ಡೊಂಗರಕೇರಿಯಲ್ಲಿರುವ ಸ್ಮಾರಕದಲ್ಲಿ ಕೆನರಾ ಬ್ಯಾಂಕ್ ಸ್ಥಾಪಕರ ದಿನಾಚರಣೆ

Sunday, November 21st, 2021
Canara-Bank

ಮಂಗಳೂರು  :  ಕೆನರಾ ಬ್ಯಾಂಕಿನ 116ನೇ ಸಂಸ್ಥಾಪಕರ ದಿನಾಚರಣೆಯನ್ನು ನಗರದ ಡೊಂಗರಕೇರಿಯಲ್ಲಿರುವ ಸ್ಮಾರಕದಲ್ಲಿ ಆಚರಿಸಲಾಯಿತು. ಯೆನೆಪೋಯ ವಿವಿ ಕುಲಪತಿ ಯೆನಪೋಯ ಅಬ್ದುಲ್ಲ ಕುಂಞಿ, ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್ ಅವರನ್ನು ಸನ್ಮಾನಿಸಲಾಯಿತು. ಯುವ ತಬಲ ವಾದಕ ಸಾಧನ್ ನಾಯಕ್ ಅವರನ್ನು ಕೂಡ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಮ್ಮೆಂಬಳ ಸುಬ್ಬರಾವ್ ಪೈ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರು. ಹಾಗೆ ಈ ಸುದಿನದಂದು ಅವರ ಕನಸಿನಂತೆ ನಗರದ ಸರಕಾರಿ ಶಾಲೆಯ ೬ […]

ಕೆನರಾ ಬ್ಯಾಂಕ್ ಸಾಲ : ಮುಟ್ಟುಗೋಲು ಹಾಕಲು ಬಂದ ಸೀಸರ್‌ಗಳ ಸಮ್ಮುಖದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮನೆಯೊಡತಿ

Thursday, February 18th, 2021
haradi

ಪುತ್ತೂರು : ಬ್ಯಾಂಕ್ ಅಡಮಾನ ಸಾಲಕ್ಕೆ ಮನೆ ಮುಟ್ಟಗೋಲು ಹಾಕಲು ಬಂದ ರಾಷ್ಟ್ರೀಕೃತ ಬಾಂಕ್‌ನ ಸೀಸರ್‌ಗಳ ಸಮ್ಮುಖದಲ್ಲಿ ಮನೆ ಮಾಲಕನ ಪತ್ನಿ ಡೆತ್ ನೋಟ್ ಬರೆದು ಮನೆ ಕೊಠಡಿಯಲ್ಲಿನ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಫೆ.18ರಂದು ಪುತ್ತೂರಿನ ಹಾರಾಡಿ ಎಂಬಲ್ಲಿ ನಡೆದಿದೆ. ಪುತ್ತೂರಿನ ಉದ್ಯಮಿ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆ ನಿವಾಸಿ ರಘುವೀರ್ ಪ್ರಭು ಅವರ ಪತ್ನಿ ಪ್ರಾರ್ಥನಾ ಪ್ರಭು (52 ) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಅವರು “ನನ್ನ ಸಾವಿಗೆ ಕೆನರಾ […]

ಶೈಕ್ಷಣಿಕ ಸಾಲ, ಸಾಮಾಜಿಕ ಸೇವಾ ಕಾರ್ಯ ಸಾಧನೆಗೆ ಸುಬ್ಬರಾವ್ ಪೈ ಸ್ಪೂರ್ತಿ : ಆರ್.ಕೆ.ದುಬೆ.

Wednesday, June 18th, 2014
canara bank dubey

ಮಂಗಳೂರು: ಸಾಮಾಜಿಕ ಮೌಢ್ಯಗಳೇ ಬಲವಾಗಿದ್ದ ಅಂದಿನ ದಿನಗಳಲ್ಲಿ ಮಹಿಳಾ ಶಿಕ್ಷಣದ ಅದ್ಭುತ ಚಿಂತನೆಯೊಂದಿಗೆ ಬ್ಯಾಂಕಿಂಗ್ ಜತೆಗೆ ಹೆಣ್ಣು ಮಕ್ಕಳ ಶಿಕ್ಷಣ ಸಂಸ್ಥೆಯನ್ನೂ ಕಟ್ಟಿ ಬೆಳೆಸಿದ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ದೂರದರ್ಶಿತ್ವದ ಕೊಡುಗೆ ನಮ್ಮೆಲ್ಲರಿಗೂ ಆದರ್ಶ ಮತ್ತು ಸ್ಪೂರ್ತಿಯಾಗಿದೆ. ಅವರ ಆಶಯದಂತೆ ಜಾಗತಿಕ ಮನ್ನಣೆಯೊಂದಿಗೆ ಮುನ್ನಡೆಯುತ್ತಿರುವ ಕೆನರಾ ಸಂಸ್ಥೆಗಳು , ಶಿಕ್ಷಣ ಸಾಲದ ವಿಷಯದಲ್ಲಿ ರಾಷ್ಟ್ರದಲ್ಲೇ ಅಗ್ರಸ್ಥಾನದಲ್ಲಿರುವ ಕೆನರಾ ಬ್ಯಾಂಕ್ ಸಾಮಾಜಿಕ ಕಾಳಜಿಯ ದ್ಯೋತಕವಾಗಿ ಒಂದು ವರ್ಷದಲ್ಲೇ ರೂ 67 ಕೋಟಿ ವೆಚ್ಚದಲ್ಲಿ ಸಾಮಾಜಿಕ ಸೇವಾ […]

ಉದ್ಯೋಗಿನಿ ಮಾಹಿತಿ ಶಿಬಿರದ ಸಮಾರೋಪ

Wednesday, November 10th, 2010
ಉದ್ಯೋಗಿನಿ ಮಾಹಿತಿ ಶಿಬಿರ

ಮಂಗಳೂರು: ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ಉರ್ವಾ ಸಮುದಾಯಭವನದಲ್ಲಿ ನವೆಂಬರ್ 8 ರಿಂದ ಮೂರು ದಿನಗಳ ಕಾಲ ನಡೆದ ಉದ್ಯೋಗಿನಿ ಮಾಹಿತಿ ಶಿಬಿರದ ಸಮಾರೋಪ ಇಂದು ಸಂಜೆ ನಡೆಯಿತು. ಸಮಾರೋಪ ಭಾಷಣದಲ್ಲಿ ಮಾತನಾಡಿದ ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಕೌಶಲ್ ರವರು ನಮ್ಮ ಬ್ಯಾಂಕ್ ಸಂಘಟನೆಗಳ ಮೂಲಕ ಬದುಕನ್ನು ರೂಪಿಸಿಕೊಳ್ಳುವಲ್ಲಿ ನಿರತರಾದ ಕಾರ್ಯಕರ್ತರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ.  ಉದ್ಯೋಗಿನಿ ಮೂಲಕ ನಮ್ಮ ಶಾಖೆ ಪರಶಿಷ್ಟರಿಗೆ ಉದ್ಯೋಗ ನೀಡಲು ಸದಾ […]