ದ.ಕ. ಜಿಲ್ಲೆಯಲ್ಲಿ ಭಾರಿ ಮಳೆ ಸಂಪರ್ಕ ರಸ್ತೆ, ಮನೆಗಳು ಕುಸಿತ, ಹಲವೆಡೆ ಜಲಾವೃತ

Sunday, September 20th, 2020
neerumarga

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕಳೆದ 24ಗಂಟೆಗಳಲ್ಲಿ ಸುರಿದ ಮಳೆಯಿಂದಾಗಿ  ನಗರ ಹೊರವಲಯದ ನೀರುಮಾರ್ಗ ಮತ್ತು ಬಜ್ಪೆ ಸಮೀಪದ ಆದ್ಯಪಾಡಿ ಎಂಬಲ್ಲಿ ಭೂ ಕುಸಿದ ಪರಿಣಾಮ ಸಂಪರ್ಕ ರಸ್ತೆ ಕಡಿದು ಹೋಗಿದೆ.‌ ಮುನ್ನೆಚ್ಚರಿಕೆಯ ಕ್ರಮವಾಗಿ ಈ ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ . ಅದಲ್ಲದೆ ಸರಿಪಳ್ಳ ಎಂಬಲ್ಲಿ ಮನೆ ಯೊಂದು ಕುಸಿದ ಪರಿಣಾಮ ಇಬ್ಬರಿಗೆ‌ ಗಾಯವಾಗಿದ್ದು, ಅವರನ್ನು‌ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಜಪ್ಪಿನಮೊಗರು, ಕುದ್ರೋಳಿ ಮತ್ತಿತರ ಕಡೆ ನೀರು ನಿಲುಗಡೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ನಗರದ ಫಳ್ನೀರ್ ರಸ್ತೆಯ […]

ಉಕ್ಕಿ ಹರಿದ ಸ್ವರ್ಣ ನದಿ, ಉಡುಪಿಯ ಹಲವು ಪ್ರದೇಶಗಳು ಜಲಾವೃತ

Sunday, September 20th, 2020
Udupi Rain

ಉಡುಪಿ: ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಸ್ವರ್ಣ ನದಿಯು ಉಕ್ಕಿ ಹರಿಯುತ್ತಿದ್ದು, ಉಪ್ಪೂರು, ಬೈಕಾಡಿ, ತೋನ್ಸೆ, ನಯಂಪಳ್ಳಿ ಹಾಗೂ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಶನಿವಾರ ಸಂಜೆ ಆರಂಭವಾದ ಮಳೆ ಬಿರುಸುಗೊಂಡಿತ್ತು. ರಾತ್ರಿ ಮೂರು ಘಂಟೆ ಸುಮಾರಿಗೆ ಸ್ವರ್ಣ ನದಿಯಲ್ಲಿ ಪ್ರವಾಹ ಅಧಿಕವಾಗಿದ್ದು, ಇಂದು ಬೆಳಿಗ್ಗೆಯೂ ಮುಂದುವರಿದ ಕಾರಣ ಅನಿರೀಕ್ಷಿತ ಪರಿಸ್ಥಿತಿ ಸಂಭವಿಸಿದೆ. ಉಪ್ಪೂರಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ತಮ್ಮನ್ನು ರಕ್ಷಿಸಲು ದೋಣಿ ಕಳುಹಿಸುವಂತೆ ಕೇಳಿಕೊಂಡರೂ ಯಾರೂ ಬಂದಿಲ್ಲ ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. […]

