ಪರಿಶೀಲನೆ ಬಳಿಕ ಶಿರಾಡಿಘಾಟ್ ವಾಹನ ಸಂಚಾರ ನಿಷೇಧ ತೀರ್ಮಾನ

Wednesday, January 19th, 2022
Nalin Kumar Kateel

ಮಂಗಳೂರು : ರಸ್ತೆ ಕಾಮಗಾರಿಗಾಗಿ ಶಿರಾಡಿಘಾಟ್ ವಾಹನ ಸಂಚಾರ ನಿಷೇಧ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ  ಪ್ರಾಧಿಕಾರ ಮಾಡಿರುವ ಪ್ರಸ್ತಾವನೆ ಬಗ್ಗೆ ತಕ್ಷಣ ನಿರ್ಣಯ ಕೈಗೊಳ್ಳುವಂತಿಲ್ಲ. ದ.ಕ.ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳಬೇಕೆಂದು ಸಂಸದ ನಳಿನ್‌ಕುಮಾರ್ ಕಟೀಲ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬಹುದೆಂದು ರಾಷ್ಟ್ರೀಯ ಹೆದ್ದಾರಿ  ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸಲು ಶಿರಾಡಿಘಾಟ್ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಆರು […]

ದಕ್ಷಿಣ ಕನ್ನಡದಲ್ಲಿ ಇಳಿಯದ ಕೋವಿಡ್ ಸೋಂಕಿನ ಪ್ರಮಾಣ, ಲಾಕ್‌ ಡೌನ್ ನಿಯಮ ಮತ್ತಷ್ಟು ಕಠಿಣ

Monday, June 7th, 2021
KV Rajendra

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಪ್ರಸ್ತುತ ಕೊರೋನ ಸೋಂಕಿನ ದರ ಶೇ. 20ರಿಂದ 21ರಷ್ಟಿದ್ದು ಸರಕಾರದ ಆದೇಶದಂತೆ ಜೂ. 14ರವರೆಗೂ ಪ್ರಸ್ತುತ ಜಾರಿಯಲ್ಲಿರುವ ಲಾಕ್‌ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಕೊರೋನ ಸೋಂಕಿನ ದರ ಶೇ. 5ಕ್ಕೆ ಇಳಿಸಿ ಅನ್‌ ಲಾಕ್‌ ಗೊಳಿಸುವಲ್ಲಿ ಜನರ ಸಹಕಾರ ಅಗತ್ಯವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಹೇಳಿದ್ದಾರೆ. ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳಿರುವ ಗ್ರಾಪಂಗಳಲ್ಲಿ ಪೂರ್ವ ನಿಗದಿತ ಮದುವೆ ಹಾಗೂ ಇತರ ಕಾರ್ಯಕ್ರಮಗಳನ್ನು ರದ್ದು […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ14 ದಿನಗಳ ಲಾಕ್‌ಡೌನ್-ಕರ್ಫ್ಯೂನಲ್ಲಿ ಜನ ಹೇಗಿರಬೇಕು ಇಲ್ಲಿದೆ ನೋಡಿ ವಿವಿರ !

Tuesday, April 27th, 2021
DC

ಮಂಗಳೂರು : ರಾಜ್ಯಾದ್ಯಂತ ಏಪ್ರಿಲ್ 27 ರಿಂದ ಬೆಳಗ್ಗೆ 10 ರಿಂದ ಮರುದಿನ  ಮುಂಜಾನೆ 6 ಗಂಟೆಯವರೆಗೆ ಪ್ರತಿದಿನ 20 ಗಂಟೆ ಲಾಕ್‌ಡೌನ್-ಕರ್ಫ್ಯೂ ವಿಧಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10ರವರೆಗೆ ಅವಕಾಶ ಕಲ್ಪಿಸಲಾಗಿದೆ. ತುರ್ತು ಆರೋಗ್ಯ ಸೇವೆ, ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮತ್ತು ಪರೀಕ್ಷೆಗಳಲ್ಲಿ ಹಾಜರಾಗಲು ಪೂರಕ ದಾಖಲೆಪತ್ರಗಳೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ದ.ಕ.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 14 ದಿನಗಳ ಕಾಲ ಕರ್ಪ್ಯೂ […]

