ಆಟೋ ರಿಕ್ಷಾ – ಕಾರಿನ ನಡುವೆ ಅಪಘಾತ, ಆಟೋ ಚಾಲಕ ಸಾವು

Friday, August 27th, 2021
Manila

ಬಂಟ್ವಾಳ : ಆಟೋ ರಿಕ್ಷಾ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟಿರುವ ಘಟನೆ ವಿಟ್ಲ ಪುಣಚ ಗ್ರಾಮದ ಮಾಣಿಲ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಇಲ್ಲಿನ ಪರಿಯಾಲ್ತಡ್ಕ ನಿವಾಸಿ ಅಶ್ರಫ್ ಅಪಘಾತದಲ್ಲಿ ಮೃತಪಟ್ಟ ರಿಕ್ಷಾ ಚಾಲಕ. ಗಂಭೀರ ಗಾಯಗೊಂಡಿದ್ದ ಅಶ್ರಫ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಎರಡು ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು ಅಪಘಾತದ ತೀವ್ರತೆಗೆ ಆಟೋ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಕಾರು ರಸ್ತೆ […]

ಕೊರೊನಾ ಮಹಾಮಾರಿಯನ್ನು ತೊಲಗಿಸಲು ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು : ಶ್ರೀ ಮೋಹನದಾಸ ಸ್ವಾಮೀಜಿ

Saturday, August 1st, 2020
MohanadasaSwamiji

ಮಂಗಳೂರು : ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ದಲ್ಲಿ 48 ದಿನಗಳ ವರಮಹಾಲಕ್ಷ್ಮಿ ಪೂಜೆ ಜುಲೈ 31ರಂದು ಚಂಡಿಕಾ ಯಾಗದ ಪೂರ್ಣಾಹುತಿ ಯೊಂದಿಗೆ ಸಮಾಪನ ಗೊಂಡಿತು. ಬೆಳಗ್ಗೆ ಗಣಪತಿ ಹೋಮ ನಾನಾ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಚಂಡಿಕಾ ಯಾಗ, ಕನಕಾಧಾರಾ ಯಾಗ ಪೂರ್ಣಹುತಿ ನಡೆಯಿತು. ಭಜನಾ ಸತ್ಸಂಗ ಕಾರ್ಯಕ್ರಮ ಪ್ರಸ್ತುತಗೊಂಡಿತು. ಸಂಜೆ ದುರ್ಗಾಪೂಜೆ, ಆಶ್ಲೇಷ ಬಲಿ ನಡೆದವು. ಕೊರೊನಾ ಸೋಂಕಿತರನ್ನು ನೋಡುವ ದೃಷ್ಟಿ ಬದಲಾಗಬೇಕಾಗಿದೆ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ಸಿಗುವಂತಾಗಲು ಮಾನವೀಯ ಮೌಲ್ಯಗಳ ಅಗತ್ಯತೆಯಿದೆ. ಈ ಮಹಾಮಾರಿಯನ್ನು ತೊಲಗಿಸಲು […]

