ಕೊರಗಜ್ಜನ ವೇಷವನ್ನು ಧರಿಸಿ ಅವಹೇಳನ, ಇಬ್ಬರ ಬಂಧನ

Tuesday, January 11th, 2022
Koragajja Defame

ವಿಟ್ಲ: ಸಾಲೆತ್ತೂರು ಎಂಬಲ್ಲಿ ಮದುವೆ ಮನೆಯಲ್ಲಿ ಹಿಂದೂಗಳ ಆರಾಧ್ಯ ದೈವ ಸ್ವಾಮೀ ಕೊರಗಜ್ಜನ ವೇಷವನ್ನು ಧರಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ಇಬ್ಬರು ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.‌ ಪ್ರಕರಣದ ಪ್ರಮುಖ ಆರೋಪಿ ಮಂಗಲಪ್ಪಾಡಿ  ನಿವಾಸಿ, ಪುತ್ತೂರು ಫಾತಿಮಾ ಅಂಗಡಿಯ ಮಾಲಕ ಅಹ್ಮದ್ ಮುಜಿತಾಬು(28) ಮತ್ತು ಬಾಯಾರು ಪದವು ನಿವಾಸಿ ಮೊಯ್ದೀನ್ ಮುನಿಶ್ (19) ಬಂಧಿತ ಆರೋಪಿಗಳು. ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, […]

ಕೊರಗಜ್ಜನ ದೈವಸ್ಥಾನ ಅಪವಿತ್ರ : ತಪ್ಪು ಕಾಣಿಕೆ ಹಾಕಿ ಕ್ಷಮೆಯಾಚಿಸಿದ ಆರೋಪಿಗಳು – ಇಬ್ಬರ ಬಂಧನ

Thursday, April 1st, 2021
Koragajja

ಮಂಗಳೂರು : ಎರಡು ತಿಂಗಳ ಹಿಂದೆ ಮಂಗಳೂರಿನ ವಿವಿಧ ಕೊರಗಜ್ಜನ ದೈವಸ್ಥಾನವನ್ನು ಅಪವಿತ್ರಗೊಳಿಸಿ, ಅವಾಚ್ಯ ಪದಗಳ ಪತ್ರವನ್ನು ಕಾಣಿಕೆ ಡಬ್ಬಿಗೆ ಹಾಕಿ ಅಪಮಾನ ಮಾಡಲಾಗಿತ್ತು.  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ  ಏಪ್ರಿಲ್ 1 ರ ಗುರುವಾರ ಇಬ್ಬರು ಆರೋಪಿಗಳನ್ನು ಕೊರಗಜ್ಜನ ಕಾಣಿಕೆ ಡಬ್ಬಿಗೆ ತಪ್ಪು ಕಾಣಿಕೆ ಹಾಕಿ ಪೊಲೀಸರಿಗೆ ಶರಣಾಗಿದ್ದಾರೆ. ಬಂಧಿತರನ್ನು ರಹೀಮ್ ಮತ್ತು ತೌಫಿಕ್ ಎಂದು ಗುರುತಿಸಲಾಗಿದೆ. ಬುಧವಾರ  ರಾತ್ರಿ ಎಮ್ಮೆಕೆರೆಯಲ್ಲಿ ಕೋಟೆ ಬಬ್ಬುಸ್ವಾಮಿ ದೈವಸ್ಥಾನದ ಜಾತ್ರೆ ನಡೆದಿದ್ದು, ಅಲ್ಲಿಂದ ಬಂದ ವ್ಯಕ್ತಿಯೋರ್ವ ಘಟನೆಯ ಹಿನ್ನೆಲೆಯಲ್ಲಿ ಕ್ಷಮಾಪಣೆ […]

ಉಲ್ಲಾಳ : ಕಾಣಿಕೆಯ ಹುಂಡಿಯಲ್ಲಿ ಶಿಲುಬೆ ಹಾರ ಮತ್ತು ಕಾಂಡೋಮ್ ಹಾಕಿ ಅಪವಿತ್ರ ಮಾಡಿದ ದುಷ್ಕರ್ಮಿಗಳ ಮೇಲೆ ಕ್ರಮ ಜರುಗಿಸಿ ! – ಹಿಂದೂ ಜನಜಾಗೃತಿ ಸಮಿತಿ

