ಬಡವರಿಗೆ ಸೀರೆ ಪಂಚೆ ವಿತರಿಸಿದ ಪುತ್ತೂರಿನ ಉದ್ಯಮಿ ಅಶೋಕ್‍ಕುಮಾರ್ ರೈ

Wednesday, October 30th, 2019
Ashok-Kumar-Rai

ಪುತ್ತೂರು : ನಾಡಿನೆಲ್ಲೆಡೆ ದೀಪಾವಳಿ ಸಡಗರ ಮನೆ ಮಾಡಿದೆ ಪುತ್ತೂರಿನ ಉದ್ಯಮಿ ಅಶೋಕ್‍ಕುಮಾರ್ ರೈ ಕೋಡಿಂಬಾಡಿ ಅವರ ಮನೆಯಲ್ಲಿ ಮಂಗಳವಾರ ಕಾರ್ಯಕ್ರಮ ನಡೆಸಿ ಮಹಿಳೆಯರಿಗೆ ಸೀರೆ, ಮತ್ತು ಪುರುಷರಿಗೆ ಪಂಚೆ ಶಾಲು, ಮಕ್ಕಳಿಗೆ ಶಾಲು ನೀಡಿ ಜನರ ಪ್ರೀತಿಗಳಿಸುವ ಜತೆಗೆ ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು. ಬೆಳಗ್ಗೆ ರೈ ಅವರ ತಾಯಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗುವ ಮೂಲಕ ಸರಳ ರೀತಿಯ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲಿ ಭಾಷಣಕ್ಕೆ ಪ್ರಾಮುಖ್ಯತೆ ಇರಲಿಲ್ಲ. ವಸ್ತ್ರದಾನವೇ ವಿಶೇಷವಾಗಿತ್ತು. […]

ನಾಡಹಬ್ಬ ದಸರಾ ಮಹೋತ್ಸವಕ್ಕೆ ಶ್ರೀಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ವಿದ್ಯುಕ್ತ ಚಾಲನೆ

Saturday, October 1st, 2016
dasara

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ನಾಡ ಅಧಿದೇವತೆ ಶ್ರೀಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಹಿರಿಯ ಸಾಹಿತಿ, ನಾಡೋಜ ಚೆನ್ನವೀರ ಕಣವಿ ಹಾಗೂ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ, ನಾಡೋಜ ಚೆನ್ನವೀರ ಕಣವಿ, ಅತ್ಯಂತ ಸಂತೋಷದಿಂದ ದಸರಾ ಉದ್ಘಾಟಿಸಿದ್ದೇನೆ. 74 ವರ್ಷದ ಹಿಂದೆ 1942ರಲ್ಲಿ ಮೊದಲ ಬಾರಿ ದಸರಾ ನೋಡಿದ್ದೆ. ಬರಗಾಲದ ಸಂದರ್ಭ ಸರಳ, ಸಾಂಪ್ರದಾಯಿಕ ದಸರಾ ಔಚಿತ್ಯ ಸರಿ ಇದೆ […]

ಕದ್ರಿಗುಡ್ಡೆಯಲ್ಲಿರುವ ಯುದ್ಧ ಸ್ಮಾರಕದಲ್ಲಿ ವೀರ ಯೋಧರ ಸ್ಮಾರಕಗಳಿಗೆ ಗೌರವ

Wednesday, July 27th, 2016
kargil-vijay-divas

ಮಂಗಳೂರು: ಕಾರ್ಗಿಲ್ ವಿಜಯೋತ್ಸವ ದಿನದ ನಿಮಿತ್ತ ಮಂಗಳವಾರ ಸಂಜೆ ಇಲ್ಲಿಯ ಕದ್ರಿಗುಡ್ಡೆಯಲ್ಲಿರುವ ಯುದ್ಧ ಸ್ಮಾರಕದಲ್ಲಿ ದೇಶಕ್ಕಾಗಿ ಮಡಿದ ವೀರ ಯೋಧರ ಸ್ಮಾರಕಗಳಿಗೆ ಪುಷ್ಪಾರ್ಚನೆ ಹಾಗೂ ಮೊಂಬತ್ತಿ ದೀಪ ಬೆಳಗಿಸಿ ಗೌರವ ಸಲ್ಲಿಸಲಾಯಿತು. ದ. ಕ. ಜಿಲ್ಲಾ ಮಾಜಿ ಸೈನಿಕರ ಸಂಘ, ಶಾಸ್ತಾವು ಭೂತನಾಥೇಶ್ವರ ಪ್ರತಿಷ್ಠಾನ, ಲಯನ್ಸ್ ಕ್ಲಬ್ ಮತ್ತು ಸಮಗ್ರ ಕಲಿಕಾ ಕೇಂದ್ರದ ಸಹಯೋಗದೊಂದಿಗೆ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಮಹಿಳೆಯರು ಮಡಿದ ಯೋಧರಿಗೆ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿಕ್ರಮ್ ದತ್ತ, ಪದಾಧಿಕಾರಿಗಳಾದ […]

ಮಂಜೇಶ್ವರದಲ್ಲಿ ಜೈವ ಕೃಷಿ ಯೋಜನೆ : ಜಿ.ಪಂ.ತಂಡ ಭಟಿ

Friday, February 5th, 2016
Javika

ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತಿನ ಪಾವೂರು ಬಾಚಳಿಕೆ ಬಂಗಳೆ ಪ್ರದೇಶದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ವಿನೂತನ ಜೈವಕೃಷಿ ಯೋಜನೆಯನ್ನು ಜ್ಯಾರಿಗೊಳಿಸಲು ನಿಧರಿಸಿದ್ದು ಪ್ರಸ್ತುತ ಸ್ಥಳಕ್ಕೆ ಜಿಲ್ಲಾ ಪಂಚಾಯತು ಹಾಗೂ ಕಂದಾಯ ಅಧಿಕಾರಿಗಳ ನಿಯೋಗ ಭಟಿ ನೀಡಿತು. ಕಾಸರಗೋಡು ಜಿಲ್ಲಾ ಪಂಚಾಯತಿನ ಬಹು ನಿರೀಕ್ಷೆಯ ಯೋಜನೆ ಇದಾಗಿದ್ದು, ಸಂಪೂರ್ಣವಾದ ಜೈವಕೃಷಿ ಯನ್ನೊಳಗೊಂಡ ಭತ್ತದ ಕೃಷಿ, ತರಕಾರಿ ಕೃಷಿಯನ್ನು ಅಳವಡಿಸಿ ಯೋಜನೆ ರೂಪಿಸಲಾಗುತ್ತಿದೆ. ಇಲ್ಲಿನ ಸುಮಾರು 11.6 ಎಕರೆ ವಿಸ್ತಿರ್ಣದ ಸ್ಥಳವನ್ನು ಇದಕ್ಕಾಗಿ ಬಳಸಲಾಗುವುದು. ಕೃಷಿ ಸಂಘಗಳು, ಪಾಡಶೇಕರ […]