ಆಳ್ವಾಸ್ ರೀಚ್ 2020 ಹೆಲ್ತ್ ವಾಕ್-ಅ-ಥಾನ್

Wednesday, March 4th, 2020
alvas

ಮೂಡುಬಿದಿರೆ : ವಿದ್ಯಾರ್ಥಿಗಳು ಪ್ರಕೃತಿಯೊಂದಿಗೆ ಬೆರೆತು, ಅದರಲ್ಲಿನ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜತೆಗೆ ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಮುಂದಾಗಬೇಕು ಎಂದು ಬಜ್ಪೆ ಗ್ರಾಮ ಪಂಚಾಯತ್ ಪಿ.ಡಿ.ಓ ಸಾಯೀಶ ಚೌಟ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಸಮಾಜ ಕಾರ‍್ಯ ಪದವಿ ವಿಭಾಗ ಹೊಸಂಗಡಿ ಗ್ರಾಮ ಪಂಚಾಯತ್‌ನಲ್ಲಿ ಸಹಯೋಗದೊಂದೊಗೆ ಆಯೋಜಿಸಿದ್ದ ಆಳ್ವಾಸ್ ರೀಚ್ 2020 ”ಹೆಲ್ತ್ ವಾಕ್- ಅ- ಥಾನ್” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. […]

ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಬೇಕು : ಡಾ ಜಯಕುಮಾರ್ ಶೆಟ್ಟಿ

Wednesday, December 4th, 2019
Alvas

ಮೂಡುಬಿದಿರೆ : ನಾವಿಂದು ಅನಗತ್ಯ ಕಾಲ್ಪನಿಕ ಬಂಧನದಲ್ಲಿ ನಮ್ಮನ್ನು ನಾವು ಬಂಧಿಯನ್ನಾಗಿಸಿಕೊಂಡಿದ್ದೇವೆ. ಅಂತಹ ಸೆರೆಯಿಂದ ನಮ್ಮನ್ನು ನಾವು ಮುಕ್ತವಾಗಿಸಿಕೊಳ್ಳಬೇಕು. ಆಗ ನಾವು ಜೀವನದಲ್ಲಿ ಎತ್ತರದ ಸ್ಥಾನವನ್ನು ತಲುಪಬಹುದು ಎಂದು ಉಜಿರೆಯ ಅರ್ಕುಳ ಚ್ಯಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಡಾ ಜಯಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಕಾಮರ್ಸ್ ವೃತ್ತಿಪರ ಕೋರ್ಸು ಹಾಗೂ ಅರ್ಕುಳ ಚ್ಯಾರಿಟೇಬಲ್ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ನಡೆದ ಉದ್ಯಮಶೀಲತಾ ತರಬೇತಿ ಕಾರ‍್ಯಕ್ರಮ ಉದ್ಘಾಟಸಿ ಮಾತನಾಡಿದರು. ಪದವಿ ವಿದ್ಯಾಭ್ಯಾಸ ಪಡೆಯುವಾಗಲೇ ವಿದ್ಯಾರ್ಥಿಗಳು ಇಂತಹ […]

