ಪುರಾಣ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶ್ರಾವಣ ಅಮವಾಸ್ಯೆ ತೀರ್ಥ ಸ್ನಾನ

Friday, September 15th, 2023
someshwara-thirtha

ಮಂಗಳೂರು : ಪುರಾಣ ಪ್ರಸಿದ್ಧ ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಕಡಲಲ್ಲಿ ಸಹಸ್ರಾರು ಮಂದಿ ಭಕ್ತರು ಪವಿತ್ರ ಶ್ರಾವಣ ಅಮವಾಸ್ಯೆ ಪ್ರಯುಕ್ತ ತೀರ್ಥ ಸ್ನಾನ ಮಾಡಿದರು. ಸಮುದ್ರ ಸ್ನಾನದ ಮೊದಲು ಭಕ್ತಾಧಿಗಳು ಕಡಲಿಗೆ ಅಡಿಕೆ, ವೀಳ್ಯವನ್ನ ಸಮರ್ಪಿಸಿ ತೀರ್ಥ ಸ್ನಾನದ ಬಳಿಕ ಸೋಮನಾಥನಿಗೆ ವಿಶೇಷ ಸೇವೆಗಳನ್ನು ನೀಡಿತ್ತಾರೆ ಸೋಮೇಶ್ವರದ ಸೋಮನಾಥ ದೇವಸ್ಥಾನದ ಉತ್ಸವಗಳಲ್ಲಿ ಶ್ರಾವಣ ಅಮವಾಸ್ಯೆಯ ಪವಿತ್ರ ಸಮುದ್ರ ತೀರ್ಥ ಸ್ನಾನವು ಪ್ರಾಮುಖ್ಯತೆ ಪಡೆದಿದೆ. ಶ್ರಾವಣ ಅಮವಾಸ್ಯೆಯಂದು ಸೋಮೇಶ್ವರದ ಕಡಲ ತೀರಕ್ಕೆ ಸಹಸ್ರಾರು […]

ಆಟಿ ಅಮಾವಾಸ್ಯೆ ದೇವಸ್ಥಾನಗಳಲ್ಲಿ ತೀರ್ಥಸ್ನಾನ ಇಲ್ಲ, ಕೊರೊನಾ ಸೋಂಕಿನ ಹಿನ್ನೆಲೆ ಪಾಲೆ ಕಷಾಯಕ್ಕೆ ಬೇಡಿಕೆ

Monday, July 20th, 2020
palekashaya

ಬಂಟ್ವಾಳ: ಆಟಿ ಅಮಾವಾಸ್ಯೆಯ ದಿನ ಪಾಲೆ (ಹಾಲೆ) ಮರದಲ್ಲಿ ವಿಶೇಷ ರೋಗ ನಿರೋಧಕ ಶಕ್ತಿ ಇದೆ ಎಂಬ ನಂಬಿಕೆ ತಲತಲಾಂತರ ದಿಂದ ಬಂದಿದೆ. ಸೂರ್ಯೋದಯದ ಮೊದಲು ಅಂದರೆ ನಸುಕಿನಲ್ಲೇ ಕಲ್ಲಿನಿಂದ ಜಜ್ಜಿ ತಂದು ಕಷಾಯ ಮಾಡಿ ಸೇವಿಸುವುದು ರೂಢಿ. ಆಷಾಢ ತಿಂಗಳಲ್ಲಿ ಭಾರಿ ಮಳೆ. ಕ್ರಿಮಿ- ಕೀಟಬಾಧೆಯಿಂದ ಆರೋಗ್ಯದ ರಕ್ಷಣೆ, ರೋಗ ನಿರೋಧಕತೆಗಾಗಿ ಪಾಲೆ (ಹಾಲೆ) ಮರದ ತೊಗಟೆಯ ಕಷಾಯ ಮಾಡಿ ಕುಡಿದರೆ ಒಳ್ಳೆಯದಂತೆ. ಔಷಧೀಯವಾಗಿ ಈ ಕಷಾಯಕ್ಕೆ ಬಹಳಷ್ಟು ಮಹತ್ವವಿರುವುದರಿಂದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಬೇಡಿಕೆ ವ್ಯಕ್ತವಾಯಿತು. ಈ ಬಾರಿ ಲಾಕ್ ಡೌನ್ […]

ನರಹರಿ ಬೆಟ್ಟ ಮತ್ತು ಕಾರಿಂಜೇಶ್ವರ ದೇವಸ್ಥಾನದಲ್ಲಿ ಭಕ್ತಾಧಿಗಳಿಂದ ವಿಶೇಷ ತೀರ್ಥ ಸ್ನಾನ

Wednesday, August 7th, 2013
ati-1

ಬಂಟ್ವಾಳ: ಆಟಿ ಅಮಾವಾಸ್ಯೆಯ ಪ್ರಯುಕ್ತ  ಪುರಾಣ ಪ್ರಸಿದ್ದ ಕ್ಷೇತ್ರವಾದ ನರಹರಿ ಶ್ರೀ ಸದಾಶಿವ ದೇವಸ್ಥಾನ ಮತ್ತು ಕಾರಿಂಜ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ  ಮಂಗಳವಾರ ಭಕ್ತಾಧಿಗಳು ಬೆಳಗ್ಗಿನಿಂದಲೇ  ವಿಶೇಷ ತೀರ್ಥ ಸ್ನಾನದಲ್ಲಿ ಪಾಲ್ಗೊಂಡರು. ಮುಂಜಾನೆಯಿಂದಲೇ ನರಹರಿ ಸದಾಶಿವ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ಭಕ್ತರು ಅಲ್ಲಿನ ಶಂಖ, ಚಕ್ರ, ಗದಾ, ಪದ್ಮ ಗಳೆಂಬ ತೀರ್ಥಕೆರೆಗಳಿಗೆ ಅಡಿಕೆ ಹಾಗೂ ವೀಳ್ಯದೆಲೆ ಅರ್ಪಿಸಿ ವಿಶೇಷ ತೀರ್ಥಸ್ನಾನ ಮಾಡಿದರು. ಉಬ್ಬಸ ನಿವಾರಣೆಗಾಗಿ ಹುರಿ ಹಗ್ಗವನ್ನು ದೇವರಿಗೆ ಅರ್ಪಿಸುವ ಸೇವೆ ಇಲ್ಲಿ ವಿಶೇಷವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು […]