ಕರಾವಳಿಯಾದ್ಯಂತ ಸಮುದ್ರ ತೀರ ಸ್ವಚ್ಛತಾ ಅಭಿಯಾನ

Monday, September 18th, 2023
clean-beach

ಮಂಗಳೂರು : ಸ್ವಚ್ಚ ಸಾಗರ ಸುರಕ್ಷಿತ ಸಾಗರಅಭಿಯಾನ ದೇಶದಾದ್ಯಂತ ಈಬಾರಿಯೂ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಪರ್ಯವರಣ ಸಂರಕ್ಷಣ ಮಂಗಳೂರು ಮಹಾನಗರ ಸಂಯೋಜಕ ,ನ್ಯಾಯವಾದಿ ಸತೀಶ ಮಹಿತಿ ನೀಡಿದ್ದಾರೆ.. ಪರ್ಯಾವರಣ ಸಂರಕ್ಷಣ ಗತಿ ವಿಧಿ ಮತ್ತು ಕರಾವಳಿ ಕಲ್ಯಾಣ ಪರಿಷತ್ತು ಸಂಯೋಜನೆಯಲ್ಲಿ ರೋಟರಿ/ಲಯನ್ಸ/ ಏನ್ ಸಿಸಿ ,ಎನ್ಎಸ್ಎಸ್ಜ್ಯ ಶಾಲಾ ಕಾಲೇಜುಗಳು ಒಟ್ಟಾಗಿ ಈ ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ. ಪರ್ಯಾವರಣ ಗತಿ ವಿಧಿಯ ರಾಜ್ಯ ಸಂಯೋಜಕ ಜಯರಾಮ್ ಬೊಳ್ಳಾಜೆ ಸಾಗರದ ಸುರಕ್ಷೆ ಕುರಿತು ಮನೆಗಳಿಂದ ಏನು ಉಪಕ್ರಮ ಕೈಗೊಳ್ಳಬೇಕು ಎಂಬ ಮಾಹಿತಿಯನ್ನು […]

ಕೊರೋನಾ ಪಾಸಿಟಿವ್ ಇದ್ದು ಮದುವೆ ಕಾರ್ಯಕ್ರಮಕ್ಕೆ ಹಾಜರಾದ ವಕೀಲ, ‌ಪ್ರಕರಣ ದಾಖಲು

Friday, May 14th, 2021
positive

ಬಂಟ್ವಾಳ : ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿದಾಗ ಕೊರೋನಾ ಪಾಸಿಟಿವ್ ಬಂದು ಮದುವೆ ಕಾರ್ಯಕ್ರಮಕ್ಕೆ ಹಾಜರಾದ ಹಿನ್ನೆಲೆ ಬಂಟ್ವಾಳದ ನ್ಯಾಯವಾದಿಯೋರ್ವರ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿನಾಲ್ಕೂರು ಗ್ರಾಮದ ರಾಜೇಶ್ ಪೂಜಾರಿ ವಿರುದ್ದ ಎಫ್ ಐಆರ್ ದಾಖಲಿಸಲಾಗಿದೆ. ಬಂಟ್ವಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೇ.10ರಂದು ಪರೀಕ್ಷೆ ಮಾಡಿಸಿದಾಗ ಕೋವಿಡ್ ಪಾಸಿಟಿವ್ ಬಂದಿತ್ತು. ಹೀಗಾಗಿ ಮೇ.11ರಂದು ರಾಜೇಶ್ ಮನೆಗೆ ತೆರಳಿದ ಆಶಾ ಕಾರ್ಯಕರ್ತೆಯರು ಕ್ವಾರೆಂಟೈನ್ ಆಗುವಂತೆ ಸೂಚಿಸಿದ್ದರು. ಆಶಾ ಕಾರ್ಯಕರ್ತೆಯರು ಮೇ.13ರಂದು ಮತ್ತೆ ಪರಿಶೀಲನೆಗೆ […]

ನ್ಯಾಯವಾದಿ, ಮುಂಬಯಿ ಪತ್ರಕರ್ತ ಸುರೇಶ್ ಆಚಾರ್ಯ ಪಿಲಾರು ನಿಧನ

Saturday, September 26th, 2020
suresh Acharya

ಮುಂಬಯಿ : ಬೃಹನ್ಮುಂಬಯಿಯ ಕನ್ನಡ ಪತ್ರಿಕೋದ್ಯಮದಲ್ಲಿ ಸೇವೆಗೈದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸಂಘದ 2012-2015ನೇ ಸಾಲಿನಲ್ಲಿ ಜೊತೆ ಕೋಶಾಧಿಕಾರಿ ಆಗಿದ್ದ ಸುರೇಶ್ ಆಚಾರ್ಯ (49) ಇಂದಿಲ್ಲಿ ತೀವ್ರ ಹೃದಯಾಘಾತದಿಂದ ನೆರೂಲ್ ಪಶ್ಚಿಮದಲ್ಲಿನ ಮಾನಕ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಉದಯವಾಣಿ ಕನ್ನಡ ದೈನಿಕದ ಮುಂಬಯಿ ಆವೃತ್ತಿಯಲ್ಲಿ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿ ಸದ್ಯ ವಕೀಲ ವೃತ್ತಿಯಲ್ಲಿ ತೊಡಗಿಸಿದ್ದ ಇವರು ಉಡುಪಿ ಜಿಲ್ಲೆಯ ಕಾರ್ಕಳ ಪಿಲಾರು ಮೂಲದವರಾಗಿದ್ದು ಪ್ರಸ್ತುತ ನವಿ ಮುಂಬಯಿ ನೆರೂಲ್ ಸೆಕ್ಟರ್ […]

ಕಾರು ಢಿಕ್ಕಿ : ಚಿಕಿತ್ಸೆ ಫಲಕಾರಿಯಾಗದೆ ನ್ಯಾಯವಾದಿ ನಿಧನ

Friday, August 28th, 2020
duggappa

ಮಂಗಳೂರು :  ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನ್ಯಾಯವಾದಿ ಬಿಎಂ ದುಗ್ಗಪ್ಪ ಶುಕ್ರವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ‌ ನಿಧನರಾಗಿದ್ದಾರೆ. ಸುಳ್ಯ ಮೂಲದ ಇವರು ನಗರದ ಆಕಾಶಭವನ ಬಳಿ ನೆಲೆಸಿದ್ದರು. ಬುಧವಾರ ಸಂಜೆ ಸುಮಾರು 4:30ರ ವೇಳೆಗೆ ತನ್ನ ಮನೆಯಿಂದ ಬೆಸೆಂಟ್ ಶಿಕ್ಷಣ ಸಂಸ್ಥೆಯ ಬಳಿ ಇರುವ ಕಚೇರಿಗೆ ತೆರಳುತ್ತಿದ್ದಾಗ ಇವರು ಹೋಗುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಕಾರು ಢಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ  ಮೃತಪಟ್ಟರು. ಇವರು ಪತ್ನಿ […]

ವಕ್ಫ್ ಬೋರ್ಡ್‌ನ ‘ಲ್ಯಾಂಡ್ ಜಿಹಾದ್’ ಇದು ‘ಲವ್ ಜಿಹಾದ್’ಗಿಂತಲೂ ಭಯಾನಕ : ನ್ಯಾಯವಾದಿ ಹರಿ ಶಂಕರ ಜೈನ್

Monday, August 10th, 2020
Hari_Shankar_Jain

ಮಂಗಳೂರು  :  2013 ರಲ್ಲಿ ಅಂದಿನ ಕಾಂಗ್ರೇಸ್ ಸರಕಾರವು ವಕ್ಫ್ ಬೋರ್ಡ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಮುಸಲ್ಮಾನರಿಗೆ ಅಪಾರ ಅಧಿಕಾರವನ್ನು ನೀಡಿತು. ಇದರಿಂದ ಇಂದು ಭಾರತದಲ್ಲಿ ರಕ್ಷಣಾದಳ ಹಾಗೂ ರೇಲ್ವೆ ಇಲಾಖೆಯ ನಂತರ ಎಲ್ಲಕ್ಕಿಂತ ಹೆಚ್ಚು (6 ಲಕ್ಷ ಎಕರೆ) ಭೂಮಿಯ ಒಡೆತನ ವಕ್ಫ್ ಬೋರ್ಡ್ ಬಳಿ ಇದೆ. ಹಿಂದೂಗಳಿಗೆ ಈ ಕಾನೂನಿನ ಬಗ್ಗೆ ಇರುವ ಅಜ್ಞಾನ ಹಾಗೂ ಉದಾಸೀನತೆಯಿಂದಾಗಿ ವಕ್ಫ್ ಬೋರ್ಡ್ ದೇಶದಾದ್ಯಂತ ಲಕ್ಷಗಟ್ಟಲೆ ಎಕರೆ ಭೂಮಿಯನ್ನು ಅಕ್ಷರಶಃ ಕಬಳಿಸಲು ಪ್ರಯತ್ನಿಸುತ್ತಿದೆ. ಬೋರ್ಡ್‌ನಿಂದ ನಡೆಯುತ್ತಿರುವ ‘ಲ್ಯಾಂಡ್ […]

