ಗಾಂಧೀಜಿ ಕನಸು ನನಸಾಗಿಸುವ ಮುಖ್ಯ ಉದ್ದೇಶದೊಂದಿಗೆ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಬೇಕು: ಸಚಿವ ಕೆ.ಎಸ್.ಈಶ್ವರಪ್ಪ

Wednesday, November 11th, 2020
eswarappa gadag

ಗದಗ: ಗ್ರಾಮಗಳ ಅಭಿವೃದ್ಧಿ ಹಾಗೂ ಗಾಂಧಿಜಿಯವರ ಕನಸು ನನಸಾಗಿಸುವ ಮುಖ್ಯ ಉದ್ದೇಶದೊಂದಿಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಬೇಕೆಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಗಾಂಧೀಜಿಯರವರು ಗದಗ ಜಿಲ್ಲೆಗೆ ಭೇಟಿ ನೀಡಿದ ಶತಮಾನೋತ್ಸವ ಸಮಾರಂಭದ ಅಂಗವಾಗಿ ಗದಗನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಿಂದ ವಿವಿ ನೂತನ ಆವರಣದಲ್ಲಿ ಬುಧವಾರ ಆಯೋಜಿಸಲಾದ ಸಬರಮತಿ ಆಶ್ರಮದ ಪ್ರತಿಕೃತಿ ಕಟ್ಟಡದ ಲೋಕಾರ್ಪಣೆ ನೆರವೇರಿಸಿ ಸಚಿವರು ಮಾತನಾಡಿದರು. […]

ನಮ್ಮೊಳಗಿನ ಗಾಂಧೀಜಿಯನ್ನು ಬಡಿದೆಬ್ಬಿಸಿ – ಡಾ|| ಮುರಲೀ ಮೋಹನ್ ಚೂಂತಾರು

Thursday, January 31st, 2019
Home Guard

ಮಂಗಳೂರು : ಜನವರಿ 30 ರಂದು ಜಿಲ್ಲಾ ಗೃಹರಕ್ಷಕದಳ ಕಚೇರಿ ಮೇರಿಹಿಲ್‍ನಲ್ಲಿ ಹುತಾತ್ಮರ ದಿನಾಚರಣೆಯನ್ನು  ಬೆಳಗ್ಗೆ 11 ಗಂಟೆಗೆ ಗಾಂಧೀಜಿಯವರ ಭಾವಚಿತ್ರವನ್ನಿಟ್ಟು ದೀಪ ಬೆಳಗಿಸಿ, ಮೌನಾಚರಣೆ ಮಾಡಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಮಾದೇಷ್ಠರಾದ ಡಾ|| ಮುರಲೀ ಮೋಹನ ಚೂಂತಾರು ಇವರು ಗಾಂಧೀಜಿಯವರ ತತ್ವ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಪ್ರತಿಯೊಬ್ಬರ ಮನದೊಳಗೆ ಗಾಂಧೀಜಿಯವರ ಆದರ್ಶಗಳು ಸುಪ್ತವಾಗಿದೆ. ಈ ಸುಪ್ತವಾಗಿರುವ ಆದರ್ಶಗಳನ್ನು ಎಚ್ಚರಿಸಿ ನಮ್ಮೊಳಗಿನ ಗಾಂಧೀಜಿಯವರನ್ನು ಬಡಿದೆಬ್ಬಿಸುವ ಕಾರ್ಯ ತುರ್ತಾಗಿ ಆಗಬೇಕೆಂದು ಕರೆ ನೀಡಿದರು. ಈ […]

