ಪರಿಸರ ಸಂರಕ್ಷಣೆ ಹಾಗೂ ಕೋವಿಡ್ ಮುಂಜಾಗೃತೆಯೊಂದಿಗೆ ಗಣೇಶ ಹಬ್ಬ ಆಚರಿಸೋಣ

Sunday, September 5th, 2021
Eco Friendly

ಗಣೇಶ ಹಬ್ಬ ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಹಬ್ಬ) ದಿನ ಆಚರಿಸಲಾಗುತ್ತದೆ. ಈ ಹಬ್ಬದಂದು ಪ್ರಮುಖವಾಗಿ ಕಂಡು ಬರುವುದೆಂದರೆ ಪಟಾಕಿ, ಡಿಜೆ, ಡ್ಯಾನ್ಸ್ ಹೀಗೆ ಮೋಜು ಮಸ್ತಿಯಿಂದ ಬಹಳ ವಿಜೃಂಭಣೆಯಿಂದ ಆಚರಿಸುವುದು. ಅನ್ಯ ರಾಜ್ಯಗಳಿಂದ ಬೃಹತಾಕಾರದ ಗಣೇಶ ವಿಗ್ರಹ ತರುವುದು, ಮಣ್ಣಿನ ವಿಗ್ರಹಗಳ ಬಳಕೆಗಿಂತಲೂ ಪ್ಲಾಸ್ಟರ್ನಿಂದ ತಯಾರಿಸಿದ ಗಣಪತಿಗಳ ಮಾರಾಟ ಹೆಚ್ಚಳ ಇರುವುದರಿಂದ ಅವುಗಳ ಪ್ರತಿಷ್ಠಾಪನೆ ಮಾಡುವುದು. ವಿವಿಧ ರೀತಿಯ ಪಟಾಕಿಗಳನ್ನು ಬಳಸುವುದು ಇವೆಲ್ಲವುಗಳನ್ನು ಗಣೇಶ ಹಬ್ಬ […]

ಗಣೇಶ ಹಬ್ಬದ ತಯಾರಿಯಲ್ಲಿ ಮಂಗಳೂರು ನಗರ

Wednesday, September 12th, 2018
Ganesha Fesival

ಮಂಗಳೂರು : ಭಾದ್ರಪದ ಶುಕ್ಲದ ಶುದ್ಧ ಚೌತಿಯಂದು ಗಣೇಶ ಹುಟ್ಟಿದ ಹಬ್ಬವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಅದು ಕೇವಲ ಒಂದು ಊರಿಗೆ ಅಥವ ಕೇರಿಗೆ ಸಂಭದಿಸಿಸುದಲ್ಲ, ಆ ಗಣೇಶನ ಮಹಿಮೆಯನ್ನು ದೇಶ ವಿದೇಶಗಳಲ್ಲೂ ಆಚರಿಸುತ್ತಾರೆ. ಅಷ್ಟೇ ಏಕೆ, ಜಾತಿ ಮತ ಬೇದವನ್ನು ಮರೆತು ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಗಣಪನಿಗೆ ಸಿಹಿ ತಿನಿಸುಗಳೆಂದರೆ ಬಲು ಇಷ್ಟ ಅದರಲ್ಲೂ ಕಬ್ಬು, ಎಳ್ಳು, ಮೊದಕಗಳೆಂದರೆ ಪಂಚಪ್ರಾಣ. ಆತನ ಭಕ್ತರು ಏನೂ ಇಲ್ಲ ಎಂದರೂ ಕಬ್ಬು, ಎಳ್ಳು, ಪಂಚಾಮೃತ, ಬೆಲ್ಲ, ಪಾಯಸ ಮೊದಲಾದವುಗಳನ್ನು […]

