ತೀಥ೯ ಸ್ವರೂಪಿಣಿಯಾಗಿ ಉಕ್ಕಿ ಹರಿದ ಕಾವೇರಿ ಜೀವ ನದಿ

Saturday, October 17th, 2020
Tala Kavery

ಮಡಿಕೇರಿ : ಕಾವೇರಿ ಶನಿವಾರ ಬೆಳಗ್ಗೆ ಕನ್ಯಾ  ಲಗ್ನದಲ್ಲಿ 7 ಗಂಟೆ 04 ನಿಮಿಷಕ್ಕೆ ಬ್ರಹ್ಮಗಿರಿ ತಪ್ಪಲಿನ ಪವಿತ್ರ ತಾಣದಲ್ಲಿ ತೀಥ೯ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ್ದಾಳೆ. ಗೋಪಾಲ್ ಕೃಷ್ಣ ಆಚಾರ್ ನೃತೃತ್ವದಲ್ಲಿಬ್ರಹ್ಮಕುಂಡಿಕೆಯ ಬಳಿ ವಿವಿಧ ಪೂಜಾ ಕೈಂಕರ್ಯ ನೆರವೇರಿದ್ದು,  ಈ ಬಾರಿ ಕೊರೊನಾ ಹಿನ್ನೆಲೆ ತಲಕಾವೇರಿ ಕ್ಷೇತ್ರದಲ್ಲಿ ಕೇವಲ 500-600 ಭಕ್ತರಿಂದ ಮಾತ್ರ ಕಾವೇರಿ ತೀರ್ಥೋದ್ಭವ ದಶ೯ನಕ್ಕೆ ಅವಕಾಶ ನೀಡಲಾಗಿತ್ತು. ತೀರ್ಥೋದ್ಭವದ ವೇಳೆ ಜೈಜೈ ಮಾತಾ,ಕಾವೇರಿ ಮಾತೆ ಎಂಬ ಉದ್ಘೋಷದ ಕೇಳಿ ಬಂತು. ಭಾಗಮಂಡಲದ ಭಗಂಡೇಶ್ವರ ದೇಗುಲದಲ್ಲೂ […]

ರಸ್ತೆ ದುರಸ್ತಿಗೆ ಆಗ್ರಹ : ಕರಿಕೆ ಭಾಗಶಃ ಬಂದ್

Thursday, December 5th, 2019
Madikeri

ಮಡಿಕೇರಿ : ಕೊಡಗಿನ ಗಡಿಗ್ರಾಮ ಕರಿಕೆ ರಸ್ತೆ ಅಭಿವೃದ್ಧಿಗಾಗಿ ಒತ್ತಾಯಿಸಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾ.ಪಂ ಅಧ್ಯಕ್ಷರು ಕರೆ ನೀಡಿದ್ದ ಕರಿಕೆ ಬಂದ್ ಭಾಗಶಃ ಯಶಸ್ವಿಯಾಗಿದೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು, ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬೆಳಗ್ಗೆ ಬಲತ್ಕಾರದ ಬಂದ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಮುಂದಾದಾಗ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ವಾಹನ ಸಂಚಾರವಿಲ್ಲದೆ ಪರದಾಡುವಂತ್ತಾಯಿತು. ಗ್ರಾಮ ಪಂಚಾಯತಿ, ಸಹಕಾರ ಸಂಘಗಳನ್ನು ಬಲವಂತದಿಂದ ಮುಚ್ಚಿಸಿದಾಗ ಕೆಲವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ […]

ಅಕ್ರಮ ಕಡವೆ ಬೇಟೆ : ಆರೋಪಿ ಬಂಧನ

Saturday, November 2nd, 2019
Kadave

ಕೊಡಗು : ಭಾಗಮಂಡಲ ವಲಯದ ಕರಿಕೆ ಉಪ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆ ಬೇಟೆ ಪ್ರಕರಣ ವೊಂದನ್ನು ಪತ್ತೆಹಚ್ಚುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕರಿಕೆ ಗ್ರಾಮದ ಎಳ್ಳು ಕೊಚ್ಚಿ ಮಡೆ ಕಾನ ನಿವಾಸಿ ರಾಘವ ತಂದೆ ಎಲಂಬಾ ಮತ್ತು ಇತರರು ಸೇರಿ ದಿನಾಂಕ 31ಅಕ್ಟೋಬರ್ ರಂದು ಕಡವೆ ಮರಿವೊಂದನ್ನು ಬೇಟೆ ಮಾಡಿ ಮಾಂಸವಾಗಿ ಪರಿವತಿ೯ಸಿ ಕೇರಳ ಮೂಲದ ವ್ಯಕ್ತಿಗಳಿಗೆ ಮಾರಾಟ ಮಾಡಿದ ಬಗ್ಗೆ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಕರಿಕೆ ಅರಣ್ಯ ಸಿಬ್ಬಂದಿಗಳು ವನ್ಯಜೀವಿ ಸಂರಕ್ಷಣಾ […]

