ಪಚ್ಚನಾಡಿ : ಬಾವಿ, ಬೋರ್‌ವೆಲ್ ಕಲುಷಿತಗೊಳಿಸಿದ ತ್ಯಾಜ್ಯ ನೀರು

Saturday, August 17th, 2019
mandaara

ಮಂಗಳೂರು : ಪಚ್ಚನಾಡಿ ತ್ಯಾಜ್ಯರಾಶಿಯ ಗುಡ್ಡ ಜರಿದು ಮಂದಾರ ವ್ಯಾಪ್ತಿಯಲ್ಲಿ ಮನೆ-ಮರಗಳನ್ನು ಆಹುತಿ ಪಡೆದ ಘಟನೆ ಜೀವಂತವಾಗಿರುವಾಗಲೇ, ಇದೀಗ ಆ ಪರಿಸರದ ಬಾವಿ-ತೋಡುಗಳೆಲ್ಲ ಕೊಳಚೆ ನೀರಿನಿಂದ ಗಬ್ಬೆದ್ದು ಹೋಗಿದ್ದು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ. ತ್ಯಾಜ್ಯರಾಶಿಯಿಂದ ಮೊದಲೇ ಸಂತ್ರಸ್ತ ರಾಗಿರುವ ಇಲ್ಲಿನ ಮನೆಮಂದಿ, ಮುಂದೆ ಗಲೀಜು ನೀರಿನಿಂದ ಇನ್ನೊಂದು ಸಮಸ್ಯೆ ಎದುರಿಸುವ ಆತಂಕ ಎದುರಾಗಿದೆ. ಇಲ್ಲಿಂದ ಹರಿಯುವ ತ್ಯಾಜ್ಯ ನೀರು ಮಂದಾರದ ಸುತ್ತಮುತ್ತಲಿನ ಹಲವು ಬಾವಿಗಳಿಗೆ ಸೇರುತ್ತಿದೆ. ಕೆಲವು ಬಾವಿಗಳಿಗೆ ನೇರವಾಗಿ ತ್ಯಾಜ್ಯನೀರು ಹರಿಯುತ್ತಿದ್ದರೆ, ಇನ್ನೂ ಕೆಲವು […]

ಕಳ್ಳತನ ಆರೋಪ: ಬೆಂಗಳೂರಲ್ಲಿ ಉದ್ಯಮಿಯಿಂದ‌ ಮಕ್ಕಳ ಅಪಹರಣ

Wednesday, December 5th, 2018
bengaluru

ಬೆಂಗಳೂರು: ಸೈಕಲ್ ಕಳ್ಳತನ ಮಾಡಿದ ಆರೋಪದ ಮೇರೆಗೆ ಟ್ಯೂಷನ್ ಕ್ಲಾಸ್ಗೆ ನುಗ್ಗಿ‌ ಮಕ್ಕಳನ್ನು ಅಪಹರಣ ಮಾಡಿದ ಘಟನೆ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಒಬ್ಬ ಸೈಕಲ್ ಕಳ್ಳತನ‌ ಮಾಡಿದ್ದ ಎಂದು ಆರೋಪಿಸಿ ಭಾಸ್ಕರ್ ಮತ್ತು ವಿನೋದ್ ಎಂಬ ಮಕ್ಕಳನ್ನ ಇನೋವಾ ಕಾರಿನಲ್ಲಿ ಉದ್ಯಮಿ ಕೃಷ್ಣಮೂರ್ತಿ ಅಂಡ್ ಗ್ಯಾಂಗ್ ಅಪಹರಣ ಮಾಡಿತ್ತು. ನಂತರ ಮನೆಯೊಂದರಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಹಲ್ಲೆ ನಡೆಡಸಿದ್ದಾರೆ […]

ಮಗಳ ಸಾವಿನ ಬೆನ್ನಲ್ಲೇ ಅಪ್ಪನ ದುರ್ಮರಣ: ಸಂಗೀತ ನಿರ್ದೇಶಕನ ದುರಂತ ಅಂತ್ಯ

Tuesday, October 2nd, 2018
film-artist

ತಿರುವನಂತಪುರಂ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಗೀತ ನಿರ್ದೇಶಕ ಬಾಲಭಾಸ್ಕರ್ ಕೊನೆಯುಸಿರೆಳೆದಿದ್ದಾರೆ.ಅವರು ಸೋಮವಾರ ಮಧ್ಯರಾತ್ರಿ 12.55 ಗಂಟೆ ಸುಮಾರಿಗೆ ನಿಧನರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಳೆದ ಮಂಗಳವಾರ ದೇವಸ್ಥಾನದಿಂದ ವಾಪಸ್ ಆಗುತ್ತಿದ್ದ ವೇಳೆ ಪಲ್ಲಿಪುರಂ ಎಂಬಲ್ಲಿ ಅಪಘಾತಕ್ಕೀಡಾಗಿದ್ದರು. ದುರ್ಘಟನೆಯಲ್ಲಿ ಭಾಸ್ಕರ್ ಅವರ ಪುಟ್ಟ ಮಗಳು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಭಾಸ್ಕರ್ ಹಾಗೂ ಅವರ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ವಾರದಿಂದ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, […]

ಮಂಗಳೂರಲ್ಲಿ ಹಳ್ಳಿ ಸೊಗಡಿನ ಸುಗ್ಗಿ-ಹುಗ್ಗಿಯ ರಂಗು

Monday, March 12th, 2018
suggi-habba

ಮಂಗಳೂರು: ಜನಪದ ಸೊಗಡನ್ನು ಪರಿಚಯಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸುಗ್ಗಿ-ಹುಗ್ಗಿ ಕಾರ್ಯಕ್ರಮ ಮಾರ್ಚ್ 15ರಂದು ಮಂಗಳೂರಿನ ಸಿಸಿ ಚಾವಡಿ ತುಳು ಭವನ ಉರ್ವಸ್ಟೋರ್ ನಲ್ಲಿ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಬಯಲಾಟ, ಜನಪದ ನೃತ್ಯ, ಹಗಲು ವೇಷ ಸೇರಿದಂತೆ ಅನೇಕ ಬಗೆಯ ಜನಪದ ಕಲಾಪ್ರಕಾರವನ್ನು ಪರಿಚಯಿಸಲಾಗುತ್ತದೆ. ಕಣ್ಣಿಗೆ ಹಬ್ಬ ತರುವ ಹತ್ತು ಹಲವಾರು ವಿಶೇಷ ನೋಟಗಳಿಗೆ ಸುಗ್ಗಿ ಹಬ್ಬ ಕಾರಣವಾಗುತ್ತಿದೆ. ಬೆಳಗ್ಗೆ 10ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಮಂಗಳೂರು ಶಾಸಕ ಜೆ.ಆರ್. ಲೋಬೋ ಅಧ್ಯಕ್ಷತೆವಹಿಸಲಿದ್ದು, ಸಚಿವ ಬಿ.ರಮಾನಾಥ ರೈ […]