ಬೀದಿ ಬದಿ ವ್ಯಾಪಾರಿಗಳ ಮೇಲಿನ ಟೈಗರ್ ಕಾರ್ಯಾಚರಣೆ ನಿಲ್ಲಿಸಿ : ರಮಾನಾಥ ರೈ ಆಗ್ರಹ

Saturday, August 3rd, 2024
Ramanatha-Rai

ಮಂಗಳೂರು‌: ನಗರದ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡುವ ಬಿಜೆಪಿ ಆಡಳಿತದ ಮಂಗಳೂರು ಮಹಾನಗರ ಪಾಲಿಕೆಯ ಟೈಗರ್ ಕಾರ್ಯಾಚರಣೆ ಅನ್ಯಾಯ ಮತ್ತು ತಾರತಮ್ಯದಿಂದ ಕೂಡಿದೆ. ಕೂಡಲೆ ಟೈಗರ್ ಕಾರ್ಯಾಚರಣೆ ಸ್ಥಗಿತಗೊಳಿಸಿ ಬೀದಿ ಪಾಲಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಮಾಡದೆ ಅವರ ಸೊತ್ತುಗಳನ್ನು ಜೆಸಿಬಿ ಬಳಸಿ ಧ್ವಂಸ ಮಾಡಿ ತೆರವು ಮಾಡಿರುವ ಪಾಲಿಕೆಯ ಕಾರ್ಯಾಚರಣೆ ಅನ್ಯಾಯ ಮತ್ತು ಅಮಾನವೀಯ. ಬೀದಿ […]

ಮಹಿಳೆಯರು ನೀರು ಬಳಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ : ನಳಿನ್ ಕುಮಾರ್ ಕಟೀಲ್

Thursday, November 9th, 2023
Jala-Deepavali

ಮಂಗಳೂರು : ನೀರು ನಿಸರ್ಗದ ಅಮೂಲ್ಯವಾದ ಕೊಡುಗೆ, ಮನುಷ್ಯ ಜೀವಿಸಲು ಆಹಾರಕ್ಕಿಂತ ನೀರು ಮಹತ್ವವಾದದ್ದು. ನೀರು ಇಲ್ಲದೆ ಯಾವುದೇ ಜೀವ ಬದುಕಲು ಅಸಾಧ್ಯ ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಗುರುವಾರ ತುಂಬೆಯಲ್ಲಿ ಮಹಾನಗರ ಪಾಲಿಕೆ ನೀರು ಸಂಸ್ಕರಣ ಘಟಕದಲ್ಲಿ ನಡೆದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಿರ್ದೇಶನ, ಅಮೃತ 2.0 ಯೋಜನೆಯಡಿ ನಡೆದ ಜಲ ದೀಪಾವಳಿ “ಮಹಿಳೆಯರಿಗಾಗಿ ನೀರು ನೀರಿಗಾಗಿ ಮಹಿಳೆಯರು” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿವಿದೆಡೆ ಮಳೆ ಇಲ್ಲದೆ […]

ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕರಾಗಿ ಪ್ರವೀಣ್ ಚಂದ್ರ ಆಳ್ವ ಆಯ್ಕೆ

Thursday, October 5th, 2023
praveenchandra-Alva

ಮಂಗಳೂರು: ಮಹಾನಗರ ಪಾಲಿಕೆ ವಿಪಕ್ಷ ನಾಯಕರಾಗಿ ಪ್ರವೀಣ್ ಚಂದ್ರ ಆಳ್ವ ಅವರು ಗುರುವಾರ ನಿಕಟಪೂರ್ವ ವಿಪಕ್ಷ ನಾಯಕ ನವೀನ್ ಡಿಸೋಜಾ ಅವರಿಂದ ಅಧಿಕಾರವನ್ನು ಸ್ವೀಕರಿಸಿದರು. ಮಾಜಿ ಶಾಸಕ ಜೆಆರ್ ಲೋಬೊ ಹಾಗೂ ಕಾಂಗ್ರೆಸ್ ಪಕ್ಷದ ಪಾಲಿಕೆಯ ಸದಸ್ಯರು ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು. ಪ್ರವೀಣ್ ಚಂದ್ರ ಆಳ್ವ ಅವರು ಮಾತನಾಡಿ, ಪಾಲಿಕೆ ವಿಪಕ್ಷ ನಾಯಕನಾಗಿ ಪಕ್ಷದ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಜನಪರ ಹೋರಾಟವನ್ನು ನಡೆಸಲಾಗುವುದು. ಬಿಜೆಪಿಯ ತಪ್ಪುಗಳನ್ನು ತೋರಿಸುವಲ್ಲಿ ನಾವು ಯಾವುದೇ ಹಿಂಜರಿಕೆ ತೋರುವುದಿಲ್ಲ ಎಂದು ನುಡಿದರಲ್ಲದೆ ವಿಪಕ್ಷ […]

ಮಾ.2 ರಂದು ಮನಪಾ ಮೇಯರ್, ಉಪ ಮೇಯರ್ ಚುನಾವಣೆ

Wednesday, February 16th, 2022
mcc

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆ ಇದೇ ಮಾರ್ಚ್ 2ರ ಬುಧವಾರ ನಗರದ ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಈ ಚುನಾವಣೆಯನ್ನು ನಡೆಸಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರ ಪ್ರಕಟಣೆ ತಿಳಿಸಿದೆ.

