ದ.ಕ-ಉಡುಪಿ ಸ್ಥಳೀಯಾಡಳಿತ ವಿಧಾನ ಪರಿಷತ್‌ ಚುನಾವಣೆ, ಶೇ. 99.55 ಮತದಾನ

Friday, December 10th, 2021
kota-srinivasa-poojary

ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ವಿಧಾನ ಪರಿಷತ್‌ನ  ಚುನಾವಣೆ ಇಂದು ಶಾಂತಿಯುತವಾಗಿ ನಡೆದಿದ್ದು, ಶೇ. 99.55 ಮತದಾನವಾಗಿದೆ. ದ.ಕ. ಜಿಲ್ಲೆಯ 231 ಹಾಗೂ ಉಡುಪಿ ಜಿಲ್ಲೆಯ 158 ಸಹಿತ ಉಭಯ ಜಿಲ್ಲೆಗಳ ಒಟ್ಟು 389 ಮತಗಟ್ಟೆಗಳಲ್ಲಿ ಒಟ್ಟು 6040 ಮತದಾರರಲ್ಲಿ ಸಂಜೆ 4 ಗಂಟೆಯ ವೇಳೆಗೆ 6013 ಮಂದಿ ಮತದಾನ ಮಾಡಿದ್ದಾರೆ. ದ.ಕ. ಜಿಲ್ಲೆಯ 3290 ಗ್ರಾ.ಪಂ. ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆಯ 60 ಸದಸ್ಯರು, ನಗರ ಸಭೆಯ 62, ಪುರಸಭೆಯ 50, ಪಟ್ಟಣ […]

ಗ್ರಾಮ ಪಂಚಾಯತ್ ಗಳಿಗೆ ಮೊದಲ ಹಂತದ ಮತದಾನ ಬಿರುಸಿನಿಂದ ಆರಂಭ

Tuesday, December 22nd, 2020
GP vote

ಮಂಗಳೂರು :  ಗ್ರಾಮ ಪಂಚಾಯತ್ ಗಳಿಗೆ ನಡೆಯುತ್ತಿರುವ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಮಂಗಳೂರು, ಬಂಟ್ವಾಳ, ಮೂಡಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ. 10 ಗಂಟೆ ವೇಳೆಗೆ ಮಂಗಳೂರು ತಾಲೂಕಿನಲ್ಲಿ 14.6 ಶೆ., ಮೂಡುಬಿದರೆ15.64 ಶೇ. ಹಾಗೂ ಬಂಟ್ಟಾಳ ತಾಲೂಕಿನಲ್ಲಿ 13.75 ಶೇ. ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 14.48 ಶೇ. ಮತದಾನವಾಗಿರುವುದು ವರದಿಯಾಗಿದೆ. ಸ್ಯಾನಿಟೈಸರ್, ಮಾಸ್ಕ್ ಧರಿಸಿ ಸುರಕ್ಷಿತ ಅಂತರ ಕಾಪಾಡಿಕೊಂಡು ಸರತಿ ಸಾಲಿನಲ್ಲಿ ಮತದಾರರು ಮತದಾನ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತರು ಥರ್ಮಾಮೀಟರ್ ನಲ್ಲಿ ದೇಹದ […]

ಎಲ್ಲಾ ಬೂತ್‌ಗಳಲ್ಲಿಯೂ ಒಂದೇ ರೀತಿಯಲ್ಲಿ ಮತದಾನ ನಡೆದಿರುವ ಬಗ್ಗೆ ಅನುಮಾನವಿದೆ : ಡಿ.ಕೆ. ಶಿವಕುಮಾರ್

Thursday, November 12th, 2020
DK Shivakumar

ಮಂಗಳೂರು : ನಾವು ಯಾರಲ್ಲೂ ಕೇಳಿದರೂ ವಿದ್ಯಾವಂತರೆಲ್ಲಾ ನಾವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರುವುದಾಗಿ ಹೇಳುತ್ತಾರೆ. ಹಾಗಾಗಿ ಮತದಾರರು ಹೇಳಿದರಲ್ಲಿ ತಪ್ಪಿದೆಯಾ, ಮತದಾನ ಬಿದ್ದಿರುವುದರಲ್ಲಿ ತಪ್ಪಿದೆಯಾ ಎಂಬ ಬಗ್ಗೆ ವ್ಯಾಪಕವಾದ ತನಿಖೆ ನಮ್ಮ ವತಿಯಿಂದ ಮಾಡಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲನ್ನು ಒಪ್ಪಿದ್ದೇವೆ. ಆದರೆ ಚುನಾವಣೆಯಲ್ಲಿ ಯಾವ ರೀತಿ ಅಕ್ರಮವಾಗಿದೆ, ದುರುಪಯೋಗವಾಗಿದೆ, ಯಾವ ರೀತಿಯಲ್ಲಿ ಹಣ ಹಂಚಿಕೆಯಾಗಿದೆ ಎಂಬ ಕುರಿತಾದ ಎಲ್ಲಾ ರೀತಿಯ ಮಾಹಿತಿ ಇದೆ. ಅದರ ಬಗ್ಗೆ ವ್ಯಾಪಕವಾದ ಚರ್ಚೆ […]

