ಎರೆಡಲ ಪನೆರೆ ಪೋವೊಡ್ಚಿ, ಪೊಸ ಟೀಮು ಮಲ್ಪುವ : ನಳಿನ್ ಕುಮಾರ್ ಕಟೀಲ್ ಆಡಿಯೋ ವೈರಲ್

Monday, July 19th, 2021
nalin kumar kateel

ಮಂಗಳೂರು  :  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಳಿನ್ ಕುಮಾರ್ ಅವರು, ” ಆ ಧ್ವನಿ ನನ್ನದಲ್ಲ, ಈ ಬಗ್ಗೆ ತನಿಖೆ ನಡೆಸಲು ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ. ಆಡಿಯೋದಲ್ಲಿ ತುಳುವಿನಲ್ಲಿ ‘ಎರೆಡಲ ಪನೆರೆ ಪೋವೊಡ್ಚಿ.  ಈಶ್ವರಪ್ಪ , ಜಗದೀಶ್ ಶೆಟ್ಟರ್ ಟೀಮುನೇ ದೆಪ್ಪುವ, ಪೊಸ ಟೀಮು ಮಲ್ಪುವ, ಇತ್ತೇ ಪುರ ನಮ್ಮ ಕೈಟ್ ಉಂಡು, ಮೂಜಿ ಪುದರ್ ವುಂಡು ಎಂದು […]

ಜನರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಬದಲು ಕಾಂಗ್ರೆಸ್ಸಿಗರು ಭಯ ಮೂಡಿಸುತ್ತಿದ್ದಾರೆ : ನಳಿನ್‌ ಕುಮಾರ್

Thursday, July 23rd, 2020
nalinKumar

ಮಂಗಳೂರು :  ಕೊರೊನಾ ಸಂದರ್ಭದಲ್ಲಿ ಜನರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸವನ್ನು ನಾವು ಜನಪ್ರತಿನಿಧಿಗಳು ಮಾಡಬೇಕಿದೆ. ಅದು ಬಿಟ್ಟು ಕಾಂಗ್ರೆಸ್ಸಿಗರು ರಾಜಕಾರಣ ಮಾಡಲು ಹೊರಟಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ‌ ಜನರನ್ನು ಆತಂಕಕ್ಕೀಡುಮಾಡುವ ಕೆಲಸವನ್ನು ಮೊದಲು ನಿಲ್ಲಿಸಲಿ. ಎಲ್ಲರೂ ಒಟ್ಟಾಗಿ ಕೊರೋನಾ ವಿರುದ್ಧದ ಸಮರ ಗೆಲ್ಲುವುದು ನಮ್ಮೆಲ್ಲರ ಗುರಿಯಾಗಲಿ ಎಂದು ನಳಿನ್‌ ಕುಮಾರ್‌ ಕಟೀಲ್  ಟ್ವೀಟ್‌ ಮೂಲಕ  ಹೇಳಿದ್ದಾರೆ. ಕೊರೋನಾದಿಂದ ಹಾದಿಬೀದಿಯಲ್ಲಿ ಜನ ಸಾಯುತ್ತಿದ್ದಾರೆ ಎಂದು ಹಸಿ ಸುಳ್ಳು ಹಳಿ ಜನರಲ್ಲಿ ಅನಗತ್ಯ ಆತಂಕ ಸೃಷ್ಟಿಸುವ ಕೆಲಸದಲ್ಲಿ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ. ಕಾಮಾಲೆ […]

ಮೊಟ್ಟೆ, ಮ್ಯಾಗಿಗೆ ಪ್ರಧಾನಿ ಕಚೇರಿಗೆ ಟ್ವೀಟ್​​ , ನಳಿನ್ ಕುಮಾರ್ ವಾರ್ ರೂಮ್ ನಿಂದ ಅರ್ಧ ಗಂಟೆಯೊಳಗೆ ಪೂರೈಕೆ

Saturday, April 4th, 2020
maagi tweet

ಮಂಗಳೂರು: ಭಾರತ ಸಂಪೂರ್ಣ ಲಾಕ್ ಡೌನ್ ಆಗಿರುವ ಕಾರಣ ಹಾಸ್ಟೆಲ್ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ಕಚೇರಿಗೆ ಟ್ವೀಟ್ ಮಾಡಿ ಮೊಟ್ಟೆ, ಮ್ಯಾಗಿಗೆ ಬೇಡಿಕೆ ಇಟ್ಟಿದ್ದಾಳೆ. ಬೇಡಿಕೆ ಇಟ್ಟ ಅರ್ಧ ಗಂಟೆಯಲ್ಲಿ ಆಕೆಯ ಹಾಸ್ಟೆಲ್ ಬಾಗಿಲಿಗೆ ಮೊಟ್ಟೆ ಹಾಗೂ ಮ್ಯಾಗಿ ತಲುಪಿದ  ಘಟನೆ ಮಂಗಳೂರಿನಲ್ಲಿ‌ ನಡೆದಿದೆ. ಪ್ರಧಾನಿ ಕಚೇರಿಗೆ ಟ್ವೀಟ್ ಮಾಡಿ ಮೊಟ್ಟೆ, ಮ್ಯಾಗಿಗೆ ಬೇಡಿಕೆಮಂಗಳೂರಿನ ಹಾಸ್ಟೆಲೊಂದರಲ್ಲಿ ಇರುವ ಉತ್ತರ ಪ್ರದೇಶ ಮೂಲದ ಸೌಮ್ಯಾ ಸಿಂಗ್ ಎಂಬ ವಿದ್ಯಾರ್ಥಿನಿ ಮೊಟ್ಟೆ ಮತ್ತು ಮ್ಯಾಗಿಗೆ ಬೇಡಿಕೆ ಇಟ್ಟು ಟ್ವೀಟ್ ಮಾಡಿದ್ದಳು. ಆಕೆ […]

