ಮಂಗಳೂರು ಬಿಜೆಪಿ ಕಚೇರಿಯಲ್ಲಿ ಗೋಪೂಜೆ

Monday, November 16th, 2020
BJP Gopooja

ಮಂಗಳೂರು : ಗೋವನ್ನು ವಿಶ್ವದ ತಾಯಿ ಎಂದು ಬಣ್ಣಿಸಲಾಗಿದೆ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ಗೋವು ಅವಿಭಾಜ್ಯ ಅಂಗವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಗೋಪೂಜೆ ನೆರವೇರಿಸಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಬಿಜೆಪಿ ಕಚೇರಿ ಮುಂಭಾಗ ಗೋಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು. ಗೋವಿನ ಸಂರಕ್ಷಣೆ ಎಂದರೆ ರಾಷ್ಟ್ರದ, ಕೃಷಿ ಹಾಗೂ ಕುಟುಂಬದ ಸಂರಕ್ಷಣೆ ಮಾಡಿದಂತೆ . ಹಾಗಾಗಿ ತನ್ನದೆಲ್ಲವನ್ನೂ ತ್ಯಾಗ ಮಾಡುವ ಗೋವಿನ ಪೂಜೆ ಮಾಡುವುದು ಭಾರತೀಯ […]

ತಿರುವನಂತಪುರ ಬಿಜೆಪಿ ಕಚೇರಿ ಮೇಲೆ ಬಾಂಬ್‌ ಎಸೆತ, ಸಿಪಿಎಂ ಕೃತ್ಯ

Wednesday, September 7th, 2016
Bomb-BJP-office

ತಿರುವನಂತಪುರ : ನಗರ ಹೃದಯಭಾಗದಲ್ಲಿರುವ ಬಿಜೆಪಿ ಕಚೇರಿಯ ಮೇಲೆ ಕಚ್ಚಾ ಬಾಂಬ್‌ ಎಸೆಯಲಾದ ಘಟನೆ ನಡೆದಿದ್ದು ಇದರ ಹಿಂದೆ ಸಿಪಿಐಎಂ ಕಾರ್ಯಕರ್ತರು ಇರುವುದಾಗಿ ಬಿಜೆಪಿ ಆರೋಪಿಸಿದೆ. ಬಾಂಬ್‌ ಎಸೆತದಿಂದ ಯಾರೂ ಗಾಯಗೊಂಡ ವರದಿ ಇಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ಸೆಪ್ಟಂಬರ್‌ 23ರಿಂದ ಮೂರು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ಪರಿಷತ್‌ ಸಭೆ ನಡೆಯಲಿರುವ, ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಮೊದಲಾದ ಪಕ್ಷದ ವರಿಷ್ಠರು ಭಾಗವಹಿಸಲಿರುವ, ಕೋಯಿಕ್ಕೋಡ್‌ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ […]

ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್‌ ಶಾ ಆ. 21ರಂದು ಮಂಗಳೂರಿಗೆ

Friday, August 19th, 2016
Nalin-Kumar-Kateel

ಮಂಗಳೂರು: ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್‌ ಶಾ ಆ. 21ರಂದು ಮಂಗಳೂರಿಗೆ ಆಗಮಿಸಲಿದ್ದು, ಉಳ್ಳಾಲದಲ್ಲಿ ಜರಗಲಿರುವ 70ನೇ ಸ್ವಾತಂತ್ರ್ಯಸಂಭ್ರಮ ಹಾಗೂ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅಮಿತ್‌ ಶಾ ಆ. 21ರಂದು ಉಳ್ಳಾಲಕ್ಕೆ ಭೇಟಿ ನೀಡಿ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಗೋವಾದಿಂದ ಅವರು ಬೆಳಗ್ಗೆ 4.30ಕ್ಕೆ ಮಂಗಳೂರು ಜಂಕ್ಷನ್‌ ರೈಲ್ವೇ ನಿಲ್ದಾಣಕ್ಕೆ ಆಗಮಿಸುವರು. ಬೆಳಗ್ಗೆ 10 ಗಂಟೆಗೆ ನಗರದ ಬಿಜೆಪಿ ಕಚೇರಿಗೆ ಆಗಮಿಸಿ “ಗಿಡ ನೆಡಿ ಪರಿಸರ ಉಳಿಸಿ’ ಕಾರ್ಯಕ್ರಮದ ಅನ್ವಯ ಗಿಡ ನೆಡಲಿದ್ದಾರೆ. 10.20ಕ್ಕೆ ಪಂಪ್‌ವೆಲ್‌ […]

ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಿಗೆ ಪ್ರತಿ ತಿಂಗಳು ಎರಡು ಬಾರಿ ಭೇಟಿ ನೀಡಲಾಗುವುದು: ಕಟೀಲ್‌

