ನಿಡ್ಡೋಡಿಯಲ್ಲಿ ಸೀಫುಡ್ ಕಾರ್ಖಾನೆ ಸ್ಥಾಪನೆ, ಸ್ಥಳೀಯರ ತೀವ್ರ ವಿರೋಧ

Friday, July 2nd, 2021
Sea Food

ಮಂಗಳೂರು:  ಮೂಡುಬಿದಿರೆಯ ನಿಡ್ಡೋಡಿಯಲ್ಲಿ ರಾಜ್ಯ ಸರ್ಕಾರ ಬೃಹತ್ ಸೀಫುಡ್ ಘಟಕ ಸ್ಥಾಪನೆ ಮಾಡಲು ಮುಂದಾಗಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಿಡ್ಡೋಡಿಯಲ್ಲಿ ಸೀಫುಡ್ ಕಾರ್ಖಾನೆಯ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮೀನುಗಾರಿಕಾ ಸಚಿವ ಅಂಗಾರ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಸ್ಥಳೀಯರಿಗೆ ಮಾಹಿತಿ ನೀಡದೆ ನಿಡ್ಡೋಡಿಗೆ ಪರಿಶೀಲನೆ ನಡೆಸಲು ಭೇಟಿ ನೀಡಿದ್ದರು. ಈ ವೇಳೆ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದ ಸ್ಥಳೀಯರು ಸಚಿವರು ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗಷ್ಟೇ ಪ್ರಧಾನ್ ಮಂತ್ರಿ ಮತ್ಸ್ಯ ಸಂಪದ […]

ಪರಿಸರಕ್ಕೆ ಹಾನಿವಿರುವ ನಿಡ್ಡೋಡಿಯ ಉಷ್ಣ ವಿದ್ಯುತ್ ಸ್ಥಾವರಕ್ಕೆ ನನ್ನ ವಿರೋಧವಿದೆ: ಜನಾರ್ಧನ ಪೂಜರಿ

Saturday, August 10th, 2013
poojary

ಮಂಗಳೂರು: ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರದಿಂದ ಪರಿಸರಕ್ಕೆ ಅಪಾರವಾದ ಹಾನಿ ಇರುವುದರಿಂದ ಸರಕಾರವು ಇದನ್ನು ತಕ್ಷಣ ಕೈಬೀಡಬೇಕು. ಈ ಸ್ಥಾವರದ ಪರಿಣಾಮವು ಅಘಾತಕಾರಿಯಾಗಿರುವುದರಿಂದ ಈ ಯೋಜನೆಗೆ ನನ್ನ ವಿರೋಧವಿದೆ ಎಂದು ಶುಕ್ರವಾರ ಕಾಂಗ್ರೆಸ್ ಆಫೀಸ್ನಲ್ಲಿ ನಡೆದ ಪತ್ರಿಕಾಘೋಷ್ಟಿಯಲ್ಲಿ ತಿಳಿಸಿದರು. ಅದಲ್ಲದೆ ಈ ಯೋಜನೆಗೆ ಅಲ್ಲಿಯ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಹಾಗಾಗಿ ಜನರ ಬೇಡಿಕೆಗೆ ಸ್ಪಂದಿಸುವುದು ನನ್ನ ಕರ್ತವ್ಯವಾಗಿದೆ ಹಾಗೂ ನನ್ನ ಧರ್ಮ, ನಾನೊಬ್ಬ ಕಾಂಗ್ರೆಸ್ ಪ್ರಣಾಳಿಕೆ ಅನುಷ್ಠಾನ ಸಮಿತಿಯ ಸದಸ್ಯನಾಗಿರುದರಿಂದ ಇದನ್ನು ನಿಲ್ಲಿ ಸುವಂತೆ […]

