ಮಂಗಳೂರಿನಲ್ಲಿ ನಾಯಿ ಸಾಕಬೇಕಾದರೆ ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ ಅಗತ್ಯ

Monday, November 27th, 2023
ಮಂಗಳೂರಿನಲ್ಲಿ ನಾಯಿ ಸಾಕಬೇಕಾದರೆ ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ ಅಗತ್ಯ

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಬೀದಿ ನಾಯಿ ಗಳ ಹಾವಳಿಗಳು ಹೆಚ್ಚಾಗಿದ್ದು ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗುವವರ ಸಂಖ್ಯೆಯೂ ಆಧಿಕವಾಗಿರುತ್ತದೆ. ನಗರದಲ್ಲಿ ರೇಬಿಸ್‌ಹರಡುವ ಸಂಭವ ಹೆಚ್ಚಾಗಿರುತ್ತದೆ. ಈ ಎಲ್ಲ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆಯು ನಗರದಲ್ಲಿ ಸಾಕು ನಾಯಿಗಳಿಗೆ ಪರವಾನಿಗೆ ಪಡೆಯುವಂತೆ ಸೂಚಿಸಿದೆ. ಸಾರ್ವಜನಿಕರು ತಮ್ಮ ಸಾಕು ನಾಯಿಗಳಿಗೆ ಪಾಲಿಕೆಯಿಂದ ಪರವಾನಿಗೆ ಪಡೆಯಲು ಅರ್ಜಿ ಪ್ರತಿ ಪಡೆದುಕೊಳ್ಳಬೇಕು. ಸಾಕು ನಾಯಿಗೆ ನೀಡಲಾಗಿರುವ ಲಸಿಕಾ ದಾಖಲೆ, ಮಾಲೀಕರ ಆಧಾರ್ ಕಾರ್ಡ್, ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ, ಸಾಕು […]

ಬೀದಿ ನಾಯಿ ಕಡಿತಕ್ಕೊಳಗಾಗಿದ್ದ ಏಳು ವರ್ಷದ ಬಾಲಕ ಮೃತ್ಯು

Friday, October 8th, 2021
MK Anand

ಕಾಸರಗೋಡು : ಬೀದಿ ನಾಯಿ ಕಡಿತಕ್ಕೊಳಗಾಗಿದ್ದ  ಏಳು ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಚೆರ್ವತ್ತೂರಿನಲ್ಲಿ ನಡೆದಿದೆ. ಮೃತನನ್ನು ಚೆರ್ವತ್ತೂರು ಆಲಂತಟ್ಟಿನ ಥೋಮಸ್ ರವ ರ ಪುತ್ರ ಎಂ.ಕೆ.ಆನಂದ್ ಎಂದು ಗುರುತಿಸಲಾಗಿದೆ.  ಆಲಂತಟ್ಟು ಎಯುಪಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದನು. ಮೂರು ದಿನಗಳ ಹಿಂದೆ ಅಸ್ವಸ್ಥಗೊಂಡ ಬಾಲಕನನ್ನು ಕೋಜಿಕ್ಕೋಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದಾಗ ರೇಬಿಸ್ ಪತ್ತೆಯಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಬಾಲಕ ಮೃತಪಟ್ಟಿದ್ದಾನೆ. ಸೆ. 13ರಂದು ಮನೆ ಸಮೀಪ ಬೀದಿ ನಾಯಿ ಕಡಿತಕ್ಕೊಳಗಾಗಿದ್ದ ಗಾದ ಬಳಿಕ ಬಾಲಕನಿಗೆ […]

