ಭಾರಿ ಮಳೆ : ಕುಲಶೇಖರ ಬಳಿ ರೈಲ್ವೆ ಹಳಿಗೆ ಕುಸಿದು ಬಿದ್ದ ತಡೆಗೋಡೆ, ರೈಲುಗಳ ಸಂಚಾರ ಸ್ಥಗಿತ

Friday, July 16th, 2021
Konkan-Rail

ಮಂಗಳೂರು:  ನಗರದ ಕುಲಶೇಖರದಲ್ಲಿ ನಿರ್ಮಾಣ ಹಂತದ ರೈಲ್ವೆ ಸುರಂಗ ಮಾರ್ಗದ ಬಳಿ ತಡೆಗೋಡೆ ಕುಸಿದು ಹಳಿಗೆ ಬಿದ್ದು, ರೈಲು ಸಂಚಾರಕ್ಕೆ ಅಡಚಣೆಯಾಗಿದೆ. ಭಾರಿ ಮಳೆಯಿಂದಾಗಿ  ಶುಕ್ರವಾರ ಮುಂಜಾನೆ ಘಟನೆ ಸಂಭವಿಸಿದ್ದು, ಕಾಂಕ್ರೀಟ್‌ನಿಂದ ನಿರ್ಮಿಸಲಾದ ತಡೆಗೋಡೆ ಸಹಿತ ಭಾರಿ ಪ್ರಮಾಣದ ಮಣ್ಣು ಜರಿದು ಹಳಿಯ ಮೇಲೆ ಬಿದ್ದಿದೆ. ಮಂಗಳೂರು ಜಂಕ್ಷನ್‌-ತೋಕೂರು ನಡುವಿನ ಕುಲಶೇಖರ ಬಳಿ ಸುರಂಗ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮಣ್ಣು ತೆರವು ಕಾರ್ಯ ಆರಂಭವಾಗಿದ್ದು, ಕೊಂಕಣ ಮಾರ್ಗದ ಎಲ್ಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.  ಹಳಿಯ ಮೇಲೆ […]

ಕಾರಿಂಜೇಶ್ವರ ದೇವಸ್ಥಾನದ ಎಡ ಪಾರ್ಶ್ವದ ಕಲ್ಲಿನ ತಡೆಗೋಡೆ ಕುಸಿದು ಹಾನಿ

Wednesday, October 14th, 2020
Karinje

ಮಂಗಳೂರು : ಧಾರಾಕಾರ ಸುರಿದ ಮಳೆಗೆ ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆ ಕುಸಿದು ಬಿದ್ದಿದೆ. ಈಶ್ವರ (ಶ್ರೀ ಕಾರಿಂಜೇಶ್ವರ) ದೇವಸ್ಥಾನದ ಎಡ ಪಾರ್ಶ್ವದ ಬದಿಗೆ ಕಟ್ಟಿದ್ದ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿದ್ದು, ಬುಧವಾರ ಬೆಳಗ್ಗೆ ಸಿಬ್ಬಂದಿಗಳ ಗಮನಕ್ಕೆ ಬಂದಿದೆ.ಈ ಅಂಗಣವನ್ನು ವಾನರಗಳಿಗೆ ನೈವೇದ್ಯ ಹಾಕಲು ಬಳಸಲಾಗುತ್ತಿದ್ದು, ಅಂಗಣದ ಇಂಟರ್ ಲಾಕ್ ಕಿತ್ತುಹೋಗಿದೆ. ದೇವಸ್ಥಾನ ಬೃಹತ್ ಬಂಡೆಯ ಮೇಲೆ ಸ್ಥಾಪಿತಗೊಂಡಿದ್ದು, ನಾಲ್ಕು ಯುಗಗಳ ಪುರಾಣ ಇತಿಹಾಸ ಹೊಂದಿದೆ. ಕುಸಿದ ಭಾಗದ ಕೆಳಭಾಗದಲ್ಲಿ […]

ಸಿಂಡಿಕೇಟ್ ಸರ್ಕಲ್ ಬಳಿ ಎಂಟು ಅಂತಸ್ತಿನ ಕಟ್ಟಡ ಕುಸಿಯುವ ಭೀತಿಯಲ್ಲಿ

Monday, September 21st, 2020
Manipal Building

ಉಡುಪಿ  : ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಇರುವ ಎಂಟು ಅಂತಸ್ತಿನ ಕಟ್ಟಡದ ತಡೆಗೋಡೆ ಕುಸಿಯುತ್ತಿದ್ದು ಕಟ್ಟಡ ಕುಸಿಯುವ ಹಂತದಲ್ಲಿದೆ. ಎಸಿ, ಪೌರಾಯುಕ್ತ, ತಹಶಿಲ್ದಾರ್, ಜಿ.ಪಂ ಅಧ್ಯಕ್ಷರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ  ಕಟ್ಟಡದ ತಡೆಗೋಡೆ ಕುಸಿದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಕಟ್ಟದಲ್ಲಿರುವ ಜನರನ್ನು ಸ್ಥಳಾಂತರಿಸುವ ಕೆಲಸ ನೆಡೆಯುತ್ತಿದೆ ಸದ್ಯ ಕಟ್ಟಡದ ತಳಭಾಗದಲ್ಲಿ ಮೂರು ಅಂಗಡಿಗಳಿದ್ದು ಅವುಗಳನ್ನು ಮುಚ್ಚಲಾಗಿದೆ. ಉಡುಪಿಯಿಂದ ಮಣಿಪಾಲಕ್ಕೆ ಬರುವ ವಾಹನ ಸಂಚಾರದ ರಸ್ತೆಯನ್ನು […]