ಮನಪಾ ಚುನಾವಣೆ : ಮತದಾನ ಆರಂಭ

Tuesday, November 12th, 2019
nalin-kumar

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್ ಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಲೇಡಿಹಿಲ್ ಸಂತ ಅಲೋಶಿಯಸ್ ಶಾಲೆಯಲ್ಲಿ ಮತದಾನ ಮಾಡಿದರು. ನಂತರ ಮಾತನಾಡಿದ ನಳಿನ್, ಈ ಬಾರಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಳೆದ ಬಾರಿ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಕಾಂಗ್ರೆಸ್ ನಲ್ಲಿ ಒಳಜಗಳ ನಡೆದಿದ್ದು, ಇದು ಬಿಜೆಪಿಗೆ […]

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ : ಮಧ್ಯಾಹ್ನದ ಸುಮಾರಿಗೆ 34.72 ಶೇ. ಮತದಾನ

Monday, October 21st, 2019
Manjeshwara

ಕಾಸರಗೋಡು : ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆ ಶಾಂತಿಯುತವಾಗಿ ನಡೆಯುತ್ತಿದ್ದು, ಮಧ್ಯಾಹ್ನ 12:30ರ ಸುಮಾರಿಗೆ 34.72 ಶೇ. ಮತದಾನವಾಗಿದೆ. ಹಿಂದೆಂದೂ ಕಾಣದ ಬಿಗಿ ಭದ್ರತೆಯಲ್ಲಿ ಮತದಾನ ನಡೆಯುತ್ತಿದೆ. ಮುಂಜಾನೆಯಿಂದ ಮಳೆ ಸುರಿಯುತ್ತಿದ್ದರೂ ಮತದಾರರು ಅದನ್ನು ಲೆಕ್ಕಿಸದೆ ಮತಗಟ್ಟೆಗೆ ತಲುಪಿ ತಮ್ಮ ಹಕ್ಕು ಚಲಾಯಿಸಿದರು. ಕೆಲವೆಡೆ ಮತಯಂತ್ರಗಳಲ್ಲಿ ದೋಷ ಹಾಗೂ ಸಣ್ಣಪುಟ್ಟ ಘಟನೆ ಹೊರತುಪಡಿಸಿ ಮತದಾನ ಶಾಂತಿಯುತವಾಗಿದೆ . ಎಲ್.ಡಿ.ಎಫ್. ಅಭ್ಯರ್ಥಿ ಎಂ. ಶಂಕರ ರೈ ಇಂದು ಬೆಳಗ್ಗೆ ಅಂಗಡಿಮೊಗರು ಶಾಲೆಯ 165ನೇ ಮತಗಟ್ಟೆಯಲ್ಲಿ ಮತ […]

ದ.ಕ. ಲೋಕಸಭಾ ಚುನಾವಣೆಯಲ್ಲಿ ಶೇ.77.25 ಮತದಾನ

Friday, April 19th, 2019
Control-room

ಮಂಗಳೂರು  : ದ.ಕ. ಲೋಕಸಭಾ ಚುನಾವಣೆಯಲ್ಲಿ ಶೇ.77.25 ಮತದಾನವಾಗಿದೆ. ದ.ಕ.ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿದ ಮೇಲೆ ಬೆಳ್ತಂಗಡಿಯಲ್ಲಿ ಶೇ.80.92, ಮೂಡಬಿದ್ರೆ ಶೇ.73.17, ಬಂಟ್ವಾಳ ಶೇ. 80.31, ಪುತ್ತೂರು ಶೇ.80.71 ಸುಳ್ಯ ಶೇ.84.10, ಮಂಗಳೂರು ಉತ್ತರ ( ಸುರತ್ಕಲ್) ಶೇ.74.83, ಮಂಗಳೂರು ದಕ್ಷಿಣ ಶೇ. 69.15 ಹಾಗೂ ಮಂಗಳೂರು (ಉಳ್ಳಾಲ) ಶೇ.75.62 ಮತದಾನವಾಗಿದೆ. ಇದರಲ್ಲಿ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯದಲ್ಲಿ ಅತೀ ಹೆಚ್ಚು ಮತದಾನವಾಗಿದೆ. 2014ರ […]

ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮತದಾನ

Thursday, April 18th, 2019
Nalin Kumar

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ  ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು ಬೆಳಗ್ಗೆ 11ರ ವೇಳೆಗೆ 32.5 % ಮತದಾನವಾಗಿದೆ . ಉರ್ವ ಲೇಡಿಹಿಲ್ ಸಮೀಪದ  ಸಂತ ಅಲೋಶಿಯಸ್ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮತ ಚಲಾಯಿಸಿದ್ದಾರೆ. ಮತದಾರರು ಮತಗಟ್ಟೆಯಲ್ಲಿ ಬೆಳಿಗ್ಗೆಯೇ ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದು, ಚುರುಕಿನಿಂದ ಮತದಾನ ನಡೆಯುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ […]

ಬಂಟ್ವಾಳ ಇಂದು ಹಸೆಮಣೆ ಏರುವ ಹೊಸ ಜೋಡಿಗಳಿಂದ ಮತದಾನ

Thursday, April 18th, 2019
Mundadi

ಬಂಟ್ವಾಳ  : ಬಂಟ್ವಾಳದಲ್ಲಿ ಬೆಳಿಗ್ಗೆ 11 ರ ವೇಳೆಗೆ 33.89 ಶೇಕಡಾ ಮತದಾನವಾಗಿದ್ದು, ಮತದಾರರು ಉತ್ಸುಕತೆಯಿಂದ ಮತದಾನ ಮಾಡುತ್ತಿದ್ದಾರೆ.  ಇಂದು ಮದುವೆಯಾಗುವ ನವಜೋಡಿ ಬೆಳಗ್ಗೆ ಓಟ್ ಮಾಡಿದ್ದಾರೆ. ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಸುಭಾಸ್ ನಗರದ ಬೇಂಕೆ ನಿವಾಸಿ ಅಶೋಕ್ ಪುಷ್ಪಲತಾ ಅವರ ಪುತ್ರಿ ಪ್ರತಿಜ್ಞಾ ಅವರು ಬೇಂಕ್ಯೆ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಚಲಾಯಿಸಿದ್ದಾರೆ. ಅದಲ್ಲದೆ, ಮದುಮಗ ಸುಮಿತ್ ಪೂಜಾರಿ ಅವರು ತನ್ನ ಬಾವಿ ಪತ್ನಿ ಪ್ರತಿಜ್ಞಾ ಅವರ ಜೊತೆ ಪೊಳಲಿ ಸರಕಾರಿ ಶಾಲೆಯ ಮತಗಟ್ಟೆಗೆ ತೆರಳಿ ಮತಚಲಾಯಿಸಿದರು. […]

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನ ಸುಳ್ಯ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ

Sunday, May 13th, 2018
vote

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಎಂಟು ಕ್ಷೇತ್ರಗಳಲ್ಲಿ ಶನಿವಾರ ಬಿರುಸಿನ ಹಾಗೂ ಶಾಂತಿಯುತ ಮತದಾನವಾಗಿದ್ದು ಸಂಜೆಯ ವೇಳೆಗೆ  ಶೇ. 77.63ರಷ್ಟು ಮತದಾನ ದಾಖಲಾಗಿದೆ. ಬೆಳಗ್ಗೆ 7 ಗಂಟೆಗೆ ಮತ ದಾರರು ಬಹಳ ಉತ್ಸುಕತೆಯಿಂದ ಸರದಿಯಲ್ಲಿ ನಿಂತಿದ್ದ ದೃಶ್ಯ ಬಹುತೇಕ ಎಲ್ಲ ಮತಗಟ್ಟೆಗಳಲ್ಲಿಯೂ ಕಂಡು ಬಂದಿತ್ತು. ಕೆಲವು ಮತಗಟ್ಟೆಗಳಲ್ಲಿ ಮುಂಜಾನೆ 6.45ರ ವೇಳೆಗೇ ಮತದಾರರು ತಮ್ಮ ಹಕ್ಕು ಚಲಾಯಿಸುವುದಕ್ಕೆ ಬಂದು ಕಾದು ಕುಳಿತದ್ದು ವಿಶೇಷ. 2013ಕ್ಕಿಂತ ಈ ಬಾರಿ ಶೇ. 3.25ರಷ್ಟು ಅಧಿಕ ಮತದಾನವಾಗಿದೆ. ಈ ಬಾರಿ […]

ಧರ್ಮಸ್ಥಳದಲ್ಲಿ ಹೆಗ್ಗಡೆಯವರು ಮತ್ತು ಕುಟುಂಬದವರಿಂದ ಮತದಾನ

Saturday, May 12th, 2018
Hegde Vote

ಧರ್ಮಸ್ಥಳ : ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಸಹೋದರ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಶನಿವಾರ ಧರ್ಮಸ್ಥಳದಲ್ಲಿ ಎಸ್.ಡಿ.ಎಮ್. ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.