ವಸ್ತುವಿನ ಅವ್ಯಕ್ತ ಪ್ರಜ್ಞೆಯೇ ಕಥೆಯ ಹುಟ್ಟಿಗೆ ಮೂಲ : ಪ್ರೋ. ಪಾಟೀಲ

Thursday, January 30th, 2020
pateel

ವಿದ್ಯಾಗಿರಿ : ಅಕ್ಷರಕ್ಕೆ ಪರ್ಯಾಯವಾದದ್ದು ಯಾವುದೂ ಇಲ್ಲ. ಕಥೆ ಅನುಭವ ಮತ್ತು ಪರಾಮರ್ಶೆಯಲ್ಲಿ ವ್ಯಕ್ತಪಡಿಸುವುದಕ್ಕೆ ಸಾಧ್ಯವಾಗುವ ಮಾಧ್ಯಮ ಎಂದು ಕಥೆಗಾರ ಪ್ರೊ. ರಾಘವೇಂದ್ರ ಪಾಟೀಲ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಜಂಟಿ ಆಶ್ರಯದಲ್ಲಿ ಆಯೋಜಿಸಿದ ’ಬಸವರಾಜ ಕಟ್ಟೀಮನಿ ಕಥಾ ಸಾಹಿತ್ಯ-ವಿಚಾರ ಸಂಕಿರಣ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನುಭವದ ನವೀಕೃತ ರೂಪವೇ ಕಥೆ. ಕಥೆಗಾರನ ಅಂತರ್ಗರ್ಭದ ಎಲ್ಲಾ ಭಾವಗಳನ್ನು ಹೊರಹಾಕುವುದಕ್ಕೆ ಸಾಹಿತ್ಯದಲ್ಲಿ ಕಥೆ ಉತ್ತಮ […]

ಕೇಂದ್ರದ ಜನವಿರೋಧಿ ನೀತಿ ವಿರುದ್ಧ ಕಾರ್ಮಿಕರ ಪ್ರತಿಭಟನೆ

Friday, March 16th, 2018
udupi-protest

ಉಡುಪಿ: ಕೇಂದ್ರ ಸರಕಾರದ ಜನವಿರೋಧಿ, ಕಾರ್ಮಿಕ ಹಾಗೂ ರೈತ ವಿರೋಧಿ ಮತ್ತು ಕಾರ್ಪೋರೇಟ್ ಪರ ನೀತಿಗಳನ್ನು ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಇಂದು ನಡೆಸಿದ ದೇಶವ್ಯಾಪಿ ಪ್ರತಿಭಟನೆಯನ್ನು ಉಡುಪಿಯಲ್ಲೂ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಆಶ್ರಯದಲ್ಲಿ ನಡೆಸಲಾಯಿತು. ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಸಂಜೆ ಕಾರ್ಮಿಕರ ಬೃಹತ್ ಮೆರವಣಿಗೆ, ಧರಣಿ ಮತ್ತು ಪ್ರತಿಭಟನಾ ಸಭೆ ನಡೆಯಿತು. ಕೇಂದ್ರ ಸರಕಾರ ರೈತ, ಕಾರ್ಮಿಕ ಹಾಗೂ ಸಾಮಾನ್ಯ ಜನರ […]

ಉಡುಪಿ: ಕಟ್ಟಡ ಕಾರ್ಮಿಕರಿಂದ ಜಿಲ್ಲಾಧಿಕಾರಿ ಕಛೇರಿ ರಜತಾದ್ರಿ ಎದುರು ಧರಣಿ

Thursday, October 12th, 2017
Udupi

ಉಡುಪಿ:  ಕಾರ್ಮಿಕರ ಇಲಾಖೆ ಗಳಲ್ಲಿ ಸಿಬ್ಬಂದಿ ನೇಮಕ ಮಾಡುವಂತೆ, ಕಟ್ಟಡ ಕಾರ್ಮಿಕರ ಸೆಸ್‌ಹಣ ಜಿಎಸ್‌ಟಿಗೆ ಒಳಪಡಿಸಿ ಸೌಲಭ್ಯ ಕಡಿತಗೊಳಿಸುವುದನ್ನು ವಿರೋಧಿಸಿ ಹಾಗೂ ಮರಳು ಕೊರತೆ ಬಗೆಹರಿಸಿ ಕಡಿಮೆ ದರದಲ್ಲಿ ಮರಳು ವಿತರಣೆ ಆಗ್ರಹಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಗುರುವಾರ ಮಣಿಪಾಲ ಜಿಲ್ಲಾಧಿಕಾರಿ ಕಛೇರಿ ರಜತಾದ್ರಿ ಎದುರು ಧರಣಿ ನಡೆಸಿದರು. ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಡುಪಿ ಜಿಲ್ಲೆಯಲ್ಲಿ ಯುನಿಟ್‌ಗೆ 2000ರೂ.ಗಿಂತ ಜಾಸ್ತಿ […]