ವಸತಿ ಸಮುಚ್ಛಯದ ತಡೆಗೋಡೆ ಕುಸಿತ, 10 ಕ್ಕೂ ಅಧಿಕ ಕಾರುಗಳು ಮಣ್ಣಿನಡಿ ಜಖಂ

Friday, September 11th, 2020
Kuntikan

ಮಂಗಳೂರು, : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶುಕ್ರವಾರ ಬೆಳಿಗ್ಗೆ ಕುಂಟಿಕಾನದ ವಸತಿ ಸಮುಚ್ಛಯವೊಂದರ ತಡೆಗೋಡೆ ಕುಸಿದು ಬಿದಿದ್ದು ಮಣ್ಣಿನಡಿ ಸುಮಾರು 10 ಕ್ಕೂ ಅಧಿಕ ಕಾರುಗಳು ಹೂತು ಹೋಗಿರುವ ಶಂಕೆ ಉಂಟಾಗಿದೆ. ತಡೆಗೋಡೆಯ ಒಂದು ಭಾಗದ ಗೋಡೆ ಕುಸಿದು ಹಿಂಬದಿಯ ಹಾಸ್ಟೆಲ್‌ ಆವರಣದೊಳಗೆ ಮಣ್ಣು ರಾಶಿ ಬಿದಿದೆ. ಇದೀಗ ಮತ್ತೊಂದು ಭಾಗದ ಗೋಡೆಯು ಕೂಡಾ ಕುಸಿಯುವ ಆತಂಕ ಸೃಷ್ಟಿಯಾಗಿದ್ದು ಈ ಹಿನ್ನೆಲೆ ಇನ್ನೂ ಕೂಡಾ ಕಾರ್ಯಾಚರಣೆ ಆರಂಭವಾಗಿಲ್ಲ ಎಂದು ಹೇಳಲಾಗಿದೆ. ಅಗ್ನಿ ಶಾಮಕ ದಳ, ಸ್ಥಳೀಯ ಪೊಲೀಸರು […]

ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರಕ್ಕೆ ಜಾರುತ್ತಿರುವ ಕಲ್ಲಿನ ತಡೆಗೋಡೆ

Tuesday, August 6th, 2019
Someshwara

ಮಂಗಳೂರು : ಮಂಗಳೂರು ಹೊರವಲಯದ ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಬಳಿ ಅಪಾಯದಲ್ಲಿರುವ ರಸ್ತೆಗೆ ಹಾಕಲಾಗಿರುವ ಕಲ್ಲುಗಳು ಕೊರೆತಕ್ಕೆ ಕುಸಿತ ಕಂಡರೆ, ನ್ಯೂ ಉಚ್ಚಿಲದಲ್ಲಿ ಸಮುದ್ರ ಕೊರೆತವಾಗಿದ್ದು ಕಲ್ಲುಗಳು ಸಮುದ್ರಪಾಲಾಗಿವೆ. ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ ಕಡಲು ಪ್ರಕ್ಷುಬ್ಧಗೊಂಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಕೆಲ ಭಾಗದಲ್ಲಿ ಕಡಲ ಕೊರೆತ ಉಂಟಾಗುತ್ತಿದೆ. ಕಡಲ ತಡಿಯಲ್ಲಿ ವಾಸಿಸುವ ಜನರು ಆತಂಕಗೊಂಡಿದ್ದಾರೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ […]