Thursday, July 7th, 2016
Nalin

ಪುತ್ತೂರು: ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಿಗೆ ಪ್ರತಿ ತಿಂಗಳು ಎರಡು ಬಾರಿ ಭೇಟಿ ನೀಡಲಾಗುವುದು. ಈ ಹಿಂದೆ ಯೋಜನೆ ರೂಪಿಸಲಾಯಿತಾದರೂ ಕಾರ್ಯಕ್ರಮದ ಒತ್ತಡದಿಂದ ಭೇಟಿ ನೀಡಲು ಆಗಿರಲಿಲ್ಲ. ಮುಂದೆ ಕ್ಷೇತ್ರ ಪ್ರವಾಸ ಹಮ್ಮಿಕೊಂಡು ಜನರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆದರ್ಶ ರೈಲು ನಿಲ್ದಾಣದ ಜೊತೆಗೆ ಜೆಪ್ಪು ಕುಡಿಪ್ಪಾಡಿ, ಸುಬ್ರಹ್ಮಣ್ಯ, ಎಡಮಂಗಲದಲ್ಲಿ ರಚನೆಯಾದ ಸೇತುವೆಗಳ ಉದ್ಘಾಟನೆ ನಡೆಯಲಿದೆ. […]

ಕಾರ್ಯಕರ್ತರಿಗೆ ಅಭಿನಂದನೆ – ಕೋಟ ಶ್ರೀನಿವಾಸ ಪೂಜಾರಿ

Wednesday, December 30th, 2015
kota

ಮಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣೆಯ ಫಲಿತಾಂಶದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಜಗನ್ನಾಥರಾವ್ ಜೋಷಿ ಸೌಧದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಭಿನಂದನಾ ಸಭೆ ಜರುಗಿತು. ಈ ಸಭೆಯಲ್ಲಿ ಎಲ್ಲಾ ಕಾರ್ಯಕರ್ತರು ಮತ್ತು ಮತದಾರರಿಗೆ ಕೋಟ ಶ್ರೀನಿವಾಸ ಪೂಜಾರಿಯವರು ಅಭಿನಂದನೆ ಸಲ್ಲಿಸಿದರು. ಜಿಲ್ಲಾಧ್ಯಕ್ಷರಾದ ಕೆ.ಪ್ರತಾಪ್‌ಸಿಂಹ ನಾಯಕ್, ಜಿಲ್ಲಾ ಪ್ರಭಾರಿ ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಕ್ಯಾ|ಗಣೇಶ್ ಕಾರ್ಣಿಕ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಮಾಜಿ ವಿ.ಪ.ಸದಸ್ಯ ಕೆ.ಮೋನಪ್ಪ […]

ನಳಿನ್ ಕುಮಾರ್ ಹಾಗು ಮೋದಿ ಜಯಗಳಿಸಿದ್ದಕ್ಕೆ ಕಟೀಲಿಗೆ ಪಾದಯಾತ್ರೆ ಹೊರಟ ಯುವಕ

Saturday, May 31st, 2014
Padayatre

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರಧಾನಿ ಮೋದಿ ಜಯಗಳಿಸಿದರೆ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಪಾದಯಾತ್ರೆ ನಡೆಸುವುದಾಗಿ ಹರಕೆ ಹೊತ್ತಿದ್ದ ಪಕ್ಷದ ಸಕ್ರಿಯ ಯುವ ಕಾರ್ಯಕರ್ತ ಅವಿಷಿತ್ ರೈ ಶುಕ್ರವಾರ ಸಂಜೆ ತಮ್ಮ ಹರಕೆಯನ್ನು ಪೂರೈಸಲು ಕೊಡಿಯಾಲ್ ಬೈಲ್ ನಲ್ಲಿರುವ ಬಿಜೆಪಿ ಕಚೇರಿಯಿಂದ ಪಾದಯಾತ್ರೆ ಆರಂಭಿಸಿದರು. ನಗರದ ಅವಿಷಿತ್ ರೈ ಬಿಜೆಪಿ ಪಕ್ಷ ಹಾಗೂ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು ಕಟೀಲ್ ಹಾಗು ಮೋದಿ ಜಯಗಳಿಸಿದಲ್ಲಿ ಪಾದಯಾತ್ರೆ ಹೊರಡುವುದಾಗಿ […]

ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷನಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಣೆ : ಗಣೇಶ್ ಕಾರ್ಣಿಕ್

Thursday, December 27th, 2012
Capt Ganesh Karnik

ಮಂಗಳೂರು : ವಿದೇಶದಲ್ಲಿರುವ ರಾಜ್ಯದ ಜನರ ಹಿತದೃಷ್ಟಿಯನ್ನು ಕಾಪಾಡುವ ಸಲುವಾಗಿ ಬಿಜೆಪಿ ಸರಕಾರದ ಅವಧಿಯಲ್ಲಿ ಅನಿವಾಸಿ ಭಾರತೀಯ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಇದರಲ್ಲಿ ತನಗೆ ಅವಧಿಗಿಂತ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ ಎಂದು ವಿಧಾನ ಪರಿಷತ್ ನೈರುತ್ಯ ಶಿಕ್ಷಕ ಕ್ಷೇತ್ರದ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಿದ್ದು ತನ್ನನ್ನು ಇದರ ಉಪಾಧ್ಯಕ್ಷನನ್ನಾಗಿ ಮಾಡಿದೆ. ತನ್ನ […]