ದಕ್ಷಿಣಕನ್ನಡ ಜಿಲ್ಲೆಯ 5ತಾಲೂಕುಗಳಲ್ಲಿ ಜುಲೈ 18 ರಂದು ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ

Wednesday, July 17th, 2024
mullai-muhilan

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಹವಾಮಾನ ಇಲಾಖೆ ಜುಲೈ 19 ರ ವರೆಗೆ ರೆಡ್ ಅಲರ್ಟ್ ಘೋಷಿಸಿದೆ. ಈ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಹಾಗೂ ಕಡಬ ತಾಲೂಕು ವ್ಯಾಪ್ತಿಯ ಅಂಗನವಾಡಿ, ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜು ತನಕದ ಶಿಕ್ಷಣ ಸಂಸ್ಥೆಗಳಿಗೆ ಜುಲೈ 18 ಗುರುವಾರ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿದ್ದಾರೆ. ಮಂಗಳೂರು, ಉಳ್ಳಾಲ, ಮೂಡಬಿದ್ರೆ,ಮೂಲ್ಕಿ ತಾಲೂಕುಗಳ ಶಾಲಾ‌ ಕಾಲೇಜುಗಳಿಗೆ ಯಾವುದೇ ರಜೆ ಇಲ್ಲ. […]

ದಕ್ಷಿಣಕನ್ನಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆಯ ಮಾತು

Tuesday, March 12th, 2024
Nalin-Kateel

ಮಂಗಳೂರು : ದಕ್ಷಿಣಕನ್ನಡ ಲೋಕಸಭಾ ಚುನಾವಣಾ ಅಭ್ಯರ್ಥಿ ಆಯ್ಕೆಯಲ್ಲಿ ಬದಲಾವಣೆಯ ಮಾತು ಕೇಳಿ ಬಂದಿದೆ. ಬಿಜೆಪಿಯ ಹಾಲಿ ಸಂಸದ ನಳಿನ್ ಕುಮಾರ್ ಕಟೀಲು ಸತತ ಮೂರು ಬಾರಿ ಸ್ಪರ್ಧಿಸಿರುವುದರಿಂದ ಈ ಬಾರಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿಯ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ. ಇಆ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಬೇಕು ಎನ್ನುವುದು ನಮ್ಮ ಪಾರ್ಟಿಯ ವಿಶೇಷತೆ. ಪಾರ್ಟಿಯ ರಾಷ್ಟ್ರೀಯ ನಾಯಕರು ಎಲ್ಲಾ ಯೋಚನೆ ಮಾಡಿ ಆಯ್ಕೆ ಮಾಡುತ್ತಾರೆ. ಇದನ್ನು ನಾನು […]

ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ|ಕೆ.ವಿ. ರಾಜೇಂದ್ರ ಹಾಗೂ ಪತ್ನಿ, ಮಗುವಿಗೆ ಕೋವಿಡ್ ಸೋಂಕು

Tuesday, October 13th, 2020
kv Rajendra

ಮಂಗಳೂರು : ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ|ಕೆ.ವಿ. ರಾಜೇಂದ್ರ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಜೊತೆಗೆ ಪತ್ನಿ ಹಾಗೂ ಮಗುವಿಗೂ ಪರೀಕ್ಷೆ ನಡೆಸಿದ ಸಂದರ್ಭ ಅವರ ವರದಿಯಲ್ಲೂ ಸೋಂಕು ದೃಢಪಟ್ಟಿದೆ ಹಾಗಾಗಿ ಅವರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ. ಕೋವಿಡ್ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕಮಿಷನರ್ ಕೂಡಾ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದಿನೇ ದಿನೆ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿದೆ, ಜಿಲ್ಲೆಯಲ್ಲಿ ಸೋಮವಾರ 303 ಪಾಸಿಟಿವ್ ಪ್ರಕಾರರಣಗಳು ದಾಖಲಾಗಿದ್ದು […]

