ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ ತೆರಿಗೆ ಪಾವತಿಸದೇ / ಮಾಲಿಕತ್ವ ಬದಲಾಯಿಸದೇ ಸಂಚರಿಸುತ್ತಿದ್ದ ಐಷಾರಾಮಿ ಕಾರುಗಳು ವಶ

Sunday, August 22nd, 2021
Car Seize

ಬೆಂಗಳೂರು : ಸಾರಿಗೆ ಅಧಿಕಾರಿಗಳು ಇಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹಲವಾರು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಐಷಾರಾಮಿ ಕಾರುಗಳನ್ನು ತೆರಿಗೆ ಕಟ್ಟದೆ – ಮಾಲಿಕತ್ವ ಬದಲಾಯಿಸಿಕೊಳ್ಳದೇ ಸಂಚರಿಸುತ್ತಿದ್ದ ಕಾರುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ. ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್‌ ನೇತೃತ್ವದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ರಾಜಣ್ಣ, ಮೋಟಾರ್‌ ವಾಹನ ನಿರೀಕ್ಷಕರಾದ ಸುಧಾಕರ್‌, ತಿಪ್ಪೇಸ್ವಾಮಿ, ವಿಶ್ವನಾಥ ಶೆಟ್ಟರ್‌, ರಂಜಿತ್‌, ರಾಜೇಶ್‌ ಮತ್ತು ರಾಜ್‌ ಕುಮಾರ್‌ ಅವರನ್ನ ಒಳಗೊಂಡ ತಂಡ ಇಂದು […]

ಬಜೆಟ್ನಲ್ಲಿ ಕೊರೋನಾದ ಹೆಸರಲ್ಲಿ ಜನರಿಂದಲೇ ಲೂಟುವ ಕಾರ್ಯವನ್ನು ಕೇಂದ್ರ ಸರಕಾರ ಮಾಡಿದೆ : ಯು.ಟಿ. ಖಾದರ್

Wednesday, February 10th, 2021
ut-khader

ಮಂಗಳೂರು : ಕೇಂದ್ರ ಸರಕಾರ ಮಂಡನೆ ಮಾಡಿರುವ ಬಜೆಟ್ನಲ್ಲಿ ಯುವ ಜನತೆಗೆ ಉದ್ಯೋಗ ಕಲ್ಪಿಸುವ ಯಾವುದೇ ಯೋಜನೆಗಳಿಲ್ಲ. ಪ್ರಕೃತಿ ವಿಕೋಪಕ್ಕೆ ಯಾವುದೇ ಪರಿಹಾರ ನೀಡಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಸೇಲ್ ಇಂಡಿಯಾ, ಲೂಟ್ ಇಂಡಿಯಾ ಬಜೆಟ್ ಅನ್ನು ಕೇಂದ್ರ ಸರಕಾರ ಮಂಡಿಸಿದೆ.  ಕೊರೋನಾದ ಹೆಸರಲ್ಲಿ ಜನರಿಗೆ ತೆರಿಗೆ ಹಾಕಿ ಜನರಿಂದಲೇ ಲೂಟುವ ಕಾರ್ಯವನ್ನು ಕೇಂದ್ರ ಸರಕಾರ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬಜೆಟ್ ನಲ್ಲಿ ಕರ್ನಾಟಕಕ್ಕೆ […]

