ಬಿಬಿಎಂಪಿ ಮೇಯರ್ ಆಯ್ಕೆ : ಕನ್ನಡಪರ ಸಂಘಟನೆಗಳು ಬಿಜೆಪಿ ವಿರುದ್ಧ ಆಕ್ರೋಶ

Tuesday, October 1st, 2019
kannada-flag

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ಎಂ. ಗೌತಮ್ ಕುಮಾರ್ ಜೈನ್ ಆಯ್ಕೆಯಾದರು. ನೂತನ ಮೇಯರ್ ಆಯ್ಕೆ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಮಂಗಳವಾರ ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆ ನಡೆಯಿತು. ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜೋಗುಪಾಳ್ಯದ ಕಾರ್ಪೊರೇಟರ್ ಗೌತಮ್ ಕುಮಾರ್ ಜೈನ್ ಮೇಯರ್ ಆಗಿ ಆಯ್ಕೆಯಾದರು. ಕನ್ನಡಿಗರನ್ನು ಮೇಯರ್ ಆಗಿ ಆಯ್ಕೆ ಮಾಡಲು ಬಿಜೆಪಿ ವಿಫಲವಾಗಿದೆ. ಬೆಂಗಳೂರಿನ ಆಡಳಿತ ಮಾರ್ವಾಡಿಗಳ ಕೈಗೆ ಸಿಕ್ಕಿದೆ […]

ಉಪ್ಪಿನಂಗಡಿ : ಟ್ಯಾಂಕರ್‌ನ ಒಳಗೆ ಚಾಲಕನ ಮೃತದೇಹ ಪತ್ತೆ  

Saturday, September 21st, 2019
tyankar

ಉಪ್ಪಿನಂಗಡಿ : ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು – ಮಂಗಳೂರು ನಡುವಿನ ಕೆಂಪುಹೊಳೆ ಸಮೀಪ ಟಾರ್‌ ಅನ್ನು ಹೊತ್ತೂಯ್ಯುವ ಟ್ಯಾಂಕರ್‌ನಲ್ಲಿ ಚಾಲಕನ ಶವ ಪತ್ತೆಯಾದ ಘಟನೆ ನಡೆದಿದೆ. ಶುಕ್ರವಾರ ಮುಂಜಾನೆ 11ರ ಸುಮಾರಿಗೆ ಮಾರನಹಳ್ಳಿ ಕೆಂಪುಹೊಳೆಯಿಂದ 10 ಕಿ.ಮೀ. ದೂರದಲ್ಲಿ ಹೊಸೂರಿನಿಂದ ಮಂಗಳೂರಿಗೆ ಬರುತ್ತಿದ್ದ ಟ್ಯಾಂಕರ್‌ ನಿಂತಿರುವುದನ್ನು ಗಮನಿಸಿದ ಅದೇ ಕಂಪೆನಿಯ ಇನ್ನೋರ್ವ ಚಾಲಕ ಟ್ಯಾಂಕರ್‌ ಬಳಿ ಚಾಲಕನನ್ನು ಮಾತನಾಡಿಸುವ ಇರಾದೆಯಲ್ಲಿ ತೆರಳಿದಾಗ ಟ್ಯಾಂಕರ್‌ನಲ್ಲಿ ಚಾಲಕ ಕಂಡಿರಲಿಲ್ಲ. ಟ್ಯಾಂಕರ್‌ ಸುತ್ತ ಹುಡುಕಾಡಿದಾಗ ಟ್ಯಾಂಕರ್‌ನ ಮೇಲ್ಭಾಗದ ಮುಚ್ಚಳ ತೆಗೆದುಕೊಂಡಿದ್ದು […]

ತಲ್ವಾರ್ ಹಿಡಿದು ಕೊಲೆ ಯತ್ನ ಪ್ರಕರಣ..ಮೂವರ ಬಂಧನ!