ದ.ಕ.ಜಿಲ್ಲೆಯಲ್ಲಿ ಶುಕ್ರವಾರ 256 ಮಂದಿಗೆ ಕೊರೋನ ಪಾಸಿಟಿವ್

Friday, April 16th, 2021
Corona

ಮಂಗಳೂರು :  ದ.ಕ.ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಿದ್ದು ಶುಕ್ರವಾರ 256 ಮಂದಿಗೆ ಕೊರೋನ ಪಾಸಿಟಿವ್ ಆಗಿದೆ. ಕಳೆದ 48 ಗಂಟೆಗಳ ಅವಧಿಯಲ್ಲಿ ಪರೀಕ್ಷೆ ಮಾಡಿದವರ ಪೈಕಿ 256 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈ ಏರಿಕೆಯು ಆತಂಕಕ್ಕೂ ಕಾರಣವಾಗಿದೆ. ಶುಕ್ರವಾರ ಜಿಲ್ಲೆಯಲ್ಲಿ 92 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 37,562 ಮಂದಿ ಕೊರೋನ ಸೋಂಕಿಗೊಳಗಾಗಿದ್ದು, ಈ ಪೈಕಿ 35,405 ಮಂದಿ ಗುಣಮುಖರಾಗಿದ್ದಾರೆ. ಸದ್ಯ 1,414 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಕಾನ್ವೆಂಟ್‌ವೊಂದರಲ್ಲಿ […]

ಕೊರೊನಾ ನಿಯಂತ್ರಣಕ್ಕೆ ಸ್ವಯಂ ನಿಗಾ ಅನಿವಾರ್ಯ :  ದ.ಕ. ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್

Friday, March 20th, 2020
sindhu b roopesh

ಮಂಗಳೂರು :  ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರು ಸ್ವಯಂ ನಿಗಾ ಅಳವಡಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊರೊನಾ ವೈರಾಣು ಅತಿ ವೇಗವಾಗಿ ಹಬ್ಬುತ್ತದೆ. ಇದಕ್ಕೆ ತಕ್ಕ ಜನಸಾಮಾನ್ಯರು ಮುನ್ನೆಚ್ಚರಿಕೆ […]

ದ.ಕ ಜಿಲ್ಲಾಧಿಕಾರಿಯವರ ವಾಹನ, ಚರ ವಸ್ತುಗಳನ್ನು ಜಪ್ತಿ ಮಾಡುವಂತೆ ಕೋರ್ಟ್ ಆದೇಶ

Thursday, January 24th, 2019
DK DC

ಮಂಗಳೂರು: ದಕ್ಷಿಣ ಕನ್ನಡ  ಜಿಲ್ಲಾಧಿಕಾರಿಯವರ ವಾಹನ, ಕಚೇರಿಯ ಚರ ವಸ್ತುಗಳನ್ನು ಜಪ್ತಿ ಮಾಡುವಂತೆ ಪುತ್ತೂರು ಪ್ರಧಾನ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ. ಪುತ್ತೂರು ತಾಲೂಕು ಕಬಕ ವಿದ್ಯಾಪುರ ಸರ್ಕಾರಿ ಶಾಲೆಯಲ್ಲಿ 2010 ಮಾರ್ಚ್ 4 ರಂದು ಅಕ್ಷರ ದಾಸೋಹ ಕಟ್ಟಡದ ಲಿಂಟೆಲ್(ಕಿಟಕಿಯ ಕಲ್ಲು ಹಾಸು) ಬಿದ್ದು 9 ನೇ ತರಗತಿ ವಿದ್ಯಾರ್ಥಿ ಶಾರುಕ್ ಖಾನ್ ಮೃತಪಟ್ಟಿದ್ದ. ಈ ಬಗ್ಗೆ ಬಾಲಕನ ತಂದೆ ಅಬ್ದುಲ್ ಖಾದರ್ ಅವರು ಪರಿಹಾರ ಕೋರಿ ಸರ್ಕಾರಿ ಶಾಲೆ ಮತ್ತು ಗುತ್ತಿಗೆದಾರರ ವಿರುದ್ಧ ನ್ಯಾಯಾಲಯದಲ್ಲಿ ದಾವೆ […]

‘ಮೇ 10ರ ಸಂಜೆ 6ರ ಬಳಿಕ ‘ಹೊರಗಿನವರು’ ಕ್ಷೇತ್ರ ವ್ಯಾಪ್ತಿಯಲ್ಲಿರುವಂತಿಲ್ಲ’

