Blog Archive

ಉಡುಪಿಯ 7 ತಿಂಗಳ ಗರ್ಭಿಣಿಯಲ್ಲಿ ಕೊರೊನಾ ಸೋಂಕು ಪತ್ತೆ

Monday, May 18th, 2020
Udupi-Covid

ಉಡುಪಿ :  ಸೋಮವಾರ ಉಡುಪಿಯಲ್ಲಿ 7 ತಿಂಗಳ ಗರ್ಭಿಣಿಯಲ್ಲಿ ಕೊರೊನಾ ದೃಢಪಟ್ಟಿದೆ. ಮಹಾರಾಷ್ಟ್ರದ ಮುಂಬೈ ನಿಂದ ಆಗಮಿಸಿ ಕ್ವಾರಂಟೈನ್ ನಲ್ಲಿದ್ದ ಉಡುಪಿಯ ಜಿಲ್ಲೆಯ ಕೊಲ್ಲೂರಿನ 28 ವರ್ಷದ ಮಹಿಳೆಗೆ ಕೊರೊನಾ ದೃಢವಾಗಿದೆ. ಉಡುಪಿಯಲ್ಲಿ 11 ಕೊರೊನಾ ಪ್ರಕರಣ ದೃಢಪಟ್ಟಿದ್ದು ಈ ಪೈಕಿ 3 ಮಂದಿ ಗುಣಮುಖರಾಗಿದ್ದಾರೆ. 7 ಸಕ್ರಿಯ ಪ್ರಕರಣಗಳಿದ್ದು ಓರ್ವ ಮೃತಪಟ್ಟಿದ್ದಾನೆ.  

ಸುರತ್ಕಲ್ ಗ್ರಾಮದ 68 ವರ್ಷದ ಮಹಿಳೆಗೆ ಕೊರೊನಾ ಸೋಂಕು, ಮೂಲ ಪತ್ತೆಗೆ ತಂಡ

Friday, May 15th, 2020
Surathkal Covid

ಮಂಗಳೂರು : ಸುರತ್ಕಲ್ ಗ್ರಾಮದ 68 ವರ್ಷದ ಮಹಿಳೆಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ . ಹೀಗಾಗಿ ಸುರತ್ಕಲ್ ಪ್ರದೇಶವನ್ನು ಕಂಟೋನ್ಮೆಂಟ್ ಮಾಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ. ಸುರತ್ಕಲ್ ಮೂಲದ ಮಹಿಳೆಗೆ ಯಾವ ಮೂಲದಿಂದ ಸೋಂಕು ಹರಡಿದೆ ಎಂದು ಇನ್ನು ಖಚಿತವಾಗಿಲ್ಲ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರಲ್ಲಿ ತೀವ್ರ ಉಸಿರಾಟದ ಸಮಸ್ಯೆ ಕಂಡುಬಂದ ಹಿನ್ನಲೆಯಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸಿದಾದ ಸೋಂಕು ಖಚಿತವಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ದುಬೈನಿಂದ […]

ದುಬೈನಿಂದ ಮಂಗಳೂರಿಗೆ ಬಂದ 15 ಪ್ರಯಾಣಿಕರಲ್ಲಿ ಕೊರೊನಾ ಸೋಂಕು

Friday, May 15th, 2020
dubai15

ಮಂಗಳೂರು :  ಮಂಗಳವಾರ ದುಬೈನಿಂದ ಮಂಗಳೂರಿಗೆ ಆಗಮಿಸಿರುವ ಪ್ರಯಾಣಿಕರ ಪೈಕಿ 15 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಮೇ.12 ರಂದು ವಿಶೇಷ ವಿಮಾನದ ಮೂಲಕ ಬಂದಿಳಿದ 179 ಮಂದಿ ಪೈಕಿ, ದ.ಕ ದ ಮೂಲದ 69 ಜನರ ಗಂಟಲಿನ ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಪೈಕಿ 15 ಮಂದಿಗೆ ಕೊರೊನಾ ತಗುಲಿರುವುದು ಖಚಿತವಾಗಿದೆ. ಇವರಲ್ಲಿ 12 ಪುರುಷರಿಗೆ ಮತ್ತು 4 ಮಹಿಳೆಯರಿಗೆ ಸೋಂಕು ದೃಢವಾಗಿದೆ. ೧5 ಮಂದಿ ಪೈಕಿ ಓರ್ವರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದಾರೆ. ದುಬೈನಿಂದ ಬಂದ ವಿಮಾನದಲ್ಲಿ […]

