ಕೋವಿಡ್ : ಎಲ್ಲ ಪ್ರಯಾಣಿಕರ ತಪಾಸಣೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Wednesday, December 1st, 2021
Basavaraja Bommai

ಹುಬ್ಬಳ್ಳಿ : ಕೋವಿಡ್ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ  ಅಂತರರಾಷ್ಟ್ರೀಯ ಪ್ರಯಾಣಿಕರ  ತಪಾಸಣೆ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತಮಾಡುತ್ತಿದ್ದರು.  ಸುಮಾರು 2500 ಅಂತರರಾಷ್ಟ್ರೀಯ ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುತ್ತಾರೆ. ಕೆಲವರು ಮಂಗಳೂರು ವಿಮಾನ ನಿಲ್ದಾಣಕ್ಕೂ ಬರುತ್ತಾರೆ. ಕಳೆದ ಬಾರಿಯ ಅನುಭವದ ಮೇರೆಗೆ ಈಗಿನಿಂದಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು. ಕೋವಿಡ್ : ಅನಗತ್ಯ ಆತಂಕ ಬೇಡ  ಜನರು ಕೋವಿಡ್ ಹೊಸ ತಳಿಯ […]

ಪಾಸಿಟಿವಿಟಿ ಸೂಚ್ಯಂಕ ಕಡಿಮೆಯಾಗುವವರೆಗೆ ಹೆಚ್ಚಿನ ತಪಾಸಣೆಗೆ ನಿರ್ದೇಶನ

Saturday, September 4th, 2021
Rajendra Kumar

ಮಂಗಳೂರು : ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಸೂಚ್ಯಂಕ ಕಡಿಮೆಯಾಗುವವರೆಗೂ ಹೆಚ್ಚಿನ ತಪಾಸಣೆಗಳನ್ನು ಕೈಗೊಳ್ಳುವಂತೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರಿಗೆ ನಿರ್ದೇಶನ ನೀಡಿದರು. ಅವರು ಸೆಪ್ಟೆಂಬರ್ 4ರ ಶನಿವಾರ ಕೋವಿಡ್-19 ಸೋಂಕಿನ ನಿಯಂತ್ರಣ ಕುರಿತು ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳೊಂದಿಗೆ ಬೆಂಗಳೂರಿನಿಂದ ವಿಡಿಯೋ ಸಂವಾದ ನಡೆಸಿ […]

ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕೋವಿಡ್ ತಪಾಸಣೆ : ಬಸವರಾಜ ಬೊಮ್ಮಾಯಿ

Tuesday, July 13th, 2021
Home Minister

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯದ ಗಡಿಭಾಗಗಳಲ್ಲಿ ಇನ್ನಷ್ಟು ಬಿಗಿ ಕ್ರಮಗಳನ್ನು ಅನುಸರಿಸುವಂತೆ ಗಡಿಭಾಗದ ಎಲ್ಲ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬೆಂಗಳೂರಿನಲ್ಲಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲ ಗಡಿಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಅವರು ಈ ಸೂಚನೆ ನೀಡಿದರು. ಮಹಾರಾಷ್ಟ್ರ, ಕೇರಳ ರಾಜ್ಯಗಳ ಮೂಲಕ ಕರ್ನಾಟಕ ಪ್ರವೇಶ ಮಾಡುವ […]

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಾಂಬ್ ನಿಷ್ಕ್ರೀಯ ದಳದಿಂದ ತಪಾಸಣೆ

Friday, August 12th, 2016
Bomb nishkriya dala

ಬಂಟ್ವಾಳ: ಮಂಗಳೂರು ಪೋಲೀಸ್ ವರಿಷ್ಟಾಧಿಕಾರಿ ಭೂಷಣ್ ಜಿ.ಬೋರಾಸೆ ಅವರ ನೇತೃತ್ವದ ಪಶ್ಚಿಮವಲಯದ ಬಾಂಬ್ ನಿಷ್ಕ್ರೀಯ ದಳ ಇವರ ತಂಡದಿಂದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲೇಯಾದ್ಯಂತ ಪ್ರಮುಖ ಸ್ಥಳಗಳಾದ ಬಸ್ ನಿಲ್ದಾಣ, ಕೋರ್ಟು, ರೈಲ್ವೆ ನಿಲ್ದಾಣ ಮತ್ತು ಪ್ರವಾಸಿ ತಾಣಗಳಲ್ಲಿ ವಿಶೇಷ ತಪಾಸಣೆ ನಡೆಸಿದರು. ಬಂಟ್ವಾಳದಲ್ಲೂ ಖಾಸಗಿ ಬಸ್ ನಿಲ್ದಾಣ, ಕೋರ್ಟು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಸಂಚರಿಸಿ ತಪಾಸಣೆ ನಡೆಸಿದರು. ಮೈಸೂರು ನಲ್ಲಿ ನಡೆದ ಘಟನೆಯ ಹಿನ್ನಲೆಯಲ್ಲಿ ಮುಂಜಾಗ್ರತೆಯ ಕ್ರಮವಾಗಿ […]