ಕಡಲ್ಕೊರೆತದಿಂದ ಅಪಾಯದ ಅಂಚಿನಲ್ಲಿರುವ ಮನೆಗಳು

Thursday, July 7th, 2016
sea erosion

ಉಳ್ಳಾಲ: ಉಳ್ಳಾಲ ಹಾಗೂ ಉಚ್ಚಿಲದಲ್ಲಿ ಕಡಲ್ಕೊರೆತ ಮುಂದುವರಿದಿದ್ದು, ಉಚ್ಚಿಲದಲ್ಲಿ ಮೂರು ಮನೆ ಸಹಿತ ಒಟ್ಟು 16 ಮನೆಗಳಿಗೆ ಹಾನಿಯಾಗಿದ್ದು, 49 ಮನೆಗಳು ಅಪಾಯದ ಅಂಚಿ ನಲ್ಲಿದ್ದರೆ, ಉಳ್ಳಾಲದ ಕಿಲೇರಿಯಾ ನಗರ ದಲ್ಲಿ 6 ಮನೆಗಳು, ಮುಕ್ಕಚ್ಚೇರಿ 4 ಮನೆಗಳು, ಮೊಗವೀರಪಟ್ಣದಲ್ಲಿ 3 ಮನೆಗಳಿಗೆ ಹಾನಿಯಾಗಿದೆ. ಒಟ್ಟು ಮೂರು ಮನೆಗಳನ್ನು ಸ್ಥಳಾಂತರಿಸ ಲಾಗಿದ್ದು, ಮುಸ್ಲಿಂ ಸಮುದಾಯವೇ ಹೆಚ್ಚಿರುವ ಪ್ರದೇಶದಲ್ಲಿ ಬುಧವಾರ ಸಂಭ್ರಮದಲ್ಲಿರಬೇಕಾದವರು ಕಡಲ್ಕೊ ರೆತದಿಂದಾಗಿ ಹಬ್ಬದ ಆಚರಣೆ ಕಳೆಗುಂದಿತ್ತು. ತಾತ್ಕಾಲಿಕ ತಡೆಗೋಡೆಯಾಗಿ ಕಲ್ಲು ಗಳನ್ನು ಹಾಕಿದ್ದರೂ ಕೆಲವೊಂದು ಕಡೆ […]

ತಡೆಗೋಡೆ ಒಡೆದು ನೀರು ನುಗ್ಗಿ ನೂರು ಎಕರೆ ಕೃಷಿ ಭೂಮಿ ನಾಶ

Monday, February 29th, 2016
wall collapse

ಉಪ್ಪಳ : ತಡೆಗೋಡೆ ಒಡೆದು ಕೃಷಿ ಸ್ಥಳಕ್ಕೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಪೈವಳಿಕೆ ಪಂಚಾಯತಿನ ಕುಡಾಲ್‌ಮೇರ್ಕಳದಲ್ಲಿ ನೂರು ಎಕರೆ ಕೃಷಿ ಸ್ಥಳ ನಾಶವಾಗಿದೆ. ದಶಕದ ಹಿಂದೆ ಕಿರು ನೀರಾವರಿ ಯೋಜನೆಯಂಗವಾಗಿ ನಿರ್ಮಿಸಿದ ತಡೆಗೋಡೆ ಒಡೆದು ನಾಲ್ಕು ವರ್ಷಗಳಾದರೂ ಅದನ್ನು ಪುನರ್ ನಿರ್ಮಿಸುವ ಬಗ್ಗೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೃಷಿಕರ, ಖಾಸಗಿ ವ್ಯಕ್ತಿಗಳ ಒಡೆತನದಲ್ಲಿರುವ ಗದ್ದೆಗಳಲ್ಲಿ ನಡೆಯುತ್ತಿದ್ದ ಪರಂಪರಾಗತ ಕೃಷಿಗೆ ತಡೆಯುಂಟಾಗಿದೆ. ತಡೆಗೋಡೆ ಒಡೆದ ಪರಿಣಾಮವಾಗಿ ತೋಡಿನ ಗತಿ […]

ಉಳ್ಳಾಲ ಕಡಲ್ಕೊರೆತದ ಸಮಸ್ಯೆಗೆ ಅಕ್ಟೋಬರ್‌ ತಿಂಗಳಲ್ಲಿ ಪೈಲೆಟ್‌ ಕಾಮಗಾರಿ ಆರಂಭ

Wednesday, June 11th, 2014
Ullal-sea erection

ಉಳ್ಳಾಲ : ಉಳ್ಳಾಲ ಕಡಲ್ಕೊರೆತದ ಗಂಭೀರ ಸಮಸ್ಯೆಯನ್ನು ಬಗೆ ಹರಿಸಲು ಪೈಲೆಟ್‌ ಕಾಮಗಾರಿ ನಡೆಯುತ್ತಿದೆ. ಪೂರ್ಣ ಪ್ರಮಾಣದ ಕಾಮಗಾರಿ ಮುಂದಿನ ಅಕ್ಟೋಬರ್‌ ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ. ಮಂಗಳವಾರ ಉಳ್ಳಾಲ ಕಡಲ್ಕೊರೆತದ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಎಡಿಬಿ ಯೋಜನೆಯಡಿ 223 ಕೋಟಿ ರೂ. ಉಳ್ಳಾಲಕ್ಕೆ, ಉಚ್ಚಿಲ, ಸೋಮೇಶ್ವರ, ತಲಪಾಡಿಗೆ 26 ಕೋಟಿ ಬಿಡುಗಡೆಯಾಗಿದ್ದು, ಮೊಗವೀರಪಟ್ಣದಲ್ಲಿ ತಾತ್ಕಾಲಿಕ ಬಮ್ಸ್‌ ರಚನೆ […]