ಮಡಿಕೇರಿಯಲ್ಲಿ ಅಡಿಕೆ ಕಳವಿಗೆ ಯತ್ನಿಸಿದ ವ್ಯಕ್ತಿಗೆ ಗುಂಡೇಟು : ಸ್ಥಳದಲ್ಲೇ ಸಾವು

Friday, August 30th, 2019
ganesh

ಮಡಿಕೇರಿ : ಅಡಿಕೆ ಕಳವಿಗೆ ಯತ್ನಿಸಿದನೆನ್ನಲಾದ ಆರೋಪದಲ್ಲಿ ವ್ಯಕ್ತಿಯೋರ್ವನಿಗೆ ಮನೆ ಮಾಲಕ ಗುಂಡಿಕ್ಕಿದ್ದರಿಂದ ಆರೋಪಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಕರಿಕೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಕರಿಕೆ ನಿವಾಸಿ ದೇವಂಗೋಡಿ ಗಣೇಶ್ ಗುಂಡೇಟಿಗೆ ಬಲಿಯಾದ ವ್ಯಕ್ತಿ. ಈತ ನಿನ್ನೆ ರಾತ್ರಿ ಮಂದೋಡಿ ಮೋನಪ್ಪ ಎಂಬವರ ಮನೆಯಲ್ಲಿ ಅಡಿಕೆ ಕಳವಿಗೆ ಯತ್ನಿಸಿದಾಗ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ಗಂಭೀರ ಗಾಯಗೊಂಡಿದ್ದ ಗಣೇಶ್ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಎಂದು ಪೋಲಿಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಭಾಗಮಂಡಲ ಪೋಲಿಸರು ತೆರಳಿ […]

ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥ ಉದ್ಭವ

Monday, October 18th, 2010
ತಲಕಾವೇರಿ

ಮಡಿಕೇರಿ : ಸೋಮವಾರ ಮುಂಜಾನೆ 3.11ಕ್ಕೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅಪಾರ ಭಕ್ತವೃಂದಕ್ಕೆ ಕಾವೇರಿ ತೀರ್ಥರೂಪಿಣಿಯಾಗಿ ಹರಿಯುವುದರೊಂದಿಗೆ ನೆರೆದ ಭಕ್ತರಿಗೆ ದರ್ಶನವಿತ್ತಳು.  ಭಕ್ತರ ಉದ್ಘೋಷ, ಮುಗಿಲು ಮುಟ್ಟಿದ ಮಂತ್ರಘೋಷ ದೊಂದಿಗೆ ತಲಕಾವೇರಿಯಲ್ಲಿ ತಿರ್ಥೂದ್ಭವವಾಯಿತು. ನೆರೆದ ಭಕ್ತವೃಂದ ಸ್ನಾನಕೊಳದ ಸಮೀಪ ತೀರ್ಥ ಪ್ರೋಕ್ಷಣೆಗೆ ಶಿರವೊಡ್ಡಿ ಪುನೀತರಾದರು.  ತಮಿಳುನಾಡು, ಮಂಡ್ಯ, ಬೆಂಗಳೂರು ಮುಂತಾದ ಕಡೆಗಳಿಂದ ಆಗಮಿಸಿದ ಭಕ್ತರು ಭಾಗಮಂಡಲದಲ್ಲಿ ಸ್ನಾನ ಮಾಡಿ ಭಗಂಡೇಶ್ವರನ ದರ್ಶನ ಪಡೆದು ತಲಕಾವೇರಿಗೆ ಆಗಮಿಸಿದರೆ, ಇನ್ನು ಕೆಲವರು ಮೈಸೂರು ದಸರಾ ಮುಗಿಸಿ ಬಂದಿದ್ದರು. ಬ್ರಹ್ಮಕುಂಡಿಕೆಯ ಮುಂಭಾಗದ ಸ್ನಾನಕೊಳದಿಂದ […]