ಮಂಗಳೂರು ಮಹಾನಗರ ಪಾಲಿಕೆ ಮಂಡಿಸಿದ ಬಜೆಟ್‍ನ ವಿವರಗಳು

Friday, January 28th, 2022
MCC-Budget

ಮಂಗಳೂರು : ಇಲ್ಲಿನ ಮಹಾನಗರ ಪಾಲಿಕೆಯ ಸವಾರ್ಂಗೀಣ ಅಭಿವೃದ್ಧಿ ದೃಷ್ಟಿಯಿಂದ ತಯಾರಿಸಲಾದ 2021-22ನೇ ಸಾಲಿನ ಪರಿಷ್ಕøತ ಆಯವ್ಯಯವನ್ನು ಹಾಗೂ 2022-23ನೇ ಸಾಲಿನ ಅಂದಾಜು ಆಯವ್ಯಯವನ್ನು ಮಹಾನಗರ ಪಾಲಿಕೆಯ ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ರಾಜೇಶ್ ಮಂಡಿಸಿದರು. ಅವರು ಜ.28ರ ಶುಕ್ರವಾರ ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಆಯವ್ಯಯ ಭಾಷಣ ಮಾಡಿ ಬಜೆಟ್ ಮಂಡಿಸಿದರು. ನಂತರ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ನಮ್ಮ ನಗರಕ್ಕಾಗಲಿ, ರಾಜ್ಯಕ್ಕಾಗಲಿ, ದೇಶಕ್ಕಾಗಲಿ ಅಥವಾ ಪ್ರಪಂಚದ ಯಾವುದೇ […]

ವ್ಯಾಪಾರ ಮಾಡಲು ಕಾರ್ಡ್‌ ಇದ್ದರೂ, ಫುಟ್‌ಪಾತ್‌ ಗೂಡಂಗಡಿಗಳನ್ನು ತೆರವುಗೊಳಿಸಿದ ಪಾಲಿಕೆ

Thursday, December 23rd, 2021
petty-shop

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಗೂಡಂಗಡಿಗಳ ತೆರವು ಕಾರ್ಯಾಚರಣೆ ಗುರುವಾರ ಆರಂಭವಾಗಿದೆ. ಮೇಯರ್‌ ಹಾಗೂ ಆಯುಕ್ತರ ಸೂಚನೆಯಂತೆ ಕಂದಾಯ, ಆರೋಗ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರದ ಸ್ಟೇಟ್‌ಬ್ಯಾಂಕ್‌ ಭಾಗದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದ್ದು, ಮುಂದಕ್ಕೆ ಸೆಂಟ್ರಲ್‌ ಮಾರುಕಟ್ಟೆ, ಕಂಕನಾಡಿ ಭಾಗದಲ್ಲಿ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ್ದಾರೆ. ಕಾರ್ಯಾಚರಣೆಗೆ ವ್ಯಾಪಾರಿಗಳಿಂದ ಆಕ್ರೋಶ ವ್ಯಕ್ತವಾಗಿದ್ದು, ತಮ್ಮ ಬಳಿ ಬೀದಿಬದಿ ವ್ಯಾಪಾರ ಮಾಡಲು ಪಾಲಿಕೆ ನೀಡಿರುವ ಕಾರ್ಡ್‌ […]

ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಜಯ, ಇಲ್ಲಿದೆ ನೋಡಿ ಫಲಿತಾಂಶ

Tuesday, September 7th, 2021
Belagavi

ಬೆಂಗಳೂರು :  ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಕಲಬುರಗಿ ಮಹಾನಗರ ಪಾಲಿಕೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅತಂತ್ರವಾಗಿವೆ. ಬೆಳಗಾವಿ ಮಹಾನಗರ ಪಾಲಿಕೆ ಫಲಿತಾಂಶ (58 ವಾರ್ಡ್ ಗಳು) ಬಿಜೆಪಿ- 35, ಕಾಂಗ್ರೆಸ್-10, ಜೆಡಿಎಸ್-00, ಎಂಇಎಸ್-01, ಪಕ್ಷೇತರರು-12 ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ (55 ವಾರ್ಡ್ ಗಳು) ಬಿಜೆಪಿ-23, ಕಾಂಗ್ರೆಸ್-27, ಜೆಡಿಎಸ್-04, ಪಕ್ಷೇತರರು-01 ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ […]