ಮಾಜಿ ಸಿಎಂ ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ : ನಳಿನ್ ಕುಮಾರ್ ಕಟೀಲ್ ಟೀಕೆ

Saturday, November 30th, 2019
nalin-kumar

ಮಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆ ಸಂದರ್ಭ ನಾನೇ ಸಿಎಂ ಎಂದರು. ಕುಮಾರಸ್ವಾಮಿಯ ನಿರ್ಗಮನದ ಬಳಿಕ ಮತ್ತೆ ಅದನ್ನೇ ಹೇಳುತ್ತಿದ್ದಾರೆ. ಆದರೆ, ಅವರ ಗ್ರಹಚಾರ ಸರಿಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದರು. ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ನಳಿನ್ ಕಾಂಗ್ರೆಸ್ ಬುಗರಿ ಆಡಿಸಿದರೆ ನಾವು ಚಕ್ರ ತಿರುಗಿಸುತ್ತೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಒಂದಾಗಿದ್ದಾರೆ. ಚುನಾವಣೆ ಬಳಿಕ ಕೈ-ದಳ […]

ಡಿ.ವಿ ಸದಾನಂದ ಗೌಡರ ನಿವಾಸಕ್ಕೆ ಭೇಟಿ ನೀಡಿದ ನಳಿನ್ ಕುಮಾರ್

Thursday, September 5th, 2019
DV-sadananda

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಗುರುವಾರ ಬೆಂಗಳೂರಿನಲ್ಲಿರುವ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಳಿನ್ ಕುಮಾರ್ ರವರನ್ನು ಡಿ.ವಿ ಸದಾನಂದರವರು ಅಭಿನಂಧಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀ ದಶರಥ ಉಪಸ್ಥಿತರಿದ್ದರು.    

ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಇಂದು ಮಂಗಳೂರಿಗೆ ಆಗಮನ

Thursday, August 29th, 2019
nalin-kumar

ಮಂಗಳೂರು : ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಂಗಳವಾರ ಬೆಂಗಳೂರಿ ನಲ್ಲಿ ಅಧಿಕಾರ ಸ್ವೀಕರಿಸಿದ ಅನಂತರ ನಳಿನ್‌ ಕುಮಾರ್‌ ಕಟೀಲು ಅವರು ಇದೇ ಮೊದಲ ಬಾರಿಗೆ ಆ.29ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಅವರನ್ನು ಸ್ವಾಗತಿಸಲು ದ.ಕ. ಬಿಜೆಪಿ ಸರ್ವ ಸಿದ್ಧತೆ ನಡೆಸಿದೆ. ಬೆಳಗ್ಗೆ 9 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ನಳಿನ್‌ ಕುಮಾರ್‌ ಕಟೀಲು ಅವರನ್ನು ದ.ಕ. ಜಿಲ್ಲಾ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸ್ವಾಗತಿಸಿ ವಾಹನಗಳ ಮೆರವಣಿಗೆ ಮೂಲಕ ನಗರಕ್ಕೆ ಕರೆತರಲಿದ್ದಾರೆ. ಸುಮಾರು 500ರಷ್ಟು ವಾಹನಗಳು ಮೆರವಣಿಗೆಯಲ್ಲಿ […]

ನಳಿನ್‌ ಕುಮಾರ್ ಪದಗ್ರಹಣದಲ್ಲಿ ದ.ಕದಿಂದ 2,500ಕ್ಕೂ ಅಧಿಕ ಕಾರ್ಯಕರ್ತರು

Tuesday, August 27th, 2019
nalin-kumar-kateel

ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಪದಗ್ರಹಣ ಸಮಾರಂಭವು ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ 2,500ಕ್ಕೂ ಅಧಿಕ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಂಗಳವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ. ನಳಿನ್‌ ಅವರು ಹಾಲಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಸಂಭ್ರಮದಲ್ಲಿ ದಕ್ಷಿಣ ಕನ್ನಡದಿಂದ 2,500ಕ್ಕೂ ಅಧಿಕ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸುತ್ತಿದ್ದಾರೆ. ಸುಮಾರು […]

