ಸ್ಕೂಟರಿಗೆ ಅಪರಿಚಿತ ದ್ವಿಚಕ್ರ ವಾಹನ ಹಿಟ್ ಎಂಡ್ ರನ್, ತಲೆಗೆ ಗಾಯಗೊಂಡಿದ್ದ ಸವಾರ ಸಾವು

Tuesday, September 1st, 2020
Scooter hit

ಬಂಟ್ವಾಳ: ಬಿ.ಸಿ.ರೋಡು ಸರ್ಕಲ್ ಬಳಿಯಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ವಾಹನವನ್ನು ಮೆಲ್ಕಾರ್ ಟ್ರಾಫಿಕ್ ಠಾಣಾ ಎಸ್. ಐ.ರಾಜೇಶ್ ಕೆ.ವಿ.ನೇತೃತ್ವದ ತಂಡ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ವಾಹನ ಚಾಲಕನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಸೋಮವಾರ ಸಂಜೆ ನಡೆದ ಹಿಟ್ ಎಂಡ್ ರನ್ ಪ್ರಕರಣದಲ್ಲಿ ಗಂಭೀರ ಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದ್ವಿಚಕ್ರ ವಾಹನ ಸವಾರ ಪ್ರಕಾಶ್ ಆರ್. ಚೌಟ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ವೇಳೆ ಬಿ.ಸಿ.ರೋಡು […]

ದ್ವಿಚಕ್ರ ವಾಹನ ಕಳ್ಳತನ ಮಾಡುವ ವ್ಯಕ್ತಿ ಬಂಧನ

Saturday, January 18th, 2020
cheluvayya

ಮೈಸೂರು : ಮೈಸೂರು ನಗರ ಸಿ.ಸಿ.ಬಿ. ಪೊಲೀಸರು ಮಾಹಿತಿ ಮೇರೆಗೆ 16.01.2020 ರಂದು ಹೂಟಗಳ್ಳಿ, ಎಸ್.ಆರ್.ಎಸ್. ಕಾಲೋನಿಯ ಕೆ.ಇ.ಬಿ. ಕಛೇರಿಯ ಬಳಿ ಕಾರ್ಯಾಚರಣೆ ನಡೆಸಿ, ದ್ವಿಚಕ್ರ ವಾಹನ ಕಳ್ಳತನ ಮಾಡುವ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಮಹದೇವ ಬಿನ್ ಚೆಲುವಯ್ಯ,( 22), ಲಕ್ಷ್ಮಿಪುರ ಗ್ರಾಮ, ಕೆ.ಆರ್.ನಗರ ಮೈಸೂರು ಜಿಲ್ಲೆ ಎಂದು ಗುರುತಿಸಲಾಗಿದ್ದು, ಈತನನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಲಾಗಿ, ಈತ ಮೈಸೂರು ನಗರ, ಮೈಸೂರು ಜಿಲ್ಲೆ, ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನಿಂದ 6,00,000ರೂ. ಮೌಲ್ಯದ ವಿವಿಧ […]

ದ್ವಿಚಕ್ರ ವಾಹನಗಳ ಢಿಕ್ಕಿ ; ಸವಾರಿಬ್ಬರು ಮೃತ್ಯು

Wednesday, January 15th, 2020
Mani Accident

ಬಂಟ್ವಾಳ: ದ್ವಿಚಕ್ರ ವಾಹನಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಸವಾರಿಬ್ಬರು ಮೃತಪಟ್ಟು, ಸಹಸವಾರೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ಮಂಗಳವಾರ ಸಂಭವಿಸಿದೆ. ಕಲ್ಲಡ್ಕ ಶಾಲಾಬಳಿ ನಿವಾಸಿ ಕರೀಂ ಎಂಬವರ ಪುತ್ರ ಮುಹಮ್ಮದ್ ಅಜ್ಮಲ್(19), ಮಾಣಿ ಬರೆನೆಕ್ಕರೆ ನಿವಾಸಿ ಮೋನಪ್ಪ ಪೂಜಾರಿ ಎಂಬವರ ಪುತ್ರ ಪರೀಕ್ಷಿತ್ (19) ಮೃತಪಟ್ಟ ದ್ವಿಚಕ್ರ ವಾಹನ ಸವಾರರಾಗಿದ್ದು, ಸ್ಥಳೀಯ ನಿವಾಸಿ, ಸಹಸವಾರ ಪದ್ಮನಾಭ ಗೌಡ (28) ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಪರೀಕ್ಷಿತ್ ಹಾಗೂ […]

