ತಡೆಗೋಡೆ ಒಡೆದು ನೀರು ನುಗ್ಗಿ ನೂರು ಎಕರೆ ಕೃಷಿ ಭೂಮಿ ನಾಶ

Monday, February 29th, 2016
wall collapse

ಉಪ್ಪಳ : ತಡೆಗೋಡೆ ಒಡೆದು ಕೃಷಿ ಸ್ಥಳಕ್ಕೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಪೈವಳಿಕೆ ಪಂಚಾಯತಿನ ಕುಡಾಲ್‌ಮೇರ್ಕಳದಲ್ಲಿ ನೂರು ಎಕರೆ ಕೃಷಿ ಸ್ಥಳ ನಾಶವಾಗಿದೆ. ದಶಕದ ಹಿಂದೆ ಕಿರು ನೀರಾವರಿ ಯೋಜನೆಯಂಗವಾಗಿ ನಿರ್ಮಿಸಿದ ತಡೆಗೋಡೆ ಒಡೆದು ನಾಲ್ಕು ವರ್ಷಗಳಾದರೂ ಅದನ್ನು ಪುನರ್ ನಿರ್ಮಿಸುವ ಬಗ್ಗೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೃಷಿಕರ, ಖಾಸಗಿ ವ್ಯಕ್ತಿಗಳ ಒಡೆತನದಲ್ಲಿರುವ ಗದ್ದೆಗಳಲ್ಲಿ ನಡೆಯುತ್ತಿದ್ದ ಪರಂಪರಾಗತ ಕೃಷಿಗೆ ತಡೆಯುಂಟಾಗಿದೆ. ತಡೆಗೋಡೆ ಒಡೆದ ಪರಿಣಾಮವಾಗಿ ತೋಡಿನ ಗತಿ […]

ಪೈವಳಿಕೆಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಹಾಗೂ ಜನಜಾಗೃತಿ ಸಭೆ

Tuesday, December 22nd, 2015
Uppala Bjp

ಉಪ್ಪಳ: ಕಳೆದ 15 ವರ್ಷಗಳಿಂದ ನಿಷ್ಪಕ್ಷಪಾತ,ಭ್ರಷ್ಠಾಚಾರ ರಹಿತ ಆಡಳಿತ ನೀಡಿದ ಬಿಜೆಪಿ ನೇತೃತ್ವದ ಆಡಳಿತವನ್ನು ಈ ಬಾರಿಯೂ ಜನತೆ ಒಪ್ಪಿ ಬಹುಮತದಿಂದ ಗೆಲ್ಲಿಸಿದ್ದರು.ಆದರೆ ಪ್ರತಿಪಕ್ಷಗಳ ಅನೈತಿಕ ಒಳಒಪ್ಪಂದದ ಫಲವಾಗಿ ಜನರಿಂದ ತಿರಸ್ಕರಿಸಲ್ಪಟ್ಟವರು ಅಧಿಕಾರ ಲಾಲಸೆಯಿಂದ ಒಂದಾಗಿ ಗ್ರಾಮ ಪಂಚಾಯತ್ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತದ್ದು ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಜಿಲ್ಲಾ ಪಂಚಾಯತ್ ಸದಸ್ಯ ಅಡ್ವ.ಶ್ರೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಪೈವಳಿಕೆ ಗ್ರಾಮ ಪಂಚಾಯತಿಯಲ್ಲಿ ಬಹುಮತದಿಂದ […]