ಅಂತಾರಾಷ್ಟ್ರೀಯ ಮಟ್ಟದಿಂದಲೂ ಸ್ಪಂದನೆ ಪಡೆದ ಕಲ್ಕೂರ ಪ್ರತಿಷ್ಠಾನದ ಕೃಷ್ಣ ವೇಷ ಸ್ಪರ್ಧೆ

Tuesday, August 31st, 2021
Kalkura-Krishna

ಮಂಗಳೂರು :  ಅಸ್ಸಾಂ, ರಾಜಸ್ಥಾನ, ದೆಹಲಿ, ಚೆನ್ನೈ, ಆಂದ್ರ ಪ್ರದೇಶ, ತೆಲಂಗಾಣ, ಕೇರಳ, ಮುಂಬಯಿ ಹೀಗೆ ವಿವಿಧ ರಾಜ್ಯಗಳಿಂದಲೂ ಕರ್ನಾಟಕದಾದ್ಯಂತದಿಂದಲೂ ಮಾತ್ರವಲ್ಲ ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಬೆಹರಿನ್ ದುಬೈ, ಸಿಂಗಾಪುರ ಹೀಗೆ ಅನೇಕ ದೇಶಗಳಿಂದಲೂ ಸುಮಾರು 7 ರಿಂದ 8 ಸಾವಿರ ಸ್ಪರ್ಧಿಗಳು ಈ ಬಾರಿ ಅತ್ಯುತ್ಸಾಹದಿಂದ ಕಲ್ಕೂರ ಪ್ರತಿಷ್ಠಾನ ಏರ್ಪಡಿಸಿದ್ದ ರಾಷ್ಟ್ರೀಯ ಮಕ್ಕಳ ಉತ್ಸವ ‘ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ’ ಪಾಲ್ಗೊಳ್ಳುವ ಮೂಲಕ ಅಂತರಾಷ್ಟ್ರೀಯ ಉತ್ಸವವಾಗಿ ಮಾರ್ಪಾಡುಗೊಂಡಿತು. ಸ್ಪರ್ಧೆ ಮುಗಿದ ಬಳಿಕವೂ ಇನ್ನೂ ಕೂಡ online ನಲ್ಲಿ ಸ್ಪರ್ಧಿಗಳ ವಿಡಿಯೋ […]

ನಾಡಿನೆಲ್ಲೆಡೆ ಜನ್ಮಾಷ್ಟಮಿ ಸಂಭ್ರಮ

Thursday, August 25th, 2016
Krishna-vesha

ಕಾಸರಗೋಡು: ಶ್ರೀಕೃಷ್ಣನ ತತ್ವಗಳು ಸಾರ್ವಕಾಲಿಕ ಸತ್ಯಗಳಾಗಿದ್ದು ಇಂದಿನ ಜೀವನಕ್ಕೆ ಅಳವಡಿಸಿಕೊಳ್ಳುವ ಅಗತ್ಯವಿದೆಯೆಂದು ಅರುಣ್ ಇಂಜಿನಿಯರ್ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಗರದ ಕೋಟೆಕಣಿ ರಾಮನಾಥ ಸಾಂಸ್ಕೃತಿಕ ಪ್ರತಿಷ್ಠಾನದ ವಠಾರದಲ್ಲಿ ಬುಧವಾರ ಮಂಗಳೂರಿನ ಕಲ್ಕೂರ ಪ್ರತಿಷ್ಠಾನ,ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ೬ನೇ ವರ್ಷದ ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆ ಮತ್ತು ಮೊಸರುಕುಡಿಕೆ ಉತ್ಸವದಂಗವಾದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು. ದುಷ್ಕೃತ್ಯ,ಸಾಮಾಜಿಕ ಅಸಮಾನತೆಗಳ […]

ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ಕಂಡ ಕೃಷ್ಣ ವೈಭವ

Monday, August 22nd, 2011
Kadri Krishan Vesha Spardhe/ಕೃಷ್ಣ ವೇಷ ಸ್ಪರ್ಧೆ

ಮಂಗಳೂರು : ಕಲ್ಕೂರ ಪ್ರತಿಷ್ಠಾನ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರವಿವಾರ ಕದ್ರಿ ಶ್ರೀ ಮಂಜುನಾಥ ದೇವಳದ ಪ್ರಾಂಗಣದಲ್ಲಿ ಆಯೋಜಿಸಿದ ಕೃಷ್ಣ ವೇಷ ಸ್ಪರ್ಧೆ-ರಾಷ್ಟ್ರೀಯ ಮಕ್ಕಳ ಉತ್ಸವವನ್ನು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಜಯರಾಮ ಭಟ್‌ ಹಾಗೂ ಹಿರಿಯ ಗಮಕ ವಿಧ್ವಾಂಸ ಹೊಸಬೆಟ್ಟು ವಾಗೀಶ್‌ ಆಚಾರ್‌ ಉದ್ಘಾಟಿಸಿದರು. ಮಾತೆಯರು ಕಡೆಗೋಲಿನಿಂದ ಮೊಸರು ಕಡೆದು ಬೆಣ್ಣೆ ತೆಗೆಯುವ ಹಾಗೂ ಗೋ ಪೂಜೆ ನೆರವೇರಿಸುವ ಮೂಲಕ ಸಾಂಪ್ರದಾಯಿಕವಾಗಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಹಿನ್ನೆಲೆಯಲ್ಲಿ ವಿದ್ವಾನ್‌ ಸತ್ಯವತಿ ಮುಡಂಬಡಿತ್ತಾಯ ಅವರ ಬಳಗ ಹಾಗೂ […]