ಮನೆಯಲ್ಲಿ ಮಲಗಿದ್ದ ನಾಯಿಯನ್ನು ಹಿಡಿದ ಚಿರತೆ, ಆದರೂ ನಾಯಿ ಬದುಕಿದ್ದು ಹೇಗೆ ಗೊತ್ತಾ ?

Saturday, July 3rd, 2021
chita

ಮೂಡುಬಿದಿರೆ:  ಚಿರತೆಯೊಂದು ಮನೆಯಂಗಳಕ್ಕೆ ಬಂದು ನಾಯಿಯೊಂದನ್ನು ಹಿಡಿದಿದ್ದು, ಚಿರತೆ ಕಾಂಪೌಂಡ್ ಹಾರುವ ವೇಳೆ ಚಿರತೆಯ ಬಾಯಿಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಡುಕೋಣಾಜೆಯ ಸತೀಶ್ ಎಂಬವರ ಮನೆಯ ಬಳಿ ಗುರುವಾರ ರಾತ್ರಿ ಅಡ್ಡಾಡುತ್ತಿದ್ದ ಚಿರತೆ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿ ವಿಫಲವಾಗಿದೆ. ಸ್ಥಳಕ್ಕೆ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಜೊತೆ ಮಾತುಕತೆ ನಡೆಸಿದ್ದು, ಚಿರತೆಯನ್ನು ಹಿಡಿಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.  

ಚಪ್ಪಲಿಯನ್ನು ಕಚ್ಚಿ ಹಾಳು ಮಾಡಿದ ಕೋಪಕ್ಕೆ, ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ಕ್ರೂರಿ

Saturday, May 22nd, 2021
dog dragging

ಮಂಗಳೂರು : ತನ್ನ ಚಪ್ಪಲಿಯನ್ನು ಕಚ್ಚಿ ಹಾಳು ಮಾಡಿದ ಕೋಪಕ್ಕೆ ವ್ಯಕ್ತಿಯೊಬ್ಬ ನಾಯಿಯನ್ನು ಬೈಕಿಗೆ ಕಟ್ಟಿ 2 ಕಿ.ಮೀ. ಎಳೆದೊಯ್ದ ಅಮಾನವೀಯ ಘಟನೆ ಕೊಂಚಾಡಿಯಲ್ಲಿ ನಡೆದಿದೆ. ಆರೋಪಿ ಈರಯ್ಯ ಬಸಪ್ಪ ಹಿರೇಮಠ್  ಗುಲ್ಬರ್ಗ ನಿವಾಸಿಯಾಗಿದ್ದು, ಕೊಂಚಾಡಿಯ ವೈದ್ಯರ ಮನೆಯಲ್ಲಿ ತೋಟದ ಕೆಲಸಕ್ಕಿದ್ದ ಎನ್ನಲಾಗಿದೆ. ತನ್ನ ಚಪ್ಪಲಿಯನ್ನು ಕಚ್ಚಿ ಹಾಳು ಮಾಡಿದ ಕೋಪಕ್ಕೆ ನಾಯಿಯನ್ನು ಬೈಕಿಗೆ ಕಟ್ಟಿ ಕೊಂಚಾಡಿಯಿಂದ ಮೇರಿ ಹಿಲ್ ವರೆಗೆ ಸುಮಾರು 2 ಕಿ.ಮೀ.ಎಳೆದಿದ್ದಾನೆ. ನಾಯಿಯ ಕಾಲಲ್ಲಿ ರಕ್ತ ಬಂದ ಬಳಿಕ ಅಲ್ಲಿಯೇ ಬಿಟ್ಟಿದ್ದಾನೆ. ನಾಯಿ […]

ನಾಯಿಯನ್ನು ಬೈಕ್‌ನ ಹಿಂಬದಿಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದುಕೊಂಡು ಹೋದ ದುರುಳರು

Friday, April 23rd, 2021
Dog Draging

ಮಂಗಳೂರು : ನಾಯಿಯನ್ನು ಬೈಕ್‌ನ ಹಿಂಬದಿಗೆ ಕಟ್ಟಿ  ರಸ್ತೆಯುದ್ದಕ್ಕೂ ಎಳೆದುಕೊಂಡು ಹೋಗಿರುವ ಅಮಾನುಷ ಘಟನೆ ಎನ್‌ಐಟಿಕೆ ಸುರತ್ಕಲ್‌ ಮುಖ್ಯ ರಸ್ತೆಯಲ್ಲಿ ನಡೆದಿದೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನಾಯಿಗೆ ಹಿಂಸೆ ನೀಡಿ ಸಂತೋಷ ಪಡುವ ಈ ಕಿಡಿಗೇಡಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯು 2021 ರ ಏಪ್ರಿಲ್ 15 ರಂದು ನಡೆದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ಡಿಸಿಪಿ ಹರಿರಾಮ್ ಶಂಕರ್, “ಈ ಪ್ರಕರಣದ ಬಗ್ಗೆ ಪರಿಶೀಲನೆ […]

ಸ್ವಲ್ಪ ಶಬ್ದವಾದರೂ ಬೊಗಳುವ ನಾಯಿ ವಿರುದ್ಧ ಪೊಲೀಸರಿಗೆ ದೂರು

Monday, July 8th, 2019
Dog Barking

ಸುರತ್ಕಲ್‌:  ಸಾಕು ನಾಯಿಯೊಂದು  ನಮ್ಮ ನೆಮ್ಮದಿ ಕೆಡಿಸುತ್ತಿದೆ. ಅದರ ಬೊಗಳುವಿಕೆಯಿಂದ ವಿದ್ಯಾರ್ಥಿಗಳಿಗೆ ಓದಲಾಗುತ್ತಿಲ್ಲ ಎಂದು ಸ್ಥಳೀಯರು ಸುರತ್ಕಲ್‌ ಪೊಲೀಸರಿಗೆ ದೂರು ನೀಡಿದ ಕುತೂಹಲಕಾರಿ ಪ್ರಕರಣ ವರದಿಯಾಗಿದೆ! ಸುರತ್ಕಲ್‌ ಸಮೀಪದ ಕಾನದ  ಶರತ್‌ ಅವರು ಶ್ವಾನ ಪ್ರೇಮಿಯಾಗಿದ್ದು ಮೂರು ಶ್ವಾನಗಳನ್ನು ಸಾಕಿದ್ದರು. ಅವುಗಳು ಸ್ವಲ್ಪ ಶಬ್ದವಾದರೂ ಬೊಗಳಿ ಯಜಮಾನನನ್ನು ಎಚ್ಚರಿಸುತ್ತವೆ. ನಿರಂತರ ಅವುಗಳ ಬೊಗಳುವಿಕೆಯಿಂದ ನಮಗೆ ತೊಂದರೆಯಾಗುತ್ತದೆ ಎಂದು ಕೆಲವರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಶರತ್‌ ಅವರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಶ್ವಾನವನ್ನು ದೂರ ಬಿಡಿ, ಇಲ್ಲವೆ ಮನೆ […]