ಮಂಗಳೂರು ಮಹಾನಗರ ಪಾಲಿಕೆ 2021-22ನೆ ಅವಧಿಗೆ ಬಜೆಟ್ ಮಂಡನೆ, 70 ಕೋಟಿ ರೂ. ಆದಾಯದ ನಿರೀಕ್ಷೆ

Thursday, January 28th, 2021
Budget

ಮಂಗಳೂರು : ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಕುರಿತಾದ ವಿಶೇಷ ಸಭೆಯಲ್ಲಿ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕುಮಾರ್ ಪ್ರಸಕ್ತ ಬಿಜೆಪಿ ಆಡಳಿತಾವಧಿಯ ಪ್ರಥಮ ಅಂದಾಜು ಬಜೆಟ್ ಮಂಡಿಸಿದರು. ಪಾಲಿಕೆ ವ್ಯಾಪ್ತಿಯ ಕೇಂದ್ರ ಹಾಗೂ ರಾಜ್ಯ ಸರಕಾರಿ ಕಟ್ಟಡಗಳ ಮೇಲಿನ ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ ವಿನಾಯಿತಿ ಹೊಂದಿರುವ ಶಿಕ್ಷಣ ಸಂಸ್ಥೆಗಳಿಂದ ಸೇವಾ ಶುಲ್ಕ ಸಂಗ್ರಹಣೆ ಮಾಡಲಾಗುವುದು, ಉಪ ಆಯುಕ್ತರ ಮೇಲುಸ್ತುವಾರಿಯಲ್ಲಿ ಕಂದಾಯ ಜಾಗೃತ ದಳ ಸ್ಥಾಪಿಸಿ […]

ದಿನಭವಿಷ್ಯ : ವೃಶ್ಚಿಕ ರಾಶಿ – ಪಾವತಿಗಳು, ತೆರಿಗೆಗಳ ಬಗ್ಗೆ ಸೂಕ್ಷ್ಮವಾಗಿ ಗಮನವಹಿಸಿ.

Wednesday, April 22nd, 2020
satyanarayana

ಶ್ರೀ ನಾರಾಯಣ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ದೂರದ ಸಂಬಂಧಿಗಳು ನಿಮ್ಮನ್ನು ಕಾಣಲು ಬರಲಿದ್ದಾರೆ, ಅವರು ನಿಮ್ಮಿಂದ ಸಹಾಯ ಅಪೇಕ್ಷಿಸಬಹುದು. ಈ ದಿನ ನೀವು ಯಾರಿಗೂ ಸಾಲ ನೀಡುವ ವಿಚಾರಕ್ಕೆ ಹೋಗಬೇಡಿ ಇದರಿಂದ ಮುಂದೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ಸಭಾ ಗೋಷ್ಠಿಗಳು ನಿಮಗೆ ಧನಾತ್ಮಕ ಚಿಂತನೆಯನ್ನು ತಂದುಕೊಡುತ್ತದೆ. ಕೆಲಸದಲ್ಲಿ ಉತ್ತಮ ಜ್ಞಾನದಿಂದ […]

ಪೆಟ್ರೋಲ್,​ ಡೀಸೆಲ್ ಶೇ.3 ರಷ್ಟು ಮತ್ತು ಅಬಕಾರಿ ಶೇ.6 ರಷ್ಟು ತೆರಿಗೆಯನ್ನು ಹೆಚ್ಚಿಸಿದ ರಾಜ್ಯ ಸರ್ಕಾರ

Thursday, March 5th, 2020
cm

ಬೆಂಗಳೂರು : ರಾಜ್ಯದಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಹಣ ಹೊಂದಿರುವ ಸಲುವಾಗಿ ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 3 ಹಾಗೂ ಮಧ್ಯಪಾನದ ಮೇಲಿನ ತೆರಿಗೆಯನ್ನು ಶೇ.6 ರಷ್ಟು ಹೆಚ್ಚಿಸಲು ಮುಂದಾಗಿದೆ. ಇಂದು ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಬಜೆಟ್ ಮಂಡಿಸಿ ಭಾಷಣ ಮಾಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, “ರಾಜ್ಯದಲ್ಲಿ ಜಿಎಸ್ಟಿ ತೆರಿಗೆ ಹಣ ಸಂಗ್ರಹಣೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.14ರಷ್ಟು ಅಧಿಕವಾಗಿದೆ. ಅಲ್ಲದೆ, ಅಭಿವೃದ್ಧಿಗಾಗಿ ಮತ್ತಷ್ಟು ಹಣ ಸಂಗ್ರಹಿಸುವ […]

