ಗಡ್ಡ ಬೋಳಿಸಿ, ಹಣ ವಸೂಲಿ ಮಾಡಿ ರ್‍ಯಾಗಿಂಗ್‌, 9 ವಿದ್ಯಾರ್ಥಿಗಳ ಬಂಧನ

Sunday, November 28th, 2021
Indira college Raging

ಮಂಗಳೂರು : ನಗರದ ಫಳ್ನೀರ್‌ನ ಇಂದಿರಾ ಕಾಲೇಜಿನ ಕೇರಳ ಮೂಲದ ವಿದ್ಯಾರ್ಥಿಗಳನ್ನು ತಮ್ಮ ಕೊಠಡಿಗೆ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟು ಗಡ್ಡ ಬೋಳಿಸಿ, ಹಣ ನೀಡುವಂತೆ ಪೀಡಿಸಿ, ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ ಆರೋಪದಲ್ಲಿ 9 ಮಂದಿಯನ್ನು ಪಾಂಡೇಶ್ವರ ಪೊಲೀಸರು ರವಿವಾರ ಬಂಧಿಸಿದ್ದಾರೆ. ಅಭಿ, ಅಲೆಕ್ಸ್, ನಂದು, ಶ್ರೀಕುಮಾರ್, ಶಿಹಾಸ್, ಪ್ರವೀಶ್, ಗೋಪಿಕೃಷ್ಣ, ಹಸನ್, ವಿಷ್ಣು, ಜಾಸಿಲ್, ಅಲೆನ್ ಎಂಬರನ್ನು ರೈಲ್ವೇ ನಿಲ್ದಾಣ ಬಳಿಯಿಂದ ಬಂಧಿಸಲಾಗಿದೆ. ಈ ಪೈಕಿ 7 ಮಂದಿ ಗಾಂಜಾ ಸೇವನೆ ಮಾಡಿದ್ದು, ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ […]

ಬಜರಂಗದಳ ಕಾರ್ಯಕರ್ತರು ಸುಲಿಗೆ ಮಾಡುವವರು ಎಂದಿದ್ದಕ್ಕೆ ಐವನ್ ಮನೆಗೆ ಮುತ್ತಿಗೆ ಯತ್ನ

Wednesday, October 20th, 2021
Bajrangdal

ಮಂಗಳೂರು : ಬಜರಂಗದಳದವರು ಕೇಸರಿ ಬಟ್ಟೆ ಹಾಕಿ ಅನೈತಿಕ ವರ್ತನೆ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮನೆಗೆ ಬಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಕೇಸರಿ ಬಟ್ಟೆ ಹಾಕಿದ ಬಜರಂಗದಳ ಕಾರ್ಯಕರ್ತರು ಸುಲಿಗೆ ಮಾಡುವವರು, ಸಮಾಜದ್ರೋಹಿಗಳು ಎಂದು ಇತ್ತೀಚೆಗೆ ಐವನ್ ಹೇಳಿಕೆ ನೀಡಿದ್ದರೆನ್ನಲಾಗಿದೆ. ಆ ಹೇಳಿಕೆಯನ್ನು ಖಂಡಿಸಿ ಬಜರಂಗದಳದಿಂದ ಐವನ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪಾಂಡೇಶ್ವರ ಪೊಲೀಸರು ತಡೆದರು. ಐವನ್ ಡಿಸೋಜ ಹಾವೇರಿ ಜಿಲ್ಲೆಯ ಹಾನಗಲ್ […]

ಸುಲಿಗೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳೆಯರಿಬ್ಬರ ಬಂಧನ

Monday, August 8th, 2016
Tamil-Womans arrest

ಮಂಗಳೂರು: ಸುಲಿಗೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳೆಯರಿಬ್ಬರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿ, 2.64 ಲಕ್ಷ ಮೌಲ್ಯದ 80 ಗ್ರಾಂ ತೂಕದ ಚಿನ್ನಾಭರಣ ಮತ್ತು 1,45,000 ನಗದು ವಶಪಡಿಸಿಕೊಂಡಿದ್ದಾರೆ. ಬಂಧಿತ ಮಹಿಳೆಯರನ್ನು ತಮಿಳನಾಡಿನ ಮೆಟ್ಟು ಪಾಳಯಮ್‌ನ ಸಿಲ್ವಿ (24), ಅರೈ (22) ಎಂದು ಗುರುತಿಸಲಾಗಿದೆ. ಆರೋಪಿಗಳು ಸುಲಿಗೆ ಮಾಡಿದ ಚಿನ್ನಾಭರಗಳನ್ನು ಮಾರಲು ಬಂದಿರುವ ಬಗ್ಗೆ ಖಚಿತಿ ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸ್ ನಿರೀಕ್ಷಕ ಬೆಳ್ಳಿಯಪ್ಪ ಕೆ.ಯು. ಮತ್ತು ಸಿಬ್ಬಂದಿ ನಗರದ ರೂಪವಾಣಿ ಚಿತ್ರಮಂದಿರದ ಬಳಿ ಬಂಧಿಸಿದ್ದಾರೆ. ಬಸ್‌ನಲ್ಲಿ […]

ಬಾಲಕಿಯನ್ನು ಮನೆಗೆಲಸದಿಂದ ಬಿಡಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು

Friday, November 18th, 2011
child Labour

ಮಂಗಳೂರು: ಕಾರ್ಮಿಕ ಇಲಾಖೆಯ ಅಧಿಕಾರಿಗಳು ಗುರುವಾರ ನಗರದ ಪಾಂಡೇಶ್ವರದಲ್ಲಿ ಮನೆ ಕೆಲಸ ನಿರ್ವಹಿಸುತ್ತಿದ್ದಳೆನ್ನಲಾದ ಚಿಕ್ಕಮಗಳೂರು ಮೂಲದ ಬಾಲಕಿಯೋರ್ವಳನ್ನು ಪತ್ತೆ ಹಚ್ಚಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪಾಂಡೇಶ್ವರ ಪೊಲೀಸರ ಸಹಕಾರದಲ್ಲಿ ಓಲ್ಡ್‌ಕೆಂಟ್‌ ರಸ್ತೆಯಲ್ಲಿನ ಮನ್ಸೂರ್‌ ಹುಸೈನ್‌ ಅವರ ಮನೆಗೆ ದಾಳಿ ಮಾಡಿ ಬಾಲಕಿಯನ್ನು ವಶಕ್ಕೆ ತೆಗೆದುಕೊಂಡರು. ರಕ್ಷಿಸಲ್ಪಟ್ಟ ಬಾಲಕಿಯನ್ನು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಬೆಗೂರು ಗ್ರಾಮದ ಮಿನಾಝ್ 12 ವ ಎಂದು ಗುರುತಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಗಂಗಾಧರ್‌ […]