ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಸಹ ಸವಾರ ಸಾವು – ಅಂಗಾಂಗ ದಾನ

Tuesday, May 31st, 2022
deeraj

ಮಂಗಳೂರು : ಬಿಕರ್ನಕಟ್ಟೆ ರಾ.ಹೆ 73ರಲ್ಲಿ ಡಿವೈಡರ್ ಗೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಸಹ ಸವಾರ ಸೋಮವಾರ ರಾತ್ರಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದು, ಮೃತರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಶನಿವಾರ ತಡರಾತ್ರಿ ಗಣೇಶ್ ತನ್ನ ಸ್ನೇಹಿತ ಧೀರಜ್ ನನ್ನು ಮನೆಗೆ ಬಿಟ್ಟು ಬರುವುದಾಗಿ ಬೈಕ್ ನಲ್ಲಿ ತೆರಳಿದ್ದ ವೇಳೆ, ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಗೆ ಢಿಕ್ಕಿ ಹೊಡೆದು ಸವಾರರು ಗಂಭೀರ ಗಾಯಗೊಂಡಿದ್ದರು. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ಚಿಕಿತ್ಸೆ […]

ಲಾಕ್ ಡೌನ್ ಜೂಜಾಟ : ಹನ್ನೊಂದು ಮಂದಿಯ ಬಂಧನ, 1,76,800/- ರೂ ಮೌಲ್ಯದ ಸೊತ್ತು ವಶ

Friday, May 21st, 2021
Andar Bahar

ಮಂಗಳೂರು : ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಗ್ರಾಮದ ಬಿಕರ್ನಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ, ಸಾಮಾಜಿಕ ಅಂತರವನ್ನು ಪಾಲಿಸದೇ ಮಾಸ್ಕ್ ಧರಿಸದೇ ಅಕ್ರಮ ಜೂಜಾಟವಾದ ಆಂದರ್- ಬಾಹರ್ ಆಟವನ್ನು ಆಡುತ್ತಿದ್ದ ಹನ್ನೊಂದು ಮಂದಿಯನ್ನು ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐಯವರಾದ  ರಾಜೇಂದ್ರ. ಬಿ, ಪ್ರದೀಪ ಟಿಆರ್ ಮತ್ತು ಸಿಬ್ಬಂದಿಗಳು ಮೇ 21 ಶುಕ್ರವಾರ ಬಂಧಿಸಿದ್ದಾರೆ. 1) ರಾಜೇಂದ್ರ ಹಲ್ದಾರ್(41), ವಾಸ:, ಆದಿಲಬಾದ್, ತೆಲಂಗಾಣ, ಹಾಲಿ ವಾಸ ಪದವು ಕುಲಶೇಖರ, ಮಂಗಳೂರು 2) […]

ಬಿಕರ್ನಕಟ್ಟೆ: ಬಸ್‌ ಡಿಕ್ಕಿ, ವೃದ್ಧೆ ಸ್ಥಳದಲ್ಲೇ ಸಾವು

Friday, November 3rd, 2017
lilli pinto

ಮಂಗಳೂರು: ಬಿಕರ್ನಕಟ್ಟೆ ಬಾಲ ಏಸು ಮಂದಿರದ ಬಳಿ ಸಿಟಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ವೃದ್ಧೆಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕುಲಶೇಖರ ಕೋಟಿಮುರ ನಿವಾಸಿ ಲಿಲ್ಲಿ ಪಿಂಟೋ (65) ಸಾವನ್ನಪ್ಪರುವ ವೃದ್ಧೆ. ಬಾಲ ಏಸು ಮಂದಿರದಲ್ಲಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮನೆಗೆ ವಾಪಸ್‌ ಮರಳುವ ವೇಳೆ ಬಸ್‌ ಡಿಕ್ಕಿ ಹೊಡೆದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಡು, ತನಿಖೆ ಪ್ರಾರಂಭಿಸಿದ್ದಾರೆ.

ಕೋರ್ಸ್ ಮುಗಿದ ನಂತರವೂ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡದಿರುವುದನ್ನು ಪ್ರಶ್ನಿಸಿ ಪ್ರತಿಭಟನೆ

Wednesday, October 30th, 2013
Academy of Career Guidance

ಮಂಗಳೂರು : ಕೋರ್ಸ್ ಮುಗಿದ ನಂತರವೂ ಯಾವುದೇ ರೀತಿಯ ಉದ್ಯೋಗವನ್ನು ಕೊಡದಿರುವ ಅಕಾಡೆಮಿ ಕ್ಯಾರಿಯರ್ ಗೈಡೆನ್ಸ್ ಇನ್ಕಾರ್ಪೋರೇಶನ್ ಸಂಸ್ಥೆಯು ಸಂತೋಷ್ ಕುಮಾರ್ ಎಂಬುವವರ ವಿರುಧ್ಢ ವಿದ್ಯಾರ್ಥಿಗಳು ಹಾಗೂ ಹೆತ್ತವರು ಸೇರಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ನಗರದ ಬಿಕರ್ನಕಟ್ಟೆ ಬಳಿ ಇರುವ ಈ ಸಂಸ್ಥೆಯ ಸಂತೋಷ್ ಕುಮಾರ್ ಸೈನ್ಯದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ ಹಣ ಪಡೆದುಕೊಂಡು ಹಲವು ರೀತಿಯ ತರಬೇತಿಗಳನ್ನು ನೀಡುತ್ತಿದ್ದು, ತರಬೇತಿಯ ನಂತರ ಉದ್ಯೋಗ ಒದಗಿಸಿಕೊಡುವ ಆಮಿಷವೊಡ್ಡಿ ವಿದ್ಯಾರ್ಥಿಗಳನ್ನು ಸಂಸ್ಥೆಗೆ ಸೇರಿಸಿಕೊಂಡಿದ್ದರು. ಹಣ ನೀಡಿ ಎಂಟು […]

ಅಪಘಾತದಿಂದ ನೊಂದ ವ್ಯಕ್ತಿ ಆತ್ಮಹತ್ಯೆ

Wednesday, April 3rd, 2013
Man sucide at well

ಮಂಗಳೂರು : ಕೆಲ ತಿಂಗಳ ಹಿಂದೆ ನಡೆದ ಅಪಘಾತದಿಂದಾಗಿ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಗರದ ಬಿಕರ್ನಕಟ್ಟೆ ಬಳಿ ನಡೆದಿದೆ. ಕಳೆದ ಫೆಬ್ರವರಿ ೨೩ ರಂದು ವೆಲೇರಿ ಯನ್ ರೋಡ್ರಿಗಸ್ ಎಂಬವರು ಕಂಕನಾಡಿ ಬಳಿ ತನ್ನ ಇನ್ನೋವಾ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ೧೨ ವರ್ಷದ  ಬಾಲಕಿಯೊಬ್ಬಳು ಇವರ ಕಾರಿನಡಿಗೆ ಬಿದ್ದು ಮೃತಪಟ್ಟಿದ್ದಳು. ರಸ್ತೆ ದಾಟುವಾಗ ಈ ಅಪಘಾತ ನಡೆದಿತ್ತು. ಈ ಅಪಘಾತದಿಂದ ವೆಲೇರಿಯನ್ ರವರು ಸಾಕಷ್ಟು ನೊಂದಿದ್ದು ಇದೆ ಕಾರಣದಿಂದ ನಿನ್ನೆ ಬೆಳಿಗ್ಗೆ […]