ಪವಿತ್ರವಾದ ವಕೀಲ ವೃತ್ತಿಯನ್ನು ಗೌರವಿಸಿ,  ವಕೀಲರ ದಿನಾಚರಣೆಯಲ್ಲಿ ನ್ಯಾಯವಾದಿ ಅರವಿಂದ್ ಕಾಮತ್ 

Wednesday, December 4th, 2019
Advocate

ಮಡಿಕೇರಿ : ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸುವ ವಕೀಲ ವೃತ್ತಿ ಅತ್ಯಂತ ಹೆಮ್ಮೆಯ ಮತ್ತು ಪವಿತ್ರವಾದ ವೃತ್ತಿಯಾಗಿದ್ದು, ನ್ಯಾಯಾಂಗ ಕ್ಷೇತ್ರದಲ್ಲಿರುವ ಪ್ರತಿಯೊಬ್ಬರು ಈ ವೃತ್ತಿಯನ್ನು ಗೌರವಿಸಬೇಕು ಎಂದು ಹೈಕೋರ್ಟ್ ಹಿರಿಯ ನ್ಯಾಯವಾದಿ ಅರವಿಂದ್ ಕಾಮತ್ ಕಿವಿಮಾತು ಹೇಳಿದ್ದಾರೆ. ಮಡಿಕೇರಿ ವಕೀಲರ ಸಂಘದ ವತಿಯಿಂದ ನಗರದ ಕೊಡವ ಸಮಾಜದಲ್ಲಿ ನಡೆದ ವಕೀಲ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ನ್ಯಾಯಾಂಗ ವ್ಯವಸ್ಥೆ ಅತ್ಯಂತ ಜವಬ್ದಾರಿಯುತ ಸ್ಥಾನವನ್ನು ನೀಡಿರುವುದರಿಂದ ವೃತ್ತಿಯಲ್ಲಿ ಆಳವಾದ ಅಧ್ಯಯನದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದ […]

ನ್ಯಾಯವಾದಿಯೊಬ್ಬರ ಮೇಲೆ ಹಲ್ಲೆ, ಕದ್ರಿ ಇನ್ಸ್ ಪೆಕ್ಟರ್ ಟಿ.ಡಿ ನಾಗರಾಜ್ ಅಮಾನತು

Friday, July 31st, 2015
Advacate protest

ಮಂಗಳೂರು: ಪೊಲೀಸ್ ಆಯುಕ್ತ ಎಸ್.ಮುರುಗನ್ ನ್ಯಾಯವಾದಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಕದ್ರಿ ಇನ್ಸ್ ಪೆಕ್ಟರ್ ಟಿ.ಡಿ ನಾಗರಾಜ್ ಅವರನ್ನು ಇಂದು ಅಮಾನತು ಮಾಡಿರುವುದಾಗಿ ತಿಳಿದು ಬಂದಿದೆ. ಶುಕ್ರವಾರ ನ್ಯಾಯವಾದಿ ಉತ್ತಮ್ ರೈ ತಮ್ಮ ಕಕ್ಷಿದಾರನ ಜೊತೆಗೆ ಕೇಸ್ ಸಂಬಂಧಿಸಿ ಠಾಣೆಗೆ ಹೋದಾಗ ನಾಗರಾಜ್ ಅವರು ರೈ ಅವರೊಂದಿಗೆ ಅನೂಚಿತವಾಗಿ ನಡೆದುಕೊಂಡದ್ದಲ್ಲದೇ ಹಲ್ಲೆ ಮಾಡಿದ್ದಾಗಿ ದೂರಿದ್ದಾರೆ. ಅದಕ್ಕಾಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ನೇತೃತ್ವದಲ್ಲಿ ಕದ್ರಿ ಠಾಣೆ ಮುಂದೆ ನ್ಯಾಯವಾದಿಗಳು ಧರಣಿ ನಡೆಸಿ ಇನ್ಸ್ ಪೆಕ್ಟರ್ […]

ನ್ಯಾಯವಾದಿಗಳೇ ಕಾನೂನನ್ನು ಕೈಗೆತ್ತಿಕ್ಕೊಂಡ ಅನಾಗರಿಕ ಘಟನೆ

Saturday, March 3rd, 2012
Journalist Bangalore

ಬೆಂಗಳೂರು : ಮಾಜಿ ಸಚಿವ ಜನಾರ್ಧನರೆಡ್ಡಿ ಅವರನ್ನು ನ್ಯಾಯಾಲಯಕ್ಕೆ ಕರೆತರುವುದನ್ನು ಚಿತ್ರೀಕರಣ ಮಾಡಲು ಹೋಗಿದ್ದ ಮಾಧ್ಯಮ ಸಿಬ್ಬಂದಿ ಮೇಲೆ ವಕೀಲರು ಬೇಕಾಬಿಟ್ಟಿ ಹಲ್ಲೆ ಮಾಡಿ ಅನಾಗರಿಕ ವರ್ತನೆ ತೋರಿಸಿದ್ದಾರೆ. ತಡೆಯಲು ಹೋದ ಪೊಲೀಸರ ಮೇಲೂ ಮುಗಿಬಿದ್ದಿದ್ದಾರೆ. ಜನಸಾಮಾನ್ಯರಿಗೆ ನ್ಯಾಯ ನೀಡಬೇಕಾದ ನ್ಯಾಯವಾದಿಗಳೇ ಕಾನೂನನ್ನು ಕೈಗೆತ್ತಿ ಗೂಂಡಾವೃತ್ತಿ ತೋರಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಜನಾರ್ದನ ರೆಡ್ಡಿ ಅವರನ್ನು ಸಿವಿಲ್ ಕೋರ್ಟ್ ಕಾಂಪೆಕ್ಸ್ ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕರೆತರಲಾಯಿತು. ಈ ಸಮಯಕ್ಕೆ ಸರಿಯಾಗಿ ಕೋರ್ಟ್ ಕಾಂಪೆಕ್ಸ್ ಪಾರ್ಕಿಂಗ್ ಸ್ಥಳದಲ್ಲಿ ಇಬ್ಬರು […]