ಮಹಾಮಾರಿ ಕೊರೋನಾ ಬಗ್ಗೆ ಮೊಹನದಾಸ ಪರಮಹಂಸ ಸ್ವಾಮೀಜಿಯವರು ನೀಡಿದ ಸಂದೇಶ – ವಿಡಿಯೋ

Tuesday, March 24th, 2020
Mohanadasa Swamiji

ಮಂಗಳೂರು : ಭಾರತದ ಮಹಾಜನತೆ ಮಹಾಮಾರಿ ಕೊರೋನಾದಿಂದ ತಪ್ಪಿಸಿಕೊಳ್ಳಲು ಅತೀ ಜಾಗರೂಕತೆ ವಹಿಸಿಕೊಳ್ಳುವುದು ಮುಖ್ಯ. ಚೀನಾದಲ್ಲಿ ಹುಟ್ಟಿದ ವೈರಸ್ ಈಗ ದೇಶ ವ್ಯಾಪಿಯಾಗಿ ಪಸರಿಸಿದೆ. ಭಾರತಕ್ಕೂ ಕಾಲಿಟ್ಟು ಸಾಮಾನ್ಯ ಜನರನ್ನು ಕಾಡುತ್ತಿದೆ. ಈಗ ಪ್ರತಿಯೊಬ್ಬರೂ ಯೋಚಿಸಬೇಕಾದ ಸಮಯ ಬಂದಿದೆ ಎಂದು ತನ್ನ ಸಂದೇಶದಲ್ಲಿ ಮೊಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದ್ದಾರೆ. ಸ್ವಾಮೀಜಿಯವರ ತನ್ನ ಸಂದೇಶದಲ್ಲಿ ಮನುಷ್ಯನ ಪಾಪ ಕರ್ಮಗಳು ಇಂದು ವೈರಸ್ ಮೂಲಕ ಸಾಂಕ್ರಾಮಿಕ ರೋಗವಾಗಿ ವಿಶ್ವವನ್ನೇ ವಿನಾಶದತ್ತ ಕೊಂಡೊಯ್ಯುತ್ತಿದೆ. ಗಂಡು, ಹೆಣ್ಣು ಯಾಂತ್ರಿಕ ಬದುಕಿನಲ್ಲಿ ಇಂದು ಸಂಸ್ಕಾರವನ್ನೇ ಮರೆತು […]

ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾತೃ ಶ್ರೀ ನಿಧನ

Sunday, September 1st, 2019
kamala

ವಿಟ್ಲ:  ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯವರ ತಾಯಿ ಕಮಲಾ (91 ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಆ.29ರಂದು ಅಶೋಕ ನಗರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮಂಗಳೂರು ಡೊಂಗರಕೇರಿ ದಿ. ಪರಮೇಶ್ವರ್‌ರವರ ಪತ್ನಿ ಕಮಲಾ (91 ವ.) ಪುತ್ರರಾದ ಚಂದ್ರಶೇಖರ, ಹರೀಶ್ಚಂದ್ರ ಹಾಗೂ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯಯವರನ್ನು ಅಗಲಿದ್ದಾರೆ. ಇತ್ತೀಚೆಗೆ ಮಾಣಿಲದಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಯಲ್ಲಿ ಕಮಲಾ ಅವರು ಭಾಗವಹಿಸಿದ್ದರು. ಸಾಮೀಜಿಯವರು ಮಾತೃಶ್ರೀಯವನ್ನು ವೇದಿಕೆಯಲ್ಲಿ ಸನ್ಮಾನಿಸಿ ಮಾತೃ ಪ್ರೇಮವನ್ನು ತೋರಿಸಿದ್ದರು.

‘ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಮಾಣಿಲದಿಂದ ನೇರ ಪ್ರಸಾರ

Friday, August 16th, 2019

ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರ್ಷಾವಧಿ ನೇಮೋತ್ಸವ

Tuesday, January 8th, 2019
Manila

ಮಾಣಿಲ : ಪರಮ ಪೂಜ್ಯ ಯೋಗೀ ಕೌಸ್ತುಭ ಕರ್ಮಯೋಗಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರ್ಷಾವಧಿ ನೇಮೋತ್ಸವ ಜನವರಿ 5 ಶನಿವಾರ ನಡೆಯಿತು. ಸಂಜೆ ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ ನಡೆದರೆ ಮಧ್ಯ ರಾತ್ರಿಯಿಂದ ಬೆಳಗ್ಗಿನ ಜಾವದ ವರೆಗೆ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಿತು. ಅದೇ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯನ್ನು ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು. ಟ್ರಸ್ಟಿಗಳಾದ ಭಾಸ್ಕರ ಶೆಟ್ಟಿ […]

ಮಾಣಿಲ ಶ್ರೀಧಾಮದಲ್ಲಿ ಆಗಸ್ಟ್ 24 ಶುಕ್ರವಾರ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

