ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿ ಹೊಂಡ ಗುಂಡಿಗಳನ್ನು ಅನಧಿಕೃತವಾಗಿ ತೆಗೆದರೆ ವಾಟ್ಸಪ್ ಮಾಡಿ

Sunday, August 14th, 2022
MCC

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿ ಹೊಂಡ ಗುಂಡಿಗಳು ಹಾಗೂ ಅನಧಿಕೃತ ಅಗೆತದ ಬಗ್ಗೆ ದೂರುಗಳು ಇದ್ದಲ್ಲಿ ವಾಟ್ಸಪ್ ಸಂಖ್ಯೆ 9449007722 ಹಾಗೂ ಪಾಲಿಕೆಯ ಸಹಾಯವಾಣಿ ಸಂಖ್ಯೆ 0824- 2220306 ಇಲ್ಲಿಗೆ ಫೋಟೋ ಸಹಿತ ದೂರು ಸಲ್ಲಿಸಬಹುದು ಎಂದು ಮನಪಾ ಹೇಳಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಬಾರಿ ಮಳೆಗಾಲದಲ್ಲಿ ಜೂನ್ ಮತ್ತು ಜುಲೈ ಮಾಹೆಯಲ್ಲಿ ಸಾಮಾನ್ಯ ಮಳೆಗಿಂತ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುತ್ತದೆ. ಭಾರೀ ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ಉಂಟಾಗುವ ಹೊಂಡ-ಗುಂಡಿಗಳನ್ನು […]

ಕೋವಿಡ್ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗಳಿಗೆ ಪರಿಹಾರವಿದೆ : ಡಿ. ವೀರೇಂದ್ರ ಹೆಗ್ಗಡೆ

Sunday, May 16th, 2021
veerendra Heggade

ಧರ್ಮಸ್ಥಳ  : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಪ್ರಿಲ್ ಮತ್ತು ಮೇ ತಿಂಗಳು ಧಾರ್ಮಿಕ ಚಟುವಟಿಕೆಗಳಿಗೆ ಪ್ರಮುಖವಾದ ಮಾಸವಾಗಿದೆ. ಈ ಉಭಯ ಜಿಲ್ಲೆಗಳಲ್ಲಿ ಪ್ರಾಕೃತಿಕವಾಗಿಯೂ ಮೇ ತಿಂಗಳ ಬಳಿಕ 4 ರಿಂದ 5 ತಿಂಗಳು ಮಳೆಗಾಲವಾದುದರಿಂದ ಕೃಷಿಯನ್ನು ಹೊರತುಪಡಿಸಿ ಯಾವುದೇ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹತ್ತನಾವಧಿ ಅಂದರೆ ವರ್ಷದಲ್ಲಿ ದೇವಸ್ಥಾನ, ದೈವಸ್ಥಾನ, ಭೂತಸ್ಥಾನ ಮತ್ತು ಕೌಟುಂಬಿಕ ಸಾನಿಧ್ಯಗಳ ನಾಗಾರಾಧನೆ ಇತ್ಯಾದಿ ನಡೆಯುತ್ತದೆ. ಆ ಬಳಿಕ ದೀಪಾವಳಿ ವರೆಗೂ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೆ ವಿಶ್ರಾಂತಿ ಇರುತ್ತದೆ ಮತ್ತು […]

ಮಳೆಗಾಲ: ಪ್ರಾಕೃತಿಕ ದುರಂತದಿಂದ ಹಾನಿ ತಪ್ಪಿಸಲು ಈಗಿನಿಂದಲೇ ಕ್ರಮ -ಜಿಲ್ಲಾಧಿಕಾರಿ 

Saturday, May 23rd, 2020
rain-DC

ಮಂಗಳೂರು : ಕಳೆದ ವರ್ಷದಲ್ಲಿ ಅಪಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡು ರಸ್ತೆ, ಸೇತುವೆ ಸೇರಿದಂತೆ ಅನೇಕ ರೀತಿ ಮೂಲ ಸೌಕರ್ಯಗಳಿಗೆ ಹಾನಿ ಉಂಟಾಗಿತ್ತು. ಪ್ರಸುತ್ತ ಸಾಲಿನಲ್ಲಿ ಕಳೆದ ಸಾಲಿಗಿಂತ ಹೆಚ್ಚುವರಿ ಮಳೆಯಾದರೆ ಸಮರ್ಥವಾಗಿ ನಿಭಾಯಿಸಲು ಅಗತ್ಯವಾದ ಸಿದ್ಧತೆಗಳನ್ನು ಆಯಾ ಇಲಾಖೆಯ ಅಧಿಕಾರಿಗಳು ಮಾಡಿಕೊಂಡಿರಬೇಕು. ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಈಗಾಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ […]

ಕಡಲ್ಕೊರೆತಕ್ಕೆ ಸಿಗದ ಶಾಶ್ವತ ಪರಿಹಾರ…ಕಡಲಿನ ಒಡಲು ಸೇರುತ್ತಿರುವ ಭೂಭಾಗಗಳು!

Saturday, July 7th, 2018
parmanent

ಉಡುಪಿ: ಮಳೆಗಾಲ ಬಂತಂದ್ರೆ ಸಾಕು ಕಡಲತಡಿಯ ನಿವಾಸಿಗಳಲ್ಲಿ ಆತಂಕ ಮನೆ ಮಾಡುತ್ತವೆ.. ಕಡಲ್ಕೊರೆತಕ್ಕೆ ಸಿಕ್ಕಿ ತಡಿಯ ಭೂಭಾಗವು ಕಡಲಿನ ಒಡಲನ್ನು ಸೇರುತ್ತವೆ. ಈ ಬಾರಿಯೂ ಆ ಆತಂಕ ಮತ್ತೆ ಮುಂದುವರೆದಿದ್ದು, ಮನೆ-ಮಠಗಳು ಕಡಲಗರ್ಭ ಸೇರಿದರೆ ಅಚ್ಚರಿಯಿಲ್ಲ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಒದಗಿಸದ ಹೊರತು, ಕಾಟಾಚಾರದ ಪರಿಹಾರ ನೀರಲ್ಲಿಟ್ಟ ಹೋಮದಂತಾಗಿದೆ.. ಈಗ ಉಡುಪಿಯ ಪಡುಕೆರೆ ಪ್ರದೇಶದ ಕಡಲತೀರದಲ್ಲಿ ಕಡಲ್ಕೊರೆತ ಸಂಭವಿಸಿ ಬಹುಭಾಗ ಕಡಲಿನ ಒಡಲು ಸೇರಿದ್ದು ಇದಕ್ಕೊಂದು ಉದಾಹರಣೆ. ಮಳೆಗಾಲದಲ್ಲಿ ಪ್ರತಿ ವರ್ಷ ಸಮುದ್ರ ತೀರದಲ್ಲಿ ಕಡಲ್ಕೊರೆತ ಸಂಭವಿಸುತ್ತದೆ. […]

ಮಳೆಗಾಲದಲ್ಲಿ ಹೊಟೇಲ್ ಮಾಲಕರು ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು : ಮೇಯರ್ ಕವಿತಾ ಸನಿಲ್