ಬದಿಯಡ್ಕದಲ್ಲಿ ಕನ್ನಡ ಚಿಂತನೆ ಕಾರ್ಯಕ್ರಮ- ಕಯ್ಯಾರ ಕಾವ್ಯ ವಿಶೇಷೋಪನ್ಯಾಸ ಹಾಗೂ ಕಾವ್ಯಗಾಯನ

Tuesday, February 16th, 2016
Kyyara

ಬದಿಯಡ್ಕ: ಕವಿ ಕಯ್ಯಾರರಿಗೆ ಬದುಕು ಮತ್ತು ಕಾವ್ಯ ಬೇರೆಯಾಗಿರಲಿಲ್ಲ.ಅವರ ಕೃತಿಗಳೆಲ್ಲವು ಜೀವನಾನುಭವಗಳ ತಿರುಳುಗಳಾಗಿದ್ದವು.ಇವು ಕಯ್ಯಾರರ ಜೀವನ್ಮುಖಿ ಚಿಂತನೆಗಳನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆಯೆಂದು ಅಧ್ಯಾಪಿಕೆ,ಕವಯಿತ್ರಿ ದಿವ್ಯಗಂಗಾ ಪಿ.ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂಗಳೂರಿನ ಕನ್ನಡ ಆಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಾಸರಗೋಡಿನ ಅಪೂವ ಕಲಾವಿದರು ಇದರ ಸಹಯೋಗದಲ್ಲಿ ಬದಿಯಡ್ಕದ ಅಂಬೇಡ್ಕರ್ ವಿಚಾರ ವೇದಿಕೆಯ ಸಹಕಾರದಲ್ಲಿ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಆಯೋಜಿಸಲಾಗಿದ್ದ ಮೂರನೇ ಕನ್ನಡ ಚಿಂತನ ಕಾರ್ಯಕ್ರಮದಲ್ಲಿ ಅವರು ಕಯ್ಯಾರರ ಕಾವ್ಯಗಳಲ್ಲಿ ಜೀವನ ದೃಷ್ಟಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಕಯ್ಯಾರರ […]

ಬದಿಯಡ್ಕದ ತುಳುವರ್ಲ್ಡ್ ವತಿಯಿಂದ ಕೆಡ್ಡಸ ಕೂಟ

Thursday, February 11th, 2016
tulu world

ಬದಿಯಡ್ಕ: ಆಧುನಿಕ ವಿಚಾರ ಧಾರೆಗಳಿಗೆ ಮಾರುಹೋದ ಪರಿಣಾಮ ಯುವ ಸಮೂಹ ಪ್ರಾಚೀನ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯ ತುಳುವಳಿಕೆಯ ಕೊರತೆ ಎದುರಿಸುತ್ತಿದೆ.ಯುವ ಸಮೂಹಕ್ಕೆ ತುಳುನಾಡಿನ ಸಾಂಸ್ಕೃತಿಕತೆಯ ಅರಿವನ್ನು ಮೂಡಿಸುವಲ್ಲಿ ಕೆಡ್ಡಸ ಆಚರಣೆಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರಬೇಕೆಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್ .ಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಬದಿಯಡ್ಕದ ತುಳುವರ್ಲ್ಡ್ ವತಿಯಿಂದ ಬುಧವಾರ ಸಂಜೆ ಬದಿಯಡ್ಕದಲಲಿ ನಡೆದ ಕೆಡ್ಡಸ ಕೂಟ ಕಾರ್ಯಕ್ರಮವನ್ನು ಕೆಡ್ಡಸದ ವಿಶೇಷತೆಯಾದ ನವ ಧಾನ್ಯಗಳ ಮಿಶ್ರಣ ನನ್ನೇರಿಯನ್ನು ವಿತರಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇಂದಿನ ಯುವ […]

