Blog Archive

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎನ್.ಪ್ರಕಾಶ್ ಅಧಿಕಾರ ಸ್ವೀಕಾರ

Monday, December 3rd, 2012
N. Prakash Mangalore New DC

ಮಂಗಳೂರು :ಮಂಗಳೂರು ಮಾಜಿ ಜಿಲ್ಲಾದಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ರವರು ನೂತನ ಜಿಲ್ಲಾಧಿಕಾರಿ ಎನ್.ಪ್ರಕಾಶ್ ರವರಿಗೆ ಇಂದು ತಮ್ಮ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ದ.ಕ.ಜಿಲ್ಲೆಯ 123ನೇ ಜಿಲ್ಲಾಧಿಕಾರಿಯಾಗಿ ಎನ್.ಪ್ರಕಾಶ್ ರವರು ಅಧಿಕಾರ ವಹಿಸಿಕೊಂಡರು. ಈ ಮೊದಲು ಇವರು ಬೆಂಗಳೂರಿನಲ್ಲಿ ಕೆ.ಎಸ್.ಆರ್.ಟಿ.ಸಿ. ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ 1955 ರಲ್ಲಿ ಜನಿಸಿದ ಇವರು ನಂಜನಗೂಡಿನಲ್ಲಿ ತನ್ನ ಪದವಿವರೆಗಿನ ಶಿಕ್ಷಣವನ್ನು ಪೂರೈಸಿ ನಂತರ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಇತಿಹಾಸ ವಿಭಾಗದಲ್ಲಿ 2ನೇ ರ್‍ಯಾಂಕ್ ನೊಂದಿಗೆ ಉತ್ತೀರ್ಣರಾಗಿ ನಂತರ ರೇಣುಕಾಚಾರ್ಯ […]

ಜಲ್ಲಿ ಕ್ರಷರ್ ಬಂದ್; ಕಟ್ಟಡ ನಿರ್ಮಾಣಕ್ಕೆ ತಟ್ಟಿದ ಬಿಸಿ!

Saturday, October 20th, 2012
gravl crusher

ಮಂಗಳೂರು: ರಾಜ್ಯ ಹೈಕೋರ್ಟ್ ನ ತಡೆಯಾಜ್ಞೆ ಮತ್ತು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಷೇಧಾಜ್ಞೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸುಮಾರು 200 ಜಲ್ಲಿ ಕ್ರಷರ್ ಗಳು ಸೆಪ್ಟಂಬರ್ 22ರಿಂದ ಮುಚ್ಚಲ್ಪಟ್ಟಿದೆ. ಅಂದರೆ, ಕಳೆದ ಮೂರು ವಾರದಿಂದ ಜಿಲ್ಲೆಯ ಯಾವುದೇ ಜಲ್ಲಿ ಕ್ರಷರ್ ಗಳು ಸ್ತಬ್ಧವಾಗಿದೆ. ಇದರಿಂದ ಜಲ್ಲಿ ಕ್ರಷರ್ ಗೆ ಪೂರಕವಾದ ವಿವಿಧ ಉದ್ಯಮ, ಸಾರಿಗೆ ವ್ಯವಸ್ಥೆ, ಕಾರ್ಮಿಕ ವಿಭಾಗಕ್ಕೆ ಬಾರೀ ಹೊಡೆತ ಬಿದ್ದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಹಾಗಾಗಿ […]

ಮಂಗಳೂರು ತಾಲೂಕಿನಲ್ಲಿ ನ. 1ರಿಂದ ಪ್ಲಾಸ್ತಿಕ್ ನಿಷೇಧ

Friday, October 12th, 2012
Dr N S Channappa Gowda.

ಮಂಗಳೂರು : ಪ್ಲಾಸ್ಟಿಕ್  ಹಾವಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಹಂತಹಂತವಾಗಿ ಪ್ಲಾಸ್ಟಿಕ್‌ ನಿಷೇಧ ಜಾರಿಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಡಾ| ಎನ್‌. ಎಸ್‌. ಚನ್ನಪ್ಪಗೌಡ ಅವರು ವಿವಿಧ ಸಂಘಟನೆಗಳು ಹಾಗೂ ಅಧಿಕಾರಿಗಳ ಸಭೆಯನ್ನುದ್ದೇಶಿಸಿ  ಗುರುವಾರ  ಮಾತನಾಡಿದ  ಅವರು ನವೆಂಬರ್ ೧ರಿಂದ ಪ್ಲಾಸ್ಟಿಕ್‌ ನಿಷೇದ ಮಂಗಳೂರು ನಗರ, ತಾಲೂಕಿನಲ್ಲಿ ಜಾರಿಗೆ ಬರಲಿದೆ ಎಂದು ತಿಳಿಸಿದರು.  ಜಿಲ್ಲೆಯ ನಾಗರಿಕರ ಸಹಕಾರ ಪ್ಲಾಸ್ಟಿಕ್‌ ಹಾವಳಿಯನ್ನು ನಿಷೇಧಿಸಲು ಅಗತ್ಯವಿದೆ ಎಂದರು. ನಿಷೇಧವನ್ನು ಅನುಷ್ಠಾನಕ್ಕೆ ತರುವಲ್ಲಿ ಜಿಲ್ಲೆಯ ಆಡಳಿತದ ಸಹಕಾರ ಅಗತ್ಯವಿದೆ. […]

ದಕ್ಷಿಣ ಕನ್ನಡ ಜಿಲ್ಲೆಗೆ 2010 – 11ನೇ ಸಾಲಿನ ನಿರ್ಮಲ ಗ್ರಾಮ ಪ್ರಶಸ್ತಿ

Thursday, March 22nd, 2012
Nirmal Gram Puraskar

ಮಂಗಳೂರು: ದೇಶದ ಪ್ರತಿಷ್ಠೆಯ 2010 – 11ನೇ ಸಾಲಿನ ನಿರ್ಮಲ ಗ್ರಾಮ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆ ಪಾತ್ರವಾಗಿದ್ದು, ಗುರುವಾರ ಹೊಸದಿಲ್ಲಿಯ ವಿಜ್ಞಾನ ಮಂದಿರದಲ್ಲಿ ಜರಗಿದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ದೇವಿ ಪಾಟೀಲ್‌ ಅವರಿಂದ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶೈಲಜಾ ಭಟ್‌ ಕೆ.ಟಿ. ಪ್ರಶಸ್ತಿ ಸ್ವೀಕರಿಸಿದರು. ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಎನ್‌. ವಿಜಯ ಪ್ರಕಾಶ್‌, ಉಪಾಧ್ಯಕ್ಷೆ ಧನಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು. 2005, ಅ. 2ರಂದು ದ. ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಸ್ವತ್ಛತಾ ಆಂದೋಲನಕ್ಕೆ […]