ಎಲ್ಲ ಅಭ್ಯರ್ಥಿಗಳಿಗೂ ಪಿಯು ಪ್ರವೇಶ ಲಭ್ಯ: ಸುರೇಶ್ ಕುಮಾರ್

Thursday, July 22nd, 2021
Suresh Kumar

ಬೆಂಗಳೂರು: ಈ ಬಾರಿ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗುತ್ತಿರುವುದರಿಂದ ಪಿಯುಸಿ ಸೇರಬಯಸುವ ಎಲ್ಲರಿಗೂ ಪ್ರವೇಶಾವಕಾಶ ಕಲ್ಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಗುರುವಾರ ಕೊನೆದಿನದ ಪರೀಕ್ಷೆಯ ನಂತರ ನಗರದ ಹಲವಾರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಕೊನೆದಿನ ದಿನದ ಪರೀಕ್ಷೆಗೆ ಸಂಬಂಧಿಸಿದ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅವರು, ಯಾವುದೇ ವಿದ್ಯಾರ್ಥಿಗೂ ತೊಂದರೆಯಾಗದಂತೆ ಎಲ್ಲರಿಗೂ ಪ್ರಥಮ ಪಿಯುಸಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು ಎಂದರು. […]

ದ್ವಿತೀಯ ಪಿಯುಸಿ ಫಲಿತಾಂಶ ಮಾರ್ಗಸೂಚಿ ಪ್ರಕಟ: ಸುರೇಶ್ ಕುಮಾರ್

Tuesday, July 6th, 2021
Suresh Kumar

ಬೆಂಗಳೂರು: ಕೋವಿಡ್-19 ಸೋಂಕು ಪ್ರಸರಣದಿಂದಾಗಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಎಸ್ ಎಸ್ ಎಲ್ ಸಿಯಲ್ಲಿ ಪಡೆದ ಅಂಕಗಳು, ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿದ ಅಂಕಗಳು ಮತ್ತು ಕೃಪಾಂಕಗಳ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸಿ ಅತಿ ಶೀಘ್ರದಲ್ಲಿ ಫಲಿತಾಂಶಗಳನ್ನು ಘೋಷಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಈ ಕುರಿತಂತೆ ಅಧಿಕೃತ ಸರ್ಕಾರದ ಆದೇಶ […]

ಪಿಯುಸಿ: ಪಿಸಿಎಂಬಿ, ಇಂಗ್ಲೀಷ್‌ ಭಾಷಾ ಉತ್ತರ ಪತ್ರಿಕೆ ಮೌಲ್ಯಮಾಪನವಿಲ್ಲ

Thursday, May 28th, 2020
suresh-kumar

ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಯಾವುದೇ ಉಪನ್ಯಾಸಕರ ಸುರಕ್ಷತೆಗೆ ಭಂಗ ಬಾರದ ರೀತಿಯಲ್ಲಿ ಈ ಪ್ರಕ್ರಿಯೆಯನ್ನು ಆಯೋಜಿಸಲಾಗಿದೆ. ಕೊರೋನಾ ಸೃಷ್ಟಿಸಿರುವ ಅನಿವಾರ್ಯ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ಮೌಲ್ಯಮಾಪನ ಕಾರ್ಯವನ್ನು ಕಾಲಮಿತಿಯಲ್ಲಿ ಪೂರೈಸಬೇಕಾದ ಅಗತ್ಯತೆಯನ್ನು ತಾವು ಸಹ ಒಪ್ಪುತ್ತೀರೆಂಬುದು ನನ್ನ ಭರವಸೆಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ. ಮೇ. 27 ರಿಂದ ಪ್ರಾರಂಭವಾಗಿರುವ ಮೌಲ್ಯಮಾಪನ ಪ್ರಕ್ರಿಯೆ ಪ್ರಸ್ತುತ ಲಭ್ಯವಿರುವ ಮೌಲ್ಯಮಾಪಕರ ಆಧಾರದ […]