ಗಾಂಧೀಜಿಯನ್ನೇ ಕೊಂದವರನ್ನು ವೈಭವಿಕರಿಸುವವರ ಬಗ್ಗೆ ಮಾತಾಡಿ ಪ್ರಯೋಜನವಿಲ್ಲ: ಯು ಟಿ ಖಾದರ್

Friday, July 27th, 2018
u-t-kadher

ಮಂಗಳೂರು: ‘ಗೃಹಸಚಿವನಾಗಿದ್ದರೆ ಬುದ್ಧಿಜೀವಿಗಳಿಗೆ ಗುಂಡು ಹಾರಿಸಲು ಹೇಳುತ್ತಿದ್ದೆ’ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಹೇಳಿಕೆಗೆ ಮಂಗಳೂರಿನಲ್ಲಿ ಸಚಿವ ಯು ಟಿ ಖಾದರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಮಹಾತ್ಮ ಗಾಂಧೀಜಿಯನ್ನೇ ಕೊಂದವರನ್ನು ವೈಭವಿಕರಿಸುವವರ ಬಗ್ಗೆ ಮಾತಾಡಿ ಪ್ರಯೋಜನವಿಲ್ಲ. ಅವರನ್ನು ಆಯ್ಕೆ ಮಾಡಿರುವ ಆ ಕ್ಷೇತ್ರದ ಜನರು ಆಲೋಚಿಸಬೇಕು’ ಎಂದರು. ಅಷ್ಟೆ ಅಲ್ಲದೇ, ಇವರ ಹೇಳಿಕೆ ಬಗ್ಗೆ ಸ್ಥಳೀಯ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸುತ್ತದೆ ಎಂದು ಸಚಿವ ಖಾದರ್ ತಿಳಿಸಿದರು.

ಗಾಂಧೀಜಿಗೆ ಅವಮಾನವಾದರೂ ಪ್ರತಿಭಟನೆಯಾಗುತ್ತಿಲ್ಲ: ದಿನೇಶ್‌ ಅಮಿನ್‌ಮಟ್ಟು

Wednesday, January 31st, 2018
gandhiji-1

ಮಂಗಳೂರು: ಮಹಾತ್ಮ ಗಾಂಧೀಜಿಗೆ ಅವಮಾನ, ದೂಷಣೆ ಮಾಡಿದರೂ ಕೂಡಾ ಪ್ರತಿಭಟನೆಯಾಗುತ್ತಿಲ್ಲ. ಅದೇ ಬಸವಣ್ಣ, ಅಂಬೇಡ್ಕರ್‌‌ಗೆ ಅವಮಾನ ಮಾಡಿದರೆ ಪ್ರತಿಭಟನೆಯಾಗುತ್ತಿದೆ. ಇದು ಗಾಂಧೀಜಿಗೆ ಬಂದ ದುಸ್ಥಿತಿ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ಹೇಳಿದರು. ನಗರದ ನೆಹರೂ ಮೈದಾನದಲ್ಲಿ ನಡೆದ `ಸೌಹಾರ್ದತೆಗಾಗಿ ಕರ್ನಾಟಕ’ ವತಿಯಿಂದ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧೀಜಿಯವರನ್ನು ವಿವಿಧ ವರ್ಗದವರು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿರುವುದರಿಂದ ಗಾಂಧೀಜಿಗೆ ಈ ಸ್ಥಿತಿ ಬಂದಿದೆ. ಗಾಂಧೀಜಿ ಒಂದು ವರ್ಗಕ್ಕೆ ಸೇರಿದವರಲ್ಲ. ಅದು ಅವರ […]

ಗಾಂಧೀಜಿ ಪ್ರಪಂಚದಾದ್ಯಂತ ಇನ್ನೂ ಜೀವಂತವಾಗಿದ್ದಾರೆ : ಬಿ‌ಎ.ಮೊಯ್ದಿನ್

Wednesday, October 2nd, 2013
Congress Office Gandhi Jayanti

ಮಂಗಳೂರು : ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ( ಅ. 2) ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು. ಮಾಜಿ ಸಚಿವ ಬಿ‌ಎ.ಮೊಯ್ದಿನ್  ಮಾತನಾಡಿ  ಯುವಕರಿಗೆ ಗಾಂಧೀಜಿ ತತ್ವಗಳನ್ನು ತಿಳಿಸುವುದರ ಮೂಲಕ ದೇಶ ಪ್ರೇಮವನ್ನು ಬೆಳೆಸಬೇಕು. ಯುವಕರಲ್ಲಿ ಸಹನಾಶೀಲತೆ ಸೃಷ್ಟಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ.  ಸ್ವದೇಶಿ ಕಾರ್ಯಕ್ರಮದ ಆಂದೋಲನದ ಮೂಲಕ ಅಹಿಂಸೆಯನ್ನು ಭೋಧಿಸಿದ್ದರೂ ಹಾಗಾಗಿ ಗಾಂಧಿ ತತ್ವಗಳು ಇಂದಿಗೂ ಅಮರವಾಗಿದೆ ಎಂದು ಅವರು ಹೇಳಿದರು. ಗಾಂಧಿ ಬ್ರಿಟಿಷರ […]