ಗಣೇಶ ಹಬ್ಬ ಪರಿಸರ ಸ್ನೇಹಿಯಾಗಿ ಆಚರಿಸಲು ಕರೆ

Tuesday, August 14th, 2018
Ganesha

ಮಂಗಳೂರು : ಗಣೇಶ ಹಬ್ಬದ ಸಮಯದಲ್ಲಿ ಪ್ಲಾಸ್ಟರ್ ಅಫ್ ಪ್ಯಾರಿಸ್ ನ ಗಣೇಶ ವಿಗ್ರಹವನ್ನು ಕೊಂಡುಕೊಳ್ಳದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡದೇ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಉಪಯೋಗಿಸದೇ ಆಚರಿಸಲು ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಲು ಕೋರಲಾಗಿದೆ. ವಿಷಕಾರಿ ರಾಸಾಯನಿಕ ಲೋಹ ಲೇಪದ ಮೂರ್ತಿ ಬಳಕೆ ಮಾಡಬೇಡಿ. ಮಣ್ಣಿನ ನೈಸರ್ಗಿಕ ಬಣ್ಣದ ಗಣೇಶ ವಿಗ್ರಹವನ್ನು ಬಳಸಿ, ಸಾಮೂಹಿಕವಾಗಿ ನಡೆಸುವ ಗಣೇಶನ ಚಪ್ಪರಕ್ಕೆ  ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ. ಬಾವಿ, ಕೆರೆ, ನದಿಗಳಲ್ಲಿ ವಿಸರ್ಜನೆ ಮಾಡಬೇಡಿ, ನಗರಸಭೆ, ಮಹಾನಗರಪಾಲಿಕೆ ಹಾಗೂ ಪುರಸಭೆ […]

ಗಣೇಶ ಹಬ್ಬ ಸಂಭ್ರಮದಿಂದ ಶಾಂತಿಯುತವಾಗಿ ಆಚರಣೆಯಾಗಬೇಕು: ಭೂಷಣ್ ಬೊರಸೆ

Saturday, August 27th, 2016
BantwalBorase

ಬಂಟ್ವಾಳ: ಗಣೇಶ ಹಬ್ಬ ಸಂಭ್ರಮದಿಂದ ಶಾಂತಿಯುತವಾಗಿ ಆಚರಣೆಯಾಗಬೇಕು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನೀಡುವ ಸೂಚನೆಗಳನ್ನು ಸಂಘಟಕರು ಪಾಲಿಸಿ ಸಹಕರಿಸಬೇಕು ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೊರಸೆ ಹೇಳಿದ್ದಾರೆ. ಮುಂಬರುವ ಗಣೇಶ ಚೌತಿ ಹಬ್ಬದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ನಡೆದ ಬಂಟ್ವಾಳ ವೃತ್ತ ವ್ಯಾಪ್ತಿಯ ಗಣೇಶೋತ್ಸವ ಸಮಿತಿಗಳ ಮುಖ್ಯಸ್ಥರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಹಬ್ಬದ ಪೆಂಡಾಲ್ ಗಳನ್ನು ಅನಾಹುತಗಳು ನಡೆಯದಂತೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಬೇಕು, ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಸಂಬಂಧಪಟ್ಟವರಿಗೆ […]

ಮಂಗಳೂರಿನಲ್ಲಿ ನಾನಾ ಆಕಾರದ ಗಣೇಶ ವಿಗ್ರಹಗಳ ಭರದಿಂದ ತಯಾರಿ

Friday, September 6th, 2013
ಮಂಗಳೂರಿನಲ್ಲಿ ನಾನಾ ಆಕಾರದ ಗಣೇಶ ವಿಗ್ರಹಗಳ ಭರದಿಂದ ತಯಾರಿ

ಮಂಗಳೂರು : ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಂದು ಗಣೇಶ ಆರಾಧನೆ ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತದೆ. ಶಿವ ಪಾರ್ವತಿಯರ ಪುತ್ರ ಗಣೇಶನ ಆಕಾರವು ವಿಚಿತ್ರ ಮತ್ತು ವಿಶೇಷವಾದದು. ಆನೆ ಮುಖದ ದೊಡ್ಡ ಕಿವಿಯ, ಡೊಳ್ಳು ಹೊಟ್ಟೆಯ ಈತ ದೇವತೆಗಳಿಗೂ ಮಾನವ ಕುಲಕ್ಕೂ ಪ್ರಥಮ ಪೂಜಿತ. ಶಿವ ಪುರಾಣದ ಪ್ರಕಾರ ಪಾರ್ವತಿಯು ತನ್ನ ಮೈ ಮೇಲಿನ ಮಣ್ಣಿನ ಕೊಳೆಯನ್ನು ಮೂರ್ತಿಯನ್ನಾಗಿಸಿ ಅದಕ್ಕೆ ಜೀವ ನೀಡಿದ್ದಳು ಎಂದು ಹೇಳಲಾಗುತ್ತದೆ. ಜೀವ ಪಡೆದ ಆ ಪಾರ್ವತಿಯ ಪುತ್ರನನ್ನು ತಾನು ಸ್ನಾನಕ್ಕೆ […]