ನಿರಂತರ ಮಳೆ – ಎಕ್ಕೂರು, ಜಪ್ಪಿನಮೊಗರು, ಕಲ್ಲಾಪು ಪ್ರದೇಶ ಜಲಾವೃತ

Friday, September 11th, 2020
Jappiana Mogaru

ಮಂಗಳೂರು : ನಿರಂತರವಾಗಿ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ  ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು ಎಕ್ಕೂರು, ಜಪ್ಪಿನಮೊಗರು, ಕಲ್ಲಾಪು ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇದರಿಂದಾಗಿ ಶುಕ್ರವಾರ  ಮುಂಜಾನೆಯ ವೇಳೆ ಜಪ್ಪಿನಮೊಗರು ಸುತ್ತಮುತ್ತ ಹಲವು ಮನೆಗಳು, ಫ್ಲ್ಯಾಟ್‌ಗಳ ಒಳಗೆ ನೆರೆ ನೀರು ನುಗ್ಗಿದೆ. ಗುರುವಾರ ತಡರಾತ್ರಿಯಿಂದ ಮಳೆ ಮತ್ತಷ್ಟು ಬಿರುಸುಗೊಂಡಿದ್ದರಿಂದ  ‘‘ಜಪ್ಪಿನಮೊಗರು ಆಸುಪಾಸಿನ ಸುಮಾರು 50 ಮನೆಗಳಿಗೆ ಮಳೆ ನೀರು ನುಗ್ಗಿದೆ. ಮನೆಯಲ್ಲಿರುವ ಸಾಮಗ್ರಿಗಳು ಮಳೆ ನೀರಿನಿಂದಾಗಿ ಸಂಪೂರ್ಣವಾಗಿ ನಿರುಪಯುಕ್ತವಾಗಿದೆ. ಶುಕ್ರವಾರ ಬೆಳಗ್ಗೆ ಅಗ್ನಿಶಾಮಕ ದಳದ ತಂಡ ದೋಣಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದು, ಈಗಾಗಲೇ […]

ಮುಂಬೈನಲ್ಲಿ ಮತ್ತೆ ಧಾರಾಕಾರ ಮಳೆ : ಹಲವು ಪ್ರದೇಶಗಳು ಜಲಾವೃತ

Tuesday, September 3rd, 2019
maharashtra

ಮುಂಬೈ : ವಾಣಿಜ್ಯ ನಗರಿ ಮುಂಬೈನಲ್ಲಿ ಸೋಮವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಇದರಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತವಾಗಿದೆ. ವಾಹನ ಸವಾರರು ಪರದಾಡುವಂತಾಗಿದೆ. ಮಂಗಳವಾರವೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂಬೈನ ಕಿಂಗ್ ಸರ್ಕಲ್, ಮಾಟುಂಗಾ, ಅಂಧೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ತೀವ್ರ ಪರದಾಡುವಂತಾಗಿದೆ ಎಂದು ವರದಿ ತಿಳಿಸಿದೆ. ಈ ಮಳೆಗಾಲದಲ್ಲಿ ಮುಂಬೈ ನಗರಿ ಹಲವು ಬಾರಿ ಮಳೆಯಿಂದ ಜಲಾವೃತಗೊಂಡಿದ್ದು, ಸ್ಥಳೀಯ ರೈಲು ಸಂಚಾರ ಹಾಗೂ ಬಸ್, ವಿಮಾನ […]

ಬೆಳ್ತಂಗಡಿ : 15ಕ್ಕೂ ಹೆಚ್ಚು ಗ್ರಾಮಗಳು ಮತ್ತು ನೂರಾರು ಮನೆಗಳು ಜಲಾವೃತ

Saturday, August 10th, 2019
netravati

ಬೆಳ್ತಂಗಡಿ : ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಹರಿಯುತ್ತಿರುವ ನದಿ ಮತ್ತು ಉಪನದಿಗಳಲ್ಲಿ ಶುಕ್ರವಾರ ನಿರೀಕ್ಷೆ ಮೀರಿದ ಪ್ರವಾಹ ಉಂಟಾಗಿ ತಾಲೂಕಿನ ಸುಮಾರು 15ಕ್ಕೂ ಅಧಿಕ ಗ್ರಾಮಗಳ ನೂರಾರು ಮನೆಗಳು ಜಲಾವೃಗೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಾಲೂಕಿನ ನೇತ್ರಾವತಿ, ಕಪಿಲ, ಮೃತ್ಯುಂಜಯ, ಸೋಮಾವತಿ ನದಿಗಳು, ನೆರಿಯ ಮತ್ತು ಅಣಿಯೂರು ಹೊಳೆಯಲ್ಲಿ ಪ್ರವಾಹದ ನೀರು ಉಕ್ಕಿಹರಿದಿತ್ತು. ಶುಕ್ರವಾರ ಮುಂಜಾನೆಯೇ ಪ್ರವಾಹ ಹರಿದು ಬಂದಿದ್ದು, ಬೆಳಗ್ಗೆಜನರು ಏಳುವ ಹೊತ್ತಿಗೆ ಮನೆಯಂಗಳದಲ್ಲಿ ನೆರೆ ಕಂಡು ಬೆಚ್ಚಿದರು. ಲಾೖಲ, […]

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನ ಘಟ್ಟ ಸಂಪೂರ್ಣವಾಗಿ ಜಲಾವೃತ

Wednesday, July 19th, 2017
subrahmanya

ಮಂಗಳೂರು :  ನಿರಂತರವಾಗಿ  ಸುರಿಯುವ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಸ್ನಾನ ಘಟ್ಟ ಸಂಪೂರ್ಣವಾಗಿ ಜಲಾವೃತವಾಗಿದ್ದು, ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳು ನದಿಯ ಮೇಲ್ಭಾಗದಲ್ಲಿ ತೀರ್ಥ ಸ್ನಾನ ಪೂರೈಸುತ್ತಿದ್ದಾರೆ. ಕರ್ನಾಟಕ ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿದೆ ಭಾರೀ ಮಳೆ ಅಲ್ಲದೆ ಘಟ್ಟ ಪ್ರದೇಶದಲ್ಲಿ ಇದೇ ರೀತಿ ನಿರಂತರ ಮಳೆಯಾದರೆ ಕುಮಾರಧಾರಾ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ. ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಸೇತುವೆ ಮಟ್ಟದಲ್ಲಿ ನದಿ ನೀರು ಹರಿಯುತ್ತಿದೆ ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು, ಪಂಜ, ಬಳ್ಪ, […]

ಸುಬ್ರಹ್ಮಣ್ಯ:ನಿರಂತರ ಮಳೆ: ಮುಳುಗಿದ ಕುಮಾರಧಾರ ಸೇತುವೆ

Friday, August 1st, 2014
kumaradhara

ಸುಬ್ರಹ್ಮಣ್ಯ: ಘಟ್ಟ ಪ್ರದೇಶದಲ್ಲಿ ಹಾಗೂಸುಬ್ರಹ್ಮಣ್ಯ ಪರಿಸರದಲ್ಲಿ ಮಳೆಯು ತನ್ನ ರಭಸತೆ ಮತ್ತು ನಿರಂತರತೆಯನ್ನು ಮುಂದುವರೆದಿದ್ದು ಪುಣ್ಯ ನದಿ ಕುಮಾರಧಾರವು ತುಂಬಿ ಹರಿದು ಕುಕ್ಕೆಸುಬ್ರಹ್ಮಣ್ಯ ಸಂಪರ್ಕಿಸುವ ಕುಮಾರಧಾರ ಸೇತುವೆಯು ಮುಳುಗಡೆಗೊಂಡಿದೆ.ಗುರುವಾರ ಸುರಿದ ಕುಂಭದ್ರೋಣ ಮಳೆಗೆ ರಾತ್ರಿ 8.30ರ ಸುಮಾರಿಗೆ ಮುಳುಗಡೆಗೊಂಡಿತು. ಆ ಬಳಿಕ ಮಳೆಯ ಪ್ರಮಾಣ ಅಧಿಕಗೊಂಡು ಶುಕ್ರವಾರ ಕೂಡಾ ಸೇತುವೆಯ ಮೇಲೆ ಹರಿಯುತ್ತಿದ್ದ ಪ್ರವಾಹವು ಕಡಿಮೆಯಾಗಲಿಲ್ಲ. ಇದರಿಂದಾಗಿ ಸುಬ್ರಹ್ಮಣ್ಯ-ಮಂಗಳೂರು ರಾಜ್ಯ ಹೆದ್ದಾರಿಯ ಸಂಚಾರವು ಸ್ಥಗಿತಗೊಂಡಿತು.ಅಲ್ಲದೆ ಕ್ಷೇತ್ರಕ್ಕೆ ಬೆಂಗಳೂರು-ಧರ್ಮಸ್ಥಳ ಮೊದಲಾದ ಭಾಗಗಳಿಂದ ಬರುವ ಭಕ್ತಾಧಿಗಳ ಸಂಚಾರಕ್ಕೆ ತಡೆಯಾಯಿತು. ಸೇತುವೆಯು […]