ಹೆದ್ದಾರಿಯಯಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ ಮಹಿಳೆ ಮೃತ್ಯು

Wednesday, November 27th, 2019
priya suvarna

ಮಂಗಳೂರು : ಕುಂಟಿಕಾನ ಹೆದ್ದಾರಿಯ ಖಾಸಗಿ ಹೋಟೆಲ್ ಸಮೀಪ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸ್ಥಳೀಯ ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ  ಬುಧವಾರ ನಡೆದಿದೆ. ಕಾವೂರು ನಿವಾಸಿ ಪ್ರಿಯಾ ಸುವರ್ಣ (42) ಮೃತರು ಎಂದು ಗುರುತಿಸಲಾಗಿದೆ. ಅವರು ದ್ವಿಚಕ್ರ ವಾಹನದಲ್ಲಿ ಮನೆಯಿಂದ ಕೆಪಿಟಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ರಸ್ತೆಗೆಸೆಯಲ್ಪಟ್ಟ ಪ್ರಿಯಾ ಸುವರ್ಣ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟರು […]

ದ್ವಿಚಕ್ರ ವಾಹನಕ್ಕೆ ಪಿಕಪ್ ಢಿಕ್ಕಿ: ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ಮೃತ್ಯು

Wednesday, November 27th, 2019
Shariff

ಮಂಜೇಶ್ವರ : ದ್ವಿಚಕ್ರ ವಾಹನವೊಂದಕ್ಕೆ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಆರಿಕ್ಕಾಡಿ ಕುನ್ನಿಲ್ ನಿವಾಸಿ ಅಬೂಬಕರ್ ಎಂಬವರ ಪುತ್ರ ಮುಹಮ್ಮದ್ ಶರೀಫ್ (34) ಮೃತಪಟ್ಟವರು. ಮುಹಮ್ಮದ್ ಶರೀಫ್ ಮಂಗಳವಾರ ಬೆಳಗ್ಗೆ ಪತ್ನಿ ಮನೆಯಿಂದ ಸ್ಕೂಟರ್‌ನಲ್ಲಿ ನಾದಿನಿ ಮುನೀರಾ(19) ಎಂಬವರನ್ನು ಕರೆದುಕೊಂಡು ಬಂದ್ಯೋಡಿನತ್ತ ತೆರಳುತ್ತಿದ್ದ ವೇಳೆ ಅಡ್ಕ ಒಳಯಂ ಬಳಿ ಪಿಕಪ್ ವಾಹನ ಢಿಕ್ಕಿ ಹೊಡೆದಿದೆ. ಅಪಘಾತದಿಂದ ಗಂಭೀರ ಗಾಯಗೊಂಡಿದ್ದ […]

ವಿಟ್ಲ : ದ್ವಿಚಕ್ರ ವಾಹನ ಜೊತೆ ಸೇತುವೆಯಿಂದ ನದಿಗೆ ಬಿದ್ದು ಯುವಕ ಮೃತ್ಯು

Wednesday, November 6th, 2019
Vitla

ವಿಟ್ಲ : ಯುವಕನೋರ್ವ ದ್ವಿಚಕ್ರ ವಾಹನ ಜೊತೆ ಸೇತುವೆಯಿಂದ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕಸಬಾ ಗ್ರಾಮದ ನೆಲ್ಲಿಗುಡ್ಡೆಯಲ್ಲಿ ನಡೆದಿದೆ. ಮಡಿಕೇರಿ ನಿವಾಸಿಯಾಗಿರುವ ಸುನಿಲ್ ಮೃತ ದುರ್ದೈವಿ. ವಿಟ್ಲ ಕಸಬಾ ಗ್ರಾಮದ ನೆಲ್ಲಿಗುಡ್ಡೆಯ ಬಂಧುಗಳ ಮನೆಗೆ ಬಂದಿದ್ದ ಯುವಕ ಸುನಿಲ್, ದ್ವಿಚಕ್ರ ವಾಹನದಲ್ಲಿ ಸೇತುವೆಯ ಮೇಲೆ ಸಂಚರಿಸುವಾಗ ಆಕಸ್ಮಿಕವಾಗಿ ನದಿಗೆ ಬಿದ್ದಿರಬೇಕೆಂದು ಊಹಿಸಲಾಗಿದೆ. ಸೇತುವೆ ನಿರ್ಮಾಣ ಹಂತದಲ್ಲಿದ್ದು, ಇನ್ನೂ ತಡೆಗೋಡೆ ಕಾಮಗಾರಿ ಬಾಕಿಯಿದೆ. ರಾತ್ರಿ ಹೊತ್ತಿನಲ್ಲಿ ಸೇತುವೆ ಗಮನಕ್ಕೆ ಬರದೆ ಈ ಅಪಘಾತ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಈತ […]

ದ್ವಿಚಕ್ರ ವಾಹನಕ್ಕೆ ಜೀಪ್‌‌ ಡಿಕ್ಕಿ ಹೊಡೆದ ಪರಿಣಾಮ ಯುವಕ ಸಾವು!