ಎರಡು ವಾರ ಕಳೆದರೂ ಪತ್ತೆಯಾಗದ ವಿದ್ಯಾರ್ಥಿನಿ : ಪೋಷಕರಲ್ಲಿ ಆತಂಕ

Tuesday, October 22nd, 2019
fiyoona

ಮಂಗಳೂರು : ಖಾಸಗಿ ಕಾಲೇಜು ವಿದ್ಯಾರ್ಥಿನಿಯೊರ್ವಳು ನಾಪತ್ತೆಯಾಗಿ ಎರಡು ವಾರ ಕಳೆದರೂ ಇನ್ನೂ ಪತ್ತೆಯಾಗಿಲ್ಲದಿರುವುದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಫಿಯೋನಾ ಸ್ವೀಡಲ್ ಕುಟಿನ್ಹೋ(16) ಎಂಬ ವಿದ್ಯಾರ್ಥಿನಿ ನಾಪತ್ತೆಯಾಗಿ ಎರಡು ವಾರವಾದರೂ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇನ್ನೂ ಯಾವುದೇ ಮಾಹಿತಿದೊರೆತಿಲ್ಲ. ಮುಡಿಪು ನಿವಾಸಿ ಫಿಯೋನಾ ಅವರು ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಅ.8ರಂದು ಕಾಲೇಜಿಗೆಂದು ಮನೆಯಿಂದ ಹೊರಟು ಬಂದವರು ಮರಳಿ ಮನೆಗೆ ಮರಳಿಲ್ಲ. ಆಕೆ ಮನೆಯಿಂದ ತೆರಳುವಾಗ ಮೊಬೈಲ್ ಕೂಡಾ ಕೊಂಡೊಯ್ದಿಲ್ಲದಿರುವುದರಿಂದ ಯುವತಿಯ ಕಣ್ಮರೆ ವಿಚಾರ […]

ವಿಕಾಸ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳ ಪುನರ್ಮನನ ಶಿಬಿರ

Monday, June 4th, 2018
vikas college

ಮಂಗಳೂರು :  ನಗರದ ವಿಕಾಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪುನರ್ಮನನ ಶಿಬಿರವನ್ನು ಮೇರಿಹಿಲ್‌ನ ಮೌಂಟ್ ಕಾರ್ಮೆಲ್ ಸಭಾಂಗಣದಲ್ಲಿ ದಿನಾಂಕ 03-06-2018 ರಂದು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಂಡ್ಯರಾಜ್ ಬಲ್ಲಾಳ್ ಎಜ್ಯುಕೇಶನ್ ಇನ್ಸ್ಟಿಟ್ಯುಶನ್ ಇದರ ಎಂ.ಡಿ ಆಂಡ್ ಟ್ರಸ್ಟಿ ಹಾಗೂ ಮಂಗಳೂರು ಕೆ ಎಂ ಸಿ ಇಲ್ಲಿನ ಒಬ್ಸ್‌ಟರ್‌ಟ್ರಿಕ್ಸ್ ಮತ್ತು ಗೈನ್ಯೊಕೋಲೊಜಿ ಡಾ. ಪ್ರಿಯ ಬಲ್ಲಾಳ್ ಕೆ ಆಗಮಿಸಿ ಭವಿಷ್ಯದಲ್ಲಿ ಏನಾಗಬೇಕೋ ಅದರ ನಿರ್ಧಾರ ಈ ಪಿ.ಯು.ಸಿ ಹಂತದಲ್ಲಿಯೇ ಮಾಡಿ, ಮುಂದಿನ ಜೀವನ ಸಮತೋಲನಗೊಳಿಸಿಕೊಳ್ಳಲು ಈ […]

ಪಿಯುಸಿ ಓದುತ್ತಿದ್ದಾಗಲೇ ರಿಜಿಸ್ಟರ್‌ ಮ್ಯಾರೇಜ್‌… ಮಂಗಳೂರಲ್ಲಿ ವಿದ್ಯಾರ್ಥಿನಿ ನಾಪತ್ತೆ!

Friday, December 15th, 2017
puc-girl

ಮಂಗಳೂರು: ದ್ವೀತಿಯ ಪಿಯುಸಿ ಓದುತ್ತಿರುವಾಗಲೇ ಪ್ರಿಯಕರನೊಂದಿಗೆ ರಿಜಿಸ್ಟರ್‌‌ ಮ್ಯಾರೇಜ್‌ ಆಗಿದ್ದ ವಿದ್ಯಾರ್ಥಿನಿ ದಿಢೀರ್‌‌ ನಾಪತ್ತೆಯಾಗಿರುವ ಪ್ರಕರಣ ನಗದರದಲ್ಲಿ ಬೆಳಕಿಗೆ ಬಂದಿದೆ. ಆಕೆಯನ್ನು ಯುವಕನ ಕಡೆಯವರು ಅಪಹರಿಸಿದ್ದಾರೆ ಎಂದು ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ನಗರದ ಪ್ರತಿಷ್ಠಿತ ಕಾಲೇಜೊಂದರ ಈ ವಿದ್ಯಾರ್ಥಿನಿಯನ್ನು ಆಕೆಯ ಪ್ರಿಯಕರನ ಕಡೆಯವರು ಅಪಹರಣ ಮಾಡಿದ್ದಾರೆ ಎಂದು ಆಕೆಯ ತಂದೆ ಕಾವೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಮೂಲತಃ ಹಾಸನದವಳಾದ ಈಕೆ, ಪ್ರಸ್ತುತ ನಗರದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಇತ್ತೀಚೆಗೆ ಜಗದೀಶ್ ಕುಲಾಲ್ ಎಂಬಾತನೊಡನೆ […]