ಜೂನ್ 7ರ ಬಳಿಕ ಲಾಕ್ಡೌನ್ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದೇನು ಗೊತ್ತಾ ?

Sunday, May 30th, 2021
yedyurappa

ಬೆಂಗಳೂರು : ಕರ್ನಾಟಕದಲ್ಲಿ ಲಾಕ್ಡೌನ್ ಅನ್ನು ಮುಂದುವರೆಸುವ ಬಗ್ಗೆ ಮತ್ತೆ ಚರ್ಚೆಗಳು ನಡೆಯುತ್ತಿದ್ದು, ಲಾಕ್ಡೌನ್ ವಿಸ್ತರಣೆ ಬಗ್ಗೆ ಜೂನ್ 5 ಅಥವಾ 6ರಂದು ನಿರ್ಧಾರ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಕೇಂದ್ರ ಗೃಹ ಇಲಾಖೆ ಕೂಡ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿ ಅಂತ ಸಲಹೆ ಕೊಟ್ಟಿದೆ. ಲಾಕ್ ಡೌನ್ ವಿಸ್ತರಣೆ ಮಾಡೋದು ಜನರ ಮೇಲೆ ನಿಂತಿದೆ. ಕೇಂದ್ರದ ಮಾರ್ಗಸೂಚಿ, ಮತ್ತು ರಾಜ್ಯದ ಸ್ಥಿತಿಗತಿ ನೋಡಿಕೊಂಡು ಲಾಕ್ ಡೌನ್ ವಿಸ್ತರಣೆ ಬಗ್ಗೆ ಸಿಎಂ ತೀರ್ಮಾನ […]

ಜಾತ್ರೆ ಗೆ ಬಂದಿದ್ದ ಇಬ್ಬರು ಮಹಿಳೆಯರು ನಾಪತ್ತೆ

Tuesday, February 16th, 2021
mandarthi

ಬ್ರಹ್ಮಾವರ : ಇಬ್ಬರು ಮಹಿಳೆಯರು ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ನಾಪತ್ತೆಯಾಗಿರುವ ಘಟನೆ ಫೆ.14ರಂದು ನಡೆದಿದೆ. ನಾಪತ್ತೆಯಾದವರನ್ನು ಬೆಳಗಾಂ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಡು ಅಪ್ಪಾಸಾಬ ದಾನವಾಡೆ ಎಂಬವರ ಪತ್ನಿ ಬ್ರಹ್ಮಾವರ ಬೈಕಾಡಿ ಮೂಲದ ಜ್ಯೋತಿ(30) ಹಾಗೂ ಅವರ ತಮ್ಮನ ಪತ್ನಿ ಪ್ರಿಯಾಂಕ(24) ಎಂದು ಗುರುತಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದಿನಿಂದ ಪೊಳಲಿ ದೇಗುಲದ ಕಾಲಾವಧಿ ಜಾತ್ರೆ ಆರಂಭ

Friday, March 16th, 2018
polali

ಮಂಗಳೂರು: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಜೀರ್ಣೋದ್ಧಾರ ಪ್ರಕ್ರಿಯೆಗಳು ನಡೆಯುವುದರಿಂದ ದೈವಜ್ಞರ ಸಲಹೆಯಂತೆ ಶಿಷ್ಟಾಚಾರಕ್ಕೆ ಅಪಚಾರವಾಗದಂತೆ ಕಾಲಾವಧಿ ಜಾತ್ರೆ ನಡೆಯಲಿದೆ. ಬುಧವಾರ ರಾತ್ರಿ ಉಳಿಪಾಡಿಗುತ್ತಿನಿಂದ ದೈವದ ಭಂಡಾರ ಮತ್ತು ಅಡ್ಡೂರು ನಂದ್ಯದಿಂದ ಭಗವತೀ ದೈವದ ಭಂಡಾರ ಬಂದು ಧ್ವಜಾರೋಹಣವಾಯಿತು. ಗುರುವಾರ ಬೆಳಗ್ಗೆ ಕಂಚುಬಲಿ ಉತ್ಸವ ನಡೆದು ಅನಂತರ ಕುದಿ ಕರೆಯುವ ವಿಶಿಷ್ಟ ಪದ್ಧತಿಯ ಪ್ರಕಾರ ಜಾತ್ರೋತ್ಸವದ 30 ದಿನಗಳೆಂದು ನಿಗದಿತವಾಯಿತು. ಇದರಂತೆ ಎ.7ರಂದು ಒಂದನೇ ಚೆಂಡು, 8ರಂದು ಎರಡನೇ ಚೆಂಡು, 9ರಂದು ಮೂರನೇ […]

ಐದು ಮೇಳಗಳ ಸಂಚಾಲಕ ಬೈಲೂರು ಕಿಶನ್ ಹೆಗ್ಡೆ ಅವರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ

Saturday, January 25th, 2014
Bailur Kishan Hegde

ಕಾರ್ಕಳ: ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನ ಜಾತ್ರೆ ಸಂದರ್ಭ ಐದು ಮೇಳಗಳ ಸಂಚಾಲಕ ಬೈಲೂರು ಕಿಶನ್ ಹೆಗ್ಡೆ ಅವರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಕಿಶನ್ ಹೆಗ್ಡೆ, ಯಕ್ಷಗಾನ  ಎಂದರೆ ಕೇವಲ ಕಲೆ ಅಲ್ಲ, ಅದು  ಸಂಸ್ಕೃತಿ, ಧರ್ಮ.ದೇವರ ಕೆಲಸ ಮಾಡಿದಂತೆಯೇ ಶ್ರದ್ಧೆಯಿಂದ ಮಾಡಬೇಕು. ಪರಂಪರೆ ಹಿರಿಯರಿಂದ  ಯುವಜನಾಂಗದತ್ತ ಸಾಗುವಲ್ಲಿ ಹಿಂದೆ ಬಿದ್ದಿದ ಎಂಬ ಕೂಗು ಇರುವ ನಡುವೆಯೂ ಕುಂದೇಶ್ವರದಂಥ ಊರಿನಲ್ಲಿ ಯುವ ಸಮೂಹ ಬಯಲಾಟ ಸತತವಾಗಿ ಪ್ರದರ್ಶಿಸುತ್ತಿರುವುದು ಯಕ್ಷಗಾನಕ್ಕೆ ಒಳ್ಳೆ ಭವಿಷ್ಯ […]

ಗುರುಪುರ ಶ್ರೀ ವಜ್ರದೇಹಿ ಮಠದಲ್ಲಿ ವಜ್ರದೇಹಿ ಜಾತ್ರೆಗೆ ಹರಿದು ಬರುತ್ತಿರುವ ಭಕ್ತ ಸಾಗರ

Sunday, January 5th, 2014
Vajaradehi Jatre

ಮಂಗಳೂರು : ಗುರುಪುರ ಶ್ರೀ ವಜ್ರದೇಹಿ ಮಠದಲ್ಲಿ ಜ.3ರಿಂದ ಆರಂಭಗೊಂಡಿರುವ ವಜ್ರದೇಹಿ ಜಾತ್ರೆಯ ಎರಡನೇ ದಿನವಾದ ಶನಿವಾರದಂದು ವಿವಿಧ ವೈದಿಕ ಕಾರ್ಯಗಳು, ಧಾರ್ಮಿಕ ಸಭೆ, ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದವರಿಗೆ ಸನ್ಮಾನ ಹಾಗೂ ಗಂಗಾವತಿ ಪ್ರಾಣೇಶ್ ತಂಡದವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭೆಯ ಉದ್ಘಾಟನೆಯನ್ನು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನೆರವೇರಿಸಿದರು. ಜಂಗಮ ಮಠದ ಶ್ರೀ ಮ|ನಿ|ಪ್ರ| ರುದ್ರಮುನಿ ಮಹಾಸ್ವಾಮಿ ಅನುಗ್ರಹ ಸಂದೇಶ ನೀಡಿದರು. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಬಂಟರ […]