳಗಿಸಿದ ಹಿಂದೂ ಜನಜಾಗೃತಿ ಸಮಿತಿ

Monday, January 27th, 2020
Hindurastra

ಕುಳಾಯಿ : ಶ್ರೀ‌ ವಿಷ್ಣು ಮೂರ್ತಿ ದೇವಸ್ಥಾನ ಕುಳಾಯಿ ಇದರ ಸಭಾಗೃಹದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆಯು ಭಾವಪೂರ್ಣ ವಾತಾವರಣದಲ್ಲಿ ಜರುಗಿತು. ಸಭೆಯನ್ನು ಹಿಂದುತ್ವವಾದಿಗಳಾದ ಶ್ರೀ. ಮಂಜುನಾಥ್ ಮಾನ್ಯ್ ಇವರು ದೀಪಪಲಪ್ರಜ್ವಲನೆ ಮಾಡಿ ಸಭೆಗೆ ಚಾಲನೆ ನೀಡಿದರು. ಈ‌ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ಚಂದ್ರ ಮೊಗೇರ್ ಇವರು ಸಭೆಯ ಮುಖ್ಯ ವಕ್ತಾರರಾಗಿ ಪಾಲ್ಗೊಂಡರು. ಶ್ರೀ ಮಂಜುನಾಥ ಇವರು ‘ಹಿಂದೂ ರಾಷ್ಟ್ರದ ಜೊತೆ ಬೆಳಗಬೇಕಾದರೆ […]

ಅಕ್ರಮ ಟೋಲ್ ಗೇಟ್ ಮುಚ್ಚಲು ಒತ್ತಾಯಿಸಿ ಅಕ್ಟೋಬರ್ 22 ರಿಂದ ಸುರತ್ಕಲ್ ನಲ್ಲಿ ಅನಿರ್ದಿಷ್ಟ ಧರಣಿ

Wednesday, October 10th, 2018
suratkal

ಮಂಗಳೂರು: ಜನತೆಯ ತೀವ್ರ ವಿರೋಧ, ಹಲವು ಹಂತದ ಹೋರಾಟ, ಸುರತ್ಕಲ್ ಟೋಲ್ ಗೇಟ್ ಅನ್ನು ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸುವ ರಾಜ್ಯ ಸರ್ಕಾರದ ಪ್ರಸ್ತಾಪದ ಹೊರತಾಗಿಯೂ ಎನ್ಐಟಿಕೆ ಸಮೀಪ ಇರುವ ಅಕ್ರಮ ಟೋಲ್ ಕೇಂದ್ರವನ್ನು ಮುಚ್ಚಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರಾಕರಿಸುತ್ತಿದೆ. 3.1. 2018 ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಉಪಸ್ಥಿತಿಯಲ್ಲಿ ರಾಜ್ಯ ಸರಕಾರ ನಡೆಸಿದ ಸಭೆಯಲ್ಲಿ “ಸುರತ್ಕಲ್ ಟೋಲ್ ಗೇಟ್ ಹೆಜಮಾಡಿ ಟೋಲ್ ಗೇಟ್ ನಲ್ಲಿ ವಿಲೀನಗೊಳ್ಳಬೇಕು, ಯಾವುದೇ ಕಾರಣಕ್ಕೂ ಸುರತ್ಕಲ್ ಟೋಲ್ […]

ಮಕ್ಕಳ ಕಳ್ಳಸಾಗಾಣಿಕೆ ಮಾಡುತ್ತಿದ್ದ ಮಹಿಳೆಯರ ಸೆರೆ, ಬಾಲಕಿಯರ ರಕ್ಷಣೆ

Wednesday, April 17th, 2013
Suratkal for Trapping Girls into Sex Trade

ಮಂಗಳೂರು : ಮೈಸೂರಿನ ಸ್ವಯಂ ಸೇವಾ ಸಂಸ್ಥೆ ಯೊಂದು ನೀಡಿದ ಮಾಹಿತಿ ಆಧಾರದ ಮೇಲೆ ಬೆಂಗಳೂರಿನ ಸಿಐಡಿ ಪೊಲೀಸರು ಮಕ್ಕಳ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ನಗರದ ಕುಳಾಯಿ ಬಳಿ ಮಂಗಳವಾರ ಬಂದಿಸಿದ್ದಾರೆ.  ಹಾಸನ ಜಿಲ್ಲೆಯ ತಾರಾ ಹಾಗು ಚಿಕ್ಕಮಗಳೂರಿನ  ದೀಪಾ ಬಂಧಿತ ಆರೋಪಿಗಳಾಗಿದ್ದಾರೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ತಿರುಗಾಡುತ್ತಿದ್ದ ಶ್ವೇತಾ ಎಂಬ ಬಾಲಕಿಯನ್ನು ಮೈ ಸೂರಿನ ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿಗಳು ಸಂಸ್ಥೆಗೆ ಕರೆತಂದ ಸಂದರ್ಭ ಬಾಲಕಿಯು ಮಕ್ಕಳ ಕಳ್ಳಸಾಗಾಣಿಕೆ ಮಾಡುತ್ತಿದ್ದ ತಾರಾಳ […]