ವಿದ್ಯುತ್ ಕಂಬದಲ್ಲಿ ಇಂಟರ್ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶ, ಸಾವು

Sunday, December 27th, 2020
Padmanabha

ಮಂಗಳೂರು: ಖಾಸಗಿ ಸಂಸ್ಥೆಯೊಂದರ  ಉದ್ಯೋಗಿ  ವಿದ್ಯುತ್ ಕಂಬದಲ್ಲಿ ಬಿಎಸ್ಎನ್ಎಲ್ ಇಂಟರ್ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ  ಓರ್ವ ವ್ಯಕ್ತಿ  ಮೃತಪಟ್ಟಿರುವ ದುರ್ಘಟನೆ ಪುತ್ತೂರು ಕೋರ್ಟ್ ರೋಡಿನ ಮಾರ್ಕೆಟ್ ಬಳಿ ನಡೆದಿದೆ. ಅರ್ಲಪದವಿನ ಬೆಟ್ಟಂಪಾಡಿ ನಿವಾಸಿ ಪದ್ಮನಾಭ ಮೃತಪಟ್ಟ ದುರ್ದೈವಿ. ಪುತ್ತೂರು ಮೀನು‌ ಮಾರುಕಟ್ಟೆಯ ಬಳಿ ಇಂಟರ್ನೆಟ್ ಕೇಬಲ್ ಅಳವಡಿಸುವ ಕಾರ್ಯ‌ ನಡೆಸಲಾಗುತ್ತಿತ್ತು. ಈ ವೇಳೆ ವಿದ್ಯುತ್ ಪ್ರವಹಿಸಿ ಬೆಟ್ಟಂಪಾಡಿ ನಿವಾಸಿ  ಪದ್ಮನಾಭ ಮೃತಪಟ್ಟಿದ್ದಾರೆ. ಅವರು  ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸಕ್ರಿಯ ಕಾರ್ಯಕರ್ತರಾಗಿದ್ದರು. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ […]

ಬಿಎಸ್‍ಎನ್‍ಎಲ್ ನೂತನ ಜಿಎಂ ಅಧಿಕಾರ ಸ್ವೀಕಾರ

Tuesday, August 18th, 2020
sukumaran

ಮಂಗಳೂರು : ಬಿ.ಎಸ್.ಎನ್.ಎಲ್. ಟೆಲಿಕಾಂ ವೃತ್ತ ದಕ್ಷಿಣ ಕನ್ನಡ, ಮಂಗಳೂರು ಇಲ್ಲಿನ ಪ್ರಧಾನ ವ್ಯವಸ್ಥಾಪಕರಾಗಿ ಎ.ಎಸ್ ಸುಕುಮಾರನ್ ಐ.ಟಿಎಸ್ ಅವರು ಆಗಸ್ಟ್ 17 ರಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ಮೊದಲು ಕೇರಳದ ತ್ರಿಶೂರ್ ನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ.

ದ.ಕ ಮತ್ತು ಉಡುಪಿ ಜಿಲ್ಲೆಗಳ ವತಿಯಿಂದ ಬಿಎಸ್ಎನ್ಎಲ್ ಗುತ್ತಿಗೆ ನೌಕರರ ಪ್ರತಿಭಟನೆ

Friday, September 9th, 2016
bsnl-protest

ಮಂಗಳೂರು: ಸ್ವಾತಂತ್ರ್ಯ ನಂತರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗೆ ಮಣೆ ಹಾಕಿದ್ದವು. ಅಂದಿನಿಂದ ಇಂದಿನ ತನಕ ಸರಕಾರಗಳ ಉದಾರೀಕರಣ ನೀತಿಗೆ ಭಾರಿ ಉತ್ಸಾಹ ತೋರುತ್ತಿರುವುದು ಖೇದಕರ ಎಂದು ಕರ್ನಾಟಕ ರಾಜ್ಯ ಬಿಎಸ್ಎನ್ಎಲ್ ವರ್ಕರ್ಸ್ ಫೆಡರೇಶನ್ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷ ವಸಂತ ಆಚಾರಿ ಹೇಳಿದರು. ಕರ್ನಾಟಕ ರಾಜ್ಯ ಬಿಎಸ್ಎನ್ಎಲ್ ನಾನ್ ಪರ್ಮನೆಂಟ್ ವರ್ಕರ್ಸ್ ಫೆಡರೇಶನ್ ದ.ಕ ಮತ್ತು ಉಡುಪಿ ಜಿಲ್ಲೆಗಳ ವತಿಯಿಂದ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳೂರು ಬಿಎಸ್ಎನ್ಎಲ್ ಪ್ರಧಾನ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ […]

ಬಿಎಸ್ಎನ್ಎಲ್ ಪ್ರಧಾನ ಕಛೇರಿ ಎದುರು ಸಿಐಟಿಯು ವತಿಯಿಂದ ದರಣಿ

Tuesday, December 14th, 2010
ಬಿಎಸ್ಎನ್ಎಲ್ ಪ್ರಧಾನ ಕಛೇರಿ ಎದುರು ಸಿಐಟಿಯು ವತಿಯಿಂದ ದರಣಿ

ಮಂಗಳೂರು; ಬಿಎಸ್ಎನ್ಎಲ್ ದಿನಕೂಲಿ ಕಾರ್ಮಿಕರ ಕೆಲಸದ ಭದ್ರತೆಗಾಗಿ ಸಿಐಟಿಯು ವತಿಯಿಂದ ಒಂದು ದಿನದ ಧರಣಿ ಸತ್ಯಾಗ್ರಹವು ಇಂದು ಬೆಳಿಗ್ಗೆ ನಗರದ ಬಿಎಸ್ಎನ್ಎಲ್ ಪ್ರಧಾನ ಕಛೇರಿ ಮುಂದುಗಡೆ ನಡೆಯಿತು. ಕೇಂದ್ರ ಸರಕಾರದ ಅಧೀನತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಸ್ಎನ್ಎಲ್ ಪ್ರಧಾನ ಕಛೇರಿ ಹಾಗೂ ಎಲ್ಲಾ ಎಕ್ಸ್ಚೇಂಚ್ ಕೇಂದ್ರಗಳಲ್ಲಿ ದಿನಕೂಲಿ ಕಾರ್ಮಿಕರಿಗಾಗಿ ಗುತ್ತಿಗೆದಾರರ ಅಡಿಯಲ್ಲಿ ಕಳೆದ 12 ವರ್ಷಗಳಿಂದ ವೇತನ ಹೊರತು ಪಡಿಸಿ ಯಾವುದೇ ಸವಲತ್ತುಗಳಿಲ್ಲದೆ ದುಡಿಯುತ್ತಿದ್ದಾರೆ. ಕೆಲಸದ ಒತ್ತಡಗಳ ಮಧ್ಯೆ ಗ್ರಾಹಕರಿಗೆ ಅನುಕೂಲವಾಗುವಂತೆ ಸದಾ ದುಡಿಯುತ್ತಿರುವ ಈ ಕಾರ್ಮಿಕರಿಗೆ ಕೆಲಸದ ಭದ್ರತೆಯಿಲ್ಲ […]