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಅಗಸ್ಟ ತಿಂಗಳಲ್ಲೇ ಬಹುತೇಕ ಖಚಿತ

Tuesday, August 3rd, 2021
Hubli-Dharwada

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಪ್ರಸಕ್ತ ಅಗಸ್ಟ ತಿಂಗಳಲ್ಲೇ ನಡೆಯುವುದು ಬಹುತೇಕ ಖಚಿತವಾಗಿದ್ದು, ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ ಶುಕ್ರವಾರ ಚುನಾವಣಾ ಆಯೋಗದೊಂದಿಗೆ ಚರ್ಚೆ ನಡೆಸಿದ ನಂತರ ಅಲ್ಲಿ ಚರ್ಚಿಸಲಾದ ವಿಷಯದಂತೆ ಎಲ್ಲ ಅವಶ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಪಾಲಿಕೆ ಆಯುಕ್ತರಿಗೆ ಆದೇಶ ನೀಡಿದ್ದು, ನಾಡಿದ್ದು ದಿ.೫ರಂದು ಘೋಷಣೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಅಲ್ಲದೇ ಪ್ರತಿ ಐದು ವಾರ್ಡಗೊಂದರ0ತೆ ಚುನಾವಣಾ ಅಧಿಕಾರಿ (ಆರ್‌ಓ) ಹಾಗೂ ಸಹಾಯಕ ಚುನಾವಣಾಧಿಕಾರಿ (ಎಆರ್‌ಓ) ನೇಮಕ ಮಾಡಿ ಚುನಾವಣೆ ಆಯೋಗಕ್ಕೆ […]

ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರ ಖಾತೆಗೆ ಭರ್ಜರಿ ಹಣ, ತಿಂಗಳ ಸಂಬಳ 6 ಲಕ್ಷ ರೂ. !

Saturday, June 5th, 2021
Davanagere

ದಾವಣಗೆರೆ : ಇಲ್ಲಿನ ಮಹಾನಗರ ಪಾಲಿಕೆ ಸದಸ್ಯರ ಖಾತೆಗೆ ಭರ್ಜರಿ ಹಣ ಬಿದ್ದಿದೆ ಅದು  ಆರು ಲಕ್ಷ ರೂ. ಹೀಗೆ ಒಟ್ಟು 50 ಸದಸ್ಯರಿಗೆ ತಲಾ ಆರು ಲಕ್ಷದಂತೆ ಮೂರು ಕೋಟಿ ಹಣವನ್ನು ಪಾಲಿಕೆ ಅಧಿಕಾರಿಗಳು ಹಾಕಿದ್ದಾರೆ. ಮಹಾನಗರ ಪಾಲಿಕೆಯ ಹಣಕಾಸು ವಿಭಾಗದ ಅಧಿಕಾರಿಗಳು ಆರು ಸಾವಿರ ರೂಪಾಯಿ ಹಾಕುವ ಬದಲಿಗೆ ಆರು ಲಕ್ಷ ರೂ. ಹಾಕಿ ಎಡವಟ್ಟು ಮಾಡಿದ್ದಾರೆ. ಪ್ರತಿ ತಿಂಗಳ ಪಾಲಿಕೆ ಸದಸ್ಯರಿಗೆ ಆರು ಸಾವಿರ ರೂಪಾಯಿ ಸಹಾಯ ಧನವನ್ನು ಸರ್ಕಾರದಿಂದ ನೀಡಲಾಗುತ್ತದೆ. ಆದರೆ ಹಣಕಾಸು ವಿಭಾಗದ ಅಧಿಕಾರಿಗಳು ಆರು […]

ಅಂತ್ಯಕ್ರಿಯೆ ಪ್ರಕ್ರಿಯೆಗೆ ಹೊಸ ಆನ್ಲೈನ್ ವ್ಯವಸ್ಥೆ ಜಾರಿ

Tuesday, May 25th, 2021
BBMP

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ವಲಯಗಳಲ್ಲಿ ಕೋವಿಡ್ – 19 ಸಾಂಕ್ರಾಮಿಕ ರೋಗ ಹಾಗೂ ಇತರೆ ಕಾರಣಗಳಿಂದ ಮೃತಪಟ್ಟ ಪ್ರಕರಣಗಳಲ್ಲಿ ಚಿತಾಗಾರ / ಸ್ಮಶಾನಗಳಲ್ಲಿ ಅಂತ್ಯಕ್ರಿಯೆಯನ್ನು ನಡೆಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಲಯ ಕಚೇರಿಗಳ ಆರೋಗ್ಯ ನಿರೀಕ್ಷಕರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಮರಣ ಹೊಂದಿದ ವ್ಯಕ್ತಿಗಳ ಪಾರ್ಥಿವ ಶರೀರವನ್ನು ಚಿತಾಗಾರ / ಸ್ಮಶಾನಕ್ಕೆ ಕಳುಹಿಸುತ್ತಿರುವ ಪ್ರಸ್ತುತ ಪದ್ದತಿಯನ್ನು ಕೈಬಿಡಲಾಗಿದ್ದು, ಈಗಿರುವ […]