ಜನರಿಗೆ ಭಯದ ವಾತಾವರಣ ಸೃಷ್ಟಿಸುವ ಯಾವುದೇ ಯೋಜನೆಗೆ ಅವಕಾಶ ನೀಡಲಾಗದು : ರೈ

Thursday, August 1st, 2013
Ramanatha Rai

ಮಂಗಳೂರು :  ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆ ಮಾತನಾಡಿದ ಅರಣ್ಯ ಮತ್ತು ಜಿವಶಾಸ್ತ್ರ ಸಚಿವ ರಮನಾಥ ರೈ  ಜನಾಭಿಪ್ರಾಯ ಪಡೆದು ಬಳಿಕವಷ್ಟೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಜನರ ಸಮಸ್ಯೆಯನ್ನು ಅರ್ಥಮಾಡಿಕೊಂಡು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ. ಜನರಿಗೆ ಭಯದ ವಾತಾವರಣ ಸೃಷ್ಟಿಸುವ ಯಾವುದೇ ಯೋಜನೆಗೆ ಅವಕಾಶ ನೀಡಲಾಗದು. ಪರಿಸರ ಮತ್ತು ಅರಣ್ಯ ಇಲಾಖೆಯು ಈ ಬಗ್ಗೆ ಸಾಧಕ ಬಾಧಕಗಳನ್ನು ತಿಳಿದುಕೊಂಡೇ ಮುಂದೆ ಸಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಮಂಗಳೂರಿನಲ್ಲಿ ಸರಕಾರದ ಕ್ಷೀರ ಭಾಗ್ಯ ಯೊಜನೆಗೆ […]

ನಿಡ್ಡೋಡಿಯಲ್ಲಿ ಕಾಂಗ್ರೆಸ್ ನ ಪ್ರತಿನಿಧಿಗಳನ್ನು ಚಪ್ಪಲಿ ಹಾಗೂ ಹಿಡಿಸೂಡಿ ಹಿಡಿದು ಓಡಿಸಿದ ಸ್ಟಳೀಯರು

Tuesday, July 30th, 2013
Niddodi villagers

ಮಂಗಳೂರು: ನಿಡ್ಡೋಡಿಯಲ್ಲಿ ಬೃಹತ್ ಮಟ್ಟದ ಉಷ್ಣವಿದ್ಯುತ್ ಸ್ಥಾವರದ ಉದ್ದೇಶಿತ  ಪ್ರದೇಶಕ್ಕೆ ಜನಪ್ರತಿನಿಧಿಗಳು ಹಾಗೂ ಮಾಧ್ಯಮದವರು ಸೋಮವಾರ ಬೆಳಿಗ್ಗೆ  ಹೋಗಿದ್ದರು. ಸ್ಥಾವರ ಸ್ಥಾಪನೆಯ ಬಗ್ಗೆ ಜನರಿಗೆ ವಿವರಿಸಲು ಹೋಗಿದ್ದ ಕಾಂಗ್ರೆಸ್ ನ ಪ್ರತಿನಿಧಿಗಳನ್ನು  ಚಪ್ಪಲಿ ಹಾಗೂ ಹಿಡಿಸೂಡಿಯನ್ನು ಹಿಡಿದು ಹಿಂದಕ್ಕೆ ಓಡಿಸಿದ ಘಟನೆ ಸೋಮವಾರ ನಡೆಯಿತು. 500ಕ್ಕೂ ಹೆಚ್ಚು ಸ್ಥಳೀಯರು ಸೇರಿ ಬಂದು ಕಾಂಗ್ರೆಸ್ ಪ್ರತಿನಿಧಿಗಳಿಗೆ ದಿಗ್ಭಂದನ ಹಾಕಿ ಘೇರಾವ್ ಹಾಕಿದರು. ಯಾವುದೇ ಪ್ರತಿನಿಧಿಗಳು ಇಲ್ಲಿಗೆ ಬಂದು ವಿವರಣೆ ನೀಡುವುದನ್ನು ನಾವು ಬಯಸುವುದಿಲ್ಲ. ನಿಮ್ಮ ನಾಯಕ ಅಥವಾ ಶಾಸಕನನ್ನು ಇಲ್ಲಿಗೆ ಕಳುಹಿಸಿ. ಅವರಿಗೆ ನಮ್ಮ ಸಮಸ್ಯೆಗಳನ್ನು […]