ಕೊರೊನಾ ಸೋಂಕಿನಿಂದ ಗುರುವಾರ ಕುಲಶೇಖರದ 80ರ ವೃದ್ಧೆ ಸಾವು

Thursday, May 14th, 2020
Covid death Mangalore

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಗುರುವಾರ ಕುಲಶೇಖರದ 80ರ ವೃದ್ಧೆ ಮೃತಪಟ್ಟಿದ್ದಾರೆ. ಈ ವೃದ್ಧೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಈಕೆ ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವ ವಾಯು ಸಮಸ್ಯಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆಸ್ಪತ್ರೆಯಲ್ಲಿದ್ದ ತಾಯಿ ಮತ್ತು ಮಗ ಇಬ್ಬರಿಗೂ ಕೋವಿಡ್-19 ಪಾಸಿಟಿವ್ ಆಗಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ  ಒಟ್ಟು ಐದು ಮಂದಿ  ಮೃತಪಟ್ಟಿದ್ದಾರೆ. ಬುಧವಾರ ಸೋಂಕಿನಿಂದ ಬಳಲುತ್ತಿದ್ದ ಬೋಳೂರಿನ 58ರ ಮಹಿಳೆ ಸಾವಿಗೀಡಾದ್ದಾರೆ. ಈಗ ಫಸ್ಟ್‌ ನ್ಯೂರೋ ಆಸ್ಪತ್ರೆ ಸಂಪರ್ಕದಿಂದ ಸೋಂಕಿತರಾದವರ ಸಂಖ್ಯೆ 20ಕ್ಕೆ […]

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು, ರಾಜ್ಯದಲ್ಲಿ ಹೊಸ 7 ಕೇಸ್, ಒಟ್ಟು 27 ಪ್ರಕರಣಗಳು ಸಕ್ರಿಯ

Monday, May 11th, 2020
KK-Shailaja

ಕಾಸರಗೋಡು : ಕಾಸರಗೋಡು ಕೊರೊನಾ ಮುಕ್ತ ಜಿಲ್ಲೆ ಎಂದು ಘೋಷಣೆಗೆ ತಯಾರಿ ನಡೆಸುತ್ತಿರುವ ಬೆನ್ನಿಗೆ ಮತ್ತೆ ನಾಲ್ವರಿಗೆ ಸೋಮವಾರ ಕೊರೊನಾ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡವರಲ್ಲಿ ಕುಂಬಳೆ ಮೂಲದ 41, 49 ವರ್ಷ ವಯಸ್ಸಿನ ಇಬ್ಬರು ಪುರುಷರು ಹಾಗೂ 61, 51 ವರ್ಷ ವಯಸ್ಸಿನ ಇಬ್ಬರು ವೃದ್ದರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇಬ್ಬರು ವೃದ್ದರು ಪೈವಳಿಕೆ ಹಾಗೂ ಮಂಗಲ್ಪಾಡಿಯವರೆಂದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ ಈ ನಾಲ್ವರೂ ಕಾಸರಗೋಡಿಗೆ ಮುಂಬೈಯಿಂದ ವಾಪಾಸ್ಸಾಗಿದ್ದರು ಎನ್ನಲಾಗಿದೆ. ಶನಿವಾರ ದುಬೈ ಮತ್ತು ಅಬು ದುಬಾಯಿಯಿಂದ  […]

ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿ

Thursday, April 30th, 2020
kasaba death

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೂರನೇ ಬಲಿಯಾಗಿದೆ. ಬುಧವಾರದಂದು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ ಮಹಿಳೆ ಮೃತಪಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಮಹಿಳೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೆ, ನಿನ್ನೆಯಿಂದ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ವೆಂಟಿಲೇಟರ್ ಅಳವಡಿಸಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾದ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ದ.ಕ. ಜಿಲ್ಲಾಡಳಿತ ಮಾಹಿತಿ ನೀಡಿದೆ. ಬಂಟ್ವಾಳ ಕಸಬಾ  ನಿವಾಸಿಗಳು ಒಂದೇ ಮನೆಯ ಇಬ್ಬರು ಮಹಿಳೆಯರು ಕೊರೊನಾ ಸೋಂಕಿಗೆ ಬಲಿಯಾಗಿದ್ದರು. […]

ಶನಿವಾರ ಕಾಸರಗೋಡು ಜಿಲ್ಲೆಯಲ್ಲಿ ಆರು ಮಂದಿಯಲ್ಲಿ ಕೊರೊನಾ ಸೋಂಕು ದೃಢ

Saturday, April 4th, 2020
kasaragod-covid

ಕಾಸರಗೋಡು :  ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ  ಏರಿಕೆಯಾಗುತ್ತಾ ಇದ್ದು, ಶನಿವಾರ ಆರು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ 11 ಪ್ರಕರಣ ಶನಿವಾರ ಪತ್ತೆಯಾಗಿದ್ದು , ಈ ಪೈಕಿ ಆರು ಪ್ರಕರಣ ಕಾಸರಗೋಡಿಗೆ ಸೇರಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 141 ಕ್ಕೇರಿದೆ. ಕಾಸರಗೋಡಿನ ಸೋಂಕಿತರ ಪೈಕಿ ಮೂವರು ದುಬೈಯಿಂದ ಬಂದವರಾಗಿದ್ದು, ಓರ್ವ ನಿಜಾಮುದ್ದೀನ್‌ನಿಂದ ಬಂದವರೆಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿಗೂ ತಗುಲಿದ ಕೊರೊನಾ ಸೋಂಕು