ವೀರಪ್ಪ ಮೊಯ್ಲಿ ವಿಜಯ ಬ್ಯಾಂಕ್‌ ವಿಲೀನಕ್ಕೆ ಒಪ್ಪಿಗೆ ನೀಡಿದವರು : ನಳಿನ್‌ ಕುಮಾರ್‌

Tuesday, April 2nd, 2019
Nalin-Sullia

ಸುಳ್ಯ: ಯುಪಿಎ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಪ್ರಣವ್‌ ಮುಖರ್ಜಿ, ಚಿದಂಬರಂ ಅವರು ವಿಜಯ ಬ್ಯಾಂಕ್‌ ವಿಲೀನಕ್ಕೆ ಮುನ್ನುಡಿ ಬರೆದವರು. ಹಣಕಾಸು ಸಮಿತಿ ಅಧ್ಯಕ್ಷರಾಗಿದ್ದ ವೀರಪ್ಪ ಮೊಯ್ಲಿ ಅವರು ಇದಕ್ಕೆ ಒಪ್ಪಿಗೆ ನೀಡಿದವರು. ಆ ಅವಧಿಯಲ್ಲಿ ಜಿಲ್ಲೆಯ ಕಾಂಗ್ರೆಸಿಗರಿಗೆ ವಿಚಾರ ತಿಳಿದಿದ್ದರೂ ಯಾಕೆ ತಡೆದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ. ಹಿಂದಿನ ಸರಕಾರ ಪಾಸ್‌ ಮಾಡಿದ ಬಿಲ್‌ ಅನ್ನು ಬಳಿಕದ ಸರಕಾರ ಬದಲಾಯಿಸಲಾಗದು. ಇದರಲ್ಲಿ ಎನ್‌ಡಿಎ ಸರಕಾರದ ಪಾತ್ರವಿಲ್ಲ ಎಂದರು. ಬ್ಯಾಂಕ್‌ ವಿಲೀನ ಪ್ರಕ್ರಿಯೆ […]

ವಿಜಯ ಬ್ಯಾಂಕ್ ಇನ್ನಿಲ್ಲದಂತೆ ಮಾಡಿದ ನಳಿನ್ ಕುಮಾರ್‌ರನ್ನು ಜಿಲ್ಲೆಯ ಜನತೆ ಕ್ಷಮಿಸಲಾರರು : ಮಿಥುನ್ ರೈ

Monday, April 1st, 2019
Mithun Rai

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಸಮಿತಿ ವತಿಯಿಂದ ವಿಜಯಾ ಬ್ಯಾಂಕ್ – ಬ್ಯಾಂಕ್ ಆಫ಼್ ಬರೋಡಾ ಜೊತೆ ವಿಲೀನದ ವಿರುದ್ಧವಾಗಿ ಹಾಗೂ ಈ ವಿಲೀನವನ್ನು ವಿರೋದಿಸುವಲ್ಲಿ ಸಂಸದ ನಳಿನ್ ಕುಮಾರ್‍ ಕಟೀಲ್ ಅಸಮರ್ಪಕತೆಯನ್ನು ಖಂಡಿಸಿ “ಕರಾಳ ದಿನ” ಆಚರಿಸಲಾಯಿತು. ಈ ಸಂರ್ಭದಲ್ಲಿ ಮಾತನಾಡಿದ ಮಿಥುನ್ ರೈ ವಿಜಯಾ ಬ್ಯಾಂಕ್ ಕರಾವಳಿಯ ಹೆಮ್ಮೆಯ ಬ್ಯಾಂಕ್ , ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಬ್ಯಾಂಕ್ , ಗುಜರಾತ್ ಮೂಲದ ಬ್ಯಾಂಕ್ ಆಫ಼್ ಬರೋಡಾದೊಂದಿಗೆ ವಿಲೀನ ಮಾಡುವ ಸಂಧರ್ಭದಲ್ಲಿ […]

ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ‌ ಕೆಲಸವನ್ನು ಕೇಂದ್ರ ಸರ್ಕಾರದ ಪ್ರತಿನಿಧಿ ಮಾಡುತ್ತಿದ್ದಾರೆ: ರಮಾನಾಥ ರೈ

Wednesday, November 28th, 2018
ramanatha

ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಕೇಂದ್ರ ಸರ್ಕಾರ ಮತ್ತು ಲೋಕಸಭೆ ಚುನಾಯಿತ ಜನಪ್ರತಿನಿಧಿ ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದರು. ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರ ಇರುವಾಗ ಈ ಯೋಜನೆ ಪ್ರಾರಂಭವಾಗಿದ್ದು, ಎಲ್ಎನ್ಟಿ ಗುತ್ತಿಗೆದಾರ ಕಂಪೆನಿಯು ಈ ಕಾಮಗಾರಿಯನ್ನು ವಹಿಸಿಕೊಂಡಿತ್ತು. ರಸ್ತೆ ರಚನೆ ಮಾಡುವ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿದ್ದು, ಭೂಸ್ವಾಧೀನ‌ […]