Monday, May 7th, 2018
election

ಮಂಗಳೂರು: ಮತದಾನ ಪ್ರಕ್ರಿಯೆ ಮುಗಿಯುವ 48 ಗಂಟೆಗೆ ಮುನ್ನ ಅಂದರೆ ಮೇ 10ರ ಸಂಜೆ 6 ಗಂಟೆಯ ಬಳಿಕ ಹೊರಗಿನ ಯಾವೊಬ್ಬ ಚುನಾವಣಾ ತಾರಾ ಪ್ರಚಾರಕ, ಕ್ಷೇತ್ರದ ಮತದಾರರಲ್ಲದ ಕಾರ್ಯಕರ್ತರು, ಪಕ್ಷದ ನಾಯಕರು ಜಿಲ್ಲೆಯ ಯಾವೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವಂತಿಲ್ಲ. ಎಲ್ಲರೂ ಕ್ಷೇತ್ರ ಬಿಟ್ಟು ಸ್ವಸ್ಥಾನ ಸೇರಬೇಕು. ನಿಗದಿತ ಸಮಯದ ಬಳಿಕ ಹೊರಗಿನ ಪ್ರಚಾರಕ ಸಹಿತ ಕ್ಷೇತ್ರ ವ್ಯಾಪ್ತಿಯಲ್ಲದವರಿಗೆ ವಸತಿ ವ್ಯವಸ್ಥೆ ಕಲ್ಪಿಸದಂತೆ ಹೊಟೇಲ್, ಛತ್ರ, ವಸತಿಗೃಹದ ಮಾಲಕರಿಗೆ ಸೂಚಿಸಲಾಗಿದೆ. ಈ ಸೂಚನೆ ಮೀರಿ ಜಿಲ್ಲೆಯಲ್ಲಿ ಉಳಕೊಂಡರೆ […]

ದ.ಕ ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌, ಪೊಲೀಸ್‌ ಆಯುಕ್ತ ಮನೀಷ್‌ ಕರ್ಬೀಕರ್‌ ವರ್ಗಾವಣೆ

Friday, December 13th, 2013
prakash Khabikar

ಮಂಗಳೂರು : ಸರಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌ ಹಾಗೂ ಮಂಗಳೂರು ಪೊಲೀಸ್‌ ಆಯುಕ್ತ ಮನೀಷ್‌ ಕರ್ಬೀಕರ್‌ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಎನ್‌. ಪ್ರಕಾಶ್‌ ಅವರು ದ.ಕ. ಜಿಲ್ಲಾಧಿಕಾರಿಯಾಗಿ 2012ರ ಡಿಸೆಂಬರ್‌ 3ರಂದು ಅಧಿಕಾರ ಸ್ವೀಕರಿಸಿದ್ದರು. ಅವರು ಕಾರ್ಮಿಕ ಆಯುಕ್ತರಾಗಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಕರ್ಬೀಕರ್‌ ಅವರು 2012 ಸೆ. 20ರಂದು ಮಂಗಳೂರು ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರನ್ನು ಬೆಂಗಳೂರಿಗೆ ಕೆಎಸ್‌ಆರ್‌ಪಿ ಐಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಅವರಿಂದ ತೆರವಾದ ಮಂಗಳೂರು ಪೊಲೀಸ್‌ ಆಯುಕ್ತ ಹುದ್ದೆಗೆ […]

ವಿವಿಧ ಹಿಂದೂ ಸಂಘಟನೆಗಳಿಂದ ಮತಾಂತರದ ವಿರುದ್ಧ ಪ್ರತಿಭಟನೆ

Sunday, April 10th, 2011
ವಿವಿಧ ಹಿಂದೂ ಸಂಘಟನೆಗಳಿಂದ ಮತಾಂತರದ ವಿರುದ್ಧ ಪ್ರತಿಭಟನೆ

ಮಂಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಇನ್ನಿತರ ಹಿಂದೂ ಸಂಘಟನೆಗಳು, ಮತಾಂತರದ ವಿರುದ್ಧ ಶನಿವಾರ ದ.ಕ ಜಿಲ್ಲಾಧಿಕಾರಿ ಕಚೇರಿಯ  ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮತಾಂತರದ ವಿರದ್ಧ ಕೂಡಲೇ ಕ್ರಮ ಜರಗಿಸುವಂತೆ ಮನವಿ ಸಲ್ಲಿಸಿತು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ  ಬಡ ಹಿಂದೂ ಕುಟುಂಬಗಳ ಎಳೆಯ ಮಕ್ಕಳಿಗೆ ಉಚಿತ ಸೌಲಭ್ಯ ನೀಡುವ  ಆಮಿಷದ ಮೂಲಕ ಕ್ರೈಸ್ತ ಮಿಶನರಿಗಳು ಮತಾಂತರ ಕಾರ್ಯವನ್ನು ಮಾಡುತ್ತಿದೆ. ಕರಾವಳಿ ಜಿಲ್ಲೆಯಲ್ಲಿ 40ಕ್ಕೂ ಮಿಕ್ಕಿದ ಮತಾಂತರ ಕೇದ್ರಗಳು […]