ತಹಶೀಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಎಸ್‌ಡಿಎ ಕ್ಲಾರ್ಕ್ ಎಸಿಬಿ ಬಲೆಗೆ

Tuesday, January 5th, 2021
Mohammed-Rafeeq

ಮಂಗಳೂರು: ನಗರದ ತಹಶೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಎಸ್‌ಡಿಎ ಕ್ಲಾರ್ಕ್ ಒಬ್ಬರನ್ನು  ರೆಡ್ ‌ಹ್ಯಾಂಡ್‌ ಆಗಿ ಮಂಗಳವಾರ  ಬಂಧಿಸಿದ್ದಾರೆ. ಮೊಹಮ್ಮದ್ ರಫೀಕ್  (42) ಬಂಧಿತ ಆರೋಪಿಯಾಗಿದ್ದು, ಕಚೇರಿಯ ಕೆಲಸ‌‌ವೊಂದನ್ನು ಮಾಡಿಕೊಡಲು ಹಿರಿಯ ನಾಗರೀಕರೊಬ್ಬರಿಂದ 40 ಸಾವಿರ ರೂ. ಲಂಚದ‌ ಬೇಡಿಕೆ ಇಟ್ಟಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಸಂತ್ರಸ್ತರು ದೂರು ದಾಖಲಿಸಿರುವ ಹಿನ್ನೆಲೆ ಆರೋಪಿಗೆ ನಗದು ನೀಡುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ. ತಕ್ಷಣ ಆರೋಪಿಯನ್ನು ಬಂಧಿಸಿ, ನಗದು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಅಧಿಕಾರಿಗಳು […]

ದಾಖಲೆ ನೀಡಲು ಸತಾಯಿಸುತ್ತಿದ್ದ ದೂರು, ತಹಶೀಲ್ದಾರ್ ಕಛೇರಿಗೆ ಡಾ.ಭರತ್ ಶೆಟ್ಟಿ ದಿಢೀರ್ ಭೇಟಿ

Monday, September 28th, 2020
Bhrath Shetty

ಮಂಗಳೂರು  : ತಾಲೂಕು ಕಛೇರಿಗೆ ದಿಢೀರ್ ಭೇಟಿ ನೀಡಿದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅವರು ಜನರಿಗೆ ದಾಖಲೆ ಒದಗಿಸದೆ ಸತಾಯಿಸುತ್ತಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆರ್ ಟಿ ಸಿ ಸಹಿತ ದಾಖಲೆಗಳು ಸಿಗುತ್ತಿಲ್ಲ ಎಂಬ ಜನರ ದೂರಿಗೆ ಸ್ಪಂದಿಸಿ ದಿಢೀರ್ ದಾಖಲೆ ಪರಿಶೀಲಿಸಿದ ಅವರು ಸರಿಯಾದ ಸಮಯದಲ್ಲಿ ದಾಖಲೆ ನೀಡದೆ ಜನರಿಗೆ ಸತಾಯಿಸುತ್ತಿದ್ದೀರಿ. ಜನ ಪ್ರತಿನಿಧಿಯಾಗಿ ನನಗೆ ಜನರ ಕರೆ ಬರುತ್ತಿದೆ. ಏನು ಮಾಡುತ್ತಿದ್ದೀರಿ, ಒಂದಾ ಕೆಲಸ ಮಾಡಿಸಿ ಇಲ್ಲದಿದ್ದರೆ […]

ವಸತಿ ಸಮುಚ್ಛಯದ ತಡೆಗೋಡೆ ಕುಸಿತ, 10 ಕ್ಕೂ ಅಧಿಕ ಕಾರುಗಳು ಮಣ್ಣಿನಡಿ ಜಖಂ

Friday, September 11th, 2020
Kuntikan

ಮಂಗಳೂರು, : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶುಕ್ರವಾರ ಬೆಳಿಗ್ಗೆ ಕುಂಟಿಕಾನದ ವಸತಿ ಸಮುಚ್ಛಯವೊಂದರ ತಡೆಗೋಡೆ ಕುಸಿದು ಬಿದಿದ್ದು ಮಣ್ಣಿನಡಿ ಸುಮಾರು 10 ಕ್ಕೂ ಅಧಿಕ ಕಾರುಗಳು ಹೂತು ಹೋಗಿರುವ ಶಂಕೆ ಉಂಟಾಗಿದೆ. ತಡೆಗೋಡೆಯ ಒಂದು ಭಾಗದ ಗೋಡೆ ಕುಸಿದು ಹಿಂಬದಿಯ ಹಾಸ್ಟೆಲ್‌ ಆವರಣದೊಳಗೆ ಮಣ್ಣು ರಾಶಿ ಬಿದಿದೆ. ಇದೀಗ ಮತ್ತೊಂದು ಭಾಗದ ಗೋಡೆಯು ಕೂಡಾ ಕುಸಿಯುವ ಆತಂಕ ಸೃಷ್ಟಿಯಾಗಿದ್ದು ಈ ಹಿನ್ನೆಲೆ ಇನ್ನೂ ಕೂಡಾ ಕಾರ್ಯಾಚರಣೆ ಆರಂಭವಾಗಿಲ್ಲ ಎಂದು ಹೇಳಲಾಗಿದೆ. ಅಗ್ನಿ ಶಾಮಕ ದಳ, ಸ್ಥಳೀಯ ಪೊಲೀಸರು […]