ಆಳ್ವಾಸ್ ’ವಿಕಿ ಕ್ಯಾಂಪ್’ ಉದ್ಘಾಟನೆ

Saturday, June 8th, 2019
wiki

ಮೂಡುಬಿದಿರೆ: ಪ್ರತಿಯೊಬ್ಬರೂ ಸಂಶೋಧನಾ ಮನೋಭಾವವನ್ನು ಬೆಳಸಿಕೊಂಡು, ಆ ಮೂಲಕ ಬರಹಗಳನ್ನು ಜಾಲಕ್ಕೆ ರವಾನಿಸುವುದರಿಂದ ವಿಕಿಪೀಡಿಯಾದಲ್ಲಿ ವಿಷಯಗಳ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಆದ್ದರಿಂದ ಶಿಕ್ಷಣದೊಂದಿಗೆ ಸಂಶೋಧನಾ ಪ್ರಕ್ರಿಯೆಗಳ ಅರಿವು ವಿದ್ಯಾರ್ಥಿಗಳಲ್ಲಿರಬೇಕು ಎಂದು ಆಳ್ವಾಸ್ ಕಾಲೇಜಿನ ಪ್ರಾಚಾರ‍್ಯ ಡಾ ಕುರಿಯನ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ವಿಕಿಪೀಡಿಯಾ ಅಸೋಸಿಯೇಷನ್ ವತಿಯಿಂದ ನಡೆಯಲಿರುವ 7 ದಿನಗಳ ’ವಿಕಿ ಕ್ಯಾಂಪ್ ಹಾಗೂ ಇಂಟರ್ನಶಿಫ್’ ಕಾರ‍್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ‍್ಯಕ್ರಮದಲ್ಲಿ 8 ಜನ ವಿಕಿ ಸಾಧಕರಿಗೆ ಬಹುಮಾನ ರೂಪದಲ್ಲಿ ಪುಸ್ತಕವನ್ನು ನೀಡಲಾಯಿತು. ಉದ್ಘಾಟನಾ ಕಾರ‍್ಯಕ್ರಮದ ಬಳಿಕ ಪದವಿ […]

ಆಯುಧಗಳಿಗಿಂತ ಮನುಷ್ಯನ ಹಿಂಸಾತ್ಮಕ ಮನಸ್ಸು ಅಪಾಯಕಾರಿ: ಡಾ. ಕುರಿಯನ್

Wednesday, February 20th, 2019
Alvas Condolence

ಮೂಡುಬಿದಿರೆ: ನಮ್ಮಲ್ಲಿರುವ ಬಾಂಬ್, ಗನ್, ಚಾಕು ಚೂರಿಗಳು ಅಪಾಯಕಾರಿಗಳಲ್ಲ. ಆದರೆ ನಮ್ಮ ಮನಸ್ಸಿನಲ್ಲಿರುವ ಹಿಂಸಾ ಮನೋಭಾವ ಬಹಳಷ್ಟು ಅಪಾಯಕಾರಿ. ಮನುಷ್ಯ ಮನುಷ್ಯನ್ನು ಕೊಲ್ಲಬೇಕು ಎನ್ನುವ ಆಲೋಚನೆಗಳನ್ನು ತರುವ ಸಿದ್ಧಾಂತ ಹಾಗೂ ವ್ಯವಸ್ಥೆಯನ್ನು ನಮ್ಮ ಮನಸ್ಸಿನಿಂದ ತೆಗೆದುಹಾಗಬೇಕಾದ ಅಗತ್ಯವಿದೆ. ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು. ಪುಲ್ವಾಮಾದಲ್ಲಿ ನಡೆದ ಉಗ್ರನ ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ಸ್ಮರಣಾರ್ಥ ಆಳ್ವಾಸ್ ಕಾಲೇಜಿನಲ್ಲಿ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಮನುಷ್ಯನ ಮನಸ್ಸು ಹಿಂಸಾತ್ಮಕ ರೂಪತಾಳಿದಾಗ ಅದು ಸಮಾಜದ […]

ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Saturday, July 28th, 2018
alwas-clg

