ನಿಪಾಹ್ ವೈರಸ್ ಆಯ್ತು, ಇದೀಗ ಸಾಂಕ್ರಾಮಿಕ ರೋಗಗಳ ಸರದಿ

Friday, May 25th, 2018
nipah-virus

ಮಂಗಳೂರು: ಮಂಗಳೂರಿನಲ್ಲಿ ಮಾರಣಾಂತಿಕ ನಿಪಾಹ್ ವೈರಸ್ ಅತಂಕ ದೂರವಾಗುತ್ತಿದ್ದಂತೆ, ಇನ್ನೊಂದೆಡೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣ ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಮಂಗಳೂರಿನಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಸೃಷ್ಠಿಯಾಗುತ್ತಿದೆ. ಮಲೇರಿಯಾ, ಡೆಂಗ್ಯೂ, ಇಲಿ ಜ್ವರ ದಂತಹದ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಇಲ್ಲೊಂದು ಅಲ್ಲೊಂದು ಕಾಣಿಸಿಕೊಳ್ಳಲು ಆರಂಭವಾಗಿದೆ. ನಿಪಾಹ್ ವೈರಸ್ ಭೀತಿಯಿಂದ ನಿರಾಳರಾದ ಮಂಗಳೂರಿಗರು ಈ ಹಿನ್ನೆಲೆಯಲ್ಲಿ ರೋಗ ನಿಯಂತ್ರಣ […]

ವಾಟ್ಸಪ್ ,ಫೇಸ್‌ಬುಕ್‌ ನಲ್ಲಿ ಬರುವ ಇಂತಹ ಸುದ್ದಿಗಳನ್ನು ನಂಬಬೇಡಿ: ಸಸಿಕಾಂತ್ ಸೆಂಥಿಲ್

Thursday, May 24th, 2018
sesikanth-senthil

ಮಂಗಳೂರು: ನಿಪಾಹ್ ವೈರಸ್ ಕಾಣಿಸಿಕೊಂಡ ನಂತರ ವಾಟ್ಸಪ್ ಫೇಸ್‌ಬುಕ್‌ ನಲ್ಲಿ ನಿಪಾಹ್ ವೈರಸ್ ಗೆ ಗಿಡ ಮೂಲಿಕೆ ಮದ್ದು ಇದೆ. ಯಾವುದೋ ಗಿಡಮೂಲಿಕೆ ಸೇವಿಸಿದರೆ ನಿಪಾಹ್ ವೈರಸ್ ಗುಣವಾಗುತ್ತದೆ ಎಂಬ ಸುದ್ದಿಯೊಂದು‌ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ವಾಟ್ಸಪ್ , ಫೇಸ್‌ಬುಕ್‌ ನಲ್ಲಿ ಬರುವ ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ.

ನಿಪಾಹ್ ವೈರಸ್ ಎಫೆಕ್ಟ್: ಹಣ್ಣು, ಮಾಂಸ ವ್ಯಾಪಾರದಲ್ಲಿ ಭಾರೀ ಕುಸಿತ!

Thursday, May 24th, 2018
nipah-virus

ಮಂಗಳೂರು: ನಿಪಾಹ್ ವೈರಸ್ ರಾಜ್ಯಕ್ಕೂ ಹರಡಿರುವ ಭೀತಿ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೂ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ವೈರಸ್ ಹರಡುವ ಭೀತಿ ಈಗ ಹಣ್ಣು ವ್ಯಾಪಾರದ ಮೇಲೂ ಪ್ರಭಾವ ಬೀರಿದೆ. ನಿಪಾಹ್ ವೈರಸ್ ಎಫೆಕ್ಟ್ ನಿಂದಾಗಿ ಮಂಗಳೂರಿನಲ್ಲಿ ಹಣ್ಣು ಮಾರಾಟ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿದೆ. ರಂಜಾನ್ ತಿಂಗಳ ಉಪವಾಸ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಕರಾವಳಿಯಲ್ಲಿ ಮುಸ್ಲಿಂ ಬಾಂಧವರು ಉಪವಾಸ ಬಿಡುವ ವೇಳೆ ಹೆಚ್ಚಾಗಿ ಹಣ್ಣುಗಳನ್ನು ಸೇವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ತೀವ್ರ ಏರಿಕೆ ಯಾಗಿತ್ತು. […]

ನಿಪಾಹ್ ವೈರಸ್ ಭೀತಿ ಹಿನ್ನೆಲೆ, ಕರಾವಳಿಯಲ್ಲಿ ಭಾರೀ ಕಟ್ಟೆಚ್ಚರ..!

Wednesday, May 23rd, 2018
nipah-virus

ಮಂಗಳೂರು: ಕೇರಳದಲ್ಲಿ 10ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿರುವ ನಿಪಾಹ್ ವೈರಸ್ ಆತಂಕ ಕರಾವಳಿ ಜಿಲ್ಲೆಗಳನ್ನೂ ಆವರಿಸಿದೆ. ಪಕ್ಕದ ಕೇರಳದಿಂದ ನಿಪಾಹ್ ವೈರಸ್ ಸೋಂಕು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೇರಳ ಮೂಲದ ಇಬ್ಬರು ರೋಗಿಗಳಿಗೆ ನಿಪಾಹ್ ವೈರಸ್ ಸೋಂಕು ತಗಲಿರುವ ಶಂಕೆಯ ಮೇರೆಗೆ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನಿಪಾಹ್ ಸೋಂಕು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಈಗಾಗಲೇ ದಕ್ಷಿಣ […]

ಮಂಗಳೂರಿನಲ್ಲಿ ಇಬ್ಬರಿಗೆ ನಿಪಾಹ್ ವೈರಸ್ ಶಂಕೆ..!

Tuesday, May 22nd, 2018
mangaluru-niphas

ಮಂಗಳೂರು: ಕೇರಳದಲ್ಲಿ 10ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ನಿಪಾಹ್ ವೈರಸ್ ಮಂಗಳೂರಿಗೆ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ಇಬ್ಬರಲ್ಲಿ ನಿಪಾಹ್ ವೈರಸ್ ಇರುವ ಬಗ್ಗೆ ಶಂಕೆಯಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಬ್ಬರ ರಕ್ತ ಮಾದರಿಯನ್ನು ಕೆಎಂಸಿ ಮಣಿಪಾಲಕ್ಕೆ ಕಳುಹಿಸಲಾಗಿದ್ದು ಇದರ ವರದಿ ನಾಳೆ ಸಂಜೆಯೊಳಗೆ ಬರಲಿದೆ. ಅಲ್ಲಿ ಬಂದ ವರದಿಯಲ್ಲಿ ನಿಪಾಹ್ ವೈರಸ್ ಇದೆ ಎಂದು ಗೊತ್ತಾದರೆ ಅಲ್ಲಿಂದ ಪುಣೆಗೆ ವರದಿ ಕಳುಹಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ ರಾಮಕೃಷ್ಣ ರಾವ್ ತಿಳಿಸಿದ್ದಾರೆ. […]