Friday, January 22nd, 2021
Koragajja Gudi

ಮಂಗಳೂರು  :  ಮಂಗಳೂರಿನ ಉಲ್ಲಾಳದ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆಯ ಹುಂಡಿಯಲ್ಲಿ ದಿನಾಂಕ 20.1.2021 ರಂದು ಶಿಲುಬೆ ಹಾರ ಮತ್ತು ಕಾಂಡೋಮ್ ಹಾಕಿ ಅಪವಿತ್ರ ಮಾಡಿದ ಘಟನೆಯು ನಡೆದಿದೆ. ಇದರಲ್ಲಿ ಫ್ಲೆಕ್ಸ್ ಹಾಕಲಾಗಿದ್ದು, ಅದರಲ್ಲಿ ಭಾಜಪ ನಾಯಕರುಗಳ ಚಿತ್ರಗಳನ್ನು ಗೀಚಿ ವಿರೂಪಗೊಳಿಸಿ ಅವರನ್ನು ಕೊಲ್ಲಬೇಕು ಎಂಬ ಪ್ರಚೋದನಕಾರಿ ಬರಹ ಬರೆಯಲಾಗಿದೆ. ಹಿಂದೂ ದೇವತೆಗಳ ಅಪಮಾನ ಮಾಡುವ ಬರಹ ಬರೆಯಲಾಗಿತ್ತು. ಕಳೆದ ವಾರ ಜನವರಿ 2 ರಂದು ಬಬ್ಬು ಸ್ವಾಮಿ ದೇವಸ್ಥಾನದ ಕಾಣಿಕೆಯ ಡಬ್ಬಿಯಲ್ಲಿ ಸಹ ಏಸು […]

ಕಲಿಗಾಲದಲ್ಲೂ ಕೊರಗಜ್ಜನ ಪವಾಡ..ಮರಳಿ ಬಂತು ಕದ್ದ ವಿಗ್ರಹ!

Wednesday, August 15th, 2018
koragajja

ಉಡುಪಿ: ಕೊರಗಜ್ಜ ಇದು ಕರಾವಳಿಗರ ಆರಾಧ್ಯ ದೈವ. ಕಲಿಗಾಲದಲ್ಲೂ ಕೊರಗಜ್ಜನ ಪವಾಡ ಮೇಲಿಂದ ಮೇಲೆ ಸಾಬೀತಾಗುತ್ತಿರುವುದರಿಂದ ಈ ದೈವದ ಮೇಲಿನ ನಂಬುಗೆ ಮತ್ತಷ್ಟು ದೃಢವಾಗುತ್ತಾ ಬಂದಿದೆ. ಅಂತಹ ಕೊರಗಜ್ಜನನ್ನೇ ಕದ್ದವರ ಕಥೆ ಏನಾಯ್ತು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ನೋಶಿವಾಂಶ ಸಂಭೂತ ಕೊರಗಜ್ಜ ಎನ್ನುವುದು ಕರಾವಳಿಗರ ಇಷ್ಟ ದೈವ. ಏನೇ ಕಷ್ಟ ಬರಲಿ ಮನೆಯ ಸ್ವತ್ತು ಕಳ್ಳತನವಾಗಲಿ, ಮಕ್ಕಳಿಗೆ ಕಾಯಿಲೆ ಬಾಧಿಸಲಿ ಕೊರಗಜ್ಜನಿಗೊಂದು ವೀಳ್ಯದೆಲೆಯ ಹರಕೆ ಹೊತ್ತರೆ ಸಾಕು, ಕ್ಷಣಮಾತ್ರದಲ್ಲಿ ಸಮಸ್ಯೆ ಬಗೆಹರಿಯುತ್ತೆ ಅನ್ನೋದು ಇಲ್ಲಿಯವರ ನಂಬಿಕೆ. […]

ಕಾಣಿಕೆ ಡಬ್ಬಿಗೆ ಮೂತ್ರ ವಿಸರ್ಜನೆ ಮಾಡಿ ಕಾಂಡಮ್ ಪ್ಯಾಕೇಟು ಹಾಕಿದ ಕಳ್ಳರ ಗತಿ ಏನಾಯ್ತು ನೋಡಿ?

Monday, May 28th, 2018
Katapady

ಉಡುಪಿ : ಉಡುಪಿ ಜಿಲ್ಲೆಯ ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ಸನ್ನಿಧಾನದಲ್ಲಿ ಕೊರಗಜ್ಜನ ಪವಾಡದಿಂದ ಕ್ಷೇತ್ರದ ಕಾಣಿಕೆ ಹುಂಡಿಯ ಹಣವನ್ನು ಕದ್ದ ಮುಸ್ಲಿಂ ಯುವಕರ ಗುಂಪು ಕ್ಷಮೆ ಕೇಳಿದ ಘಟನೆ ಕಟಪಾಡಿಯಲ್ಲಿ ನಡೆದಿದೆ. ಹಣ ಕದ್ದ ನಂತರ ಶಿವಲಿಂಗದ ಮಾದರಿಯಲ್ಲಿರುವ ಕಾಣಿಕೆ ಡಬ್ಬಿಗೆ ಮೂತ್ರ ವಿಸರ್ಜನೆ ಮಾಡಿದ್ದೂ ಅಲ್ಲದೆ, ಕಾಂಡಮ್ ಪ್ಯಾಕೇಟುಗಳನ್ನು ಡಬ್ಬಿಗೆ ತುರುಕಿದ್ದರು. ದೈವ ಏನು ಮಾಡುತ್ತೆ ಅಂತಾ ನೋಡೊಣ ಅನ್ನುತ್ತಲೆ ಈ ವರ್ತನೆಗಳನ್ನ ಯುವಕರ ತಂಡ ಮಾಡಿತ್ತು. ಆದರೆ ದೈವದ ಲೀಲೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಈ ಅನಾಗರಿಕ […]