Blog Archive

ಪಾಲಘರ್ ಸಂತರ ಹತ್ಯೆ : ಅಪರಾಧಿಗಳ ಉಗ್ರಶಿಕ್ಷೆಗೆ ಆಗ್ರಹಿಸಿ ರಾಷ್ಟ್ರಪತಿಗೆ ಜಿಲ್ಲಾಧಿಕಾರಿಯವರ ಮೂಲಕ ಮನವಿ

Tuesday, April 28th, 2020
palghar

ಮಂಗಳೂರು  :  ಮಹಾರಾಷ್ಟ್ರದ ಪಾಲಘಾರ್ ಗ್ರಾಮದಲ್ಲಿ ಕಳೆದ ಗುರುವಾರ ಏಪ್ರಿಲ್ 16, 2020 ರಂದು ಇಬ್ಬರು ಸಾಧುಗಳು ಹಾಗು ಅವರ ಸಹಾಯಕ ಸೇರಿದಂತೆ 3 ಜನರ ನಿರ್ದಯವಾದ ಬರ್ಬರ ಹತ್ಯೆ ನಡೆದಿರುವುದು ಸಂಪೂರ್ಣ ಹಿಂದುಸಮಾಜಕ್ಕೆ ತೀವ್ರ ಆಘಾತವನ್ನು ಉಂಟುಮಾಡಿದೆ. ತಮ್ಮ ಗುರುಗಳ ಅಂತ್ಯಕ್ರಿಯೆಗೆಂದು ಮುಂಬೈನಿಂದ ಗುಜರಾತಿಗೆ ತೆರಳುತ್ತಿದ್ದ ಈ ಪೂಜ್ಯ ಸಂತರನ್ನು ಮಕ್ಕಳನ್ನು ಅಪಹರಿಸುವ ಕಳ್ಳರು ಎಂದು ಸುಳ್ಳು ವದಂತಿ ಹಬ್ಬಿಸಿ ನೂರಾರು ಗ್ರಾಮಸ್ಥರು ಲಾಠಿ ಇತ್ಯಾದಿ ಮಾರಕಾಸ್ತ್ರಗಳಿಂದ ಸಾಮೂಹಿಕ ಆಕ್ರಮಣ ನಡೆಸಿರುವುದರ ಹಿಂದೆ ಒಂದು ಯೋಜಿತ ಸಂಚು […]

ಕೊರೊನಾದಿಂದ ಮೃತ ವ್ಯಕ್ತಿಯನ್ನು ದಫನ ಮಾಡುವುದರಿಂದ ಸೋಂಕು ಹರಡಲ್ಲ : ಜಿಲ್ಲಾಧಿಕಾರಿ

Friday, April 24th, 2020
DC Sindhu

ಮಂಗಳೂರು: ಸೋಂಕಿತ ವ್ಯಕ್ತಿಯ ಮೃತದೇಹವನ್ನು ಹೂಳುವುದು ಅಥವಾ ದಹನ ಮಾಡುವ ಮೂಲಕ ಅಂತ್ಯಕ್ರಿಯೆ ಜರುಗಿಸಬಹುದು. ಹೀಗೆ ದಹಿಸಿದ ಅಥವಾ ದಫನ ಮಾಡಿದ ದೇಹದ ಬೂದಿಯಿಂದ ಮತ್ತೊಬ್ಬರಿಗೆ ಯಾವುದೇ ವೈರಾಣು ಹರಡುವುದಿಲ್ಲ. ಈ ಬೂದಿಯನ್ನು ಸಂಗ್ರಹಿಸಿ ಇತರ ಧಾರ್ಮಿಕ ಆಚರಣೆಗಳನ್ನೂ ನಡೆಸಬಹುದು ಎಂದು ಜಿಲ್ಲಾಧಿಕಾರಿ  ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಿವಾಸಿ 78 ವರ್ಷದ ಮಹಿಳೆ ಕೋವಿಡ್-19ನಿಂದ ಮೃತಪಟ್ಟ ಬಳಿಕ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಕೆಲವು ಮಾಹಿತಿಗನ್ನು ಸಾರ್ವಜನಿಕರಿಗೆ ನೀಡಿದ್ದಾರೆ. ಕೊರೊನಾ ಸೋಂಕಿತರ ಮೃತದೇಹದಿಂದ […]

ಕೇರಳದ ಸೋಂಕಿತರನ್ನು ಗಡಿಯೊಳಗೆ ಬರದಂತೆ ತಡೆಯಿರಿ : ಸಿದ್ದರಾಮಯ್ಯ

Tuesday, March 31st, 2020
Sidhramahia

ಬೆಂಗಳೂರು: ಕೇರಳ ರಾಜ್ಯದವರು ಕೋವಿಡ್-19 ಸೋಂಕು ಇರುವವರನ್ನು ಕರ್ನಾಟಕಕ್ಕೆ ಕಳುಹಿಸುತ್ತಿದ್ದಾರೆ. ದಕ್ಷಿಣ ಕನ್ನಡ, ಕೊಡಗು, ಮೈಸೂರು ಗಡಿ ಮೂಲಕ ರಾಜ್ಯಕ್ಕೆ ಕಳುಹಿಸುತ್ತಿದ್ದಾರೆ. ಕೇರಳದವರನ್ನು ರಾಜ್ಯದ ಗಡಿಯೊಳಗೆ ಬರದಂತೆ ತಡೆಯಿರಿ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಮೈಸೂರು ಜಿಲ್ಲಾಧಿಕಾರಿಯವರ ಜೊತೆ ದೂರವಾಣಿ ಮೂಲಕ ಮಾತನಾಡಿದ ಸಿದ್ದರಾಮಯ್ಯ ಈ ಸೂಚನೆ ನೀಡಿದರು. ರಾಜ್ಯದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಸಭೆ ಸೇರಿ ಚರ್ಚೆ ನಡೆಸಿದರು. ಈ ವೇಳೆ […]

ಉಡುಪಿ : ಮಾರ್ಚ್ 29ರ ಬೆಳಿಗ್ಗೆ 7 ರಿಂದ11 ಗಂಟೆಯವರೆಗೆ ಮಾತ್ರ ದಿನಸಿ ಅಂಗಡಿ ಕಾರ್ಯಾಚಚರಣೆ

Saturday, March 28th, 2020
Jagadeesha

ಉಡುಪಿ : ಮಾರ್ಚ್ 29ರ ರವಿವಾರದಿಂದ ಜಿಲ್ಲೆಯಾದ್ಯಂತ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಮಾತ್ರವೇ ದಿನಬಳಕೆಯ ದಿನಸಿ ಸಾಮಗ್ರಿಗಳ ಅಂಗಡಿಗಳು ಕಾರ್ಯಾಚರಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಜಿಲ್ಲಾಡಳಿತ ನಿಗದಿಪಡಿಸಿರುವ ಈ ಅವಧಿಯಲ್ಲಿ ಮಾತ್ರವೇ ಗ್ರಾಹಕರು ತಮಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳು, ತರಕಾರಿ ಹಣ್ಣು, ಹಾಲು, ಮಾಂಸ, ಮೀನು ಮುಂತಾದ ಅವಶ್ಯಕ ವಸ್ತುಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಮತ್ತು ಖರೀದಿ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.  

ಜನರು ಕೊರೊನಾ ವೈರಸ್ ಬಗ್ಗೆ ಆಂತಕಗೊಳ್ಳುವ ಅಗತ್ಯವಿಲ್ಲ : ಜಿಲ್ಲಾಧಿಕಾರಿ

Thursday, March 12th, 2020
dc

ಮಂಗಳೂರು:  ಜನರು ಆಂತಕಗೊಳ್ಳುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸೂಕ್ತ ಸಿದ್ದತೆ ಮಾಡಿದೆ. ಜಿಲ್ಲೆಯಲ್ಲಿ ಯಾವುದೇ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್ ಹೇಳಿದರು. ಬುಧವಾರದಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ವಿಮಾನ ಮತ್ತು ಎನ್‌ಎಂಪಿಟಿಯಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಈವರೆಗೆ ಜಿಲ್ಲೆಯಲ್ಲಿ 10 ಗಂಟಲು ಜನರ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿದ್ದು ಅದರಲ್ಲಿ ಏಳು ವರದಿ ನೆಗೆಟಿವ್ ಬಂದಿದೆ.ಇನ್ನೂ ಮೂರು ವರದಿ ಪರೀಕ್ಷಾ ಹಂತದಲ್ಲಿ ಇದೆ ಎಂದು […]

ಪತ್ರಕರ್ತರ ರಾಜ್ಯ ಸಮ್ಮೇಳನ : ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ

Monday, February 24th, 2020
kota

ಮಂಗಳೂರು : ಕರಾವಳಿ ಜಿಲ್ಲೆಯ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮಾ.7 ಮತ್ತು 8ರಂದು ನಡೆಯುವ ರಾಜ್ಯ ಪತ್ರಕರ್ತರ ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಈ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವ ಶ್ರೀನಿವಾಸ ಪೂಜಾರಿ, ಆಹಾರ, ವಸತಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನೆೆಲೆಯಲ್ಲಿ ಫೆ.28ರಂದು ಬೆಳಗ್ಗೆ 10 ಗಂಟೆಗೆ […]

ಭೂ ದಾಖಲೆಗಳಲ್ಲಿ ವ್ಯತ್ಯಾಸ ಮಾಡಿ ಜನರಿಗೆ ವಂಚಿಸಿರುವ ಮೋಸದ ಜಾಲ ಪತ್ತೆ ಹಚ್ಚಲು ಉನ್ನತ ಮಟ್ಟದ ತನಿಖೆಗೆ ಯೋಗೀಶ್ ಶೆಟ್ಟಿ ಜಪ್ಪು ಒತ್ತಾಯ

Tuesday, February 18th, 2020
thulu-nada-vedike

ಮಂಗಳೂರು : ಆರ್.ಟಿ.ಸಿ ಭೂ ವರ್ತನೆ ಪತ್ರ ಏಕ ವಿನ್ಯಾಸ, ನಗರ ಆಸ್ತಿ ಮಾಲಿಕತ್ವ ದಾಖಲೆ ಕಂದಾಯ ಇಲಾಖೆಯಲ್ಲಿನ ಪತ್ರಗಳಲ್ಲಿ ವ್ಯತ್ಯಾಸ ಮಾಡಿರುವ ಬೃಹತ್ ಮೋಸದ ಜಾಲ/ ಭೂ ಮಾಫಿಯಾ ಬಗ್ಗೆ ಸಮಗ್ರ ತನಿಖೆಗೆ ತುಳುನಾಡ ರಕ್ಷಣಾ ವೇದಿಕೆ ಯೋಗೀಶ್ ಶೆಟ್ಟಿ ಜಪ್ಪು ಕೇಂದ್ರ ಉಪನೋಂದಾವಣಾಧಿಕಾರಿ, ಮೂಡ ಆಯುಕ್ತರು, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರಿಗೆ ಮನವಿ ನೀಡಿ ಒತ್ತಾಯಿಸಿರುತ್ತಾರೆ. ಈ ಬಗ್ಗೆ ಕೂಡಲೇ ಸಂಬಂಧ ಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಗರಾಭಿವೃದ್ಧಿ ಕಚೇರಿ, ತಾಲೂಕು […]

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ : ಲಾಭ ಪಡೆಯಲು ಕೊಡಗಿನ ರೈತರಲ್ಲಿ ಜಿಲ್ಲಾಧಿಕಾರಿ ಮನವಿ