Friday, June 2nd, 2017
mayor kavitha

ಮಂಗಳೂರು : ಮಳೆಗಾಲದಲ್ಲಿ ಹೊಟೇಲ್ ಮಾಲಕರು ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಸೂಕ್ಷ್ಮ ಜೀವಿಗಳು ಹಾಗೂ ರೋಗ ವಾಹಕಗಳಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ವಿಶೇಷವಾಗಿ ಎಚ್ಚರಿಕೆ ವಹಿಸಬೇಕು ಎಂದು ಮೇಯರ್ ಕವಿತಾ ಸನಿಲ್ ಸೂಚನೆ ನೀಡಿದ್ದಾರೆ. ಮನಾಪ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಸಲಹೆ ನೀಡಿದ ಅವರು, ಹೊಟೇಲ್ ಮಾಲಕರು ಗ್ರಾಹಕರಿಗೆ ಬಿಸಿ ನೀರಿನ ಸೌಲಭ್ಯವನ್ನು ಕಲ್ಪಿಸಬೇಕು ಎಂದರು. ಕಳೆದ ಬಾರಿ ಮನಪಾ ವತಿಯಿಂದ ಹಲವು ಬಾರಿ ನಗರದ ಕೆಲವೆಡೆ […]

ಕಾಸರಗೋಡು ಹೆದ್ದಾರಿಯಲ್ಲಿ ಬೃಹತ್ ಹೊಂಡಗಳು

Wednesday, July 6th, 2016
kasargod

ಕುಂಬಳೆ : ಮಳೆಗಾಲ ಬಿರುಸುಗೊಳ್ಳುತ್ತಿದ್ದಂತೆ ಕಾಸರಗೋಡು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಲವಡೆ ಬೃಹತ್ ಹೊಂಡಗಳು ಬಾಯ್ದೆರೆದುಕೊಂಡಿದೆ. ಕುಂಬಳೆ ಯಿಂದ ಕಾಸರಗೋಡು ಹೊಸ ಬಸ್ಸು ನಿಲ್ದಾಣ ತನಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಡಾಂಬರು ಎದ್ದು ಹೋಗಿ ಹೊಂಡಗಳು ಉಂಟಾಗಿದ್ದು , ಮಳೆಗೆ ನೀರು ತುಂಬಿರುವುದರಿಂದ ವಾಹನ ಚಾಲಕರ ಗಮನಕ್ಕೆ ಬರದೆ ವಾಹನಗಳು ಅಪಘಾತಕ್ಕೀಡಾಗುತ್ತಿದೆ. ಹೊಂಡ ತಪ್ಪಿಸುವ ಭರದಲ್ಲಿ ಹಲವು ವಾಹನಗಳು ಎದುರಿನಿಂದ ಬರುವ ವಾಹನಗಳಿವೆ ಡಿಕ್ಕಿ ಹೊಡೆದ ಹಲವು ಘಟನೆಗಳು ನಡೆದಿದೆ. ಅಡ್ಕತ್ತಬೈಲ್ , ಕರಂದಕ್ಕಾಡ್ ನಲ್ಲಿ […]

ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ‘ಗ್ಯಾಂಗ್‌’ ರಚನೆ

Wednesday, May 7th, 2014
Mahabala Marla

ಮಂಗಳೂರು : ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಒಂದೊಂದು ‘ಗ್ಯಾಂಗ್‌’ ರಚನೆ ಮಾಡಬೇಕು ಎಂದು ಮೇಯರ್‌ ಮಹಾಬಲ ಮಾರ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಂಗಳವಾರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಸೋಮವಾರದಿಂದ ಗ್ಯಾಂಗ್‌’ ರಚನೆ ನಡೆಯಲಿದೆ. ಮಳೆಗಾಲ ಹತ್ತಿರವಾದ್ದರಿಂದ ತುರ್ತಾಗಿ ತೋಡು, ಚರಂಡಿಗಳ ಕೆಲಸ ಮಾಡಬೇಕು. ಪ್ರತೀ ಪಾಲಿಕೆ ಸದಸ್ಯರು ಆಯಾಯ ವಾರ್ಡ್‌ಗಳಲ್ಲಿ ಮಳೆಗಾಲ ಎದುರಿಸಲು ಸಿದ್ಧತೆ ಮಾಡಬೇಕು ಎಂದು ಅವರು ಹೇಳಿದರು. ತಾಂತ್ರಿಕ ಕಾರಣಗಳನ್ನು ನೀಡಿ ಪಾಲಿಕೆ ಅಧಿಕಾರಿಗಳು […]