ಕಾರು – ಬಸ್‌ ಢಿಕ್ಕಿ: ಚಾರ್ಟರ್ಡ್‌ ಅಕೌಂಟೆಂಟ್‌ ಸಾವು

Saturday, March 31st, 2018
prakash-hegde

ಮೂಡಬಿದಿರೆ: ಸಮೀಪದ ಹಂಡೇಲುಸುತ್ತಿನಲ್ಲಿ ಶುಕ್ರವಾರ ಬೆಳಗ್ಗೆ ಕಾರು ಮತ್ತು ಖಾಸಗಿ ಟೂರಿಸ್ಟ್‌ ಬಸ್‌ ಮುಖಾಮುಖೀ ಢಿಕ್ಕಿಯಾಗಿ ಕಾರ್ಕಳ ಮೂಲದ ಚಾರ್ಟರ್ಡ್‌ ಅಕೌಂಟೆಂಟ್‌ ಪ್ರಕಾಶ್‌ ಹೆಗ್ಡೆ (62) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕಾಶ್‌ ಹೆಗ್ಡೆ ಅವರು ತಮ್ಮ ಸಂಬಂಧಿಕರ ಮದುವೆಯ ನಿಮಿತ್ತ ಗುರುವಾರ ಪತ್ನಿ ಮತ್ತು ಮಕ್ಕಳನ್ನು ಮಂಗಳೂರಿಗೆ ಕರೆದೊಯ್ದಿದ್ದರು. ಶುಕ್ರವಾರ ಕಾರ್ಕಳಕ್ಕೆ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೋಲಾರದಿಂದ ಬಂದಿದ್ದ ಪ್ರವಾಸಿಗರಿದ್ದ ಬಸ್‌ ಧರ್ಮಸ್ಥಳದಿಂದ ಕಟೀಲು ಕಡೆಗೆ ಸಾಗುತ್ತಿತ್ತು. ದುರ್ಘ‌ಟನೆ ಸಂಭವಿಸಿದ ಸ್ಥಳದಲ್ಲಿ ರಸ್ತೆ ತಿರುವಿನಿಂದ ಕೂಡಿರುವುದಲ್ಲದೆ ರಸ್ತೆ ಇಲ್ಲಿ […]