ಬಿಡಾಡಿ ದನಗಳಿಗೆ ಮೇವು, ಬೀದಿ ನಾಯಿಗಳಿಗೆ ಆಹಾರ ಹಾಕ್ತೀರಾ? ಹಾಗಾದ್ರೆ ಈ ಕೇಂದ್ರಕ್ಕೆ ನೀಡಿ

Wednesday, May 26th, 2021
dog Food

ಧಾರವಾಡ: ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನಲೆಯಲ್ಲಿ ಜೂನ್ 7 ರ ವರೆಗೆ ಲಾಕ್‍ಡೌನ್ ಮಾಡಲಾಗಿದ್ದು, ಈ ಅವಧಿಯಲ್ಲಿ ವಾರಸುದಾರರಿಲ್ಲದೇ ರಸ್ತೆಯಲ್ಲಿ ಸಂಚರಿಸುವ ದನಗಳಿಗೆ ಮೇವು ಮತ್ತು ನಾಯಿಗಳಿಗೆ ಆಹಾರ ನೀಡಬಯಸುವ ದಾನಿಗಳಿಂದ ಮೇವು, ಆಹಾರ ಸ್ವೀಕರಿಸಲು ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಪ್ರತ್ಯೇಕವಾದ ಎರಡು ಸ್ವೀಕೃತಿ ಕೇಂದ್ರಗಳನ್ನು ಜಿಲ್ಲಾಡಳಿತದಿಂದ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ದಾನಿಗಳಿಂದ ಮೇವು, ಆಹಾರ ಸ್ವೀಕರಿಸಲು ಧಾರವಾಡ ಮತ್ತು ಹುಬ್ಬಳ್ಳಿ ತಾಲೂಕಿನ […]

ಬೀದಿ ನಾಯಿಗಳ ಹಸಿವಿಗೆ ಅನ್ನದಾತರಾದ “ಮಿಶನ್ ಹಂಗರ್”

Tuesday, May 25th, 2021
dog

ಹುಬ್ಬಳ್ಳಿ : ದಿನನಿತ್ಯದ ಆತಂಕರಹಿತ ಜೀವನ ಶೈಲಿಯಲ್ಲಿ ತೊಡಗಿಸಿಕೊಂಡಿದ್ದ ಮನುಷ್ಯನಿಗೆ 2019ರಲ್ಲಿ ದುತ್ತೆಂದು ವಕ್ಕರಿಸಿದ ಚೀನಾ ಮೂಲದ ಎಂದು ಹೇಳಲಾಗುವ ಕೊರೋನಾ ವೈರಸ್ ದೊಡ್ಡ ಶಾಕ್ ನೀಡಿದೆ. ಕೊರೋನಾ ಎಂಬ ಮಹಾಮಾರಿ ನಾವೆಂದೂ ಊಹಿಸಿರದ ನಮ್ಮ ಜೀವನದ ಸಂಪೂರ್ಣ ಶೈಲಿಯನ್ನೇ ಬದಲಾಯಿಸಿದೆ. ಸದಾ ಚಟುವಟಿಕೆಯಿಂದ, ಆಸಕ್ತಿಯಿಂದ, ಹೊಸ ವಿಚಾರಗಳ ಕಡೆ ಹೊಸ – ಹೊಸ ಅನ್ವೇಷಣೆಗಳ ಕಡೆಗೆ ಹೊರಟ ನಮ್ಮ ಪಯಣಕ್ಕೆ ಈಗ ಬ್ರೇಕ್ ಬಿದ್ದಿದೆ, ಕಣ್ಣಿಗೆ ಕಾಣದ ಈ ಸೂಕ್ಷ್ಮಾಣು ವೈರಸ್ ಮನುಷ್ಯನ ದೇಹವನ್ನು ಹೊಕ್ಕು […]

ಪಿಲಿಕುಳ ನಿಸರ್ಗಧಾಮದಲ್ಲಿ ಬೀದಿ ನಾಯಿಗಳ ದಾಳಿಗೆ 15 ಕಾಡುಕುರಿಗಳು ಬಲಿ

Friday, June 26th, 2020
kadave

ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿರುವ ಕಾಡುಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ 15 ಕಾಡುಕುರಿಗಳು ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಮಳೆಗೆ  ನಿಸರ್ಗಧಾಮದ ತಡೆಗೋಡೆಗೆ ಮರ ಬಿದ್ದಿದ್ದು ಅದನ್ನು ಉಪಯೋಗಿಸಿ ಡಂಪಿಂಗ್ ಯಾರ್ಡ್ ನಿಂದ ಜಿಗಿದು ಬೀದಿ ನಾಯಿಗಳು ನಿಸರ್ಗಧಾಮದ ಒಳಗೆ ಬಂದಿದ್ದು, ಕಾಡುಕುರಿಗಳ ಮೇಲೆ ದಾಳಿ ಮಾಡಿದೆ. ಕಾಡುಕುರಿಗಳ ಕುತ್ತಿಗೆ ಭಾಗಕ್ಕೆ ತೀವ್ರ ಗಾಯವಾದ ಕಾರಣ 15 ಕಾಡುಕುರಿಗಳು ಸಾವನ್ನಪ್ಪಿದೆ. ಎರಡು ಕಾಡುಕುರಿಗಳಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಇಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ತಡೆಗೋಡೆ […]

ಬೊಗಳುತ್ತಿದ್ದ ನಾಯಿಗೆ ಗುಂಡು ಹಾರಿಸಿದ ಅಪರಿಚಿತ ವ್ಯಕ್ತಿ

Monday, November 11th, 2019
Dog

ಬೆಂಗಳೂರು : ಬೊಗಳುತ್ತಿದ್ದ ಬೀದಿ ನಾಯಿಗೆ ಅಪರಿಚಿತ ವ್ಯಕ್ತಿಯೊಬ್ಬ ಏರ್ ಗನ್ನಿಂದ 3 ಗುಂಡುಗಳನ್ನು ಹಾರಿಸಿರುವ ಘಟನೆ ರಾಜ್ಯ ರಾಜಧಾನಿಯ ಜಯನಗರ 5ನೇ ಬ್ಲಾಕ್ನಲ್ಲಿ ನಡೆದಿದೆ. ನಾಯಿ ಮೇಲೆ ಗುಂಡು ಹಾರಿಸಿರುವ ವ್ಯಕ್ತಿ ಸ್ಥಳೀಯ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗಾಯಗೊಂಡಿರುವ ನಾಯಿಯನ್ನು ಜಯನಗರ ಪಶು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಅದನ್ನು ಜೆಪಿ ನಗರದ ಜೀವ ಪೆಟ್ ಕ್ಲಿನಿಕ್ ಗೆ ವರ್ಗಾಯಿಸಲಾಗಿದೆ. ನಾಯಿಯ ದೇಹವನ್ನು ಸ್ಕ್ಯಾನ್ ಮಾಡಿರುವ ವೈದ್ಯರು 3 ಗುಂಡುಗಳು ದೇಹದಲ್ಲಿರುವುದನ್ನು ಪತ್ತೆ […]

ಮಲ್ಪೆ ಬೀಚ್‌ ನಲ್ಲಿ ಬಾಲಕಿಯ ಮೇಲೆ ಬೀದಿ ನಾಯಿಗಳ ದಾಳಿ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

Sunday, July 21st, 2013
Dog fighting

ಮಲ್ಪೆ: ಮಲ್ಪೆ ಬೀಚ್‌ ಕಡಲತೀರದಲ್ಲಿ ಮೀನು ಹಿಡಿಯುವುದನ್ನು ನೋಡಲು ಹೋಗಿದ್ದ ಬಾಲಕಿಯೊರ್ವಳ ಮೇಲೆ ಏಳೆಂಟು ನಾಯಿಗಳು ದಾಳಿ ನಡೆಸಿ ಗಂಭೀರಗಾಯಗೊಳಿಸಿದ ಘಟನೆ ಶನಿವಾರ ಸಂಜೆ ನಡೆದಿದೆ. ಬಾಲಕಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಪೆ ಕೊಳದಲ್ಲಿ ವಾಸವಾಗಿರುವ ಪ್ರಕಾಶ್‌ ಅವರ ಮಗಳು ಸೌಂದರ್ಯ (6) ನಾಯಿ ದಾಳಿಗೆ ಒಳಗಾದ ಮಗು. ತಾಯಿಯ ಹಿಂದೆ ನಡೆದು ಹೋಗುತ್ತಿದ್ದ ಮಗುವಿನ ಮೇಲೆ ಸುಮಾರು 7-8 ನಾಯಿಗಳು ಏಕಾಏಕಿ  ದಾಳಿ ನಡೆಸಿ ಬೆನ್ನು, ತೊಡೆ ಮತ್ತು ಕಾಲುಗಳಿಗೆ ಕಚ್ಚಿ ತೀವ್ರ ಗಾಯಗೊಳಿಸಿದೆ. ಈ […]