ಜುಲೈ 28ರಂದು ನಿಡ್ಡೋಡಿಯಲ್ಲಿ ಉಪವಾಸ ಸತ್ಯಾಗ್ರಹ

Tuesday, July 23rd, 2013
Niddodi ultra mega power plant

ನಿಡ್ಡೋಡಿ :  ಜುಲೈ 22ರಂದು ಸಂಸದ ನಳಿನ್ ಕುಮಾರ್ ಕಟೀಲ್ ನಿಡ್ಡೋಡಿಯ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾಗಳಿರುವ ಪ್ರದೇಶಕ್ಕೆ ಸ್ಥಳ ಪರಿಶೀಲನೆಗಾಗಿ ಭೇಟಿ ನೀಡಿದರು.  ನಿಡ್ಡೋಡಿ ಗ್ರಾಮವು ಕೃಷಿಗೆ ಅನುಕೂಲಕರವಾದ ಭೂಮಿಯಾಗಿದೆ. ಇಲ್ಲಿ ಸರಕಾರವು 4000 ಮೆ.ವ್ಯಾಟ್ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಯ ಯೋಜನೆಯನ್ನು ಹಮ್ಮಿಕೊಂಡಿರುವ ವಿಷಯ ನಮಗೆ ತಿಳಿದಿದೆ. ಸ್ಥಾವರ ಸ್ಥಾಪನೆಯಾದರೆ ಭತ್ತ, ಕಬ್ಬು, ತೆಂಗಿನಮರ ಮತ್ತು ಬಾಳೆಹಣ್ಣು ಇತ್ಯಾದಿ ಬೆಳೆಗಳು ನಾಶವಾಗುತ್ತದೆ ಎಂದು ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಲ್ಪೋನ್ಸ ಡಿ’ ಸೋಜ ತಿಳಿಸಿದರು. ನಮಗೆ […]

ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಗೆ ಗ್ರಾಮಸ್ಥರ ವಿರೋಧ

Wednesday, February 27th, 2013
Niddodi thermal power project

ಮೂಡುಬಿದಿರೆ : ದ.ಕ.ಜಿಲ್ಲೆಯ ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ನಿಡ್ಡೋಡಿ ಗ್ರಾಮದಲ್ಲಿ  ನಾಲ್ಕುಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣವಿದ್ಯುತ್ ಸ್ಥಾವರ ಸ್ಥಾಪಿಸಲುದ್ದೇಶಿಸಿರುವ ವಿಷಯ ಬಹಿರಂಗವಾಗಿದ್ದು, ಕೃಷಿ ಪ್ರಧಾನ ವಾದ ಈ ಪ್ರದೇಶದಲ್ಲಿ  ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ಈ ಪರಿಸರದ ಜನ ರಾಜಕೀಯೇತರ ಹೋರಾಟಕ್ಕೆ ಸಜ್ಜಾಗಿದ್ದಾರೆ. ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಗೆ ಸುಮಾರು 4,000 ಎಕ್ರೆ ಜಾಗದ ಅಗತ್ಯತೆ ಇದೆ. ಶೇ. 85ರಷ್ಟು ಕೃಷಿಭೂಮಿಯೇ ಇರುವ ನಿಡ್ಡೋಡಿಯಲ್ಲಿ ಒಂದು ವೇಳೆ ಈ ಯೋಜನೆ ಜಾರಿಗೆ ಬಂದಲ್ಲಿ  ತಲೆತಲಾಂತರಗಳಿಂದ ಕೃಷಿಯನ್ನೇ […]