ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದ ಕುಟುಂಬದ ಬಗ್ಗೆ ವಿಚಾರಿಸಿದ್ದಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿರುದ್ಧ ದೂರು

Wednesday, July 3rd, 2019
Meenakshi-Shantigodu

ಮಂಗಳೂರು : ಪುತ್ತೂರು ನಗರ ಠಾಣೆಯಲ್ಲಿ ಸರ್ಕಾರಿ ವೈದ್ಯರನ್ನು ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ವೈದ್ಯೆ ಡಾ.ಅರ್ಚನಾ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದ ಕುಟುಂಬವನ್ನು ನೋಡಲು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡು ನಿಂದಿಸಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಸ್ಪತ್ರೆಯಲ್ಲಿ ರೋಗಿಗಳನ್ನು […]

ವೈಭವದ ಕರಾವಳಿ ಉತ್ಸವ: ವಸ್ತು ಪ್ರದರ್ಶನಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಚಾಲನೆ

Saturday, December 22nd, 2018
gurukiran

ಮಂಗಳೂರು: ದ‌.ಕ. ಜಿಲ್ಲಾಡಳಿತದ ವತಿಯಿಂದ ನಡೆಯುವ ವೈಭವದ ಕರಾವಳಿ ಉತ್ಸವದ ವಸ್ತು ಪ್ರದರ್ಶನಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕರಾವಳಿ ಅಂದರೆ ಎಲ್ಲರಿಗೂ ಎಲ್ಲರ ಪರಿಚಯ ಇರುತ್ತದೆ. ಎಲ್ಲರಿಂದಲೂ ಸಹಾಯ ಕೇಳುತ್ತಾರೆ. ಸಹಾಯ ಮಾಡುತ್ತಾರೆ. ಸಚಿವ ಯು.ಟಿ. ಖಾದರ್ ಮತ್ತು ನಾನು ಶಾಲೆಗೆ ಒಟ್ಟಿಗೆ ಹೋಗುತ್ತಿದ್ದೆವು. ಮೇಯರ್ ಭಾಸ್ಕರ ಕೆ. ನಮ್ಮ ಊರಿನವರು. ನಾವು ಯಾವಾಗಲೂ ಜೊತೆಗಿರುತ್ತಿದ್ದೆವು. ಮನೋಹರ ಪ್ರಸಾದ್ ಅವರು ನನ್ನ ಮೊದಲ ಸಿನಿಮಾ ಬದ್ಕೊಂಜಿ ಕಬಿತೆಗೆ ಅವರೇ ಮುಹೂರ್ತ […]

ಚುನಾವಣೆ ಘೋಷಣೆ: ಅರ್ಧಕ್ಕೆ ಮೊಟಕುಗೊಂಡ ಜಿಪಂ ಸಭೆ

Wednesday, March 28th, 2018
panchayath

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆ ಅರ್ಧದಲ್ಲಿಯೇ ಮೊಟಕುಗೊಂಡಿತು. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ಸಭೆ ಸೇರಿತ್ತು. ಜಿಪಂ ಸಿಇಒ ಡಾ. ಎಂ.ಆರ್.ರವಿ ಅವರ ಗೈರಿನಲ್ಲಿ ಪ್ರಭಾರ ಉಪ ಕಾರ್ಯದರ್ಶಿ ಎಂ.ವಿ.ನಾಯಕ್ ಹಾಜರಾಗಿದ್ದರು. ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು. ಅಷ್ಟರಲ್ಲೇ ರಾಜ್ಯದ ಚುನಾವಣಾ ದಿನಾಂಕ ಘೋಷಣೆಯಾಗಿತ್ತು. ಆದರೆ ಸಭೆಯ ಮೂಡ್‌ನಲ್ಲಿ ಮುಳುಗಿದ್ದ ಅಧಿಕಾರಿಗಳಿಗಾಗಲೀ, ಜನಪ್ರತಿನಿಧಿಗಳಿಗಾಗಲೀ ಈ ವಿಚಾರ ಗೊತ್ತಿರಲಿಲ್ಲ. ಗೊತ್ತಿದ್ದವರಿಗೆ ನೀತಿ ಸಂಹಿತೆ […]

ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಬದ್ಧ: ಪ್ರಭು

Monday, January 22nd, 2018
suresh-prabhu

ಮಂಗಳೂರು: ಮಂಗಳೂರನ್ನು ಸ್ಟಾರ್ಟ್‌ಅಪ್‌, ಶಿಕ್ಷಣ, ಮೆಡಿಕಲ್‌ ಟೂರಿಸಂ ಹಬ್‌ ಆಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾ ಗುವುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು ಹೇಳಿದರು. ನಗರದಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ಬದಲಾವಣೆಯ ಗಾಳಿ ಬೀಸಿದೆ. ಮುಂದಿನ 7 ವರ್ಷಗಳಲ್ಲಿ ದೇಶದ ಚಿತ್ರಣದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದರು. ಗೇರುಬೀಜ ಆಮದು ಸುಂಕದಲ್ಲಿ ಶೇ.5 ಕಡಿತಗೊಳಿಸುವ ಪ್ರಸ್ತಾವನೆ ಸದ್ಯ ಕೇಂದ್ರದ ಮುಂದಿದೆ. ಭಾರತೀಯ ಆರ್ಥಿಕತೆಯಲ್ಲಿ ಒಟ್ಟು ದೇಶೀಯ […]