ಬೆಳ್ತಂಗಡಿ ಸಮೀಪದ ಪಣೆತ್ತಡಿ ಜಮೀನಿನಲ್ಲಿ ಪುರಾತನ ನಿಧಿ, ಸ್ಥಳಕ್ಕೆ ತಹಶೀಲ್ದಾರ್ ಎಸ್.ಐ, ಗ್ರಾಮಾಧಿಕಾರಿ ದೌಡು

Wednesday, July 22nd, 2020
nidhi

ಬೆಳ್ತಂಗಡಿ : ವ್ಯಕ್ತಿಯೊಬ್ಬರ ಜಮೀನಿನಲ್ಲಿ ನಿಧಿ ಪತ್ತೆಯಾಗಿದೆಯೆಂದು ತಹಶೀಲ್ದಾರ್, ಬೆಳ್ತಂಗಡಿ ಎಸ್.ಐ, ಗ್ರಾಮ  ಲೆಕ್ಕಿಗ ಅಧಿಕಾರಿಗಳು ತಾಲೂಕಿನ ನಡ ಗ್ರಾ.ಪಂ. ವ್ಯಾಪ್ತಿಯ ಬರಾಯ ಕನ್ಯಾಡಿ ಗ್ರಾಮದ ಪಣೆತ್ತಡಿಯಲ್ಲಿನಿಧಿ ಶೋಧಕ್ಕೆ‌ ಕಾರ್ಯಕ್ಕೆ ಮುಂದಾಗಿದ್ದಾರೆ. ಒಂದು ತಿಂಗಳ ಹಿಂದೆ ಇಲ್ಲಿನ ಆನಂದ ಶೆಟ್ಟಿ ಅವರಿಗೆ ನಿಧಿ ಲಭಿಸಿತ್ತು ಇದೀಗ ಅವರು ನಿಧಿ ಸಿಕ್ಕಿದ ಜಾಗವನ್ನು ಸಮತಟ್ಟು ಮಾಡಿದ್ದಾರೆ ಎಂದು ಯಾರೋ ಸ್ಥಳೀಯರು ವಿಡಿಯೋ ಮಾಡಿ ಎಸಿ ಯವರಿಗೆ ಕಳುಹಿಸಿ ದ್ದರಂತೆ. ತಹಶೀಲ್ದಾರ್ ಸಮ್ಮುಖದಲ್ಲಿ ಬುಧವಾರ ನಿಧಿ ಶೋಧಕ್ಕೆ‌ ಸಿದ್ಧತೆಗಳು ನಡೆಯುತ್ತಿದ್ದು ಬೆಳ್ತಂಗಡಿ ಎಸ್.ಐ. ನಂದಕುಮಾರ್, ನಡ […]

ಸರ್ವೇಗೆ ಬಂದ ತಹಶೀಲ್ದಾರ್ ಗೆ ಚಾಕುವಿನಿಂದ ಇರಿದು ಕಾಡಿನಲ್ಲಿ ಅಡಗಿ ಕುಳಿತ ನಿವೃತ್ತ ಶಿಕ್ಷಕ

Thursday, July 9th, 2020
Tahashildhar

ಕೋಲಾರ : ನಿವೃತ್ತ ಶಿಕ್ಷಕರೊಬ್ಬರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಗೆ ಚಾಕುವಿನಿಂದ ಇರಿದಿದ್ದು, ತಹಶೀಲ್ದಾರ್ ಸಾವನ್ನಪ್ಪಿರುವ ಘಟನೆ  ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದಲ್ಲಿ ಗುರುವಾರ  ನಡೆದಿದೆ. ಕಳವಂಚಿ ಗ್ರಾಮಕ್ಕೆ ಸರ್ವೇ ನಡೆಸಲು ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ್ ಹೋಗಿದ್ದರು. ಈ ಸಂದರ್ಭ ನಿವೃತ್ತ ಶಿಕ್ಷಕ ವೆಂಕಟಪತಿ ಎಂಬ ವ್ಯಕ್ತಿ ಚೂರಿಯಿಂದ ತಹಶೀಲ್ದಾರ್ ಗೆ ಇರಿದಿದ್ದಾರೆ. ಗಂಭೀರ ರಕ್ತಸ್ರಾವವಾಗಿ ತಹಶೀಲ್ದಾರ್ ಸಾವನ್ನಪ್ಪಿದ್ದಾರೆ. ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸರ್ವೇಗೆ ಬಂದಿದ್ದ ರಾಮಮೂರ್ತಿ ಹಾಗೂ ಆರೋಪಿ ವೆಂಕಟಪತಿ ಎಂಬುವರ ಜಮೀನು ಒಂದೇ ಕಡೆ […]

ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ : ಕನಕಪುರ ತಹಶೀಲ್ದಾರ್ ದಿಢೀರ್ ವರ್ಗಾವಣೆ

Tuesday, December 31st, 2019
yesu-pratime

ರಾಮನಗರ : ಕನಕಪುರ ತಹಶೀಲ್ದಾರ್ ಆನಂದಯ್ಯ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಕನಕಪುರದ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಿಸಲು ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರು ಶಂಕು ಸ್ಥಾಪನೆ ಮಾಡಿದ ನಂತರದ ಬೆಳವಣಿಗೆ ಕುತೂಹಲಕ್ಕೆ ಎಡೆಮಾಡಿದೆ. ಆನಂದಯ್ಯ ಅವರ ಬದಲಿಗೆ ಕನಕಪುರ ತಹಶೀಲ್ದಾರ್ ಆಗಿ ವರ್ಷಾ ಅವರನ್ನು ಆಯ್ಕೆ ಮಾಡಲಾಗಿದೆ. ವರ್ಷಾ ಅವರು ಈ ಮೊದಲು ಯಳಂದೂರು ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಆರ್. […]

ಮಹಿಳಾ ತಹಶೀಲ್ದಾರ್ ರನ್ನು ಪೆಟ್ರೋಲ್ ಹಾಕಿ ಸುಟ್ಟ ಅಪರಿಚಿತ ವ್ಯಕ್ತಿ

Monday, November 4th, 2019
tashildar

ಹೈದರಾಬದ್‌ : ಸೋಮವಾರ ಮಧ್ಯಾಹ್ನ ಹತ್ತಿರದ ಅಬ್ದುಲ್ಲಾಪುರ್ಮೆಟ್‌ನಲ್ಲಿರುವ ತನ್ನ ಕಚೇರಿಯಲ್ಲಿ ಯೇ ಮಹಿಳಾ ತಹಶೀಲ್ದಾರ್ ಒಬ್ಬರನ್ನು ಅಪರಿಚಿತ ವ್ಯಕ್ತಿಯೊಬ್ಬರು ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲ್ಲೆಕೋರನು ಅದರೊಳಗೆ ಪ್ರವೇಶಿಸಿದಾಗ, ಪೆಟ್ರೋಲ್ನಲ್ಲಿ ಸುರಿದು ಬೆಂಕಿ ಹಚ್ಚಿದಾಗ ತಹಸೀಲ್ದಾರ್‌ ವಿಜಯಾ ತನ್ನ ಕೊಠಡಿಯಲ್ಲಿ ಏಕಾಂಗಿಯಾಗಿದ್ದರು ಎಂದು ಇಬ್ರಾಹಿಂಪಟ್ಟಣಂ ಕಂದಾಯ ವಿಭಾಗೀಯ ಅಧಿಕಾರಿ ಅಮರೇಂದರ್ ಹೇಳಿದ್ದಾರೆ. ಮಹಿಳಾ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಕಚೇರಿಯಲ್ಲಿದ್ದ ಮತ್ತೊಬ್ಬ ಸಿಬ್ಬಂದಿ ಅವಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಸುಟ್ಟಗಾಯಗಳಿಗೆ ಒಳಗಾಗಿದ್ದರು. ಹಲ್ಲೆಕೋರ ಎಂದು ಶಂಕಿಸಲಾಗಿರುವ ವ್ಯಕ್ತಿಯೂ ಗಾಯಗೊಂಡಿದ್ದು, […]

ಬಂಟ್ವಾಳ : ತಹಶೀಲ್ದಾರ್ ಕಾರ್ಯನಿರ್ವಹಕ ದಂಡಾಧಿಕಾರಿ ನೇತೃತ್ವದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮ

Wednesday, October 2nd, 2019
rashmi

ಬಂಟ್ವಾಳ : ಪ್ರತೀದಿನ ಕೈಯಲ್ಲಿ ಪೆನ್ನು ಹಿಡಿದುಕೊಂಡು ದಂಡಾಧಿಕಾರಿಯ ಖದರ್ ನಲ್ಲಿ ಕಾಣಿಸಿಕೊಳ್ಳುವ ಬಂಟ್ವಾಳ ತಹಶೀಲ್ದಾರರ ರಶ್ಮೀ ಎಸ್.ಆರ್ ರವರು, ಇಂದು ಬೆಳ್ಳಂಬೆಳಿಗ್ಗೆ ಕೈಯಲ್ಲಿ ಪೊರಕೆ ಹಿಡಿದುಕೊಂಡು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗಾಂಧಿ ಜಯಂತಿಯ ಅಂಗವಾಗಿ ಬುಧವಾರ ಬೆಳ್ಳಂಬೆಳಿಗ್ಗೆ ಕೈಯಲ್ಲಿ ಪೊರಕೆ ಹಿಡಿದುಕೊಂಡು ಮಿನಿವಿಧಾನ ಸೌಧದಲ್ಲಿ ಕಾಣಿಸಿಕೊಂಡ ತಹಶೀಲ್ದಾರ್ ರಶ್ಮೀ ಎಸ್.ಆರ್ ರವರು, ಸ್ವತಃ ತಾವೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಅವರ ಜೊತೆ ತಾಲೂಕು ಕಚೇರಿಯ ಇತರ ಉದ್ಯೋಗಸ್ಥರೂ ಕೈ ಜೋಡಿಸಿದರು. ಅಧಿಕಾರಿ- ಸಿಬ್ಬಂದಿಗಳೆಂಬ ಬೇಧ ಇಲ್ಲದೇ […]

ಮೈಸೂರು : ತಹಶೀಲ್ದಾರ್ ವಿರುದ್ಧ ರೈತರ ಪ್ರತಿಭಟನೆ

Monday, September 23rd, 2019
mysuru

ಮೈಸೂರು : ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷರ ಬಂಧನ ಖಂಡಿಸಿ, ನಂಜನಗೂಡು ತಹಶೀಲ್ದಾರ್ ಕೆ‌. ಮಹೇಶ್ ವಿರುದ್ಧ ಜಿಲ್ಲಾಧಿಕಾರಿ ಎದುರು ರೈತರು ಪ್ರತಿಭಟನೆ ನಡೆಸಿದರು. ನಂಜನಗೂಡು ತಾಲೂಕು ಕಚೇರಿಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಲು ಹೋದ ಸಮಯದಲ್ಲಿ ತಹಶೀಲ್ದಾರ್ ರೈತರ ಜೊತೆ ಸರಿಯಾಗಿ ವರ್ತಿಸಿಲ್ಲ. ಇದೇ ಸಂದರ್ಭದಲ್ಲಿ ನಗರ ಜಿಲ್ಲಾಧ್ಯಕ್ಷ ಮಂಜುನಾಥ ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ‌ ಎಂದು ರೈತರು ಆರೋಪಿಸಿದ್ದಾರೆ. ಮಂಜುನಾಥ್ ಅವರನ್ನು ಕೂಡಲೇ ಬಿಡುಗಡೆಗೊಳಿಸಿ ತಹಶೀಲ್ದಾರನ್ನು ಕೂಡಲೇ ಸಸ್ಪೆಂಡ್ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ […]

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ತನ್ನ ವಾಹನದಲ್ಲಿ ಆಸ್ಪತ್ರೆಗೆ ಸೇರಿಸಿದ ಬೆಳ್ತಂಗಡಿ ತಹಶೀಲ್ದಾರ್

Friday, August 23rd, 2019
Tahshidar

 ಬೆಳ್ತಂಗಡಿ : ಪ್ರವಾಹಪೀಡಿತ ಪ್ರದೇಶಕ್ಕೆ ತಲೆ ಮೇಲೆ ಸಾಮಗ್ರಿ ಹೊತ್ತು ಸಾಗಿಸಿದ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಪ್ರವಾಹಪೀಡಿತ ಪ್ರದೇಶದಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ವ್ಯಕ್ತಿಯೊಬ್ಬರನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಸೇತುವೆ ಕೊಚ್ಚಿಹೋಗಿರುವ ಬಾಂಜಾರು ಮಲೆಯ ಮಲೆಕುಡಿಯರ ಕಾಲನಿಯಲ್ಲಿ ಐತಪ್ಪ ಎಂಬುವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೆ ಐತಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಲು ಯಾವುದೇ ವಾಹನ ವ್ಯವಸ್ಥೆ ಇಲ್ಲದೆ ಐತಪ್ಪ […]