ಮತ್ತೆ ವ್ಯಾಪಕ ಬೆಂಕಿ-ನಿಲ್ಲದ ಸಮಾಜ ದ್ರೋಹಿಗಳ ಅಟ್ಟಹಾಸ

Wednesday, January 13th, 2016
Badiyadka Fire

ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿ ಪರಿಸರದಲ್ಲಿ ಬೆಂಕಿ ಅನಾಹುತಗಳು ಮತ್ತೆ ಮಂಗಳವಾರ ಮಧ್ಯಾಹ್ನ ಸಂಭವಿಸಿದ್ದು, ಪರಿಸರ ವಾಸಿಗಳು ತೀವ್ರ ಭಯಗ್ರಸ್ಥರಾಗಿದ್ದಾರೆ. ಜನವರಿ 2 ರಿಂದ ನಿರಂತರ ಈ ಪ್ರದೇಶದ ಅಲ್ಲಲ್ಲಿ ಈ ವರೆಗೆ ಅಗ್ನಿ ವ್ಯಾಪಿಸುತ್ತಿದ್ದು, ಒಟ್ಟು 40 ಎಕ್ರೆಗಳಿಗಿಂತಲೂ ಅಧಿಕ ಪ್ರದೇಶದಲ್ಲಿ ಮರಗಿಡಗಳ ಸಹಿತ ಪ್ರಾಣಿ ಪಕ್ಷಿಗಳಿಗೆ ವ್ಯಾಪಕ ನಷ್ಟ ಅನುಭವಿಸಿದೆ. ಮುಳಿಹುಲ್ಲುಗಳು ವ್ಯಾಪಕವಾಗಿ ಬೆಳೆದಿರುವ ಬಯಲು ಪ್ರದೇಶದಲ್ಲಿ ಮೊದಲು ಬೆಂಕಿ ವ್ಯಾಪಿಸತೊಡಗುತ್ತಿದ್ದು, ಬಳಿಕ ವೇಗವಾಗಿ ಬೀಸುವ ಗಾಳಿಗೆ ಮತ್ತಷ್ಟು ಸ್ಥಳಗಳಿಗೆ ವಿಸ್ತರಿಸುತ್ತಿದೆ. ಇದರಿಂದ ಜನ […]

ಲಾರಿ ಡಿಕ್ಕಿಹೊಡೆದು ಮಹಿಳೆಗೆ ಗಂಭೀರ ಗಾಯ

Saturday, December 19th, 2015
Badiyadka

ಬದಿಯಡ್ಕ: ನೀರ್ಚಾಲು ಕೆಳಗಿನ ಪೇಟೆಯಲ್ಲಿ ಶನಿವಾರ ಬೆಳಿಗ್ಗೆ ಲಾರಿಯೊಂದು ಡಿಕ್ಕಿಹೊಡೆದು ಮಹಿಳೆಯೋರ್ವೆ ಗಾಯಗೊಂಡ ಘಟನೆ ನಡೆದಿದೆ. ಏತಡ್ಕ ನಿವಾಸಿ ಅಕ್ಕಮ್ಮ(50)ಗಾಯಗೊಂಡ ಮಹಿಳೆ.ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಶಿಕಿತ್ಸೆ ನೀಡಿದ ಬಳಿಕ ಕಾಸರಗೋಡು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಶನಿವಾರ ಬೆಳಿಗ್ಗೆ ಏತಡ್ಕದಿಂದ ಆಗಮಿಸಿದ ಅಕ್ಕಮ್ಮ ನೀರ್ಚಾಲು ಪೇಟೆಯಲ್ಲಿ ನಡೆದು ಹೋಗುತ್ತಿದ್ದಾಗ ಬದಿಯಡ್ಕ ಭಾಗದಿಂದ ಆಗಮಿಸಿದ ಲಾರಿ ಎದು ಭಾಗದಿಂದ ಆಗಮಿಸುತ್ತಿದ್ದ ಕಾರೊಂದಕ್ಕೆ ಸೈಡ್ ನೀಡುತ್ತಿದ್ದಾಗ ನಿಯಂತ್ರಣ ತಪ್ಪಿ ಅಕ್ಕಮ್ಮರಿಗೆ ಡಿಕ್ಕಿಹೊಡೆದು ಬಳಿಕ ರಸ್ತೆ ಬದಿಯ ಮೋರಿಯನ್ನು ಕೆಡವಿ […]