ಮೂಡಬಿದಿರೆ: ತುಳು ಭಾಷೆ ಮತ್ತು ಸಾಹಿತ್ಯ ನಿರಂತರವಾಗಿ ಅಭಿವೃದ್ದಿ ಹೊಂದುತ್ತಾ ಬರುತ್ತಿದ್ದು, ಅದರ ಇನ್ನೊಂದು ಮಗ್ಗುಲಲ್ಲಿ ತುಳು ಸಂಸ್ಕೃತಿಯ ಬೆಳವಣಿಗೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗದೇ ಇರುವುದು ವಿಷಾದಕರ ಎಂದು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಇತಿಹಾಸ ತಜ್ಞ ಡಾ ಗಣಪತಿ ಭಟ್ ಪುಂಡಿಕಾ ತಿಳಿಸಿದರು. ಅವರು ಶನಿವಾರ ಕುವೆಂಪು ಸಭಾಭವನದಲ್ಲಿ ಆಳ್ವಾಸ್ ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಇದರ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ವಿಶೇಷ ಉಪನ್ಯಾಸ ”ತುಳುವಿನ ನೆಲೆ, ಬೆಲೆ” ಕಾರ‍್ಯಕ್ರಮದಲ್ಲಿ ಮಾತನಾಡುತ್ತಿದ್ದರು. ತುಳು […]

ಆಳ್ವಾಸ್ ರೋಸ್ಟ್ರಮ್ ‘ಡೆವಲಪಿಂಗ್ ಮೆಂಟಲ್ ಫ್ಯಾಕಲ್ಟೀಸ್’ ಉಪನ್ಯಾಸ

Thursday, April 5th, 2018
alwas-rosdrum

ಮೂಡುಬಿದಿರೆ: ‘ಜಾಗೃತ ಪ್ರಜ್ಞೆಯನ್ನು ಹೊಂದಿರುವುದು ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದ್ದಂತೆ. ಬುದ್ಧಿ ಮತ್ತು ಮನಸ್ಸುಗಳೆರಡೂ ಸದಾ ಕಾಲ ಜಾಗೃತವಾಗಿದ್ದಲ್ಲಿ, ಅದು ಪ್ರತಿಯೊಬ್ಬರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ’ ಎಂದು ಸೆಂಟರ್ ಫಾರ್ ಕಾನ್ಶಿಯಸ್ ಅವೇರ್‌ನೆಸ್ ಸಂಸ್ಥೆಯ ಸಂಸ್ಥಾಪಕ ಶ್ರೀನಿವಾಸ ಅರ್ಕ ತಿಳಿಸಿದರು. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವೇದಿಕೆ ರೋಸ್ಟ್ರಮ್‌ನ ಆಶ್ರಯದಲ್ಲಿ ಎಐಇಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. “ಡೆವಲಪಿಂಗ್ ಮೆಂಟಲ್ ಫ್ಯಾಕಲ್ಟೀಸ್” ಎಂಬ ವಿಷಯದ ಕುರಿತು ಮಾತನಾಡಿದ ಅವರು, “ಬುದ್ಧಿ ಹಲವು ಆಯಾಮಗಳನ್ನು ಹೊಂದಿರುತ್ತದೆ. ಹಾಗಾಗಿ ಬುದ್ಧಿಯನ್ನು […]

ಆಳ್ವಾಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

Thursday, March 15th, 2018
alwas-college

ಮೂಡುಬಿದಿರೆ: ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ. ಸಾಧನೆಗೆ ತಕ್ಕುದಾದ ಮನಸ್ಥಿತಿಯು ಮುಖ್ಯ. ವಿದ್ಯಾರ್ಥಿಗಳ ಸಾಧನೆ, ವ್ಯಕ್ತಿತ್ವ ಬೆಳವಣಿಗೆಗೆ ಅವರ ಪೋಷಕರು ಹಾಗೂ ಶಿಕ್ಷಕರು ಕೂಡ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಾರೆ ಎಂದು ಉಡುಪಿ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಆರ್ ನಂಬಿಯಾರ್ ಹೇಳಿದರು. ಆಳ್ವಾಸ್ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಆಳ್ವಾಸ್ ವಿದ್ಯಾಸಂಸ್ಥೆ ವಿದಾರ್ಥಿಗಳಿಗೆ ಕಲಿಕೆಯ ಜೊತೆಗೆ ಸಾಂಸ್ಕøತಿಕ ಮತ್ತು ಕ್ರೀಡೆ ಇನ್ನಿತರ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು […]