ಇನ್‌ಸ್ಪೆಕ್ಟರ್ ಗಂಗಿರೆಡ್ಡಿ ಅಪರಾಧಿ, ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ ದಂಡ

Thursday, August 27th, 2020
Gangi Reddy

ಮಂಗಳೂರು : ಲೋಕಾಯುಕ್ತ ಡಿ. ವೈ.ಎಸ್.ಪಿ. ಸದಾನಂದ ವರ್ಣೇಕರ್ ಮತ್ತು ಅವರ ತಂಡ  2009 ರಲ್ಲಿ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಕರಾವಳಿ ಕಾವಲು ಪಡೆಯ ಇನ್‌ಸ್ಪೆಕ್ಟರ್ ಗಂಗಿರೆಡ್ಡಿ ಅವರನ್ನು ಮಂಗಳೂರು ಲೋಕಾಯುಕ್ತ ನ್ಯಾಯಾಲಯ ಅಪರಾಧಿ ಎಂದು ಪರಿಗಣಿಸಿ ನಾಲ್ಕು ವರ್ಷ ಸಾದಾ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ ದಂಡ ವಿಧಿಸಿ ಆ.27ರಂದು ಆದೇಶ ನೀಡಿದೆ. ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್. […]

ಹೆಚ್ಚಿನ ಬೆಲೆಗೆ ಮಿನರಲ್‌‌ ವಾಟರ್‌‌ ಮಾರಿದ್ರೆ ಜೈಲೂಟ ಗ್ಯಾರಂಟಿ!

Tuesday, December 12th, 2017
minaral-water

ನವದೆಹಲಿ: ಮಿನರಲ್‌‌ ವಾಟರ್‌‌ ಬಾಟಲ್‌ಗಳ ಎಂಆರ್‌‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರೇ ಎಚ್ಚರ. ಯಾಕಂದರೆ, ಎಂಆರ್‌‌ಪಿಗಿಂತ ಮಿನರಲ್‌‌ ವಾಟರ್‌‌ ಬಾಟಲ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಿದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತಿದೆ. ಹೌದು, ಮಿನರಲ್‌‌ ವಾಟರ್‌‌ ಬಾಟಲ್‌ಗಳನ್ನು ಎಂಆರ್‌‌ಪಿಗಿಂತ ಹೆಚ್ಚಿನ ಬೆಲೆಗೆ ಮಾರುವ ಹೋಟೆಲ್‌‌, ರೆಸ್ಟೋರೆಂಟ್‌ ಹಾಗೂ ಮಲ್ಟಿಪ್ಲೆಕ್ಸ್‌‌ನವರಿಗೆ ಜೈಲು ಶಿಕ್ಷೆ ವಿಧಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ. ಮಿನರಲ್‌‌ ವಾಟರ್‌‌ ಬಾಟಲ್‌ಗಳ ಸಂಬಂಧ ಎಫ್‌‌ಹೆಚ್‌‌ಆರ್‌ಐ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಇಂದು ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಹೋಟೆಲ್‌‌, […]

ಅರ್ಹತೆ ಇಲ್ಲದವರು ಬೋಗಸ್ ಪಡಿತರ ಚೀಟಿ ಪಡೆದುಕೊಂಡರೆ ಅಂಥವರಿಗೆ ಜೈಲು ಶಿಕ್ಷೆ: ಖಾದರ್

Tuesday, October 18th, 2016
Khadar

ಮಂಗಳೂರು: ಅರ್ಹತೆ ಇಲ್ಲದವರು ಬೋಗಸ್ ಪಡಿತರ ಚೀಟಿ ಪಡೆದುಕೊಂಡರೆ ಅಂಥವರಿಗೆ ಜೈಲು ಶಿಕ್ಷೆ ನೀಡಲಾಗುವ ಬಗ್ಗೆ ಚಿಂತನೆ ನಡೆದಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದರು. ಮಂಗಳೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಂಗಳೂರು ಗ್ರಾಮಾಂತರ ಕ್ಷೇತ್ರದ ಜನಪ್ರತಿನಿಧಿಗಳ, ನ್ಯಾಯಬೆಲೆ ಅಂಗಡಿ ಮಾಲೀಕರ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಅನರ್ಹ ವ್ಯಕ್ತಿಗಳು ಕೂಡ ಪಡಿತರ ಚೀಟಿ ಪಡೆದು ಸರ್ಕಾರವನ್ನು ವಂಚಿಸುತ್ತಿದ್ದಾರೆ. ಇನ್ನು ಇದನ್ನು ತಡೆಗಟ್ಟಲು […]

ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗು

Friday, July 25th, 2014
child labor

ಮಂಗಳೂರು : (ಲೇಖನ) ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗು. ಸಮಾಜದ ಸೌಸ್ಥ್ಯವನ್ನು ಕದಡುವ ಅನಿಷ್ಠ ಪದ್ಧತಿ. ಮಕ್ಕಳ ಭವಿಷ್ಯವನ್ನು ಎಳೆ ವಯಸ್ಸನಲ್ಲಿಯೇ ಚಿವುಟುವ ಕ್ರೂರ ಪದ್ಧತಿ. ಒಂದು ದೇಶದ ಸಾಮಾಜಿಕ ಹಾಗೂ ಆರ್ಥಿಕತೆ ಮೇಲೆ ಪ್ರತೀಕೂಲ ಪರಣಾಮ ಬೀರಬಲ್ಲ ಶಕ್ತಿಯನ್ನು ತನ್ನ ಆಂತರ್ಯದಲ್ಲಿ ಹುದುಗಿಸಿಕೊಂಡಿರುವ ಪದ್ಧತಿ. ಈ ಸಮಸ್ಯೆ ಕುರಿತು ಅಧ್ಯಯನ ಮಾಡಿದರೆ ಅದರ ಆಳ ಹಾಗೂ ವಿಸ್ತಾರ ಭಯಾನಕವೆನಿಸುತ್ತದೆ. ಈ ಸಮಸ್ಯೆ ಕೇವಲ ಒಂದು ಪ್ರಾಂತ ಅಥವಾ ದೇಶಕ್ಕೆ ಸೀಮಿತವಾಗಿಲ್ಲ. ಇದು ವಿಶ್ವ […]