ಪ್ರವಾದಿ ಬಗ್ಗೆ ಅವಹೇಳನ ಆರೋಪ : ನಾಪೋಕ್ಲುವಿನಲ್ಲಿ ದೂರು ದಾಖಲು
Tuesday, February 18th, 2020ಮಡಿಕೇರಿ : ಪ್ರವಾದಿ ಪೈಗಂಬರರು ಹಾಗೂ ಇಸ್ಲಾಂ ಧರ್ಮವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಅತುಲ್ ಕುಮಾರ್ (ಮಧುಗಿರಿ ಮೋದಿ) ಎಂಬುವವರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಹಾರಿಸ್ ನಾಪೋಕ್ಲು ಅವರು ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅತುಲ್ ಕುಮಾರ್ ಎಂಬುವವರು ಮುಸಲ್ಮಾನರ ಭಾವನೆಗೆ ದಕ್ಕೆ ತರುವ ರೀತಿಯಲ್ಲಿ ಪ್ರವಾದಿ ಪೈಗಂಬರರು ಹಾಗೂ ಇಸ್ಲಾಂ ಧರ್ಮದ ಬಗ್ಗೆ ಮಾತನಾಡಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾರಿಸ್ ದೂರಿನಲ್ಲಿ ತಿಳಿಸಿದ್ದಾರೆ.