ಮಂಗಳೂರು ದಸರಾಕ್ಕೆ ಪಾಲಿಕೆ ವತಿಯಿಂದಲೇ ವಿದ್ಯುದ್ದೀಪಾಲಂಕಾರ:- ಶಾಸಕ ಕಾಮತ್

Monday, October 9th, 2023
Vedvyas-Kamath

ಮಂಗಳೂರು : ನಾಡಹಬ್ಬ ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕ್ಷೇತ್ರದ ನವೀಕರಣದ ರೂವಾರಿ ಗೌರವಾನ್ವಿತ ಬಿ.ಜನಾರ್ಧನ ಪೂಜಾರಿಯವರ ನೇತೃತ್ವದಲ್ಲಿ ನಡೆಯಲಿರುವ ಮಂಗಳೂರು ದಸರಾ ಸಂದರ್ಭದಲ್ಲಿ ಈ ಬಾರಿಯೂ ಸಹ ಕಳೆದ ವರ್ಷಗಳಂತೆ ಪಾಲಿಕೆ ವತಿಯಿಂದಲೇ 1.30 ಕೋಟಿ ರೂ ವೆಚ್ಚದಲ್ಲಿ ನಗರಕ್ಕೆ ವಿದ್ಯುದ್ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು. ಮಂಗಳೂರಿನ ಪ್ರತಿಷ್ಠಿತ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಡೆಯುವ ದಸರಾ ಉತ್ಸವವು ಬಹಳ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯಬೇಕೆಂಬ ಉದ್ದೇಶದಿಂದ ಕ್ಷೇತ್ರದ ಮುಂದಾಳುಗಳು, ಮಹಾನಗರ ಪಾಲಿಕೆ ಆಡಳಿತ […]

ಪೂಜಾರಿಯನ್ನು ಭೇಟಿಯಾದ ಶಾಸಕ ಮೊಯ್ದಿನ್ ಬಾವ, ಲೋಬೊ

Saturday, April 21st, 2018
mohauiddin-bava

ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ಧನ ಪೂಜಾರಿ ಅವರನ್ನು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎ. ಮೊಯ್ದಿನ್ ಬಾವ ಮತ್ತು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಏಪ್ರಿಲ್ 27 ಕ್ಕೆ ಎಐಸಿಸಿ ಆಧ್ಯಕ್ಷೆ ಸೋನಿಯಾ ಗಾಂದಿ ಮಂಗಳೂರಿಗೆ ಭೇಟಿ

Monday, April 22nd, 2013
Soniya Gandhi visit to Mangalore

ಮಂಗಳೂರು : ಎಐಸಿಸಿ ಆಧ್ಯಕ್ಷೆ ಸೋನಿಯಾ ಗಾಂದಿ ಮಂಗಳೂರಿಗೆ  ಏಪ್ರಿಲ್ 25 ರ ಬದಲಿಗೆ ಏಪ್ರಿಲ್ 27 ಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಹೇಳಿದರು. ಅವರು ಸೋಮವಾರ ಕದ್ರಿಯಲ್ಲಿರುವ ಕಾಂಗ್ರೆಸ್ ಪಕ್ಷದ  ಚುನಾವಣಾ ಕಚೇರಿಯಲ್ಲಿ ನಡೆದ ಪತ್ರಿಕಾಘೋಷ್ಟಿಯಲ್ಲಿ ಈ ವಿಚಾರವಾಗಿ ಮಾತನಾಡಿದರು. ಲೋಕಸಭಾ ಅಧಿವೇಶನದ ಹಿನ್ನಲೆಯಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಮಾಡುವ ಆರೋಪಗಳಿಗೆ ಸರ್ಕಾರದ ಪರವಾಗಿ ಸಮರ್ಥವಾದ ಉತ್ತರ ನೀಡಬೇಕಾರಿವುದರಿಂದ ಸೋನಿಯಾ ಗಾಂಧಿ ಯವರ ಉಪಸ್ಥಿತಿ ಅಗತ್ಯವಾಗಿದ್ದು ಈ ಕಾರಣದಿಂದಾಗಿ ಅವರ […]

ನಗರದ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ

Wednesday, March 13th, 2013
congress convention

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಮಾರ್ಚ್ 18 ರಂದು ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು ಕೇಂದ್ರ ಸರ್ಕಾರದ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯಿಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್, ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ ಹಾಗೂ ಇತರ ರಾಜ್ಯ ಮತ್ತು ಜಿಲ್ಲಾ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದಾಗಿ ಕಾಂಗ್ರೆಸ್ ಮುಖಂಡ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ  ತಿಳಿಸಿದರು. ಅವರು […]

ಮಂಗಳೂರು ನಗರ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾಗಿ ಕೆ.ಆಶ್ರಫ್ ಪದಗ್ರಹಣ

Thursday, December 9th, 2010
ನಗರ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾಗಿ ಕೆ.ಆಶ್ರಫ್ ಪದಗ್ರಹಣ

ಮಂಗಳೂರು : ಮಾಜಿ ಮೇಯರ್ ಕೆ. ಅಶ್ರಫ್ ಅವರು ಮಂಗಳೂರು ನಗರ ಕಾಂಗ್ರೇಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಇಂದು ಸಂಜೆ ಮಂಗಳೂರಿನ  ಭಾರತೀಯ ಸ್ಕೌಟ್ ಮತ್ತು ಗೈಡ್ಸ್ ಭವನ ಲಾಲ್ಭಾಗ್ ಇಲ್ಲಿ ನಡೆದ ಸಮಾರಂಭದಲ್ಲಿ ಹಿಂದಿನ ಮಂಗಳೂರು ಉತ್ತರ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಸುರೇಶ್ ಬಲ್ಲಾಳ್ ಇವರಿಂದ ಬಿ. ಜನಾರ್ಧನ ಪೂಜಾರಿ ಇವರ ಸಮ್ಮಖದಲ್ಲಿ ಪದಗ್ರಹಣ ನಡೆಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ದೀಪ ಬೇಳಗಿಸುವುದರ ಮೂಲಕ ನೆರವೇರಿಸಿದರು. ಬಳಿಕ ಮಾತನಾಡಿದ […]