Wednesday, June 20th, 2018
accident

ಮಂಗಳೂರು: ದ್ವಿಚಕ್ರ ವಾಹನಕ್ಕೆ ಜೀಪ್‌‌ ಡಿಕ್ಕಿ ಹೊಡೆದ ಪರಿಣಾಮ ಯುವಕ ಮೃತಪಟ್ಟ ಘಟನೆ ವಿಟ್ಲ ಸಮೀಪದ ಕೊಡಂಗಾಯಿ ಬಳಿ ಸಂಭವಿಸಿದೆ. ಪಳಿಕೆ ನಿವಾಸಿ ಮಹಮ್ಮದ್ ಸಫ್ವಾನ್(18) ಮೃತ ವಾಹನ ಸವಾರ. ಸಫ್ವಾನ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಜೀಪ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಕಳ್ಳತನ ಮಾಡಿ ದ್ವಿಚಕ್ರ ವಾಹನವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ

Saturday, February 4th, 2017
Barke

ಮಂಗಳೂರು: ಕಳ್ಳತನ ಮಾಡಿ ದ್ವಿಚಕ್ರ ವಾಹನವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ಗದಗ ತಾಲೂಕು ಶಿರಹಟ್ಟಿಯ ಸುರೇಶ ಭಜಂತ್ರಿ (21) ಮತ್ತು ಫಕಿರೇಶ ಈಳಿಗೇರ (23) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಹೀರೋ ಫ್ಯಾಶನ್ ಪ್ರೋ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆ ಬಿಜೈನ ಕೆಎಸ್‌‌‌ಆರ್‌‌ಟಿಸಿ ಬಸ್ ಸ್ಟಾಂಡ್ ಸಮೀಪ ವಾಹನ ಮಾರಾಟಕ್ಕೆ ಯತ್ನಿಸುತ್ತಿದ್ದ ಖಚಿತ ಸುಳಿವಿನ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಲೆತ್ನಿಸಿದರು. ಈ ಸಂದರ್ಭ ಇವರನ್ನು ವಶಕ್ಕೆ […]

ಹೈಬ್ರಿಡ್ ಬೈಕ್ ವಿದ್ ಟು ವೀಲ್ ಡ್ರೈವ್ ಕರಾವಳಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಅಪೂರ್ವ ಸಾಧನೆ

Friday, June 13th, 2014
Karavali College

ಮಂಗಳೂರು : ನಗರದ ನೀರುಮಾರ್ಗದಲ್ಲಿರುವ ಪ್ರತಿಷ್ಠಿತ ಕರಾವಳಿ ಇನ್ಸ್ಪಿಟ್ಯೂಟ್ ಆಫ್ ಟೆಕ್ನಾಲಜಿಯ ಅಂತಿಮ ವರ್ಷ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಸುಬಿನ್ ಡಿ ತಂಬಿ ಹಾಗೂ ಅನಜು ಐಸಾಕ್ ಇವರು, ಪ್ರೋ. ಪಿ. ರಮೇಶ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ವಿಶಿಷ್ಟ ರೀತಿಯ ಆಧುನಿಕ ದ್ವಿಚಕ್ರ ವಾಹನ ‘ಹೈಬ್ರಿಡ್ ಬೈಕ್ ವಿದ್ ಟು ವೀಲ್ ಡ್ರೈವ್’ವನ್ನು ನಿರ್ಮಿಸುವ ಮೂಲಕ ದ್ವಿಚಕ್ರ ವಾಹನಗಳ ಯುಗದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದ್ದಾರೆ. ಈ ದ್ವಿಚಕ್ರ ವಾಹನದಲ್ಲಿ ಗ್ರಾಹಕರಿಗೆ ಎರಡು ಆಯ್ಕೆಗಳಿದ್ದು, ಇದು ಪೆಟ್ರೋಲ್ […]

ಆ್ಯಕ್ಟಿವಾ ನಿಯಂತ್ರಣ ತಪ್ಪಿ ಬಸ್ಸಿನ ಹಿಂಬದಿಗೆ ಡಿಕ್ಕಿ ಮಹಿಳೆ ಸಾವು

Wednesday, November 6th, 2013
hoige-bazar

ಮಂಗಳೂರು: ಬಸ್‍ನ ಹಿಂಬದಿಗೆ ಆ್ಯಕ್ಟಿವಾ ಹೊಂಡಾ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಸವಾರೆ ಮೃತಪಟ್ಟ ಘಟನೆ ನಿನ್ನೆ ಬೆಳಿಗ್ಗೆ ಹೊೈಗೆಬಜಾರ್‍ನಲ್ಲಿ ನಡೆದಿದೆ. ಮೃತರನ್ನು ಹೊೈಗೆ  ಬಜಾರ್ ನಿವಾಸಿ ವಿಜಯಲಕ್ಷ್ಮಿ(55) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಬೆಳಿಗ್ಗೆ ತನ್ನ ಪತಿಯೊಂದಿಗೆ ಆ್ಯಕ್ಟಿವಾದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆ್ಯಕ್ಟಿವಾ ನಿಯಂತ್ರಣ ತಪ್ಪಿ ಬಸ್ಸೊಂದರ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಆಗ ವಿಜಯಲಕ್ಷ್ಮಿ ಬಸ್ಸಿನ ಹಿಂಬದಿ ಚಕ್ರದ ಅಡಿಗೆ ಬಿದ್ದಿದ್ದು, ಇದರಿಂದಾಗಿ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು […]