ಕಾರಿಗೆ ಲಾರಿ ಡಿಕ್ಕಿಯಾಗಿ ವಿಟ್ಲದ ಇಬ್ಬರು ಯುವಕರು ಮೃತ್ಯು

Saturday, January 15th, 2022
Channarayapattana-Accident

ವಿಟ್ಲ : ಚನ್ನರಾಯಪಟ್ಟಣ ಬೈಪಾಸ್ ರಸ್ತೆಯಲ್ಲಿ ಲಾರಿ ಕಾರಿಗೆ ಡಿಕ್ಕಿಯಾಗಿ ವಿಟ್ಲದ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಾಯಗೊಂಡಿದ್ದಾರೆ. ಕಾರು ಚಲಾಯಿಸುತ್ತಿದ್ದ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕೆಳಗಿನ ಬಾರೆಬೆಟ್ಟು ನಿವಾಸಿ ಸುದರ್ಶನ್(32), ಪುತ್ತೂರು ತಾಲೂಕು ಈಶ್ವರಮಂಗಲ ಸಮೀಪದ ಬಂಟಕಲ್ಲು ನಿವಾಸಿ ದೇವಿಪ್ರಸಾದ್(30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ತೂರು ನಿವಾಸಿ ಪ್ರಮೋದ್ ಕುಮಾರ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ಮಂದಿ ಬೆಂಗಳೂರಿನಿಂದ ಬೆಳಗ್ಗೆ 6.30ಕ್ಕೆ ಊರಿಗೆ ಬರುವ ನಿಟ್ಟಿನಲ್ಲಿ ಕಾರ್‌ನಲ್ಲಿ ಹೊರಟಿದ್ದು, 10 ಗಂಟೆ ಸುಮಾರಿಗೆ ಹಾಸನ […]

ಸುರತ್ಕಲ್ -ಮಂಗಳೂರಿಗೆ ಬೈಪಾಸ್ ರಸ್ತೆ ಶಾಸಕ ಮೊದಿನ್ ಬಾವಾ ಗ್ರೀನ್ ಸಿಗ್ನಲ್

Tuesday, October 17th, 2017
surathkal

ಮಂಗಳೂರು: ಟ್ರಾಫಿಕ್ ಸಮಸ್ಯೆಯಿಂದ ನಲುಗಿ ಹೋಗಿರುವ ಸುರತ್ಕಲ್- ಮಂಗಳೂರಿಗೆ ಬೈಪಾಸ್ ರಸ್ತೆ ಬೇಕು ಎನ್ನುವ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಾಗರಿಕ ಸಮಿತಿ ಮಂಗಳೂರು ತಾಲೂಕು ಇದರ ಪದಾದಿಕಾರಿಗಳು, ನಿರ್ದೇಶಕರು ಮತ್ತು ನಾಗರಿಕರು ಶಾಸಕ ಮೊದಿನ್ ಬಾವಾರನ್ನು ಅವರ ಸುರತ್ಕಲ್ ನಿವಾಸದಲ್ಲಿ ಭೇಟಿಯಾಗಿ ಸುರತ್ಕಲ್‌ನಿಂದ ಪಂಪ್‌ವೆಲ್ ಸರ್ಕಲ್‌ವರೆಗಿನ ಟ್ರಾಫಿಕ್ ಸಮಸ್ಯೆಯನ್ನು ಮನದಟ್ಟು ಮಾಡಿಕೊಟ್ಟರು. ಅಲ್ಲದೇ ಈಗಾಗಲೇ ಕರ್ನಾಟಕ ಸರಕಾರ 25 ಜಿಲ್ಲೆಗಳಿಗೆ ಅಗತ್ಯವಿರುವ ಬೈಪಾಸ್ ರಸ್ತೆಯ ಸಮೀಕ್ಷೆ, ಯೋಜನಾ ಕಾರ್ಯಕ್ರಮ ತಯಾರಿಕೆಗಾಗಿ ಸಂಪುಟ ಸಭೆಯಲ್ಲಿ ಅನುಮೋದಿಸಿದ 275 […]

ಹಾಸನ-ಬಿಸಿರೋಡ್ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ

Saturday, September 21st, 2013
press-meet

ಮಂಗಳೂರು : ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ಸಂಘಟನಾ ಕಾರ್ಯದರ್ಶಿ ಶಿವಶಂಕರ್ ಭಟ್ ಅಗಲೀಕರಣಕ್ಕೆ ಕಲ್ಲಡ್ಕ ಪೇಟೆಯನ್ನೇ ಬಲಿಕೊಡುವ ಹುನ್ನಾರ ನಡೆಯುತ್ತಿದೆ. ಇದರಿಂಧಾಗಿ 30 ಅಂಗಡಿ ಮುಂಗಟ್ಟುಗಳು ಸರಿಸುಮಾರು 200 ಮನೆಗಳು ನಾಶವಾಗುವ ಭೀತಿಯಲ್ಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ-ಬಿ.ಸಿ.ರೋಡು ಚತುಷ್ಪಥ ರಸ್ತೆ ನಿರ್ಮಾಣದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನಾಧಿಕಾರಿಯವರ ಆದೇಶದಂತೆ ಕಲ್ಲಡ್ಕ ಪೇಟೆಯ ಇಕ್ಕೆಲಗಳಲ್ಲಿ 22.5 ಮೀಟರ್ ಸ್ವಾದೀನಪಡಿಸುವಂತೆ ಈಗಾ ಗಲೇ ಗುರುತು ಹಾಕಲಾಗಿದೆ. ಇದರಂತೆ ನಡೆದರೆ ಹೆದ್ದಾರಿ ಅಕ್ಕಪಕ್ಕದಲ್ಲಿರುವ […]