Thursday, July 12th, 2018
arrested

ಮಂಗಳೂರು: ಜೂನ್ 11ರಂದು ಬಂಟ್ವಾಳ ಠಾಣಾ ವ್ಯಾಪ್ತಿಯ ಬಡ್ಡಕಟ್ಟೆಯಲ್ಲಿ ತಲವಾರು ಹಿಡಿದು ಯುವಕರ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಟ್ವಾಳ ತಾಲೂಕು ಬಿ ಕಸಬ ಗ್ರಾಮದ ಕಬ್ಬಿನ ಹಿತ್ಲು ಮನೆ ನಿವಾಸಿಗಳಾದ ಪ್ರದೀಪ್ (28), ತಿಲಕ್ (28) ಮತ್ತು ಬಿಷಪ್ ಕಂಪೌಂಡ್ ನಿವಾಸಿ ಮನೋಹರ್ (28) ಬಂಧಿತ ಆರೋಪಿಗಳು. ಜೂನ್ 11ರಂದು ಘಟನೆ ನಡೆದಿದ್ದು, ಪ್ರಕರಣದ ಮುಖ್ಯ ಆರೋಪಿಯಾಗಿದ್ದ ಸುರೇಂದ್ರ ಭಂಡಾರಿ , ಸತೀಶ್ ಕುಲಾಲ್ ಹಾಗೂ ಪೃಥ್ವಿರಾಜ್ ಜೆ ಶೆಟ್ಟಿ […]

ಬೆಂಗಳೂರು ನಗರದಲ್ಲಿ ನೀರು ಕೊಡುವ ನೂತನ ಎಟಿಎಂ ಉದ್ಘಾಟನೆ..!

Wednesday, June 27th, 2018
soumya-reddy

ಬೆಂಗಳೂರು: ನಗರದಲ್ಲಿ ನೀರು ಕೊಡುವ ನೂತನ ಎಟಿಎಂವೊಂದನ್ನು ಉದ್ಘಾಟನೆ ಮಾಡುವ ಮೂಲಕ ಹೊಸ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಲಾಯಿತು. ಜಯನಗರದ ಭೈರಸಂದ್ರದಲ್ಲಿ ಈ ನೀರು ಕೊಡುವ ಎಟಿಎಂ ಅನ್ನು ಶಾಸಕ ರಾಮಲಿಂಗಾರೆಡ್ಡಿ ಇಂದು ಸಾರ್ವಜನಿಕರಿಗಾಗಿ ಲೋಕಾರ್ಪಣೆಗೊಳಿಸಿದರು. ಎಟಿಎಂ ಕಾರ್ಡ್ ಇನ್ಸರ್ಟ್ ಮಾಡಿದ್ರೆ ಸಾಕು ನೀರು ಅಂತ ಬಂದವರಿಗೆ ದಾಹ ತೀರಿಸುತ್ತದೆ ಈ ‘ಭಗೀರಥ’ ಎಟಿಎಂ. ಸ್ವಯಂ ಚಾಲಿತ ಎಟಿಎಂ ಕಾರ್ಡ್ ಹಾಗೂ ಶುದ್ಧ ನೀರಿನ ಘಟಕ ಇದಾಗಿದ್ದು ಶಾಸಕಿ ಸೌಮ್ಯ ರೆಡ್ಡಿ ಹಾಗೂ ಕಾರ್ಪೊರೇಟರ್ ನಾಗರಾಜ್ ಸಹ […]

ಸಂಘಗಳ ಸಮಾರೋಪ ಸಮಾರಂಭ

Wednesday, February 28th, 2018
dharmastala

ಧರ್ಮಸ್ಥಳ: ಎಸ್.ಡಿ.ಎಂ.ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವಿವಿಧ ಸಂಘಗಳನ್ನು ರಚಿಸಿದ್ದು, ಅವುಗಳು ಹಮ್ಮಿಕ್ಕೊಂಡಂತಹ ವಿವಿಧ ಚಟುವಟಿಕೆಗಳನ್ನು ಮೆಲುಕು ಹಾಕುವಂತಹ ಕಾರ್ಯಕ್ರಮವನ್ನು ದಿನಾಂಕ 24/02/2018 ರಂದು ಹಮ್ಮಿಕ್ಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜಾವಾಣಿ ದಿನಪತ್ರಿಕೆಯ ಹಿರಿಯ ವರದಿರರಾಗಿರುವ ಶ್ರೀಯುತ ನಾಗರಾಜ್ ಪೂವಣಿಯವರು ವಹಿಸಿದ್ದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, ಮಕ್ಕಳು ಬರೇ ಪಾಠ ಪ್ರವಚನದಿಂದ ಜ್ನಾನವಂತರಾಗಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾದ ಪಠ್ಯೇತರ ಚಟುವಟಿಕೆಗಳು ಕೂಡ ಅಗತ್ಯ ಎಂದು ನುಡಿದರು. ಈ ಂದರ್ಭದಲ್ಲಿ ಶಾಲಾ ಮುಖ್ಯೋಪದ್ಯಾಯಿನಿ […]