ಸುಳ್ಯ: ದಕ್ಷಿಣ ಕನ್ನಡ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಹೋದರ ನವೀನ್ ಕುಮಾರ್ ಕುಂಜಾಡಿ (56) ಅವರು ಅಲ್ಪಕಾಲದ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿಯಾಗಿರುವ ನವೀನ್ ಕುಮಾರ್, ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತರು ತಾಯಿ ಸುಶೀಲಾವತಿ, ಪತ್ನಿ ಗೀತಾ, ಪುತ್ರಿ ಸಮೃದ್ಧಿ, ಸಹೋದರ ನಳಿನ್ ಕುಮಾರ್ ಕಟೀಲ್, ಸಹೋದರಿ ನಂದಿನಿಯವರನ್ನು ಅಗಲಿದ್ದಾರೆ. ನವೀನ್ ಕುಮಾರ್ ಅವರು ಕೃಷಿಕ ರಾಗಿದ್ದರು ಮತ್ತು ಸಾಮಾಜಿಕ […]
ಕಡಬ : ಉತ್ತರ ಭಾರತದಲ್ಲಿ ರೈತರನ್ನು ಕಂಗೆಡಿಸಿದ ಮಿಡತೆಗಳ ಹಾವಳಿ ಇದೀಗ ಕರಾವಳಿಗೂ ಕಾಲಿಟ್ಟಿದ್ದು, ದ.ಕ ಜಿಲ್ಲೆಯ ಕಡಬ ತಾಲೂಕಿನ ನೂಜಿ ಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ರೆಂಜಿಲಾಡಿ ಗ್ರಾಮ ಹಾಗೂ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಪರಿಸರದಲ್ಲಿ ಸಂಜೆ ವೇಳೆ ಮಿಡತೆಯ ಹಿಂಡು ದಿಢೀರನೆ ಕಂಡುಬಂದಿದೆ. ಮಿಡತೆಯು ಪ್ರೌಢಾವಸ್ಥೆ ಹಂತ ಮಾದರಿಯನ್ನು ಪರಿಶೀಲನೆಗಾಗಿ ಕೀಟತಜ್ಞರಿಗೆ ಕಳುಹಿಸಲಾಗಿದೆ ಹಾಗೂ ಕೀಟಶಾಸ್ತ್ರಜ್ಞರಿಂದ ಮಿಡತೆಯ ಗುರುತಿಸುವಿಕೆಯ ಹಂತದಲ್ಲಿದೆ. ಮಿಡತೆ ಹಾವಳಿಯ ಕುರಿತು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ. […]
ಉಪ್ಪಳ: ಪೈವಳಿಕೆ ಗ್ರಾ. ಪಂ ಬಜೆಟ್ ವಾರದ ಹಿಂದೆ ಮಂಡನೆಯಾಗಿದ್ದು, ಕೃಷಿ ಕ್ಷೇತ್ರವನ್ನು ಸಂಪೂರ್ಣ ಅವಗಣಿಸಲಾಗಿದೆ. ವಾರ್ಡ್‌ವೊಂದಕ್ಕೆ ಎರಡೂವರೆ ಲಕ್ಷ ರೂಪಾಯಿಗಳಂತಿರಿಸಿದ ಹಣವೂ ಕೃಷಿ ಅಭಿವೃದ್ಧಿಗೆ ಕಿಂಚಿತ್ತೂ ಸಾಲದು ಎಂದು ಪೈವಳಿಕೆ ಗ್ರಾ. ಪಂ ಸದಸ್ಯ ಹಾಗೂ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್ ಹೇಳಿದ್ದಾರೆ. 72.2 ಚದರ ಕಿ.ಮೀ ವಿಸ್ತೀರ್ಣವಿರುವ ಮಂಜೇಶ್ವರ ತಾಲೂಕಿನ ದೊಡ್ಡ ಪಂಚಾಯತ್ ಹೆಗ್ಗಳಿಕೆಯ ಪೈವಳಿಕೆಯಲ್ಲಿ 70% ಕೃಷಿಕರು ಮತ್ತು ಕೃಷಿ ಕಾರ್ಮಿಕರಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕೃಷಿ ಕಾರ್ಮಿಕರಿಗೆ […]
ಮಂಗಳೂರು : MRPL ಕೋಕ್, ಸಲ್ಫರ್ ಘಟಕದ ಮಾಲಿನ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ, ಕೋಕ್, ಸಲ್ಫರ್ ಘಟಕದ ಪರವಾನಿಗೆ ನವೀಕರಿಸಲು ಮುಂದಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮವನ್ನು ಖಂಡಿಸಿ, ಆಗಸ್ಟ್ ೩ರಂದು ’ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ’ ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ನಾಗರಿಕ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, MRPL ಕೋಕ್, ಸಲ್ಫರ್ ಘಟಕದ ಮಾಲಿನ್ಯದ ವಿರುದ್ಧ ಕಳೆದ ಹತ್ತು ತಿಂಗಳುಗಳಿಂದ ಜೋಕಟ್ಟೆ […]