Saturday, February 8th, 2020
bank

ಮಡಿಕೇರಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು 2018ರಿಂದ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ರಾಷ್ಟ್ರೀಕತ ಬ್ಯಾಂಕ್, ಗ್ರಾಮೀಣ ಬ್ಯಾಂಕುಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಂದ 2019ರವರೆಗೆ 91,311 ರೈತರು ಬೆಳೆಸಾಲ ಪಡೆದವರಾಗಿದ್ದು, ಇಲ್ಲಿಯವರೆಗೆ 44.174 ರೈತರು ಮಾತ್ರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಉಳಿದ ರೈತರು ಕೂಡ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯಲ್ಲಿ ಹೆಸರು ನೋಂದಾಯಿಸಲ್ಪಟ್ಟು ಬ್ಯಾಂಕಿಂಗ್ […]

ಬಾಳುಗೋಡುವಿನಲ್ಲಿ ನಿವೇಶನ ನೀಡಲು ಒತ್ತಾಯ : ಜಿಲ್ಲಾಧಿಕಾರಿಗಳಿಗೆ ಮನವಿ

Saturday, February 1st, 2020
manavi

ಮಡಿಕೇರಿ : ವಿರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದ ಸರಕಾರಿ ಜಾಗದಲ್ಲಿ ದಲಿತರು, ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಆದಿವಾಸಿಗಳು, ಹಿಂದುಳಿದ ವರ್ಗದವರು ನಿವೇಶನದ ಹಕ್ಕುಪತ್ರ ಮತ್ತು ಮೂಲಭೂತ ಸೌಲಭ್ಯಕ್ಕಾಗಿ ಒತ್ತಾಯಿಸಿ ಕಳೆದ 28 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇವರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಅರುಂಧತಿಯರ್ ಮಹಾಸಭಾದ ಕೊಡಗು ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು. ಈ ಸಂದರ್ಭ ಮಾತನಾಡಿದ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಕೆ.ಪಳನಿ ಪ್ರಕಾಶ್, ವಿರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದ […]

ಉತ್ತರಾಖಂಡ್ ಯುವ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿಗಳ ಸಂವಾದ ಕಾರ್ಯಕ್ರಮ

Wednesday, January 29th, 2020
uttarakhanda

ಮಂಗಳೂರು : ದಿನಾಂಕ 27-10-2020 ರಂದು ಉತ್ತರಾಖಂಡದಿಂದ ಸುಮಾರು 4 ದಿನಗಳ ಮಂಗಳೂರು ಪ್ರವಾಸಕ್ಕೆ ಆಗಮಿದ ಸುಮಾರು 50 ಜನ ಯುವಕರ ತಂಡ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ತಂಡ ದಿನಾಂಕ 24-10-2020ಕ್ಕೆ ಮಂಗಳೂರಿಗೆ ಆಗಮಿಸಿ ಮಂಗಳೂರಿನ ಹಲವಾರು ಪ್ರಶಸ್ತಿ ಪುರಸ್ಕೃತ ಸಂಘ ಸಂಸ್ಥೆಯನ್ನು ಭೇಟಿಯಾಗಿ ಆ ಸಂಸ್ಥೆಯ ಕಾರ್ಯವೈಕರಿಯ ಬಗ್ಗೆ ಆ ಸಂಸ್ಥೆಯ ಪದಾಧಿಕಾರಿಗಳಿಂದ ಮಾಹಿತಿ ಪಡೆದುದರ ಜೊತೆಗೆ ಸ್ಥಳಿಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿನೀಡಿದರು ಹಾಗೂ ಈ ಬಗ್ಗೆ ಜಿಲ್ಲಾಧಿಕಾರಿಗಳ ಮಾಹಿತಿ ಪಡೆದರು, ಈ ಸಂದರ್ಭದಲ್ಲಿ […]