ಮೀನು ಹಿಡಿಯಲು ಹೋದ ಯುವಕ ಹೆಣವಾಗಿ ಪತ್ತೆ

Friday, July 3rd, 2020
prakash Naik

ಉಪ್ಪಿನಂಗಡಿ  : ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ಹೋದ ಯುವಕ ನೀರಿನಲ್ಲಿ ಮುಳುಗಿ ನಾಪತ್ತೆಗಿದ್ದು, ಮೃತದೇಹ ಸ್ವಲ್ಪ ದೂರದಲ್ಲಿ ನದಿಯಲ್ಲಿಶುಕ್ರವಾರ  ಮಧ್ಯಾಹ್ನ ಪತ್ತೆಯಾಗಿದೆ. ಕಡಬ ತಾಲೂಕಿನ ಎಡಮಂಗಲದ ದೊಳ್ತಿಲ ಎಂಬಲ್ಲಿ ಕುಮಾರಧಾರ ನದಿಗೆ ಮೀನು ಹಿಡಿಯಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿತ್ತು. ನಾಪತ್ತೆಯಾದ ಯುವಕನನ್ನು ದೊಳ್ತಿಲ ರಾಮಣ್ಣ ನಾಯ್ಕ್ ಅವರ ಪುತ್ರ ಪ್ರಕಾಶ್ 26(ವ) ಎಂದು ಗುರುತಿಸಲಾಗಿದ್ದು, ಪ್ರಕಾಶ್ ಹಾಗೂ ತನ್ನ ಸ್ನೇಹಿತರಿಬ್ಬರ ಜೊತೆ ಮೀನು ಹಿಡಿಯಲು ಬಿಟ್ಟಿದ್ದ ಬಲೆಯನ್ನು ಈಜಿ ತರುತ್ತಿರುವಾಗ […]

ಅಕ್ರಮ ಕಸಾಯಿಖಾನೆಗೆ ದಾಳಿ,ಇಬ್ಬರ ಸೆರೆ..

Friday, May 18th, 2018
lidnap

ಬಂಟ್ವಾಳ: ಬಂಟ್ವಾಳ ತಾಲೂಕಿನ ಪರಂಗಿಪೇಟೆ ಸಮೀಪದ ಅಮ್ಮೆಮಾರ್ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮಾರಿಪಳ್ಳ ನಿವಾಸಿಗಳಾದ ಹಸನಬ್ಬ ಮತ್ತು ಮನ್ಸೂರ್ ಬಂಧಿತ ಆರೋಪಿಗಳು. ರಾತ್ರಿ ಗಸ್ತು ತಿರುಗುತ್ತಿದ್ದ ಸಮಯ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲೀಸರು ಸ್ಥಳದಲ್ಲಿ ಹಸುಗಳನ್ನು ಕಡಿದು ಮಾಂಸ ಮಾಡಿದ್ದ 11 ಹಸುವಿನ ಚರ್ಮ ಮತ್ತು ಮಾಂಸ ಮಾಡಲು ತಯಾರಿಸಿದ್ದ ಕದ್ದು ತರಲಾಗಿದ್ದ ಒಂದು ಹಸು ಮತ್ತು ಮೂರು ದಿನದ ಕರುವನ್ನು […]

‘ಕಟಪಾಡಿ ಕಟ್ಟಪ್ಪ’ನ ಆಡಿಯೋ ರಿಲೀಸ್‌ಗೆ ಸುದೀಪ್‌!

Thursday, April 26th, 2018
sudeep

ಮಂಗಳೂರು: ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ ನಿರ್ಮಾಣದ ‘ಕಟಪಾಡಿ ಕಟ್ಟಪ್ಪ’ ಸಿನೆಮಾ ಈಗ ರಿಲೀಸ್‌ನ ಹೊಸ್ತಿಲಲ್ಲಿದೆ. ಇದರ ಪೂರ್ವಭಾವಿಯಾಗಿ ಚಿತ್ರದ ಆಡಿಯೋ ರಿಲೀಸ್‌ ಎ. 29ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ವಿಶೇಷವೆಂದರೆ ಅಭಿನಯ ಚಕ್ರವರ್ತಿ ಸುದೀಪ್‌ ಆಡಿಯೋ ರಿಲೀಸ್‌ ಗಾಗಿ ಮಂಗಳೂರಿಗೆ ಆಗಮಿಸಲಿದ್ದಾರೆ. ತುಳು ಸಿನೆಮಾದ ಕಾರ್ಯಕ್ರಮದಲ್ಲಿ ಸುದೀಪ್‌ ಭಾಗವಹಿಸಲು ಒಪ್ಪಿಕೊಂಡಿರುವುದು ಕೋಸ್ಟಲ್‌ವುಡ್‌ನ‌ಲ್ಲಿ ಗರಿ ಮೂಡಿಸಿದಂತಾಗಿದೆ. ಹಲವಾರು ಸಿನೆಮಾ ಹಾಗೂ ರಾಷ್ಟ್ರೀಯ ಗೌರವ ಪಡೆಯುತ್ತಿರುವ ತುಳು ಸಿನೆಮಾ ರಂಗವನ್ನು […]