Monday, August 20th, 2018
Manila Sridhama

ಬಂಟ್ವಾಳ: ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮದಲ್ಲಿ ನಡೆಯುತ್ತಿರುವ 48 ದಿವಸಗಳ ಶ್ರೀ ಲಕ್ಷ್ಮಿ ಪೂಜೆಯ 43 ನೇ ದಿನವಾದ ಭಾನುವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿದಂತಹ ಶ್ರೀ ಕೆಯ್ರೂರು ಶ್ರೀ ನಾರಾಯಣ ಭಟ್ ರವರು ಸಂತೋಷವನ್ನು ವ್ಯಕ್ತಪಡಿಸಬಹುದು.  ಆನಂದವನ್ನು ವ್ಯಕ್ತಪಡಿಸಲಾಗದು. ಆದರೆ  ಶ್ರೀ ಧಾಮದಲ್ಲಿ ಸಂತೋಷ ಮತ್ತು ಆನಂದವನ್ನು ಒಟ್ಟಿಗೆ ಕಳೆಯಲಾಗುತ್ತಿದೆ ಎಂದರು. ಹಿಂದೂ ಸಮಾಜದಲ್ಲಿ ಶಕ್ತಿ ತುಂಬುವ ಕೆಲಸವನ್ನು ಮಾಣಿಲ ಶ್ರೀ ಗಳಂತಹ ಪೂಜರುಗಳಿಂದ ಆಗುತ್ತಿದೆ. ಕೆಲವು ದಿನಗಳ ಹಿಂದೆ ನಿಧನರಾದ ಭಾರತದ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯೀ […]

ಜುಲೈ 31ರಂದು ಶ್ರೀ ಧಾಮ ಮಾಣಿಲದಲ್ಲಿ ಮೂಡಪ್ಪ ಸೇವೆ

Friday, July 27th, 2018
Manila Dhama

ಬಂಟ್ವಾಳ: ಧರ್ಮವೇ ನಶಸಿ ಹೋಗುತ್ತಿರುದೆಂದು ಭ್ರಮೆಯ ಈ ಕಾಲದಲ್ಲಿ ಧರ್ಮೋನ್ನತಿಯ ಕಾರ್ಯಗಳ ಸಾಧು ಸಂತರಿಂದ ಬ್ರಾಹ್ಮಣ್ಯೇತರರಿಂದ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪರಮ ಪೂಜ್ಯ ಸಂತ ನಿತ್ಯಾನಂದ ಸ್ವಾಮಿ ಗಳವರ ಬಾಲ ಭೋಜನದಂತಹ ಕಾರ್ಯಗಳು, ಮಕ್ಕಳಿಗೆ ಸಂಸ್ಕಾರಯುತ ಬದುಕು ಕಲ್ಪಿಸಲು ಸಾಕ್ಷಿ ಭೂತ ಕಾರ್ಯಕ್ರಮವಾಗಿದೆ. ಶಿಕ್ಷಕರು, ಮಾತೆಯರು, ಹೆತ್ತವರು ವಿದ್ಯಾರ್ಥಿ ಜೀವನ ಕ್ರಮದಲ್ಲಿ ಸತ್ಕ್ರಮಗಳನು ಬೆಳೆಸುವ ಪ್ರಯತ್ನ ಪಡಬೇಕು. ಮುಂಬರುವ ಚಂದ್ರ ಗ್ರಹಣವು ಬಂಡವಾಳ ಶಾಹಿಗಳಿಗೆ ಸಾಧು ಸಂತರಿಗೆ, ಉದ್ಯಮಿಗಳಿಗೆ, ಜನ ಪ್ರತಿನಿಧಿಗಳ ಜೀವನಕ್ರಮದ ಮೇಲೆ ದುಷ್ಪಲಗಳನ್ನು ನೀಡಬಹುದಾದ […]