ಅಗಸ್ಟ್ 11, 12 ಮತ್ತು 13 ರಂದು ಬರಿಗಣ್ಣಿನಿಂದ ಉಲ್ಕಾಪಾತ ನೋಡಬಹುದು
Tuesday, August 10th, 2021ಮಂಗಳೂರು : 1862ರಲ್ಲಿ ಲೂಯಿಸ್ ಸ್ವಿಪ್ಟ್ ಮತ್ತು ಹೊರೆಸ್ ಪಾರ್ನೆಲ್ ಟಟಲ್ ಕಂಡುಹಿಡಿದ ಧೂಮಕೇತು ಉರಿದು ಉಳಿದ ಅವಶೇಷಗಳು ಈಗಲೂ ಉಲ್ಕಾಪಾತಕ್ಕೆ ಕಾರಣವಾಗುತ್ತಿವೆ. ಅಗಸ್ಟ್ 11, 12 ಮತ್ತು 13 ರಂದು ಮಧ್ಯರಾತ್ರಿಯಿಂದ ಮುಂಜಾನೆಯವರೆಗೆ ಈಶಾನ್ಯ ಭಾಗದಲ್ಲಿ ಪರ್ಸೀಯಸ್ (ಪಾರ್ಥ) ನಕ್ಷತ್ರ ಪುಂಜದ ಬಳಿ ಉಲ್ಕಾಪಾತ ಸಂಭವಿಸಲಿದ್ದು ಇದಕ್ಕೆ ‘ಪರ್ಸೀಡ್ ಉಲ್ಕಾಪಾತ’ ಎಂದು ಕರೆಯಲಾಗುತ್ತದೆ. ಈ ಉಲ್ಕಾಪಾತವು ‘ಸ್ವಿಪ್ಟ್ ಟಟಲ್’ ಧೂಮಕೇತುವಿನ ಅವಶೇಷಗಳು ಭೂಮಿಯ ವಾತಾವರಣ ಪ್ರವೇಶಿಸಿದಾಗ ಹೊತ್ತಿ ಉರಿದು, ಅದರಿಂದ ಆಕಾಶದಲ್ಲಿ ಬೆಳಕು ಪಸರಿಸಿದಂತಾಗುತ್ತದೆ. ಆಕಾಶ […]