ಕುಂದಾಪುರ ವೃದ್ಧೆ ಕೊಲೆ ಪ್ರಕರಣ: ತಪ್ಪಿತಸ್ಥನಿಗೆ ಜೀವಾವಧಿ ಶಿಕ್ಷೆ

Monday, March 26th, 2018
kundapura

ಕುಂದಾಪುರ: ಕುಂದಾಪುರದ ಲಾಡ್ಜ್‌ನಲ್ಲಿ ನಡೆದಿದ್ದ ವೃದ್ಧೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಅಜರ್‌ಖಾನ್ ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ, 50 ಸಾವಿರ ರೂ . ದಂಡ ವಿಧಿಸಿ ಆದೇಶ ಹೊರಡಿಸಿದೆ. ಶಿಕ್ಷೆಗೆ ಗುರಿಯಾಗಿರುವ ಅಜರ್‌ಖಾನ್ ಅಲಿಯಾಸ್ ಅಜಯ್ ಬಾಬು ಗುಜರಾತ್ ಮೂಲದವ. ಈತ ಗಂಗೊಳ್ಳಿಯ ಲಲಿತಾ ದೇವಾಡಿಗ ಎಂಬ ವೃದ್ಧೆಯನ್ನು 2015 ಏಪ್ರಿಲ್ 15ರಂದು ಕೊಲೆ ಮಾಡಿದ್ದ. ವೃದ್ಧೆ ಲಲಿತಾ ಅವರ ಮಗಳ ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಅಜರ್‌ ಈ ಕೃತ್ಯವೆಸಗಿದ್ದ. ಲಲಿತಾರನ್ನು […]

ಕ್ರೀಡೆಯಿಂದ ಒತ್ತಡ ಜೀವನಗಳಿಗೆ ಪರಿಹಾರ: ವಿಶಾಲ್ ಹೆಗ್ಡೆ

Wednesday, March 7th, 2018
sports

ಉಳ್ಳಾಲ: ಕ್ರೀಡೆಯಲ್ಲಿ, ವ್ಯಾಯಾಮದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಲ್ಲಿ ಜೀವನದಲ್ಲಿ ಉತ್ಸಾಹದೊಂದಿಗೆ ಒತ್ತಡದ ಜೀವನಗಳಿಗೆ ಪರಿಹಾರವನ್ನು ಕಾಣಲು ಸಾಧ್ಯ. ಇದರಿಂದ ಮುಂಬರುವ ರೋಗಗಳನ್ನು ತಡೆಯಲು ಸಾಧ್ಯ ಎಂದು ಎಂದು ನಿಟ್ಟೆ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ ಹೇಳಿದರು. ದಕ್ಷಿಣ ವಲಯ ಮಟ್ಟದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಅಂತರಕಾಲೇಜು ಕ್ರೀಡಾಕೂಟ ನಿಟ್ಟೆ ಅಕೊಲೇಡ್ಸ್ -2018 ಗೆ ಕ್ಷೇಮ ಆಡಿಟೋರಿಯಂನಲ್ಲಿ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಆರೋಗ್ಯ ಕ್ಷೇತ್ರ ಕ್ರೀಡೆಯಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ರೋಗಗಳನ್ನು ದೂರವಾಗಿಸಲು […]

ವೃದ್ಧನ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಮನೆಗೆ ತಲುಪಿಸಿದ ಪೊಲೀಸರು!

Monday, March 5th, 2018
mangaluru

ಮಂಗಳೂರು: ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧನ ಮೃತದೇಹವನ್ನು ಪೊಲೀಸರೇ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿರುವ ಘಟನೆ ಪುತ್ತೂರು ತಾಲೂಕು ಕೊಯಿಲ ಗ್ರಾಮದ ಗುಲ್ಗೋಡಿ ಎಂಬಲ್ಲಿ ನಡೆದಿದೆ. ತರಿಕೆರೆಯ ಜಂಬದಹಳ್ಳಿಯ ಪಳನಿಸ್ವಾಮಿ (80)ಕುಸಿದು ಬಿದ್ದು ಸಾವನ್ನಪ್ಪಿದ್ದರು. ಊರಿನಲ್ಲಿ ದೈವದ ನೇಮ ಇದ್ದ ಕಾರಣ ಶವ ಹೊರಲು ಗ್ರಾಮಸ್ಥರು ಯಾರೂ ಮುಂದೆ ಬಾರದ್ದಕ್ಕೆ ಅಸಹಾಯಕವಾಗಿದ್ದ ಕುಟುಂಬಕ್ಕೆ ಪೊಲೀಸರು ನೆರವಾದರು. ಪುತ್ತೂರು ಠಾಣೆಯ ಪಿಎಸ್ಐ ಪ್ರಕಾಶ್, ಎಎಸ್ಐ ರವಿ, ಹೋಂಗಾರ್ಡ್ ಸಂದೇಶ್ ಅವರು ವೃದ್ಧನ ಮೃತದೇಹವನ್ನು ಹೊತ್ತು ಮನೆ ತಲುಪಿಸಿದರು.