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ವರ್ಗಾವಣೆ

Tuesday, July 28th, 2020
sindhu b roopesh

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ‌ ಸಿಂಧೂ ಬಿ. ರೂಪೇಶ್ ಅವರು  ಬೆಂಗಳೂರಿಗೆ ವರ್ಗಾವಣೆ  ಆಗಿದೆ. ದ. ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ರಾಜೇಂದ್ರ ಕೆ.ವಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಡಾ.ರಾಜೇಂದ್ರ ಕೆ.ವಿ ಅವರು ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನಾಗಿ ಸರ್ಕಾರ ನಿಯೋಜಿಸಿದೆ. ಸಿಂಧೂ ರೂಪೇಶ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಇ -ಆಡಳಿತ ವಿಭಾಗದ ನಿರ್ದೆಶಕಿಯನ್ನಾಗಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಡಾ. ರಾಜೇಂದ್ರ […]

ಕೊರೋನ ಸೋಂಕು ರವಿವಾರ : ದಕ್ಷಿಣ ಕನ್ನಡ 285, ಉಡುಪಿ ಜಿಲ್ಲೆ 134, ಕಾಸರಗೋಡು 57

Sunday, July 19th, 2020
coronavirus

ಮಂಗಳೂರು : ದಕ್ಷಿಣ ಕನ್ನಡ  ಜಿಲ್ಲೆಯಲ್ಲಿರವಿವಾರ 285 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.  ಈಗ  ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 3,596ಕ್ಕೆ ಏರಿಕೆಯಾಗಿದೆ. ಕೋವಿಡ್‌ಗೆ ರವಿವಾರ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಹೊಸದಾಗಿ ಪತ್ತೆಯಾದ ಪ್ರಕರಣಗಳಲ್ಲಿ ತೀವ್ರ ಉಸಿರಾಟ ಸಮಸ್ಯೆ (ಸಾರಿ) ಮತ್ತು ಶೀತ (ಐಎಲ್‌ಐ) ಪ್ರಕರಣಗಳು ಹೆಚ್ಚಿದ್ದು, ಸೋಂಕು ಮೂಲ ಪತ್ತೆಯಾಗದ ಪ್ರಕರಣಗಳು ಕೂಡ 60ಕ್ಕೂ ಹೆಚ್ಚಿವೆ. ಸೋಂಕಿತರ ಪ್ರಾಥಮಿಕ ಸಂಪರ್ಕದಿಂದಲೂ ಅನೇಕರಿಗೆ ಸೋಂಕು ಹರಡಿದ್ದು, ಇಂಥವರ ಸಂಪರ್ಕದಲ್ಲಿರುವವರ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿವಿಧ ಆಸ್ಪತ್ರೆ, ಆರೈಕೆ […]

ಕೊರೊನಾ ತಡೆಗಟ್ಟಲು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸರ್ವ ವ್ಯವಸ್ಥೆ

Wednesday, March 18th, 2020
sindhu

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದುವರೆಗೆ 29,053 ಜನರು ಹಾಗೂ ನವಮಂಗಳೂರು ಬಂದರಿನಲ್ಲಿ 5,543 ಜನರನ್ನು ತಪಾಸಣೆ ಮಾಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಕೊರೊನಾ ಶಂಕಿತರ ಮೇಲೆ ನಿಗಾ ವಹಿಸಲು ವೆನ್ಲಾಕ್ ನಲ್ಲಿ ನಿಗಾವಣಾ (ಕ್ವಾರಂಟೈನ್‌) ವಾರ್ಡ್‌ 10 ಹಾಗೂ ಪ್ರತ್ಯೇಕತಾ (ಐಸೋಲೇಶನ್‌) 6 ವಾರ್ಡ್‌ ಮಾಡಲಾಗಿದೆ. ತಾಲೂಕುಗಳಲ್ಲಿರುವ ನಿಗಾ ವಾರ್ಡ್‌ನಲ್ಲಿ 167, ಪ್ರತ್ಯೇಕತಾ ವಾರ್ಡ್‌ಗಳಾಗಿ 120ನ್ನು ಸಿದ್ಧಪಡಿಸಲಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ 100 ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗಿನ 46 ಮಾದರಿ ಟೆಸ್ಟ್‌ ನಡೆಸಲಾಗಿದ್ದು, […]

ಬಿಸಿಲ ಹೊಡೆತಕ್ಕೆ ಪ್ರಚಾರದ ಸಮಯವನ್ನೇ ಬದಲಿಸಿಕೊಂಡ ಕರಾವಳಿಗರು

Wednesday, May 2nd, 2018
election

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 11 ದಿನಗಳು ಮಾತ್ರ ಬಾಕಿಯಿದೆ. ಅದರಲ್ಲೂ ರಾಜಕೀಯ ಪಕ್ಷಗಳಿಗೆ ತಮ್ಮ ಪರ ಪ್ರಚಾರ ನಡೆಸಲು ಬೆರಳೆಣಿಕೆಯ ದಿನಗಳು ಮಾತ್ರವಿದೆ. ಆದರೆ ಈ ಬಾರಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಪಕ್ಷಗಳಿಗೆ ಮನೆ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಲು ಬಿಸಿಲು ಅಡ್ಡಿಯಾಗಿದೆ.ಹೌದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅತೀ ಹೆಚ್ಚು ಉಷ್ಣಾಂಶ ದಾಖಲಾಗುತ್ತಿರುವ ಕಾರಣಕ್ಕಾಗಿ ಎಲ್ಲಾ ಪಕ್ಷದ ಕಾರ್ಯಕರ್ತರು ಬಿಸಿಲಿನ ಝಳ ತಪ್ಪಿಸುವ ನಿಟ್ಟಿನಲ್ಲಿ ತಮ್ಮ ಪ್ರಚಾರದ ಸಮಯವನ್ನೇ ಬದಲಾವಣೆ ಮಾಡಬೇಕಾದ […]

ದ.ಕ. ಅಭಿವೃದ್ಧಿಗೆ ಶ್ರೀನಿವಾಸ ಮಲ್ಯರವರ ಕೊಡುಗೆ ಅಪಾರ

Saturday, December 9th, 2017
mcc day

ಮಂಗಳೂರು: ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಅತ್ಯಂತ ಪರಿಪೂರ್ಣ ನೆಲೆಯಲ್ಲಿ ನಿರ್ವಹಿಸಿಕೊಂಡ ಯು. ಶ್ರೀನಿವಾಸ ಮಲ್ಯ ಅವರ ಕೊಡುಗೆ ಅಪಾರ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು. ಪುರಭವನದಲ್ಲಿ ಶುಕ್ರವಾರ ಅವರು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ದಿವಂಗತ ಉಳ್ಳಾಲ ಶ್ರೀನಿವಾಸ ಮಲ್ಯ ಗೌರವ ಪ್ರಶಸ್ತಿ ಪ್ರದಾನ ಸಮಾ ರಂಭ ವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿದರು. ಹೆದ್ದಾರಿ, ರೈಲ್ವೇ, ಸ್ವತಂತ್ರ ರೇಡಿಯೋ ಸ್ಥಾಪನೆ, ವಿಮಾನ ನಿಲ್ದಾಣ, ರಾಸಾಯನಿಕ ರಸಗೊಬ್ಬರ ಕಾರ್ಖಾನೆ […]

ದಕ್ಷಿಣಕನ್ನಡ 17 ಲೋಕಸಭಾ ಚುನಾವಣೆ-14 ಅಭ್ಯರ್ಥಿಗಳು

Saturday, March 29th, 2014
Ibrahim AB

ಮಂಗಳೂರು : 17 ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಇಂದು ಅಂತಿಮ ದಿನವಾಗಿದ್ದು, ಒಟ್ಟು 14 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 1) ಜನಾರ್ಧನ ಪೂಜಾರಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), 2)ನಳಿನ್ ಕುಮಾರ್ ಕಟೀಲು (ಭಾರತೀಯ ಜನತಾ ಪಕ್ಷ), 3)ಮೂಸೆಕುಂಞ ಯಾನೆ ಅಬ್ದುಲ್ ಕರೀಂ(ಬಹುಜನ ಸಮಾಜ ಪಕ್ಷ) 4)ಕೆ.ಯಾದವ ಶೆಟ್ಟಿ (ಭಾರತೀಯ ಕಮ್ಯನಿಸ್ಟ್ ಪಕ್ಷ/ಮಾರ್ಕಿಸ್ಟ್),5) ಮಾರ್ಪಳ್ಳಿ ರಾಮಯ್ಯ ವಾಸುದೇವ(ಆಮ್ ಆದ್ಮಿ ಪಾರ್ಟಿ)6) ಸುಪ್ರೀತ್ ಕುಮಾರ್ ಪೂಜಾರಿ( ಹಿಂದೂಸ್ತಾನ್ ಜನತಾ ಪಾರ್ಟಿ)7) ಹನೀಫ್ ಖಾನ್ ಕೊಡಾಜೆ (ಸೋಶಿಯಲ್ […]