Friday, March 13th, 2020
kenada

ಒಟ್ಟಾವ : ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿ ಸೋಫಿ ಗ್ರೆಗೊಯಿರ್ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ಬಗ್ಗೆ ಕೆನಡಾದ ಪ್ರಧಾನಿ ಕಾರ್ಯಾಲಯ ಪ್ರಕಟಣೆ ಹೊರಡಿಸಿ ಸ್ಪಷ್ಟಪಡಿಸಿದೆ. ಸೋಫಿ ಗ್ರೆಗೊಯಿರ್ ಅವರ ದೇಹದಲ್ಲಿ ಜ್ವರ ತರಹದ ರೋಗಲಕ್ಷಣ ಕಾಣಿಸಿಕೊಂಡದ್ದರಿಂದ ಪರೀಕ್ಷೆಗೆ ಒಳಪಡಿಲಾಯ್ತು. ಈ ವೇಳೆ ಧನಾತ್ಮಕ ಫಲಿತಾಂಶ ಬಂದಿದೆ. ವೈದ್ಯಕೀಯ ಸಲಹೆಗಳನ್ನು ಅನುಸರಿಸಿ ಆಕೆಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ನಿಗಾ ಇಡಲಾಗಿದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ. ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು […]

ಇಟಲಿಯಿಂದ ಆಗಮಿಸಿದ್ದ ಕೇರಳದ 3 ವರ್ಷದ ಮಗುವಿಗೆ ಕೊರೊನಾ ಸೋಂಕು

Monday, March 9th, 2020
coronavirus

ಕೊಚ್ಚಿನ್ : ರವಿವಾರವಷ್ಟೇ ಕೇರಳದಲ್ಲಿ ಐವರಿಗೆ ತಗುಲಿದ್ದ ಕೊರೊನಾ ಸೋಂಕು ಇಂದು ಮತ್ತೊಂದು ಮಗುವಿಗೆ ತಾಗಿದೆ. ಇಟಲಿಗೆ ಹೋಗಿ ಬಂದಿದ್ದ ಕೇರಳದ ಮೂರು ವರ್ಷದ ಮಗುವಿಗೆ ಸೋಂಕು ಇರುವುದು ದೃಢಪಟ್ಟಿದೆ. ಸೋಮವಾರ ಈ ಹೊಸ ದೃಢಪಡುವ ಮೂಲಕ ಭಾರತದಲ್ಲಿ ಈ ಮಾರಣಾಂತಿಕ ಸೋಂಕಿತರ ಪ್ರಕರಣ 40ಕ್ಕೇರಿದೆ.ಶನಿವಾರ ತನ್ನ ಕುಟುಂಬಿಕರ ಜೊತೆಗೆ ಇಟಲಿಯಿಂದ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಈ ಮಗು ಮರಳಿತ್ತು. ಸದ್ಯ ಮಗುವನ್ನು ಐಸಲೋಶನ್ ವಾರ್ಡ್ ನಲ್ಲಿ ಇಡಲಾಗಿದೆ. ಮಗುವಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಅವರ ಕುಟುಂಬಿಕರನ್ನೂ […]

ಕೊರೊನಾ ಸೋಂಕು ಶಂಕೆ : ದುಬೈನಿಂದ ಮಂಗಳೂರಿಗೆ ಆಗಮಿಸಿದ ವ್ಯಕ್ತಿ ವೆನ್ಲಾಕ್ ಆಸ್ಪತ್ರೆಗೆ ದಾಖಲು

Monday, March 9th, 2020
venlock

ಮಂಗಳೂರು : ನಗರದ ಅಂತರಾಷ್ಟ್ರೀಯ ಏರ್ ಪೋರ್ಟಿನಲ್ಲಿ ಶಂಕಿತ ಕೊರೊನಾ ಪ್ರಯಾಣಿಕನೊಬ್ಬ ಪತ್ತೆಯಾಗಿದ್ದಾನೆ. ಪ್ರಯಾಣಿಕ ಭಾನುವಾರ ತಡ ರಾತ್ರಿ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದಾನೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸ್ಕ್ರೀನಿಂಗ್ ವೇಳೆ ಟೆಂಪರೇಚರ್ ನಲ್ಲಿ ಬಯಲಾಗಿದೆ. ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಆರೋಗ್ಯಾಧಿಕಾರಿಗಳು ಸ್ಯಾಂಪಲ್ ತೆಗೆದು ಲ್ಯಾಬ್‍ಗೆ ರವಾನಿಸಿದ್ದು, ಕೊರೊನಾ ಇರೋ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಯಾಣಿಕನನ್ನು ಐಸೋಲೇಶನ್ ವಾರ್ಡ್‍ಗೆ ಸಿಬ್ಬಂದಿ ರವಾನಿಸಿದ್ದಾರೆ. ಚೀನಾದಲ್ಲಿ ಮರಣ ಮೃದಂಗ […]