ತೆರಿಗೆ ಪಾವತಿಸದ ಮೊಬೈಲ್ ಟವರ್-ನೋಟಿಸ್ ಜಾರಿಗೊಳಿಸಿ- ಕೋಟ ಶ್ರೀನಿವಾಸ್ ಪೂಜಾರಿ

Thursday, October 17th, 2019
minister-Pujary

ಮಂಗಳೂರು : ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಮೊಬೈಲ್ ಫೋನ್ ಟವರ್ ಕಂಪೆನಿಗಳು ಗ್ರಾಮ ಪಂಚಾಯತಿಗೆ ತೆರಿಗೆ ಪಾವತಿ ಮಾಡುತ್ತಿಲ್ಲ ಎಂಬ ದೂರುಗಳು ಹೆಚ್ಚು ಬಂದಿವೆ ಹಾಗಾಗಿ ಅಂತಹ ಕಂಪೆನಿಗಳ ವಿರುದ್ಧ ನೋಟಿಸ್ ನೀಡಿ ತೆರಿಗೆ ಕಟ್ಟುವಂತೆ ಆದೇಶ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ […]

ಆಸ್ತಿ ತೆರಿಗೆ ಪಾವತಿಸದೇ ಇದ್ದಲ್ಲಿ ದಂಡ ಹಾಗೂ ಜಫ್ತಿ ಕ್ರಮ ಜಾರಿ

Thursday, December 13th, 2018
BBMP

ಬೆಂಗಳೂರು : ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ಈವರೆಗೆ ಪಾವತಿಸದೇ ಇರುವ ಕಟ್ಟಡಗಳ ಮಾಲೀಕರು ಕೂಡಲೇ ಆಸ್ತಿ ತೆರಿಗೆ ಪಾವತಿಸದೇ ಇದ್ದಲ್ಲಿ ದಂಡ ಹಾಗೂ ಜಫ್ತಿ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವಲಯದ ಜಂಟಿ ಆಯುಕ್ತ ಎನ್. ಸಿ. ಜಗದೀಶ್ ಹಾಗೂ ಉಪ ಆಯುಕ್ತ ಕೆ. ಶಿವೇಗೌಡ ಅವರು ತೆರಿಗೆ ಪಾವತಿಸದೇ ಸುಸ್ತಿದಾರರಾಗಿರುವ ಕಟ್ಟಡ ಮಾಲೀಕರಿಗೆ ಎಚ್ಚರಿಸಿದ್ದಾರೆ. ಮಹದೇವಪುರ ವಲಯದ ಹೂಡಿ, ವೈಟ್‌ಫೀಲ್ಡ್, ಮಾರತ್‌ಹಳ್ಳಿ, ಕೆ.ಆರ್.ಪುರ, ಹೊರಮಾವು ಮತ್ತು ಹೆಚ್.ಎ.ಎಲ್ ಸೇರಿದಂತೆ […]

ಗ್ರಾ.ಪಂ. ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳಿಗೆ ನಿಖರ ತೆರಿಗೆ: ಕೆಡಿಪಿ ನಿರ್ಣಯ

Thursday, June 11th, 2015
KDP

ಮಂಗಳೂರು : ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲಿರುವ ಎಲ್ಲಾ ವಾಣಿಜ್ಯ ಸಂಕೀರ್ಣ ಮತ್ತು ಬೃಹತ್ ಕಟ್ಟಡಗಳ ನಿಖರ ಅಳತೆ ಮಾಡಿ, ಗ್ರಾಮ ಪಂಚಾಯತ್‌ಗಳು ಕಟ್ಟಡ ತೆರಿಗೆ ವಿಧಿಸಲು ಇಂದು ನಡೆದ ಕೆಡಿಪಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು. ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಕಟ್ಟಡ ತೆರಿಗೆಯಲ್ಲಿ ಏಕರೂಪತೆ […]